ಸಾಮಾನ್ಯ ಗೊರವಂಕ (Common Myna)

“ಈಗಿನ ಹಕ್ಕಿ ಪ್ರಪಂಚದಲ್ಲಿ, ಪಕ್ಷಿ ಛಾಯಾಗ್ರಾಹಕರಿಂದ ಸಾಕಷ್ಟು ಅವಗಣನೆಗೆ ಒಳಗಾದ ಹಕ್ಕಿಗಳಲ್ಲಿ ಮೈನಾ ಸಹ ಒಂದು. ಅತಿ ಸುಲಭವಾಗಿ ಕಾಣಸಿಗುವ ಸಾಮಾನ್ಯ ಹಕ್ಕಿ ಎನ್ನುವ ಕಾರಣಕ್ಕೆ. ದೆಹಲಿಯಲ್ಲಿರುವ ಛಾಯಾಗ್ರಾಹಕ ಮಿತ್ರರೊಬ್ಬರ ಹತ್ತಿರ ಮಾತನಾಡುತ್ತಿರುವಾಗ ತಿಳಿದದ್ದು: ದೆಹಲಿಯಲ್ಲಿ ಮೈನಾಗಳು ಸಿಗುವುದೇ ಅಪರೂಪ! ಇದು ಒಂದು ಉದಾಹರಣೆ. ಹಾಗಾಗಿ ಸಾಮಾನ್ಯ ಹಕ್ಕಿಗಳು ಎನ್ನುವುದು ರಿಲೇಟಿವ್ ಪದ.”
ಪಕ್ಷಿ ಛಾಯಾಚಿತ್ರಗ್ರಾಹಕಿ ಹಾಗೂ ಕವಯಿತ್ರಿ ಎಂ.ಆರ್.ಭಗವತಿ ಬರೆಯುವ ಅಲಕ್ಷಿತ ಹಕ್ಕಿಗಳ  ಫೋಟೋ ಸರಣಿಯ ಮೊದಲ ಕಂತು.

 

ಪ್ರತಿದಿನ ಮುಂಜಾನೆ ನಮ್ಮ ಮನೆಯ ಮುಂದಿನ ಸಂಪಿಗೆ ಮರದ ಬುಡದಿಂದ ಗೇಟಿನವರೆಗೂ ಭೇಟಿಕೊಟ್ಟು ಹಿಂತಿರುಗುವ ಜೋಡಿ ಗೊರವಂಕಗಳ ಚಿತ್ರದೊಂದಿಗೆ ನನ್ನ ಚಿತ್ರಪಯಣ ಅಧಿಕೃತವಾಗಿ ಶುರುವಾಯಿತು. ಮರದ ಬುಡದಲ್ಲಿ ಕೆದಕುತ್ತ, ಹುಳು ಹಿಡಿಯುತ್ತ ಒಟ್ಟಿಗೇ ಹೆಜ್ಜೆಹಾಕುತ್ತಿದ್ದ ಈ ಜೋಡಿಯನ್ನು ನೋಡುತ್ತಾ ನಿಲ್ಲುವುದು ಅವತ್ತಿನ ಸಂತೋಷಕ್ಕೆ ಸಾಕಷ್ಟು ಸಾಣೆ ಹಿಡಿಯುತ್ತಿತ್ತು. ಹೊತ್ತು ಏರುವ ಮೊದಲು, ಸುಮಾರು ಹತ್ತುವರೆಯವರೆಗೂ ಪುಟುಪುಟು ಹೆಜ್ಜೆ ಹಾಕುವುದು ನಡೆದೇ ಇರುತ್ತಿತ್ತು. ಮತ್ತೆ ಸಂಜೆ ಮೂರು ಮೂವತ್ತು ಅಥವ ನಾಲ್ಕರ ಹೊತ್ತಿಗೆ ಮತ್ತೆ ಹಾಜರು. ಆದರೆ, ಮೇಲೆ ಹೇಳಿದ ಜೋಡಿ ಗೊರವಂಕಗಳು ಕಾಣುತ್ತಿದ್ದುದು ಬೆಳಗ್ಗೆ ಎಂಟು ಗಂಟೆ ಆಸುಪಾಸಿನ ಎಳೆ ಬಿಸಿಲಿನಲ್ಲಿ.

