ಅಪ್ಪ ಹಚ್ಚಿದ ತೆಂಗು

ನೀಲ ಆಕಾಶದೆತ್ತರದಲಿ
ನಿಚ್ಚಣಿಕೆ ಹಾಕಿದಂತೆ
ಬೆಳೆದ ಸಮೃದ್ಧ ತೆಂಗಿನ ಮರ
ಮನೆಯ ಕಂಪೌಂಡ್ ನಲ್ಲಿ

ಬಿಟ್ಟ ತೆಂಗಿನ ಕಾಯಿಯ
ನೀರು, ಕೊಬ್ಬರಿ ಸಕ್ಕರಿ ಮುದ್ದಿ
ಅಪ್ಪ ನೆಟ್ಟು ವರ್ಷಗಳ
ನಂತರ ಸಿಕ್ಕ ಪ್ರಸಾದ

ಅಪ್ಪ ಅನುಭವಿಸದ
ಸಿಹಿ ಇತರರಿಗೆ, ನಿಸ್ವಾರ್ಥವಾಗಿ
ಅನುಪಸ್ಥಿತಿ ಮತ್ತೆ ಮತ್ತೆ ನೆನಪು
ನೋಡಿದಾಗ ತೆಂಗಿನ ಮರ

ಒಡೆದಾಗೊಮ್ಮೊಮ್ಮೆ ಕಾಯಿ
ಕುಡಿದಾಗ ಅಮೃತ ನೀರು
ತಪ್ಪದೇ ಇರುವ ಕಣ್ಣಲ್ಲಿ
ಅಪ್ಪನ ನೆನೆಸಿ ನೀರು

ಉತ್ತಮ ದರ್ಜೆ ನೀರು, ಕೊಬ್ಬರಿ
ಬೇಗ ಫಲ ಕೊಡುವ
ಆರಿಸಿ ತಂದು ನೆಟ್ಟು
ಕೂಸಂತೆ ಸಂಭಾಳಿಸಿ

ಹೀಗೆ ಅಲ್ಲಾ ಜೀವನ !
ನೆಟ್ಟವ ಒಬ್ಬ, ಪ್ರಸಾದ ಇನ್ನೊಬ್ಬ
ಅವರವರ ಪಾಲು ದೇವರ ಖಾತೆ
ತೂಗಿಸಿ ನೀಡುವ ಪರಮಾತ್ಮ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