“ನಮ್ಮ ಕೌಟುಂಬಿಕ ಜೀವನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವೇನೂ ಇರಲಿಲ್ಲ. ಇದೇ ಕಾರಣಕ್ಕೆ ನನ್ನ ತಾಯಿಗೆ ಅವರು ಇಚ್ಛಿಸಿದ ಓದು ಗಗನ ಕುಸುಮವಾಯಿತು. ಮುಂದೆ ನನ್ನ ಅಕ್ಕಂದಿರಿಬ್ಬರಿಗೂ ಬಡತನ, ಚಿಕ್ಕ ಪುಟ್ಟ ಕೆಲಸಗಳ ಹೊರೆಯಿಂದಾಗಿ ಅವರೂ ಶಾಲೆಯ ಮುಖವನ್ನು ನೋಡಲಿಲ್ಲ. ಆದರೆ ನನ್ನ ಅಕ್ಕಂದಿರಿಬ್ಬರೂ ನಮ್ಮಿಬ್ಬರನ್ನೂ (ತಂಗಿ ಮತ್ತು ನಾನು) ಪ್ರೋತ್ಸಾಹಿಸಿ ಶಾಲೆಗೆ ಕಳುಹಿಸಿ ಆನಂದಪಡುತ್ತಿದ್ದರು. ಅವರಿಗೆ ನಮ್ಮ ಓದಿನ ಬಗ್ಗೆ ಎಷ್ಟು ಖುಷಿ ಇತ್ತೆಂದರೆ ಓಣಿಯ ತಿರುವು ಕಾಣದಾಗುವತನಕ ನಿಂತು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಶಾಲೆ ಬಿಡುವ ಹೊತ್ತಿಗೆ ನಾವು ಪಾಠೀಚೀಲವನ್ನು ಹೊತ್ತು ಬರುವ ದಾರಿಗೆ ಎದುರಾಗಿ ನಿಂತಿರುತ್ತಿದ್ದರು.”
ಹಟ್ಟಿ ಸಾವಿತ್ರಿ ಪ್ರಭಾಕರ ಗೌಡ ಬರೆದ ಲೇಖನ.

 

ಸಧ್ಯ ತುಮಕೂರು ಜಿಲ್ಲೆಯ ಹಳ್ಳಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರೋದು ನನಗೆ ಖುಷಿ ತಂದಿದೆ. ಶತಮಾನ ಪೂರೈಸಿದ ಶಾಲೆ ಇದು… ಎರಡು ವರುಷಗಳ ಹಿಂದೆ ಇಲ್ಲಿಗೆ ಪ್ರವೇಶ ಮಾಡಿದ ನೆನಪು ಬಲು ಮಧುರ. ನನ್ನ ಇಡೀ ಜೀವಮಾನದ ಅತಿ ದೊಡ್ಡ ಕನಸು ಅಂದು ನನಸಾದ ಆ ದಿನ ಎಂದಿಗೂ ಮರೆಯಲಾಗದ್ದು.  ನಾನು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕವಲ್ಲ; ಬೇರೆ ಕೆಲಸಕ್ಕಿಂತ ಈ ಕೆಲಸ ಸುಲಭದ್ದು ಅಂತಲೂ ಅಲ್ಲ. ವಾಸ್ತವದಲ್ಲಿ ಇದು ಸುಲಭದ್ದೇನೂ ಅಲ್ಲ. ನೂರಾರು ಮಕ್ಕಳನ್ನು ನಿಭಾಯಿಸುತ್ತಿದ್ದ ನನ್ನ ಗುರುಮಾತೆ ಕಾಶೀಬಾಯಿ ಸಿದ್ಧೋಪಂತರನ್ನು ನೋಡುತ್ತಿದ್ದರೆ ನನಗೆ ಅವರಂತೆಯೇ ಗುರೂಜಿ ಆಗಬೇಕೆಂದು ಅನ್ನಿಸುತ್ತಿತ್ತು. ನನಗಾಗ ಟೀಚರ್ ಎಂಬ ಪದವೇ ಗೊತ್ತಿರಲಿಲ್ಲ. ಏಕೆಂದರೆ ಇಂಗ್ಲಿಷ್ ಅಕ್ಷರಾಭ್ಯಾಸ ಶುರುವಾಗಿದ್ದೇ ನನ್ನ ಐದನೇ ತರಗತಿಯಿಂದ. ಅದೂವರೆಗೆ ಸರಕಾರಿ ಶಾಲೆಯ ನಮ್ಮ ಶಿಕ್ಷಕಿಯರಿಗೆ ಅಕ್ಕೋರೆ ಅಂತಲೂ, ಶಿಕ್ಷಕರಿಗೆ ಮಾಸ್ತರರಂತಲೂ ಕರೆಯುತ್ತಿದ್ದೆವು. ಯಾವಾಗ ಐದನೇ ತರಗತಿಗೆ ಕಾಲಿಟ್ಟೆವೊ ಆಗ ಮೊಟ್ಟ ಮೊದಲ ಸಲ ಪದವೀಧರ ಶಿಕ್ಷಕರೊಬ್ಬರು ನಮ್ಮ ಶಾಲೆಗೆ ಬಂದರು. ನಮಗೆ ಟೀಚರ್, ಸರ್ ಅನ್ನುವ ಪದಗಳನ್ನು ಕಲಿಸಿಕೊಟ್ಟರು. ಜಾಸ್ತಿ ಓದಿದವನ್ನು ಹೊರತುಪಡಿಸಿದರೆ ನಮ್ಮೂರಿನ ನಿತ್ಯ ಜೀವನದಲ್ಲಿ ಇಂಗ್ಲಿಷ್ ಹಾವಳಿಯೇ ಇರಲಿಲ್ಲ.