ಇದರ ಸ್ಥಳೀಯ ಹೆಸರು ‘ಮೈನಾ’. ಕರೆಯಲು ಅಥವ ಬರೆಯಲು ಸುಲಭವಾಗುವುದರಿಂದ ಮೈನಾ ಎಂದೇ ಕರೆಯೋಣ. ಈಗಿನ ಹಕ್ಕಿ ಪ್ರಪಂಚದಲ್ಲಿ, ಪಕ್ಷಿ ಛಾಯಾಗ್ರಾಹಕರಿಂದ ಸಾಕಷ್ಟು ಅವಗಣನೆಗೆ ಒಳಗಾದ ಹಕ್ಕಿಗಳಲ್ಲಿ ಮೈನಾ ಸಹ ಒಂದು. ಅತಿ ಸುಲಭವಾಗಿ ಕಾಣಸಿಗುವ ಸಾಮಾನ್ಯ ಹಕ್ಕಿ ಎನ್ನುವ ಕಾರಣಕ್ಕೆ. ದೆಹಲಿಯಲ್ಲಿರುವ ಛಾಯಾಗ್ರಾಹಕ ಮಿತ್ರರೊಬ್ಬರ ಹತ್ತಿರ ಮಾತನಾಡುತ್ತಿರುವಾಗ ತಿಳಿದದ್ದು: ದೆಹಲಿಯಲ್ಲಿ ಮೈನಾಗಳು ಸಿಗುವುದೇ ಅಪರೂಪ! ಇದು ಒಂದು ಉದಾಹರಣೆ. ಹಾಗಾಗಿ ಸಾಮಾನ್ಯ ಹಕ್ಕಿಗಳು ಎನ್ನುವುದು ರಿಲೇಟಿವ್ ಪದ. ನಮಗೆ ಸಾಮಾನ್ಯ ಅನ್ನಿಸಿದವು ಬೇರೆ ಪ್ರದೇಶಗಳಲ್ಲಿ ಕಾಣುವುದು ಅಪರೂಪವಾಗಿರುತ್ತದೆ. ಈ ಸಾಮಾನ್ಯ ಹಕ್ಕಿಗಳೇ ಅಲ್ಲವೆ ನಮ್ಮ ಕಣ್ಣಿಗೆ, ನಮ್ಮ ಕೆಮೆರಾಗೆ ಮೊದಲು ಕಾಣುವುದು. ಅಪರೂಪದ ಹಕ್ಕಿಗಳೆಂದೂ ಹಾಗೆ ದುತ್ತೆಂದು ಯಾರ ಕಣ್ಣಿಗೂ ಬೀಳುವುದಿಲ್ಲ.

ಗೊರವಂಕ ಅಥವ ಮೈನಾ ಸಾಮಾನ್ಯವಾಗಿ ಗುಂಪಾಗಿಯೇ ಇರುವ ಪಕ್ಷಿಗಳು. ಈ ಹಕ್ಕಿಗಳು ಒಂಟಿಯಾಗಿ ಕಾಣುವುದು ಅಪರೂಪ. ಪಾರಿವಾಳಗಳಿಗಿಂತ ಗಾತ್ರದಲ್ಲಿ ಚಿಕ್ಕದಾದ ಇವುಗಳದ್ದು ನೀಳವಾದ ದೇಹ. ಸಾಮಾನ್ಯವಾಗಿ ಪೊಟರೆಗಳಲ್ಲಿ ಇವು ಗೂಡು ಕಟ್ಟುತ್ತವೆ. ಮೈನಾಗಳಿಗೆ ಹುಳ-ಹುಪ್ಪಟೆಗಳು ಪ್ರಮುಖ ಆಹಾರ. ಹೊಲತೋಟಗಳಲ್ಲಿ ಮೇಯುತ್ತಿರುವ ದನಕರುಗಳ ಮೇಲೆ ಸವಾರಿ ಮಾಡುವ ಮೈನಾಗಳನ್ನು ನೀವು ನೋಡಿರಬಹುದು. ತಲೆಯನ್ನು ಮೇಲಕ್ಕೂ-ಕೆಳಕ್ಕೂ ಆಡಿಸುತ್ತಾ ಹುಳುಹಿಡಿಯುತ್ತಾ, ಮಣ್ಣನ್ನು ಕೆದಕುತ್ತಾ, ತಮ್ಮ ಭಾಷೆಯಲ್ಲಿ ಮಾತನಾಡುತ್ತಾ ಇರುವುದು ಸಾಮಾನ್ಯವಾಗಿ ಕಂಡುಬರುವ ಚಿತ್ರಣ ಈ ಮೈನಾ ಹಕ್ಕಿಗಳದ್ದು. ಮನುಷ್ಯರಂತೆ ಮಾತನಾಡುವ ಮೈನಾಗಳ ಉದಾಹರಣೆಗಳೂ ಸಾಕಷ್ಟಿವೆ.

