ಯಕ್ಷಾಕಾಶದ ಮಹಾಮೇಘ ಹಡಿನಬಾಳ ಶ್ರೀಪಾದ ಹೆಗಡೆ: ನಾರಾಯಣ ಯಾಜಿ ಬರೆದ ಲೇಖನ
“ಡೇರೆ ಹಾಕಿದ ಊರಿಗೆ ಕೆಲವೊಂದು ಜಾಗದಲ್ಲಿ ಪ್ರಧಾನ ನಟರು ಕೈಕೊಡುವದಿದೆ. ಅಂತಹ ಹೊತ್ತಿನಲ್ಲಿ ಪ್ರೇಕ್ಷಕರ ಗಲಾಟೆಯಾಗಿ ಟೆಂಟಿಗೆ ಬೆಂಕಿ ಹಚ್ಚುವ ಪರಿಸ್ಥಿತಿಯೂ ಎದುರಿಸಬೇಕಾಗಬಹುದು. ಅಂತಹ ಹೊತ್ತಿನಲ್ಲಿ ಮೇಳದ ಸಂಘಟಕರಿಗೆ ಆಪದ್ಭಾಂದವನಾಗಿ ಒದಗುವದು ಶ್ರೀಪಾದ ಹೆಗಡೆಯವರು. ಅದು ರಾಮ, ಕರ್ಣ, ರಾವಣ, ಕಾರ್ತವೀರ್ಯ, ಭಸ್ಮಾಸುರ, ವಿಶ್ವಾಮಿತ್ರ…”
ಆಧ್ಯಾತ್ಮಿಕ ಕ್ಷೇತ್ರದ ಫಾರೆಸ್ಟ್ ಗಂಪ್ ಮಾರಿಸ್ ಫ್ರೀಡ್ಮನ್: ವಲಸೆ ಹಕ್ಕಿ ಬರೆದ ಲೇಖನ
“ರಾಜ ಕುವರ ಪಂತನ ದೆಸೆಯಿಂದ ತಮ್ಮ ಸನ್ಯಾಸಿ ದಿರಿಸಿನ ಬದಲು ಪ್ಯಾಂಟ್ ತೊಡಬೇಕಾಗಿ ಬಂದಿದ್ದರಿಂದ ಮಾರಿಸರಿಗೆ ಕಿರಿಕಿರಿಯಾಗಿ ಅವನೊಂದಿಗೆ ಸ್ವಲ್ಪ ನಿಷ್ಠುರವಾಗೇ ನಡೆದುಕೊಳ್ಳುತ್ತಾರೆ. ಆದರೆ ಅವರ ನೇರ, ದಿಟ್ಟ, ಕಪಟರಹಿತ ನಡೆ ನುಡಿಗಳು ಅಪ ಪಂತನ ಮನ ಸೂರೆಗೊಳಿಸುತ್ತದೆ. ಇಂತಹ “ಜಾಕ್ ಆಫ್ ಆಲ್” ತನಗೆ ಸಲಹಾರ್ಥಿಯಾಗಿ ದೊರಕಿದರೆ ಬರ ಪೀಡಿತ ಔಂಧ್ ರಾಜ್ಯದ ಹಳ್ಳಿಗಳನ್ನು ಸುಭಿಕ್ಷಗೊಳಿಸಬಹುದೆಂಬ ಕನಸು…”
ಯಕ್ಷಗಾನದ ಛಂದಃಪರಂಪರೆ ಸಾಯದಿರಲಿ…: ಕಡತೋಕಾ ಗೋಪಾಲಕೃಷ್ಣ ಬರೆದ ಲೇಖನ
“ಇಂದಿನ ತಲೆಮಾರಿನ ಪ್ರಸಂಗಕರ್ತರು ಮಾಡಬೇಕಾದದ್ದೇನು? ಯಕ್ಷಗಾನ ಪ್ರಸಂಗಕರ್ತನಾಗಲು ಬಯಸುವ ಪ್ರತಿಯೊಬ್ಬನೂ ಶೆಟ್ಟರು ಕೊಟ್ಟ ಲಕ್ಷಣಗಳಿಗೆ ಅನುಗುಣವಾಗಿ ಪದ್ಯವನ್ನು ರಚಿಸುವುದರ ಮೂಲಕ ಪ್ರಸಂಗ ಸಾಹಿತ್ಯ ವಿಭಾಗಕ್ಕೆ ಅಗತ್ಯವಾದ ಶಿಸ್ತನ್ನು ಒದಗಿಸಬೇಕಾಗಿದೆ. ಯಕ್ಷಗಾನ ತರಬೇತಿ ಕೇಂದ್ರಗಳು ಛಂದಸ್ಸಿನ ಪ್ರಾಥಮಿಕ ಜ್ಞಾನವನ್ನಾದರೂ…”