ನಮ್ಮ ಕೌಟುಂಬಿಕ ಜೀವನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವೇನೂ ಇರಲಿಲ್ಲ. ಇದೇ ಕಾರಣಕ್ಕೆ ನನ್ನ ತಾಯಿಗೆ ಅವರು ಇಚ್ಛಿಸಿದ ಓದು ಗಗನ ಕುಸುಮವಾಯಿತು. ಮುಂದೆ ನನ್ನ ಅಕ್ಕಂದಿರಿಬ್ಬರಿಗೂ ಬಡತನ, ಚಿಕ್ಕ ಪುಟ್ಟ ಕೆಲಸಗಳ ಹೊರೆಯಿಂದಾಗಿ ಅವರೂ ಶಾಲೆಯ ಮುಖವನ್ನು ನೋಡಲಿಲ್ಲ. ಆದರೆ ನನ್ನ ಅಕ್ಕಂದಿರಿಬ್ಬರೂ ನಮ್ಮಿಬ್ಬರನ್ನೂ (ತಂಗಿ ಮತ್ತು ನಾನು) ಪ್ರೋತ್ಸಾಹಿಸಿ ಶಾಲೆಗೆ ಕಳುಹಿಸಿ ಆನಂದಪಡುತ್ತಿದ್ದರು. ಅವರಿಗೆ ನಮ್ಮ ಓದಿನ ಬಗ್ಗೆ ಎಷ್ಟು ಖುಷಿ ಇತ್ತೆಂದರೆ ಓಣಿಯ ತಿರುವು ಕಾಣದಾಗುವತನಕ ನಿಂತು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಶಾಲೆ ಬಿಡುವ ಹೊತ್ತಿಗೆ ನಾವು ಪಾಠೀಚೀಲವನ್ನು ಹೊತ್ತು ಬರುವ ದಾರಿಗೆ ಎದುರಾಗಿ ನಿಂತಿರುತ್ತಿದ್ದರು. ಒಮ್ಮೊಮ್ಮೆ ಸಮಯ ಸಿಕ್ಕರೆ ನಮ್ಮ ಶಾಲೆಯತನಕ ಬಂದು ನಾವು ಸಾಲಾಗಿ ನಿಂತು ಪ್ರಾರ್ಥನೆ ಮಾಡುವುದನ್ನು ನೋಡಿ ಖುಷಿಯಾಗಿ ಹಿಂದಿರುಗುತ್ತಿದ್ದರು. ನಾವು ಶಾಲೆಗೆ ಹೋಗುವ ಮಕ್ಕಳೆಲ್ಲರ ನಡುವೆ ಹತ್ತರಲ್ಲಿ ಹನ್ನೊಂದನೆಯವರಾಗಲಿಲ್ಲ. ಯಾವ ಪುಣ್ಯದ ಫಲವೊ ಅಕ್ಷರಗಳು ಬಹು ಬೇಗ ಒಲಿದವು. ಸಹಪಾಠಿಗಳೆಲ್ಲರಿಗಿಂತ ಪದ ರಚನೆ, ವಾಕ್ಯ ರಚನಾ ಕಲೆಗಳು ಬೇಗನೆ ಸಿದ್ಧಿಸಿದವು. ಓರಗೆಯವರು ಶಬ್ದ ಶಬ್ದ ಕೂಡಿಸಿ ತಿಣುಕಾಡಿ ಓದಲು ಕಲಿಯುವ ಹೊತ್ತಿಗೆ ನಾವು ಪುಟ್ಟ ಪುಟ್ಟ ಪ್ರಬಂಧ ರಚನೆಗೆ ತೊಡಗಿದ್ದೆವು. ಹಾಗಂತ ಅಹಂಕಾರವೇನೂ ಇರಲಿಲ್ಲ. ಓದಿನಲ್ಲಿ ಹಿಂದಿದ್ದ ಬಹಳಷ್ಟು ಹುಡುಗಿಯರು ಹುಡುಗರು ನಮ್ಮ ಪ್ರೀತಿಯ ಸ್ನೇಹಿತರಾಗಿದ್ದರು. ಗುರೂಜಿಯವರಿಗೆ ನಾವೆಂದರೆ ಹೆಮ್ಮೆ. ತಮ್ಮ ಎಡ ಬಲದಲ್ಲಿಯೇ ನಮ್ಮಿಬ್ಬರನ್ನೂ ಕೂಡ್ರಿಸಿಕೊಳ್ಳುತ್ತಿದ್ದರು. ಅವರು ಹೇಳುತ್ತಿದ್ದ ಪ್ರತಿ ಅಕ್ಷರವನ್ನೂ ಶ್ರದ್ಧೆಯಿಂದ ಆಲಿಸುತ್ತಿದ್ದೆವು. ಓರಗೆಯವರಲ್ಲಿ ಓಣಿಯ ಬಂಧುಗಳಲ್ಲಿ ಹುಡುಗಿಯರಿಬ್ಬರೂ ಜಾಣೆಯರು ಅಂತ ಗುಸು ಗುಸು ಸುದ್ದಿ ಅದು ಹೇಗೋ ಹರಡಿಬಿಟ್ಟಿತು. ಅದರಿಂದಾಗಿಯೇ ನಾವು ಸಿರಿವಂತ ಬಂಧುಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದ್ದ ತೀರಾ ಬಡಕುಟುಂಬದ ಹೆಣ್ಣುಮಕ್ಕಳಿಬ್ಬರಿಗೆ ಓದಿಸುವುದೆಂದರೆ ಉಳ್ಳವರಿಗೆಲ್ಲರಿಗೂ ಅಪರಾಧವಾಗಿ ಕಾಣಿಸತೊಡಗಿತ್ತು.