ಈಗಿನ ಹಕ್ಕಿ ಪ್ರಪಂಚದಲ್ಲಿ, ಪಕ್ಷಿ ಛಾಯಾಗ್ರಾಹಕರಿಂದ ಸಾಕಷ್ಟು ಅವಗಣನೆಗೆ ಒಳಗಾದ ಹಕ್ಕಿಗಳಲ್ಲಿ ಮೈನಾ ಸಹ ಒಂದು. ಅತಿ ಸುಲಭವಾಗಿ ಕಾಣಸಿಗುವ ಸಾಮಾನ್ಯ ಹಕ್ಕಿ ಎನ್ನುವ ಕಾರಣಕ್ಕೆ. ದೆಹಲಿಯಲ್ಲಿರುವ ಛಾಯಾಗ್ರಾಹಕ ಮಿತ್ರರೊಬ್ಬರ ಹತ್ತಿರ ಮಾತನಾಡುತ್ತಿರುವಾಗ ತಿಳಿದದ್ದು: ದೆಹಲಿಯಲ್ಲಿ ಮೈನಾಗಳು ಸಿಗುವುದೇ ಅಪರೂಪ! ಇದು ಒಂದು ಉದಾಹರಣೆ. ಹಾಗಾಗಿ ಸಾಮಾನ್ಯ ಹಕ್ಕಿಗಳು ಎನ್ನುವುದು ರಿಲೇಟಿವ್ ಪದ.

 ಒಮ್ಮೆ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಓಡಾಡುವಾಗ ಐದಾರು ಮೈನಾಗಳು ದೂರದಿಂದ ನೋಡುವವರಿಗೆ ಜಗಳವಾಡುತ್ತಿದ್ದಾವೇನೋ ಎನ್ನುವಂತೆ ಕಂಡವು. ಹಕ್ಕಿಗಳೂ ಮನುಷ್ಯರಂತೆ ಜಗಳವಾಡುತ್ತಿರಬಹುದೆಂಬ ಊಹೆಯೇ ನನಗೆ ವಿಚಿತ್ರವಾಗಿ ಕಂಡಿತ್ತು! ಅಲ್ಲದೇ ಇಂಥ ಜಗಳವಾದರೂ ಅವುಗಳ ನಡುವೆ ಏಕೆ ಹುಟ್ಟಿತೋ ಎಂಬ ಆತಂಕ ಬೇರೆ! ನೋಡೇಬಿಡೋಣ ಎಂಬ ಕುತೂಹಲದೊಂದಿಗೆ ಹತ್ತಿರ ಹೋದರೆ ಅಲ್ಲಿ ಕಂಡ ಚಿತ್ರವೇ ಬೇರೆ. ಒಂದೆರಡು ಕಾಗೆಗಳು ಸೇರಿ ಮೈನಾವೊಂದನ್ನು ಕುಕ್ಕಿ, ಕುಕ್ಕಿ ಓಡಾಡಿಸುತ್ತಿದ್ದವು.  ಇನ್ನೊಂದಷ್ಟು ಮೈನಾಗಳು ಕಾಗೆಗಳ ಕೈಯಲ್ಲಿ ಸಿಕ್ಕ ಮೈನಾವನ್ನು ಅವುಗಳ ಹಿಡಿತದಿಂದ ಬಿಡಿಸಲು ಅರಚಾಡುತ್ತ ಏನೇನೋ ಸಾಹಸಪಡುತ್ತಿದ್ದವು. ಅಲ್ಲಿ ಜಗಳಗಂಟ ಕಾಗೆಗಳ ಕೈಗೆ ಸಿಕ್ಕಿದ್ದು ಮರಿ ಮೈನಾಹಕ್ಕಿ ಎಂದು ಗೊತ್ತಾದಮೇಲಂತೂ ನಮ್ಮ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಅಷ್ಟರಲ್ಲಿ ನಮ್ಮ ಬಳಿ ನಿಂತವರೊಬ್ಬರು ಹೋಗಿ ಕಾಗೆಗಳನ್ನು ಓಡಿಸಿ ಅವುಗಳ ಉಪಟಳದಲ್ಲಿ ಸಿಕ್ಕು ನರಳುತ್ತಿದ್ದ ಮರಿಹಕ್ಕಿಯನ್ನು ರಕ್ಷಿಸಿದ್ದರು.

