ಜಾನಪದ ಸಾಹಿತ್ಯದಲ್ಲಿ ಲಾಲಿ ಪದಗಳು ಮತ್ತು ಶಿಶು ಪ್ರಾಸಗಳು
“ನಮ್ಮ ಜನಪದ ಕವಿಗಳು ಸಹಜ ಕವಿಗಳು. ಯಾವ ಪಂಡಿತರ ಪಾಂಡಿತ್ಯಕ್ಕೂ ಕಮ್ಮಿ ಇಲ್ಲದ ಸಾಹಿತ್ಯ ಅದು. ಯಾವ ಆಡಂಬರದ ಪದಗಳೂ ಇಲ್ಲದೇ ಸರಳವಾಗಿ ತಮ್ಮ ದಿನ ನಿತ್ಯದ ಆಗು ಹೋಗುಗಳ ನಡುವೆ ಅರಳಿದ ಘಟನೆ, ಭಾವನೆಗಳಿಗೆ ತಮಗೆ ಇಷ್ಟವಾದ ರೂಪ ಕೊಡುತ್ತ, ಇದ್ದದ್ದನ್ನು ಇದ್ದ ಹಾಗೆ ಅನಿಸಿದ್ದನ್ನು ಅನಿಸಿದ ಹಾಗೇ ಹೇಳುತ್ತಾ ಹೋಗಿರೋದಿಂದಲೇ ಅವುಗಳಲ್ಲಿ ಒಂದು ವಿಶಿಷ್ಟತೆ ತುಂಬಿದೆ ಅಂದರೆ ತಪ್ಪಿಲ್ಲ. ಶಬ್ದಗಳ ಹುಡುಕಾಟ, ಜೋಡಣೆಗೆ ತಡಕಾಟ ಇಲ್ಲದೇ…”
‘ಸೂಟಬಲ್ ಹುಡುಗ’ನೊಬ್ಬನ ಸುತ್ತ ಮುತ್ತ
“ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಂಡ ಆರ್. ಕೆ. ನಾರಾಯಣ್ ರವರ ಕಾದಂಬರಿ ಆಧಾರಿತ ಸಿನೆಮಾ ‘ಗೈಡ್’ ಭರ್ಜರಿ ಯಶಸ್ಸೇನೋ ಕಂಡಿತು, ಆದರೆ ಪಾತ್ರಗಳ ಆಶಯ, ಹುನ್ನಾರ ಎಲ್ಲವು ಕಾದಂಬರಿಯ ಚಿತ್ರಣದಿಂದ ದೂರ ಅತಿ ದೂರ. ಆರ್.ಕೆ. ನಾರಾಯಣ್ ಗೆ ಬಲು ಬೇಸರ ತಂದ ಸಿನೆಮಾ. ದೀರ್ಘ ಕಾಲದ ಪೂರ್ವ ತಯ್ಯಾರಿಗೆ ಒತ್ತು ಕೊಡುವ ಮೀರಾ ತಮ್ಮ ಬೇಕು ಬೇಡಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸುವುದರಿಂದಲೋ ಏನೋ ಝುಂಪಾ ಲಹಿರಿ, ಮೋಷಿನ್ ಹಮೀದ್, ಟಿಮ್ ಕ್ರೋದರ್ಸ್…”
ತೂಗುವ ಕನಸೇ ಕಣ್ಣಲಿ ನಿಲ್ಲು ನಾಳೆಗೂ ಮಿಗಲಿ ಸವಿಬಾಳು
“ನೀರು, ಗಾಳಿ, ಬೆಳಕಿನಂತೆಯೇ ಎಷ್ಟೋ ವಿಧದ ಸಂಪತ್ತುಗಳು ನಮ್ಮಲ್ಲಿದ್ದರೂ, ಅವುಗಳ ಮಹತ್ವವನ್ನು ನಾವು ಅರಿತಿರುವುದಿಲ್ಲ. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕಚೇರಿ ತಲುಪುವ, ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ ತೇರಿನ ಕಳಸವನ್ನೇ ನೋಡುತ್ತಾ, ಜೈಕಾರ ಹಾಕುತ್ತ ಮುಂದೆ ಮುಂದೆ ಸಾಗುವ, ಮನೆಗೆ ಬರುವ ನೆಂಟರೊಡನೆ ಬಾಯಿತುಂಬಾ ಮಾತನಾಡುತ್ತಾ ಚಹಾಕುಡಿವ, ಆಪ್ತರನ್ನು…”