ಹೋದಲ್ಲಿ ಬಂದಲ್ಲೆಲ್ಲಾ ನಮ್ಮ ತಂದೆ-ತಾಯಿಗೆ ಈ ಕುರಿತು ಬುದ್ಧಿ ಹೇಳುವ ಜನರೇ ಹೆಚ್ಚಾಗಿದ್ದರು. “ಅಯ್ಯಾ ಸಾಲೆಂತ ಸಾಲಿ. ಬಿಡಸಾ ನಮ್ಮವ್ವಾ. ಹೆಣ್ಣಿಗೆ ಸಾಲಿ ಕಲಿಸಿ ನೌಕರಿ ಕೊಡಸ್ತೀ ಏನು? ನಮ್ಮಂಥಾರಾ ಕಲಿಸಿಲ್ಲ ಹೆಣ್ಮಕ್ಕಳಿಗಿ. ಮದ್ವಿ ಮಾಡಿ ಬ್ಯಾರೇ ಮನಿಗಿ ಕಳಿಸೂ ಹೆಣ್ಮಕ್ಕಳಿಗಿ ಸಾಲಿ ಪಾಲಿ ಏನು ಚೆಂದ? ಎಷ್ಟು ಓದ್ಸೀದ್ರೂ ಗಡಗಿ ತೊಳಿಯೂದು ತಪ್ಪಂಗಿಲ್ಲ..” ಅಂತ ಹೇಳುತ್ತಿದ್ದರು. ಎಷ್ಟೋ ಸಲ ನಮ್ಮೆದುರಿಗೇ ಹಾಗೆ ನಮ್ಮ ತಂದೆ ತಾಯಿಗೆ ಅವರು ಆ ಮಾತುಗಳನ್ನು ಹೇಳುತ್ತಿದ್ದರೆ ನಾವು ಭಯಭೀತರಾಗಿ ಅಪ್ಪ ಎಲ್ಲಿ ನಮ್ಮನ್ನು ಶಾಲೆಯಿಂದ ದೂರ ಮಾಡುವರೋ ಎಂದು ಕಣ್ಣೀರೇ ಬಂದುಬಿಡುತ್ತಿತ್ತು. ಜನರ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ನಮ್ಮ ತಾಯಿ ಒಂದು ದಿನ ಹೇಳಿಬಿಟ್ಟರು, “ ನನ್ನ ಮಕ್ಳು ನೌಕರಿ ಮಾಡ್ಲಿ ಅಂತ ಸಾಲೀಗಿ ಕಳ್ಸಾಕ್ಹತ್ತಿಲ್ಲ. ನಾಕಕ್ಷರ ಕಲೀಲಿ ಅಂತಷ್ಟಾ ಕಳಸ್ತೀನಿ. ಮುಂದ ಅವರ ಹಣೇಬರದಾಗ ಇದ್ದದ್ದು ಆಗತ್ತ.. ನೀವು ಯಾಕ ಚಿಂತಿ ಮಾಡ್ತೀರಿ ನಮ್ಮ ಮನಿ ಬಗ್ಗೆ..?” ಅಂತ. ಅವ್ವನ ಆ ನುಡಿಗಳನ್ನು ಕೇಳಿಸಿಕೊಂಡ ನಂತರ ನನಗ ಯಾವುದೋ ಕನಸು ಮನಸಿನೊಳಗೆ ಹೊಕ್ಕು ಚಿಗುರತೊಡಗಿತು. ಹೌದು ನೌಕರಿ ಮಾಡ್ಬೇಕು, ಅಕ್ಕೋರಾಗ್ಬೇಕು ಅಂತ ಕನವರಿಕೆ ಶುರುವಾಯಿತು. ಆಗ ಓದುತ್ತಿದ್ದುದು ಬರೀ ಐದನೇ ತರಗತಿಯಲ್ಲಿ. ನಮಗೆ ಮನೆ ಪಾಠ ಮಾಡುತ್ತಿದ್ದ ಗುರೂಜಿ ಅಮ್ಮನವರ ಕೈಯಲ್ಲಿ ನೂರಾರು ಮಕ್ಕಳಿದ್ದರು. ನಮ್ಮ ತಾಯಿ ಓದುವ ಕಾಲದಲ್ಲೇ ಮಕ್ಕಳ ಸಂಖ್ಯೆ ಜಾಸ್ತಿಯಾದಂತೆಲ್ಲಾ ಮನೆಯಲ್ಲಿ ಜಾಗ ಸಾಲದಾಗಿ ಗುರೂಜಿಯವರು ಶ್ರೀ ಮನ್ನಾರಾಯಣ ದೇವಾಲಯದಲ್ಲಿ ಮಕ್ಕಳಿಗೆ ಪಾಠದ ವ್ಯವಸ್ಥೆ ಮಾಡಿದರಂತೆ. ಆ ದೇವಸ್ಥಾನಕ್ಕೆ ನಮ್ಮ ಇಡೀ ಊರಷ್ಟೇ ಅಲ್ಲ, ಸುತ್ತ ಮುತ್ತಲಿನ ಹಳ್ಳಿಗರೂ ಗುರೂಜಿ ಶಾಲೆ ಎಂದೇ ಕರೆಯುತ್ತಿದ್ದರು.