(ಕಾಡು ಗೊರವಂಕ (Jungle Myna)ದ ರೇಖಾಚಿತ್ರ)

ಪುಟ್ಟ ಮೈನಾದ ಕತ್ತು ಸಂಘರ್ಷದಲ್ಲಿ ಪೆಟ್ಟುಬಿದ್ದು ಓರೆಯಾಗಿತ್ತು,  ಅದರ ಮೈಯ ಮೇಲೆ ಅಲ್ಲಲ್ಲಿ ರಕ್ತದ ಕಲೆ. ಏಟಾದ ಹಕ್ಕಿಯೊಂದನ್ನು ನೋಡಿದ್ದು ಅದೇ ಮೊದಲು. ಇನ್ನು ಮುಟ್ಟುವುದು ದೂರದ ಮಾತು. ಅದನ್ನು ಕಾಪಾಡಿದ ವ್ಯಕ್ತಿ ಅದನ್ನು ಗಿಡದ ಪೊದೆಯೊಳಗೆ ಬಿಟ್ಟುಹೋದರು. ಹಕ್ಕಿ ಉಳಿಯಿತಲ್ಲ ಅಂದುಕೊಂಡರೆ ಆಗಲೋ, ಈಗಲೋ ಎಂಬಂತೆ ಸಣ್ಣಗೆ ಉಸಿರಾಡುತ್ತಿದೆ. ಹಾಗದನ್ನು ಬಿಟ್ಟುಹೋಗಲು ಮನಸಾಗದೆ ಡಬ್ಬದಂತಿದ್ದ ನಮ್ಮ ಕ್ಯಾಮರಾ ಬ್ಯಾಗಿನೊಳಗೆ ಅದನ್ನು ಇಟ್ಟುಕೊಂಡು, ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆಗೆ ಒಪ್ಪಿಸಿದೆವು. ಗಾಯವಾದ ಕತ್ತು ಓರೆಯಾಗಿ, ಮರಿ ಕಷ್ಟಪಡುತ್ತಿತ್ತು. ಎತ್ತಿ ನಿಲ್ಲಿಸಿದರೆ ತಪಕ್ಕೆಂದು ಬೀಳುತ್ತಿತ್ತು. ಸುಸ್ತಾದ ಹಕ್ಕಿಗೆ ನೀರು ಕುಡಿಸಲು ಪ್ರಯತ್ನ ಪಟ್ಟೆವು. ಹಕ್ಕಿ ಮರಿಗೆ ತ್ರಾಣವೇ ಇರಲಿಲ್ಲ. ಗಾಯಗೊಂಡ ಹಕ್ಕಿಗಳಿಗೆ ತಕ್ಷಣ ನೀರು ಕುಡಿಸಬಾರದು ಎಂದು ಆಮೇಲೆ ತಿಳಿಯಿತು. ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಇರಬಾರದು ಎನ್ನುವುದು ವನ್ಯಜೀವಿ ಛಾಯಾಗ್ರಹಣದಲ್ಲಿ ಕೇಳಿಬರುವ ಮಾತು. ಆದರೆ, ಕಣ್ಣಮುಂದೆ ಒಂದು ಜೀವ ಕಷ್ಟದಲ್ಲಿದೆ ಎಂದಾಗ ಮನಸ್ಸು ತಡೆಯುವುದೇ? ಇಂಥ ಸನ್ನಿವೇಶಗಳಲ್ಲಿ ಕಾರಣ ತಿಳಿಯಲು ಕುತೂಹಲ ಇರುವುದು ಸಹಜ. ಮೈನಾಗಳಲ್ಲಿ ಮರಿಗಳಿಗೆ ಸೋಂಕು ತಗುಲಿದರೆ ಅವುಗಳನ್ನು ಗೂಡಿನಿಂದ ಆಚೆ ತಳ್ಳುತ್ತವೆ. ಹಾಗೆ ಆಗಿರುವ ಸಾಧ್ಯತೆ ಇದೆ. ಆದರೆ ಕಾಗೆಗಳ ಆಕ್ರಮಣಕ್ಕೆ ತುತ್ತಾದ ಮರಿಯನ್ನು ರಕ್ಷಿಸಲು ಪ್ರಯತ್ನಪಟ್ಟಿರುವ ಕಾರಣ ಬಹುಶಃ ಮರಿ ಅಕಸ್ಮಾತ್ತಾಗಿ ಗೂಡಿಂದ ಆಚೆ ಬಿದ್ದಿರಬಹುದು. ಸಾಮಾನ್ಯವಾಗಿ ಗೂಡು ಚಿಕ್ಕದಿರುತ್ತದೆ ಮರಿ ಹಕ್ಕಿಯು ಆಹಾರವನ್ನು ತೆಗೆದುಕೊಳ್ಳುವ ಆತುರದಲ್ಲಿ ಕೆಳಗೆ ಬಿದ್ದಿರಬಹುದು.