ಮರ್ತ್ಯದ ಋಣತೀರಿಸಿ ಅಮರರಾದ ಆಮೂರರು: ಡಾ. ಗೀತಾ ವಸಂತ ಲೇಖನ
“ಆಮೂರರು ಮೊದಲ ಬರವಣಿಗೆ ಗುರುತಿಸಲ್ಪಟ್ಟದ್ದು ಇಂಗ್ಲೀಷ್ ನಿಬಂಧದ ಮೂಲಕವೇ. ಕುವೆಂಪು ಆದಿಯಾಗಿ ಆ ಕಾಲದ ಸೃಜನಶೀಲರಿಗೆ ಈ ವಸಾಹತುಶಾಹಿ ಭಾಷೆಯ ಆಕರ್ಷಣೆ ಉಂಟಾಗಲು ಹಲವು ಕಾರಣಗಳಿವೆ. ಆದರೆ ಆಮೂರರ ಸಾಹಿತ್ಯ ಸಂವೇದನೆ ಬೆಳೆದದ್ದು ಚಿಕ್ಕಂದಿನಲ್ಲಿ ಸಂಸ್ಕೃತದ ಶಾಸ್ತ್ರೀಯ ಕಾವ್ಯಗಳನ್ನು ಓದುವ ಮೂಲಕ.”
ಡಾ. ಜಿ.ಎಸ್. ಆಮೂರರ ಕುರಿತು ಅಶೋಕ್ ಶೆಟ್ಟರ್ ಬರೆದ ಲೇಖನ
“ಕುವೆಂಪು, ಬೇಂದ್ರೆ, ನಿರಂಜನ, ಚದುರಂಗ, ಅಡಿಗ, ಅನಂತಮೂರ್ತಿ, ಶ್ರೀರಂಗ, ಡಿ.ವಿ.ಜಿ ಮುಂತಾದ ಹಿರಿಯ ಲೇಖಕರ ಸಾಹಿತ್ಯ ಸೃಷ್ಟಿಯಿಂದ ಹಿಡಿದು ಆಗಷ್ಟೇ ಸಾಹಿತ್ಯಕ್ಷೇತ್ರ ಪ್ರವೇಶಿಸಿದ ಭರವಸೆದಾಯಕ ಬರಹಗಾರರ ಸಾಹಿತ್ಯದ ವರೆಗೂ ಆಮೂರ್ ಅವರು ವಿಮರ್ಶೆ ಬರೆದರು. ಅವರ ವಿಮರ್ಶೆಯ ಒಳನೋಟಗಳು ಅವರ ಪ್ರತಿಭಾವಂತಿಕೆಗೆ ಸಾಕ್ಷಿಯಾಗಿವೆ.”
ಕಾಲವೇ ಸೃಷ್ಟಿಸಿಕೊಂಡ ಕಲಾವಿದ ಜಲವಳ್ಳಿ ವೆಂಕಟೇಶ ರಾವ್: ನಾರಾಯಣ ಯಾಜಿ ಲೇಖನ
“ಚಿಟ್ಟಾಣಿಯವರೊಟ್ಟಿಗಿನ ಅಂದಿನ ಭೀಮ ಯಶಸ್ವಿಯಾಗಿದ್ದೇ ನಂತರ ಅವರು ಪ್ರತಿನಾಯಕನ ಪಾತ್ರಕ್ಕೆ ಅದರಲ್ಲೂ ಧೀರದತ್ತ ಪಾತ್ರಕ್ಕೆ ಬಹುವಾದ ಪ್ರಸಿದ್ಧಿಯನ್ನು ಪಡೆದರು. ಅವರಿಗೆ ಭೀಮನಂತೆ ಪ್ರಸಿದ್ಧಿ ನೀಡಿದ ಮತ್ತೊಂದು ಪಾತ್ರ ಚಿತ್ರಾಕ್ಷಿಕಲ್ಯಾಣದ ರಕ್ತಜಂಘನ ಪಾತ್ರ. ಈ ಪಾತ್ರವೂ ಅವರಿಗೆ ಆಕಸ್ಮಿಕವಾಗಿ ದೊರೆತದ್ದೆ.”
