ಕನ್ನಡದ ಮಹತ್ವದ ಕವಿ ಗಂಗಾಧರ ಚಿತ್ತಾಲ (೧೯೨೩- 1೯೮೭) ಅವರ ಬಾಳ ಸಂಗಾತಿ ಶ್ರೀಮತಿ ಮೀರಾ ಗಂಗಾಧರ ಚಿತ್ತಾಲ ಅವರು ಮೊನ್ನೆ ೨೨-೯-೨೦೨೦ ರಂದು ಅಮೆರಿಕಾದ ಹ್ಯೂಸ್ಟನ್ ದಲ್ಲಿರುವ ಮಗನ ಮನೆಯಲ್ಲಿ ತಮ್ಮ ೯೧ ನೆಯ ವಯಸ್ಸಿನಲ್ಲಿ ತೀರಿಕೊಂಡರು. ಬಹುಪಾಲು ಜೀವನವನ್ನು ಮುಂಬಯಿಯಲ್ಲಿ ಬಾಳಿದ ಅವರು ಗಂಗಾಧರ ಚಿತ್ತಾಲರ ಕಾವ್ಯ ಮತ್ತು ಜೀವನದ ಸ್ಥೈರ್ಯವಾಗಿದ್ದರು. ಚಿತ್ತಾಲರು ಇವರ ಕುರಿತು ಬರೆದ “ಹೆಂಡತಿಗೆ” ಕವಿತೆ (ಹರಿವ ನೀರಿದು, ೧೯೭೦) ಕಾವ್ಯಾಸಕ್ತರಿಗೆ ಪರಿಚಿತ. (ಮುಗಿಲುಗನಸುಗಳಲ್ಲೆ ತಲ್ಲೀನವಾದ ಮನ, ನಿನ್ನ ಆಗಮನಕೆ ನೆಳಕಿಳಿದು ನಲಿದಿತ್ತು, ಬೆನ್ನೆಲುಬ ಬಲವಾಯ್ತು ನಿನ್ನ ಸಹವಾಸ..) ವಿದೇಶದಲ್ಲಿ ನೆಲೆಸಿರುವ ಮಕ್ಕಳಾದ ಉದಯ, ವಿದ್ಯಾ ಮತ್ತು ಸರಿತಾ ಜೊತೆಗೆ ಆರು ಮೊಮ್ಮಕ್ಕಳನ್ನು, ಐದು ಮರಿಮಕ್ಕಳನ್ನು ಅವರು ಅಗಲಿದ್ದಾರೆ. ಚಿತ್ತಾಲ ಬಳಗದ ಹಿರಿಯ “ಸಂಪರ್ಕ”ವೊಂದು ಕಣ್ಮರೆಯಾದಂತಾಗಿದೆ. ಅವರಿಗೆ ಚಿತ್ತಾಲ ಓದುಗರ ಬಳಗದ ಪರವಾಗಿ ನಮಸ್ಕಾರ.

 ಜಯಂತ ಕಾಯ್ಕಿಣಿ
0
0