ಒಮ್ಮೆ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಓಡಾಡುವಾಗ ಐದಾರು ಮೈನಾಗಳು ದೂರದಿಂದ ನೋಡುವವರಿಗೆ ಜಗಳವಾಡುತ್ತಿದ್ದಾವೇನೋ ಎನ್ನುವಂತೆ ಕಂಡವು. ಹಕ್ಕಿಗಳೂ ಮನುಷ್ಯರಂತೆ ಜಗಳವಾಡುತ್ತಿರಬಹುದೆಂಬ ಊಹೆಯೇ ನನಗೆ ವಿಚಿತ್ರವಾಗಿ ಕಂಡಿತ್ತು! ಅಲ್ಲದೇ ಇಂಥ ಜಗಳವಾದರೂ ಅವುಗಳ ನಡುವೆ ಏಕೆ ಹುಟ್ಟಿತೋ ಎಂಬ ಆತಂಕ ಬೇರೆ! ನೋಡೇಬಿಡೋಣ ಎಂಬ ಕುತೂಹಲದೊಂದಿಗೆ ಹತ್ತಿರ ಹೋದರೆ ಅಲ್ಲಿ ಕಂಡ ಚಿತ್ರವೇ ಬೇರೆ. ಒಂದೆರಡು ಕಾಗೆಗಳು ಸೇರಿ ಮೈನಾವೊಂದನ್ನು ಕುಕ್ಕಿ, ಕುಕ್ಕಿ ಓಡಾಡಿಸುತ್ತಿದ್ದವು.  ಇನ್ನೊಂದಷ್ಟು ಮೈನಾಗಳು ಕಾಗೆಗಳ ಕೈಯಲ್ಲಿ ಸಿಕ್ಕ ಮೈನಾವನ್ನು ಅವುಗಳ ಹಿಡಿತದಿಂದ ಬಿಡಿಸಲು ಅರಚಾಡುತ್ತ ಏನೇನೋ ಸಾಹಸಪಡುತ್ತಿದ್ದವು.