2020 ರಲ್ಲಿ ಓದಿದ ಪುಸ್ತಕ ಲೋಕ: ಶ್ವೇತಾ ಹೊಸಬಾಳೆ ಬರೆದ ಲೇಖನ
“ಪುಸ್ತಕಗಳ ಓದು ಎಕನಾಮಿಕ್ಸ್ ನಲ್ಲಿ ಬರುವ ಉಪಭೋಗ ಸಿದ್ಧಾಂತಕ್ಕೆ ವಿರುದ್ಧ! ಒಂದು ಪುಸ್ತಕವನ್ನೋದಿದರೆ ಇನ್ನಷ್ಟು ಓದಬೇಕು, ಅದು ಕಟ್ಟಿಕೊಡುವ ಅದರದೇ ಪ್ರಪಂಚದಲ್ಲಿ ಸ್ವಲ್ಪ ಹೊತ್ತಾದರೂ ಕಳೆದುಹೋಗಬೇಕು ಎನ್ನುವ ಪಾಸಿಟಿವ್ ಹಪಾಹಪಿ ಹೆಚ್ಚಾಗುತ್ತದೆಯೇ ವಿನಃ ಸಾಕು ಎನಿಸುವುದಿಲ್ಲ. ಹಾಗಾಗಿ ಖೋ ಕೊಟ್ಟಂತೆ ಒಂದು ಪುಸ್ತಕ ಮುಗಿಯುತ್ತಿದ್ದಂತೆ ಮತ್ತೊಂದು ಕೈಗೆ ಬಂದು ಓದಿನ ಸರಣಿ ಮುಂದುವರೆಯಿತು..”
ಸಾಯುವ ಕಾಲಕ್ಕೆ ದೇವರ ಸಮಾನ ಆಗುವ ಮನುಷ್ಯ
“ಮನುಷ್ಯನ ಸಹಜವಾದ ಮಾನಸಿಕ ವ್ಯಾಪಾರದಲ್ಲಿ ಸ್ಮೃತಿ ವಿಸ್ಮೃತಿಗಳು, ಭೂತ ವರ್ತಮಾನ ಭವಿಷ್ಯಗಳು ಒಂದಾಗುತ್ತವೆ. ರಿಯಾಲಿಟಿ ಮತ್ತು ಕನಸುಗಳು ಮಿಶ್ರಗೊಳ್ಳುತ್ತವೆ. ಕಾಲಕ್ರಮವನ್ನು ಧಿಕ್ಕರಿಸಿ ನೆನಪುಗಳು ಧಾವಿಸಿ ಬರುತ್ತವೆ. ಯಾವ ನೆನಪೂ ಸ್ಪಷ್ಟವಾಗಿರುವುದಿಲ್ಲ. ಪಶ್ಚಾತ್ತಾಪ, ಪಾಪಪ್ರಜ್ಞೆ, ಎಲ್ಲವನ್ನೂ ತಿದ್ದಿ ಬರೆಯುವ, ಇನ್ನೊಮ್ಮೆ ಇದಕ್ಕಿಂತ ಉತ್ತಮವಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಎನ್ನುವ ಹಂಬಲ. ನನಗೋ ಕೆಲವೊಂದು ದುಸ್ವಪ್ನಗಳು ಮರುಕಳಿಸುತ್ತ ಇರುತ್ತವೆ. ಎಲ್ಲಿಗೋ ಹೊರಟಿದ್ದೇನೆ…”
ಹುಣ್ಣಮೀಗೊಂಥರಾ ಹೋಳಗಿ, ಅಮ್ವಾಸಿಗೊಂಥರಾ ಹೋಳಗಿ…
“ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್ ಆ ಥರದ್ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್ ಹಳೇಮನ್ಯಾಗಿದ್ದ ನನ್ ಕ್ಲಾಸ್ ಮೇಟು ಡುಮ್ಮನ ದಿನೇಶಾ, “ಏ, ನಿಮ್ ಮಮ್ಮೀನ ನಮ್ ಮಮ್ಮೀನ ಎಕ್ಸ್ಚೇಂಜ್ ಮಾಡ್ಕೊಳ್ಳೂಣಣ… ಪ್ಲೀಸ್..”
ನಾನು ನಾನೇ ಆಗಿದ್ದ ಆ ಒಂದು ದಿನ: ಶ್ವೇತಾ ಹೊಸಬಾಳೆ ಲಹರಿ
“ಗಂಡಸರು ಹೀಗೆ ಹೋಗುವುದು ಯಾರಿಗೂ ಅಸಹಜ ಎನ್ನಿಸುವುದೂ ಇಲ್ಲ; ಜವಾಬ್ದಾರಿಗಳಿಂದ ಕಳಚಿಕೊಂಡಂತೆ ಎಂದೂ ಅನ್ನಿಸುವುದಿಲ್ಲ. ದುಡಿಯುವ ಗಂಡಸಿಗೆ ವಿರಾಮ-ವಿಶ್ರಾಂತಿ ಬೇಕು ಎನ್ನುವ ಅನುಕಂಪ. ಅದೇ ಮಗುವನ್ನೂ ನೋಡಿಕೊಂಡು ಮನೆಕೆಲಸಗಳನ್ನು ನಿಭಾಯಿಸುವ, ಅಮ್ಮನಾದ ನಂತರ ವೈಯಕ್ತಿಕ ಜೀವನವೇ ಮರೀಚಿಕೆಯಾಗಿ, ಹವ್ಯಾಸ, ಸಿನೆಮಾ, ನಾಟಕ..”
ಬೆಳಕಿನಿಂದ ಕತ್ತಲಿಗೆ ಮತ್ತೂ ಶಬ್ದದಿಂದ ನಿಶ್ಯಬ್ದಕೆ: ರೂಪಶ್ರೀ ಕಲ್ಲಿಗನೂರ್ ಲೇಖನ
“ನಗರವಾಸಿಗಳಿಗೆ ಸಹಜವಾಗಿರಬೇಕಿದ್ದ ಕತ್ತಲೆಂದರೂ ಭಯ, ನಿಶ್ಯಬ್ದತೆಯೂ ಭಯ.. ಕೆಲಸದ ಬೆನ್ನೇರಿ ನಗರಗಳಲ್ಲಿ ಬಂದು ಕುಳಿತ ನಾವು ಪ್ರಕೃತಿಯಿಂದ ದೂರವುಳಿದು ನಮ್ಮದೇ ಕೃತಕ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ. ನಾವು ಮಲಗುವ ಹೊತ್ತಿಗೆ ಪೂರ್ಣ ಕತ್ತಲೂ ಇಲ್ಲ, ನಿಶ್ಯಬ್ದತೆಯೂ ಇಲ್ಲ… ಅರೆಬರೆ ಕತ್ತಲಿಗೆ ಹೊಂದಿಕೊಂಡು ಮಲಗುತ್ತಿದ್ದೇವೆ. ಯಾವೊಂದೂ ಸದ್ದಿಲ್ಲದೇ….”
ಎನ್.ಬಿ. ಚಂದ್ರಮೋಹನ್ ಅನುವಾದಿಸಿದ ಚಾರ್ಲಿ ಚಾಪ್ಲಿನ್ ನ ‘ದಿ ಗ್ರೇಟ್ ಡಿಕ್ಟೇಟರ್’ ನ ಮುಕ್ತಾಯದ ಭಾಷಣ
“ನಮಗೆ ಸಿರಿತನವನ್ನು ತಂದುಕೊಟ್ಟ ಯಂತ್ರಗಳು ನಮ್ಮನ್ನು ದೀನರನ್ನಾಗಿಸಿ ಬೇಡುವ ಸ್ಥಿತಿಗಿಳಿಸಿವೆ. ನಮ್ಮ ಜ್ಞಾನ ನಮ್ಮನ್ನು ಸಿಡುಕರನ್ನಾಗಿಸಿದೆ. ನಮ್ಮ ಜಾಣತನ, ನಮ್ಮನ್ನು ಕಟುಕರನ್ನಾಗಿ, ನಿರ್ದಯಿಗಳನ್ನಾಗಿ ಮಾಡಿದೆ. ನಾವು ಅತಿಯಾಗಿ ಆಲೋಚಿಸುತ್ತೇವೆ; ತುಂಬಾ ಕಡಿಮೆ ಸಂವೇದಿಸುತ್ತೇವೆ. ನಮಗೀಗ ಯಂತ್ರಜ್ಞಾನಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬೇಕಾಗಿದೆ. ಜಾಣತನಕ್ಕಿಂತ ಹೆಚ್ಚಿಗೆ ಕರುಣೆ ಮತ್ತು ಮಾರ್ದವತೆಗಳ ಅಗತ್ಯವಿದೆ.”