ನಾವು ಶಾಲೆಗೆ ಹೋಗುವ ಮಕ್ಕಳೆಲ್ಲರ ನಡುವೆ ಹತ್ತರಲ್ಲಿ ಹನ್ನೊಂದನೆಯವರಾಗಲಿಲ್ಲ. ಯಾವ ಪುಣ್ಯದ ಫಲವೊ ಅಕ್ಷರಗಳು ಬಹು ಬೇಗ ಒಲಿದವು. ಸಹಪಾಠಿಗಳೆಲ್ಲರಿಗಿಂತ ಪದ ರಚನೆ, ವಾಕ್ಯ ರಚನಾ ಕಲೆಗಳು ಬೇಗನೆ ಸಿದ್ಧಿಸಿದವು. ಓರಗೆಯವರು ಶಬ್ದ ಶಬ್ದ ಕೂಡಿಸಿ ತಿಣುಕಾಡಿ ಓದಲು ಕಲಿಯುವ ಹೊತ್ತಿಗೆ ನಾವು ಪುಟ್ಟ ಪುಟ್ಟ ಪ್ರಬಂಧ ರಚನೆಗೆ ತೊಡಗಿದ್ದೆವು. ಹಾಗಂತ ಅಹಂಕಾರವೇನೂ ಇರಲಿಲ್ಲ. ಓದಿನಲ್ಲಿ ಹಿಂದಿದ್ದ ಬಹಳಷ್ಟು ಹುಡುಗಿಯರು ಹುಡುಗರು ನಮ್ಮ ಪ್ರೀತಿಯ ಸ್ನೇಹಿತರಾಗಿದ್ದರು. ಗುರೂಜಿಯವರಿಗೆ ನಾವೆಂದರೆ ಹೆಮ್ಮೆ. ತಮ್ಮ ಎಡ ಬಲದಲ್ಲಿಯೇ ನಮ್ಮಿಬ್ಬರನ್ನೂ ಕೂಡ್ರಿಸಿಕೊಳ್ಳುತ್ತಿದ್ದರು. ಅವರು ಹೇಳುತ್ತಿದ್ದ ಪ್ರತಿ ಅಕ್ಷರವನ್ನೂ ಶ್ರದ್ಧೆಯಿಂದ ಆಲಿಸುತ್ತಿದ್ದೆವು. ಓರಗೆಯವರಲ್ಲಿ ಓಣಿಯ ಬಂಧುಗಳಲ್ಲಿ ಹುಡುಗಿಯರಿಬ್ಬರೂ ಜಾಣೆಯರು ಅಂತ ಗುಸು ಗುಸು ಸುದ್ದಿ ಅದು ಹೇಗೋ ಹರಡಿಬಿಟ್ಟಿತು. ಅದರಿಂದಾಗಿಯೇ ನಾವು ಸಿರಿವಂತ ಬಂಧುಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದ್ದ ತೀರಾ ಬಡಕುಟುಂಬದ ಹೆಣ್ಣುಮಕ್ಕಳಿಬ್ಬರಿಗೆ ಓದಿಸುವುದೆಂದರೆ ಉಳ್ಳವರಿಗೆಲ್ಲರಿಗೂ ಅಪರಾಧವಾಗಿ ಕಾಣಿಸತೊಡಗಿತ್ತು…

ಗುರೂಜಿಯವರಿಗೆ ಶ್ರಮ ಕಡಿಮೆಯಾಗಲೆಂದು ನಮಗಿಂತ ಹಿರಿಯ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಸಣ್ಣ ತರಗತಿಯ ಮಕ್ಕಳಿಗೆ ವರ್ಣಮಾಲೆ, ಅಂಕಿ-ಮಗ್ಗಿಗಳನ್ನು ಓದಿಸಿ ಬರೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದರು. ಆದರೆ ಮೈನೆರೆಯುವಿಕೆ, ಮದುವೆ ಅಂತ ಒಬ್ಬೊಬ್ಬರೇ ಹಿರಿಯ ಹುಡುಗಿಯರು ಶಾಲೆ ಬಿಟ್ಟು ಮನೆ ಕೆಲಸ ಕಲಿಯತೊಡಗಿದರು. ಹುಡುಗರು ಹೈಸ್ಕೂಲಿಗೆ ಹೋದ ಕೂಡಲೇ ತಂತಾವೇ ಗುರೂಜಿ ಶಾಲೆಯನ್ನು ಬಿಟ್ಟು ಬಿಡುತ್ತಿದ್ದರು. ಹೀಗೆ ದೊಡ್ಡ ವಿದ್ಯಾರ್ಥಿಗಳ ತೆರವಾದ ಸ್ಥಾನವನ್ನು ನಾನು, ತಂಗಿ ಮತ್ತು ಇನ್ನೊಂದಿಬ್ಬರು ನನ್ನ ಗೆಳತಿಯರು ತುಂಬತೊಡಗಿದೆವು. ಎಷ್ಟೊಂದು ಸವಿನೆನಪುಗಳು ಅವು! ಎಷ್ಟು ಕೈ ಹಿಡಿದು ತಿದ್ದಿಸಿದರೂ ಅಕ್ಷರವನ್ನೇ ತಿದ್ದಲು ಬಾರದ ನನ್ನ ಸಂಬಂಧಿ ಹುಡುಗಿಯೊಬ್ಬಳು ಅಳತೊಡಗಿದಾಗ ನಾನೂ ದುಃಖಿಸಿ ದುಃಖಿಸಿ ಅತ್ತುಬಿಟ್ಟಿದ್ದೆ. ವಿಶ್ವ ಪ್ರಬಂಧ ಚೆಂದ ಬರೆದನೆಂದೂ, ಈರಮ್ಮ ತಪ್ಪದೇ ಉಕ್ತ ಶಬ್ದಗಳನ್ನು ಬರೆದಳೆಂದೂ, ಇತ್ಯಾದಿ ಸ್ನೇಹಿತರ ಪ್ರಗತಿಯನ್ನು ಕಂಡು ಖುಷಿಯಿಂದ ಕುಣಿಯುತ್ತ ಹೋಗಿ ಗುರೂಜಿಯವರಿಗೆ ನಿತ್ಯವೂ ವರದಿ ಒಪ್ಪಿಸುವಾಗ ಗುರೂಜಿಯವರ ಕಣ್ಣುಗಳಲ್ಲಿ ನಮ್ಮ ಬಗೆಗೆ ಹೆಮ್ಮೆ ಕಾಣಿಸುತ್ತಿತ್ತು ಇದೇ ಕಾರಣಕ್ಕೆ ನಮ್ಮ ಸಂಬಂಧಿಕರು ನಮ್ಮ ಬಗ್ಗೆ ಕಿಡಿ ಕಾರಿದರೂ ನಮ್ಮೂರಿನ ಬೇರೆ ಸಮುದಾಯದ ಜನರು ನಮ್ಮನ್ನು ಪ್ರೀತಿಸಿದ ಸವಿನೆನಪು ಜೊತೆಗಿವೆ.

ನಾವು ಹೈಸ್ಕೂಲು ಪ್ರವೇಶಿಸಿದ ನಂತರ ಗುರೂಜಿ ನಮ್ಮನ್ನು ತಮ್ಮ ಶಾಲೆ ಬಿಡಿಸಿ ತಮ್ಮ ಸಹೋದರರಾದ ಶ್ರೀ ಅನಂತಭಟ್ಟ ಗುರುಗಳು ಮತ್ತು ಶ್ರೀಮತಿ ಮೀರಾಬಾಯಿ ಅನಂತ ಭಟ್ಟ ಅಮ್ಮನವರ ಮಡಿಲಿಗೆ ಒಪ್ಪಿಸಿದರು. ಅವರು ನಮಗೆ ನಯಾ ಪೈಸೆ ಶುಲ್ಕವನ್ನೂ ತೆಗೆದುಕೊಳ್ಳದೇ ಪ್ರಾರಂಭಿಕ ಇಂಗ್ಲಿಷ್ ವ್ಯಾಕರಣ, ಭಾಷಾಂತರ ಕಲೆ ಮತ್ತು ಜೀವನ ಮೌಲ್ಯಗಳ ಕುರಿತು ಅತಿ ಶ್ರದ್ಧೆಯಿಂದ ಬೋಧಿಸಿದರು. ನಾವು ಗುರೂಜಿ ಅಮ್ಮನವರಿಗೆ ಕೊಡುತ್ತಿದ್ದಷ್ಟೇ ಗೌರವದಿಂದ ಅನಂತಪ್ಪ ಗುರುಗಳ ಕಡೆ ಕಲಿಕೆ ಮುಂದುವರೆಸಿದೆವು.