ಮೈನಾಗಳು ಆಕ್ರಮಣಶೀಲ ಹಕ್ಕಿಗಳು ಎಂದೇ ಗುರುತಿಸಿಕೊಂಡಿವೆ. ಯಾಕೆಂದರೆ ಇವು ಸ್ಥಳೀಯ ಪಕ್ಷಿಗಳ ವಾಸಸ್ಥಾನವನ್ನು, ಆಹಾರವನ್ನು ಕಸಿದುಕೊಳ್ಳುವುದು ಅವುಗಳ ಸ್ವಭಾವ ಎನ್ನಲಾಗಿದೆ. ಬಹುಶಃ ಕಾಗೆಗಳು ಇರುವ ವಾಸಸ್ಥಾನದಲ್ಲಿ ಈ ಮೈನಾದ ಮರಿಯೂ ಇತ್ತೋ, ಆ ಕಾರಣಕ್ಕಾಗಿ ಕಾಗೆಗಳು ಅದನ್ನು ಹಾಗೆ ಅಟ್ಟಾಡಿಸಿಕೊಂಡು ಕುಕ್ಕುತ್ತಿದ್ದವೋ ಗೊತ್ತಿಲ್ಲ. ನಮ್ಮ ಮನೆಯ ಮುಂದಿನ ಅದೇ ಮರದ ಮೇಲೆ ದಿನಾಲು ಬಂದು ಕೂರುತ್ತಿದ್ದ ಪರಪುಟ್ಟ ಕೋಗಿಲೆಗಳನ್ನು ಕುಳಿತ ಜಾಗದಿಂದ ಗುಳೇ ಎಬ್ಬಿಸುತಿದ್ದ ದೃಶ್ಯ ನನ್ನ ಕಣ್ಣೆದುರಿಗೆ ಬರುತ್ತಿದೆ. ಕಾಗೆ-ಕೋಗಿಲೆಗಳ ವೈರ ನಮಗೆ ತಿಳಿದೇ ಇದೆ. ಆದರೆ, ಬಹಳಷ್ಟು ಮೈನಾಗಳು ಅದೇ ಮರದ ಮೇಲೆ ಆರಾಮವಾಗಿ ಇರುತ್ತಿದ್ದವು. ಕಾಗೆ-ಮೈನಾ ಗಳು ಜಗಳವಾಡಿದ್ದು ನೋಡಿರಲಿಲ್ಲ.

ಮೈನಾಗಳು ಆಕ್ರಮಣಕಾರಿ ಹಕ್ಕಿಗಳಾದರೂ, ಕೌಟುಂಬಿಕವಾಗಿ ಪರಸ್ಪರ ಹೊಂದಾಣಿಕೆಇರುವಂಥವು. ಮರಿಗಳ ಬಗ್ಗೆ ಹೆಚ್ಚು ಪ್ರೀತಿ. ಹಾಗೆ ವಾಸಿಸುವ ಗಡಿ ಪ್ರದೇಶಗಳ ಬಗ್ಗೆ ಹೆಚ್ಚು ಒಲವು ಉಳ್ಳವು. ತಮ್ಮ ಗೂಡಿನ ಸುತ್ತಮುತ್ತ ಐದು ಅಡಿಗಳ ಅಂತರದಲ್ಲಿ ಬೇರೆ ಹಕ್ಕಿಗಳಿರಲಿ, ಸ್ವತಃ ಬೇರೆ ಮೈನಾಗಳೂ ಹತ್ತಿರ ಸುಳಿಯಲು ಬಿಡುವುದಿಲ್ಲ. ಬೇರೆ ಮೈನಾಗಳು ಕಟ್ಟಿದ ಗೂಡುಗಳಿಗೂ ವಾಸಿಸಲು ಹೋಗುವುದಿಲ್ಲ. ಮನುಷ್ಯರು ಗೂಡಿನ ಹತ್ತಿರ ಸುಳಿಯುವಾಗ ಅವರ ಗಮನವನ್ನು ಬೇರೆ ಕಡೆ ಸೆಳೆಯಲು ಹೆಚ್ಚು ಪ್ರಯತ್ನಿಸುತ್ತವೆ.

ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ, ಸಿಮೆಂಟ್ ಕಟ್ಟಡಗಳಲ್ಲಿ, ಕೊರಕಲುಗಳಲ್ಲಿ, ಮನೆ ನೀರು ಹೊರಗೆ ಹರಿದು ಹೋಗಲು ಹಾಕಿರುವ ಪೈಪುಗಳಿರುವ ಜಾಗಗಳಲ್ಲಿ ಇವು ಗೂಡುಗಳನ್ನು ಮಾಡುವುದು ಹೆಚ್ಚು. ಅಂಥ ಪೈಪುಗಳಲ್ಲಿ ಮನೆ ನೀರು ಹೋಗಲು ಕನಿಷ್ಟ ಒಂದುವರೆ ಅಡಿ ಒಳಗಿನ ಜಾಗದಲ್ಲಿ ಗೂಡನ್ನು ನಿರ್ಮಿಸುತ್ತದೆ. ಬೆಂಗಳೂರಂಥ ನಗರಗಳಲ್ಲಿ ಫ್ಲೈ ಓವರ್ ನ ಸಿಮೆಂಟ್ ನ ತೂತುಗಳಲ್ಲಿ ವಾಸಿಸುವ ಮೈನಾಗಳನ್ನು ನೀವು ನೋಡಿರಬಹುದು.

