ಮಂಜುಳಾ ದೇಸಾಯಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಹನ್ನೊಂದು ವರುಷ ಯುರೋಪಿನ  ಆಮ್ಸ್ಟರ್‌ ಡ್ಯಾಮ್-ನಲ್ಲಿ ವಾಸವಿದ್ದ ಮಂಜುಳಾ, ಸದ್ಯ ಹೈದರಾಬಾದಿನಲ್ಲಿ ವಾಸವಾಗಿದ್ದಾರೆ.   ಪ್ರೈಮರಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದವರು, ಈಗ ಫ್ರೀಲಾನ್ಸ್ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷಿವೀಕ್ಷಣೆ ಇವರ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದು, ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಮಧ್ಯೆ ಸಮಯ ಕಳೆಯುವುದು ಮತ್ತು ಹೊಸ ಹೊಸ ಊರು/ ಜಾಗಗಳ ಪರಿಚಯ ಮಾಡಿಕೊಳ್ಳುವುದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: [email protected]