ನಾನು ಎಂಟು ಮತ್ತು ತಂಗಿ ಏಳನೇ ತರಗತಿಯಲ್ಲಿದ್ದಾಗ ನಮ್ಮೂರಿನಲ್ಲಿ ವಯಸ್ಕರ ಶಿಕ್ಷಣಕ್ಕಾಗಿ ಸ್ವಯಂ ಸೇವಾ ಕೇಂದ್ರಗಳನ್ನು ತೆರೆಯಲಾಯಿತು. ಆ ಯೋಜನೆಯಲ್ಲಿ  ಸಾಹಿತಿಗಳಾದ ಬಸವರಾಜ ಸುಳಿಬಾವಿ ಮತ್ತು ಇತರ ಹಿರಿಯರು ತೊಡಗಿಸಿಕೊಂಡಿದ್ದರು. ನಾವಿಬ್ಬರೂ ಸ್ವಯಂ ಸೇವಕರಾಗಿ ಆಯ್ಕೆಯಾದೆವು. ನಮ್ಮ ಗೆಳತಿಯರೂ ಸ್ವಯಂ ಸೇವಕರಾಗಿ ಸೇರಿಕೊಂಡರು. ರಾತ್ರಿ ದಿನಾಲೂ ಎಂಟರಿಂದ ಒಂಭತ್ತರವರೆಗೆ ವಯಸ್ಕ ಹೆಣ್ಣುಮಕ್ಕಳಿಗೆ ಪಾಠ ಶುರುವಾಯಿತು. ನಮ್ಮ ಓಣಿಯಲ್ಲಿದ್ದ ಐದು ಕೇಂದ್ರಗಳಲ್ಲಿ ಒಟ್ಟು ಐವತ್ತು ಜನ ಮಹಿಳೆಯರಿದ್ದರು. ಅವರ ಪ್ರೀತಿಯೋ, ನನ್ನ ಅದೃಷ್ಟವೋ ಐವತ್ತು ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ವಿದ್ಯಾರ್ಥಿನಿಯರು ನನ್ನ ಹತ್ತಿರವೇ ಕಲಿಯಲು ಇಚ್ಛಿಸಿ ಬಂದು ನನ್ನ ಕೇಂದ್ರದಲ್ಲೇ ಕುಳಿತುಕೊಳ್ಳುತ್ತಿದ್ದರು. ಅವರಲ್ಲಿ ಎಲ್ಲರೂ ಯಶಸ್ವಿಯಾಗಿ ಕಲಿಯಲಿಲ್ಲವಾದರೂ ನಾಲ್ಕಾರು ಹೆಣ್ಣುಮಕ್ಕಳು ಪತ್ರಿಕೆ ಓದುವ ಮಟ್ಟಿಗೆ ಕಲಿತುದೇ ದೊಡ್ಡ ಖುಷಿ. ಆ ದಿನಗಳಲ್ಲಿಯೇ ಶಿಕ್ಷಕಿಯಾಗಬೇಕೆಂಬ ನನ್ನ ಕನಸು ಮತ್ತಷ್ಟು ಸದೃಢವಾಯಿತು. ದೊಡ್ಡ ಹೆಣ್ಣುಮಕ್ಕಳು ರೀ ಟೀಚರ್ ಅಂತ ನನ್ನ ಕರೆದಾಗಲೆಲ್ಲಾ ಸ್ವರ್ಗಾನಂದವಾಗುತ್ತಿತ್ತು.

ಹೋದಲ್ಲಿ ಬಂದಲ್ಲೆಲ್ಲಾ ನಮ್ಮ ತಂದೆ-ತಾಯಿಗೆ ಈ ಕುರಿತು ಬುದ್ಧಿ ಹೇಳುವ ಜನರೇ ಹೆಚ್ಚಾಗಿದ್ದರು. “ಅಯ್ಯಾ ಸಾಲೆಂತ ಸಾಲಿ. ಬಿಡಸಾ ನಮ್ಮವ್ವಾ. ಹೆಣ್ಣಿಗೆ ಸಾಲಿ ಕಲಿಸಿ ನೌಕರಿ ಕೊಡಸ್ತೀ ಏನು? ನಮ್ಮಂಥಾರಾ ಕಲಿಸಿಲ್ಲ ಹೆಣ್ಮಕ್ಕಳಿಗಿ. ಮದ್ವಿ ಮಾಡಿ ಬ್ಯಾರೇ ಮನಿಗಿ ಕಳಿಸೂ ಹೆಣ್ಮಕ್ಕಳಿಗಿ ಸಾಲಿ ಪಾಲಿ ಏನು ಚೆಂದ? ಎಷ್ಟು ಓದ್ಸೀದ್ರೂ ಗಡಗಿ ತೊಳಿಯೂದು ತಪ್ಪಂಗಿಲ್ಲ..” ಅಂತ ಹೇಳುತ್ತಿದ್ದರು. ಎಷ್ಟೋ ಸಲ ನಮ್ಮೆದುರಿಗೇ ಹಾಗೆ ನಮ್ಮ ತಂದೆ ತಾಯಿಗೆ ಅವರು ಆ ಮಾತುಗಳನ್ನು ಹೇಳುತ್ತಿದ್ದರೆ ನಾವು ಭಯಭೀತರಾಗಿ ಅಪ್ಪ ಎಲ್ಲಿ ನಮ್ಮನ್ನು ಶಾಲೆಯಿಂದ ದೂರ ಮಾಡುವರೋ ಎಂದು ಕಣ್ಣೀರೇ ಬಂದುಬಿಡುತ್ತಿತ್ತು.