ಕಾಗೆ, ಪಾರಿವಾಳಗಳಂತೆ ನಗರ ಜೀವನಕ್ಕೆ ಆರಾಮವಾಗಿ ಹೊಂದಿಕೊಂಡಿರುವ ಮೈನಾಗಳು ಇತರೆ ಹಕ್ಕಿಗಳೊಂದಿಗೆ, ಪಾರಿವಾಳ, ಕಾಗೆ, ಗಿಳಿ, ಇತ್ಯಾದಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಬಹುಶಃ ಎಲ್ಲಾ ಜೀವಿಗಳಂತೆ ಹಕ್ಕಿಗಳೂ ಕೂಡ ತಮಗೆ ಸರಿಹೊಂದುವಂಥ, ತಮ್ಮ ಜೀವನ ಶೈಲಿಗೆ ಹೋಲುವಂಥವುಗಳೊಡನೆ ಹೊಂದಿಕೊಂಡು ಹೋಗುವುದು ಅಥವ ಒಗ್ಗಿಕೊಳ್ಳುವುದು ಸಹಜವಾಗಿರಬಹುದು. ಬೆಂಗಳೂರಿನಲ್ಲೇ ತೆಗೆದುಕೊಂಡರೆ ಬೆಂಗಳೂರಿನ ಹೊರವಲಯದಲ್ಲಿ ಉದಾಹರಣೆಗೆ, ನಂದಿಬೆಟ್ಟದಲ್ಲಿ ಮೈನಾಗಳು ಕಂಡುಬರುವುದು ಅಪರೂಪ. ನಂದಿ ಬೆಟ್ಟದ ಹತ್ತಿರದ ಸ್ಥಳಗಳಲ್ಲಿ ದಾರಿಯುದ್ದಕ್ಕೂ ಮೈನಾಗಳು ಕಾಣಸಿಗುವುದು ಸಾಮಾನ್ಯ ದೃಶ್ಯ. ನಗರ ಜೀವನ ಹತ್ತಿರವಾದಷ್ಟು ಹೊಲಗದ್ದೆಗಳು ಹತ್ತಿರವಿರುವ ಜಾಗಗಳಲ್ಲಿ ಡಾಳಾಗಿ ಅವುಗಳ ಇರುವು ಗೊತ್ತಾಗುತ್ತದೆ.

(ಚಿತ್ರಗಳು: ಎಂ. ಆರ್. ಭಗವತಿ)

ಹೀಗೆ ಒಂದು ಪ್ರದೇಶಕ್ಕಂತಲೇ ಅವುಗಳ ವಾಸಸ್ಥಳ ಸೀಮಿತವಲ್ಲ. ಆಯಾ ಸ್ಥಳಗಳ ವಾತಾವರಣಕ್ಕನುಗುಣವಾಗಿ ಪಕ್ಷಿಗಳ ಪ್ರಭೇಧ ಇರುವುದು. ಮನುಷ್ಯನ ವಾಸಸ್ಥಳಗಳಲ್ಲಿ ಹೆಚ್ಚು ಹೊಂದಿಕೊಂಡಂತೆ ಮೈನಾಗಳು ನಗರ ಕೇಂದ್ರಿತವಾಗಿವೆ ಎಂದೇ ಹೇಳಬಹುದು. ಕಾಗೆ, ಪಾರಿವಾಳ, ಮಡಿವಾಳ ಹಕ್ಕಿಗಳಂತೆ ನಗರ ಪ್ರದೇಶಗಳಿಗೆ ಆರಾಮವಾಗಿ ಹೊಂದಿಕೊಂಡಿವೆ. ಕಾಡು ಮೈನಾಗಳು ಸಹಜವಾಗಿ ಸಂಕೋಚದ ಪ್ರವೃತ್ತಿಯುಳ್ಳವು. ನಗರ ಪ್ರದೇಶಗಳಿಗೆ ಹೆಚ್ಚು ಒಗ್ಗಿಕೊಂಡಿಲ್ಲ. ಕುರುಚಲು ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ಬೆಂಗಳೂರಿನಲ್ಲಿ ಲಾಲ್ಭಾಗ್ ಮತ್ತು ಕಬ್ಬನ್ ಉದ್ಯಾನವನಗಳಲ್ಲಿ ಇವುಗಳನ್ನು ಕಾಣಬಹುದು.