ತಾಳಮದ್ದಲೆಯ ಚಕ್ರವ್ಯೂಹ ಬೇಧಿಸಿದ ಸಂಪಾಜೆಯ ಜಬ್ಬಾರ್
ಸಂಪಾಜೆಯ ಮೊಯಿದ್ದಿನ್ ಮತ್ತು ಬೀಪಾತಿಮಾ ಇವರ ಐದನೇ ಮಗ ಜಬ್ಬಾರ ಹುಟ್ಟಿದ್ದು ಬೆಳೆದದ್ದು ಓದಿದ್ದು ಇಲ್ಲಿಯೇ. ಆಗ ಈಗಿನಂತೆ ಉಸಿರುಕಟ್ಟುವ ವಾತಾವರಣ ಇಲ್ಲದ ಕಾರಣ ಆಟ ಎಲ್ಲರನ್ನೂ ಸೆಳೆಯುತ್ತಿತ್ತು. ನೆರೆ ಕೆರೆಯರೊಟ್ಟಿಗೆ ಆರನೆಯ ವಯಸ್ಸಿಗೇ ಆಟನೋಡಲು ಓಡುತ್ತಿದ್ದರು. ಆಗ ಅದೇನು ತಕರಾರು ಮಾಡುವಂತಹ ವಿಷಯ ಯಾವ ಜಾತಿಯವರಲ್ಲೂ ಇರಲಿಲ್ಲ.
ಮುಗ್ಧ ಮನಸ್ಸಿನ ಬಂಡಾಯದ ಲೇಖಕ ಮೊಪಾಂಸಾ : ನಾರಾಯಣ ಯಾಜಿ ಬರಹ
“ಯಾವಾಗ ಅವರೆಲ್ಲ ಗಮ್ಯ ಸ್ಥಾನವನ್ನು ಸೇರಿದರೋ ಮತ್ತೊಮ್ಮೆ ಅವರಲ್ಲಿನ ನೈತಿಕ ಪ್ರಜ್ಞೆ ಜಾಗೃತವಾಗುತ್ತದೆ. ಎಲಿಜೆಬೆತಳೊಟ್ಟಿಗೆ ಊಟಮಾಡಲೂ ನಿರಾಕರಿಸುತ್ತಾರೆ. ನಡುರಾತ್ರಿಯಲ್ಲಿ ಈಕೆಯನ್ನು ಇಳಿಸಿ ಕಂಡಕ್ಟರ್ ಸೀಟಿ ಊದಿ ಮುಂದೆ ಸಾಗುವಾಗ ವಿಷಣ್ಣವಾಗಿ ಎಲ್ಲರನ್ನು ನೋಡಿ ಎಲ್ಲರಿಗಾಗಿ ಎಲ್ಲವನ್ನು ಕಳಕೊಂಡ ತನ್ನ ಕುರಿತು ಮೌನವಾಗಿ ಅಳು, ಕ್ರೋಧದಿಂದ ಅವರನ್ನು ನೋಡುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ.”
ಈ ಭೋಗದ ಜಗತ್ತೇ ಬೇರೆ ಆದಿಪುರಾಣ ಹೇಳ್ತಾಯಿರೊ ಭೋಗದ ಜಗತ್ತೇ ಬೇರೆ ಅಂತ ಯಾಕೆ ತಿಳಿಯಬೇಕು?
“ಇವತ್ತು ಯಾವುದನ್ನ ಕರ್ನಾಟಕದ ಶ್ರೇಷ್ಠವಾದ ಕಲೆ ಅಂತ ಕರೀತಿವಿ ಅವುಗಳೆಲ್ಲ ಪ್ರಭುತ್ವದ ಅಡಿಯಲ್ಲೆ ಸೃಷ್ಠಿಯಾದವು.ಪಂಪನಂತ ಒಬ್ಬ ಕವಿ ಅದು ರಾಜನ ಆಶ್ರಯದಲ್ಲಿ ಇದ್ದ ಮಾತ್ರಕ್ಕೆ ತನ್ನ ಇಡೀ ಪ್ರತಿಭೆಯನ್ನು ಆಧಿಪತ್ಯಗೊಳಿಸಿದಾನೆ ಅಂತ ಹೇಳಿದಾಗ ಪಂಪನನ್ನ ಮಿತಿಗೊಳಿಸಿ ಯೋಚನೆ ಮಾಡದಂತಾಗುತ್ತೆ ಅನ್ನೋದೆ ನನ್ನ ತಿಳುವಳಿಕೆ”