ಗುರೂಜಿ ಆಗಾಗ ಹೇಳುತ್ತಿದ್ದರು, “ನೀನು ಟೀಚರ್ ಆಗ್ಲೇಬೇಕು” ಎಂದು. ಎಷ್ಟೋ ಸಲ, “ನೀನು ಲಗೂನೆ ಓದು ಮುಗಿಸಿ ಟೀಚರಾಗು, ನಾ ನೋಡಿ ಸಾಯಬೇಕು” ಅಂತ ಹೇಳುತ್ತಿದ್ದರು. ಆದರೆ ಬದುಕಿನ ಆಕಸ್ಮಿಕ ಕೆಲವು ತಿರುವುಗಳು ನಾನು ಶಿಕ್ಷಕಿಯಾಗದಂತೆ ಅಡೆತಡೆ ಒಡ್ಡುತ್ತಲೇ ಇದ್ದವು. ಅಷ್ಟರಲ್ಲಿ ಗುರೂಜಿ ತೀರಿಕೊಂಡರು. ಆ ಎಲ್ಲಾ ದುಃಖ ಮರೆಯಲು ಬೇಗನೆ ಟೀಚರ್ ಆಗಬೇಕೆಂದು ನಮ್ಮ ಹಳ್ಳಿಯ ಮಕ್ಕಳಿಗೆ ಮನೆ ಪಾಠವನ್ನು ಶುರು ಮಾಡಿದೆನು. ಸಿಕ್ಕಾಪಟ್ಟೆ ಮಕ್ಕಳು ಜಮಾಯಿಸಿದರು. ಥೇಟ್ ಗುರೂಜಿ ಶಾಲೆಯೇ ಅನ್ನಿಸತೊಡಗಿತ್ತು. ಗುರೂಜಿಯವರ ಶಿಷ್ಯಳೆಂಬ ಕಾರಣಕ್ಕೇ ದೂರ ದೂರದ ಓಣಿಯ ಮಕ್ಕಳು ಪಾಠಕ್ಕೆ ಸೇರಿದರು. ಆಗಲೇ ನನಗೆ ಬದುಕು ಎಷ್ಟು ಕಷ್ಟದ್ದು ಅಂತ ತೀವ್ರ ಚಿಂತೆ ಕಾಡತೊಡಗಿದ್ದು. ಎಲ್ಲರೂ ಮಕ್ಕಳಿಗೆ ಓದಿಸಬೇಕೆನ್ನುವವರೇ. ಆದರೆ ಮನೆ ಪಾಠದ ಶುಲ್ಕವನ್ನೂ ತುಂಬಲಾಗದ ಬಡವರು ಒಂದು ಕಡೆ, ದುಡ್ಡಿದ್ದರೂ ಕೈ ಬಿಚ್ಚಿ ಕೊಡದ ಶ್ರೀಮಂತರು ಇನ್ನೊಂದು ಕಡೆ. ನನ್ನ ಸಣ್ಣ ಪುಟ್ಟ ಖರ್ಚುಗಳಿಗೂ ಸಂಪಾದನೆ ಆಗದಿದ್ದರೆ ಹೇಗೆ ಅಂತ ವ್ಯಥೆ ಕಾಡಿತು. ಮನಸ್ಸನ್ನು ಕಲ್ಲು ಮಾಡಿಕೊಂಡು ಮನೆ ಪಾಠ ನಿಲ್ಲಿಸಿ ಊರು ಬಿಟ್ಟೆ. ಸಣ್ಣ ಪುಟ್ಟ ಏನೇನೋ ಕೆಲಸಗಳನ್ನು ಮಾಡುತ್ತ ಶಿಕ್ಷಣರಂಗದ ಮಡಿಲಿಗೆ ಬರುವ ಹೊತ್ತಿಗೆ ಇಷ್ಟು ವರ್ಷಗಳಾದವು.