ಕಾಗೆ, ಪಾರಿವಾಳಗಳಂತೆ ನಗರ ಜೀವನಕ್ಕೆ ಆರಾಮವಾಗಿ ಹೊಂದಿಕೊಂಡಿರುವ ಮೈನಾಗಳು ಇತರೆ ಹಕ್ಕಿಗಳೊಂದಿಗೆ, ಪಾರಿವಾಳ, ಕಾಗೆ, ಗಿಳಿ, ಇತ್ಯಾದಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಬಹುಶಃ ಎಲ್ಲಾ ಜೀವಿಗಳಂತೆ ಹಕ್ಕಿಗಳೂ ಕೂಡ ತಮಗೆ ಸರಿಹೊಂದುವಂಥ, ತಮ್ಮ ಜೀವನ ಶೈಲಿಗೆ ಹೋಲುವಂಥವುಗಳೊಡನೆ ಹೊಂದಿಕೊಂಡು ಹೋಗುವುದು ಅಥವ ಒಗ್ಗಿಕೊಳ್ಳುವುದು ಸಹಜವಾಗಿರಬಹುದು.

ಮೈನಾಗಳಲ್ಲಿ ಹೆಣ್ಣು- ಗಂಡು ಬಹುತೇಕ ಒಂದೇ ರೀತಿ ಇರುತ್ತವೆ. ಸಾಮಾನ್ಯ(Common Myna)ಮತ್ತು ಕಾಡುಮೈನಾಗಳಲ್ಲಿ (Jungle Myna) ಸಣ್ಣ ವ್ಯತ್ಯಾಸವೆಂದರೆ ಸಾಮಾನ್ಯ ಮೈನಾಗಳಿಗೆ ಕಣ್ಣಿನಸುತ್ತ ಹಳದಿಪಟ್ಟಿ, ಕೊಕ್ಕು ಕೂಡ ಹಳದಿ. ಆದರೆ, ಕಾಡುಮೈನಾಗಳ ಕೊಕ್ಕು ಕೇಸರಿಬಣ್ಣ, ತಲೆಯ ಮೇಲೊಂದು ಪುಚ್ಚ. ಕಾಡುಮೈನಾಗಳು ಸಾಮಾನ್ಯ ಮೈನಾಗಳಿಗಿಂತ ಗಾತ್ರದಲ್ಲಿ ಕೊಂಚ ದೊಡ್ಡವಂತೆ ಕಾಣುತ್ತವೆ. ಮುಖಗಂಟಿಕ್ಕಿಕೊಂಡು ಯಾವಾಗಲು ಗಂಭೀರವಾಗೇ ಇರುತ್ತವೆ. ಸದಾ ಹುಳುಗಳನ್ನು, ಬೀಜಗಳನ್ನು ಕೆದಕುತ್ತಲೇ ಇರುತ್ತವೆ. ಉಳಿದಂತೆ ಸಾಮಾನ್ಯ ಮೈನಾಗಳಂತೇ ಇರುತ್ತವೆ. ದೂರದಿಂದ ನೋಡಿದರೆ ಎರಡು ಒಂದೇರೀತಿ ಕಾಣುತ್ತವೆ. ಇದನ್ನು ಹೇಳುವ ಹೊತ್ತಿಗೆ ಕಾಗೆಗಳಿಂದ ಕುಕ್ಕಿಸಿಕೊಂಡು ಗಾಯಗೊಂಡ ಮೈನಾ ಮರಿ ಆಗಾಗ ನೆನಪಾಗುತ್ತಿದೆ. ಈಗ ಅದು ಎಲ್ಲಿರಬಹುದು? ತನ್ನ ತಂದೆ-ತಾಯಿಯರ, ವಾಸಸ್ಥಾನದ ನೆನಪು ಅದಕ್ಕೆ ಮರೆತು ಹೋಗಿದೆಯೆ? ಕೊನೇ ಪಕ್ಷ ಅದರ ಗಾಯದ ಗುರುತು?
ನಾನು ಮನುಷ್ಯರಂತೆ ಯೋಚಿಸುತ್ತಿದ್ದೇನೆಯೇ!?

(ಚಿತ್ರಗಳು: ಎಂ. ಆರ್. ಭಗವತಿ)

 

(ಮುಂದುವರಿಯುವುದು)
0
0