ಮನಸ್ಸು ಗುಬ್ಬಿ

ಈ ಬಣ್ಣ ಚೆನ್ನಾಗಿಲ್ಲ
ಆ ಬಣ್ಣ ಜಬರದಸ್ತ
ಇದನ್ನು ತೆಗೆದುಕೊಳ್ಳದೇ
ಅದೇ ಖರೀದಿಸಬೇಕಿತ್ತು

ಆನ್ ಲೈನ್‌ನಲ್ಲಿ ಇದೇ ವಸ್ತು
ಚೀಪ, ವಿನ್ಯಾಸವೂ ಮಸ್ತ್
ಆಫರ್ನಲ್ಲಿ ಎಷ್ಟು ವರೈಟಿ
ಇಲ್ಲದಾಗ ತಕ್ಕೊಂಡು ಹುಚ್ಚಾದ್ವಿ

ಈ ಓಣಿಲಿ 50 ರೂ ಬದನೆ ಕಾಯಿ
ಪಕ್ಕದ ರಸ್ತೆ ನಡೆದಿದ್ದರೆ 30 ರೂ ಇದೇ ಬದನೆ
ರಿಲಯನ್ಸ್ ಹೋಗಿದ್ದ ತಪ್ಪಾ?
ಡಿಮಾರ್ಟ್ ಹೋಗಿದ್ದು ಸರೀನಾ?

ಮನೆಗೆ ತಂದ ಕಿವಿಯೋಲೆ ಡಲ್
ಅಂಗ್ಡೀಲಿ ಬಿಟ್ಟು ಬಂದದ್ದೇ ಚೆಂದ
ನಿನ್ನೆ ಮಾರಿದ ಕಬ್ಬಿಣದ
ರೇಟ್ ಇಂದು ಏರಿದೆ

ನನ್ನ ಪ್ಲಾಟ ನಟ್ಟನಡುವೆ ಗುಳ್ಳವ್ವ
ಕಾರ್ನರ್ ಸಿಗಬೇಕಿತ್ತು ಕಾಟ ಕಡಿಮೆ
ನಿನ್ನೆ ರಣಬಿಸಿಲ ಕಂಡು ಸಂಡಿಗೆ
ಇವತ್ತಾಕಿದರೆ ಮೋಡದ ಮಳೆ

ಇವತ್ತು ನೋಂದಣಿ ಮಾಡಿದ್ವಿ
ನಾಳೆ ಶುಭದಿನ ಅಂತೆ
ಬಸ್ದಿಂದ ಹೋದ್ವಿ
ರೈಲಿಂದ ಹೋಗಬೇಕಿತ್ತು

ಎಕ್ಸ್ಚೇಂಜ್ ಮಾಡಿದ್ರೆ ಮತ್ತೆ
ಪ್ರೊಡಕ್ಟ್ ಹೇಗಿರುತ್ತೋ?
ರಿಟರ್ನ್/ ರಿಫಂಡ್ ಮಾಡ್ಬೇಕಿತ್ತು
ಕೆಲಸಾಗ್ಬೋದು ಒಮ್ಮೆಲೇ

ಈ, ಆ, ಅದು, ಇದು
ಹಾಗೆ, ಹೀಗೆ, ಮಾಡ್ಬೇಕಿತ್ತು/ ಬಾರದು
ಎಷ್ಟಾದರೂ ಯೋಚನೆ? ಸಹಿಸೀತೆ
ಮನಸ್ಸೆಂಬ ಗುಬ್ಬಿ?