ಅಕ್ಷರಗಳು ಕೆಲವು ರೀತಿಯ ಆಮಿಷವನ್ನು ಒಡ್ಡಿದ್ದವು. ಪತ್ರಿಕೋದ್ಯಮ ಪ್ರವೇಶಿಸಲು ಸಾಕಷ್ಟು ಅವಕಾಶ ಇತ್ತು. ಶಿಕ್ಷಕ ವೃತ್ತಿಗಿಂತ ಹೆಚ್ಚಿನ ಸಂಪಾದನೆ ಮಾಡಬಹುದಿತ್ತು.

ನಮ್ಮ ಓಣಿಯಲ್ಲಿದ್ದ ಐದು ಕೇಂದ್ರಗಳಲ್ಲಿ ಒಟ್ಟು ಐವತ್ತು ಜನ ಮಹಿಳೆಯರಿದ್ದರು. ಅವರ ಪ್ರೀತಿಯೋ, ನನ್ನ ಅದೃಷ್ಟವೋ ಐವತ್ತು ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯ ವಿದ್ಯಾರ್ಥಿನಿಯರು ನನ್ನ ಹತ್ತಿರವೇ ಕಲಿಯಲು ಇಚ್ಛಿಸಿ ಬಂದು ನನ್ನ ಕೇಂದ್ರದಲ್ಲೇ ಕುಳಿತುಕೊಳ್ಳುತ್ತಿದ್ದರು. ಅವರಲ್ಲಿ ಎಲ್ಲರೂ ಯಶಸ್ವಿಯಾಗಿ ಕಲಿಯಲಿಲ್ಲವಾದರೂ ನಾಲ್ಕಾರು ಹೆಣ್ಣುಮಕ್ಕಳು ಪತ್ರಿಕೆ ಓದುವ ಮಟ್ಟಿಗೆ ಕಲಿತುದೇ ದೊಡ್ಡ ಖುಷಿ. ಆ ದಿನಗಳಲ್ಲಿಯೇ ಶಿಕ್ಷಕಿಯಾಗಬೇಕೆಂಬ ನನ್ನ ಕನಸು ಮತ್ತಷ್ಟು ಸದೃಢವಾಯಿತು. ದೊಡ್ಡ ಹೆಣ್ಣುಮಕ್ಕಳು ರೀ ಟೀಚರ್ ಅಂತ ನನ್ನ ಕರೆದಾಗಲೆಲ್ಲಾ ಸ್ವರ್ಗಾನಂದವಾಗುತ್ತಿತ್ತು.

ಆದರೆ ಅದು ಯಾವುದೇ ಉದ್ಯೋಗವನ್ನು ಮಾಡಿದರೂ ನನಗೆ ಆತ್ಮತೃಪ್ತಿ ದೊರೆಯುತ್ತಿರಲಿಲ್ಲ. ನನಗೆ ಜೀವನೋಪಾಯವನ್ನು ಒದಗಿಸುವ ಜೊತೆಗೆ ಈ ನೆಲದ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣವನ್ನೂ ನೀಡಲು ಅವಕಾಶ ಸಿಗುವುದೆಂದರೆ ಇಲ್ಲಿ ಮಾತ್ರ. ನನಗೆ ಇಲ್ಲಿ ಬಂದ ದಿನವೇ ಗೊತ್ತಾಯಿತು ಇಲ್ಲಿ ಅನೇಕ ಸಮಸ್ಯೆಗಳಿವೆ ಎಂದು.
ಅವೆಲ್ಲಾ ಚಿಂತನೀಯ ಅಂಶಗಳು:
ಕೆಲವು ಮಕ್ಕಳೇಕೆ ಮುಗ್ಧತೆಯನ್ನು ಕಳೆದುಕೊಂಡಿದ್ದಾರೆ?
ಕೆಲವು ಮಕ್ಕಳೇಕೆ ಕಲಿಕೆಯಲ್ಲಿ ಬಹಳ ಹಿಂದಿದ್ದಾರೆ?
ಕೆಲವು ಮಕ್ಕಳೇಕೆ ಜಾಣರಿದ್ದರೂ ಹೇಳಿದ ಅಭ್ಯಾಸವನ್ನು ಮಾಡುವುದಿಲ್ಲ?
ಕೆಲವು ಮಕ್ಕಳೇಕೆ ಸುಳ್ಳು ಹೇಳುತ್ತಾರೆ?
ಕೆಲವು ಮಕ್ಕಳೇಕೆ ಕಳ್ಳತನ ಮಾಡುತ್ತಾರೆ?
ಕೆಲವು ಮಕ್ಕಳೇಕೆ ಪದೇ ಪದೇ ಶಾಲೆ ತಪ್ಪಿಸುತ್ತಾರೆ?
ಕೆಲವು ಮಕ್ಕಳು ಏಕೆ ಸದಾ ತಡವಾಗಿ ಬರುತ್ತಾರೆ?
ಕೆಲವು ಮಕ್ಕಳೇಕೆ ಜಾಣರಿದ್ದರೂ ಅರ್ಥಮಾಡಿಕೊಂಡದ್ದನ್ನು ಬೇಗನೇ ಮರೆಯುತ್ತಾರೆ?….     ಉತ್ತರ ಹುಡುಕಲು ತೊಡಗಿದೆ.