ಬಿಡಿ ನನ್ನ..!: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಮೂರನೆಯ ಅಧ್ಯಾಯ
“ಬಾಗಿಲು ಮುಚ್ಚಿಕೊಂಡದ್ದೇ ತಡ, ಆ ರೋಗಿ ತಟಕ್ಕನೆ ಹೊದಿಕೆಯನ್ನು ದೂರ ತಳ್ಳಿ, ಹಾಸಿಗೆಯಿಂದ ಚಿಮ್ಮಿ, ಅರೆ ಹುಚ್ಚನ ಹಾಗೆ ಕೋಣೆಯ ಮಧ್ಯದಲ್ಲಿ ನಿಂತ. ಅವರೆಲ್ಲ ಹೋಗಲೆಂದು ಇಲ್ಲಿಯವರೆಗೂ ತಳಮಳಿಸುತ್ತ ಕಾಯುತ್ತಿದ್ದ. ಅವರಿಲ್ಲದಿದ್ದರೆ ಮಾಡಬೇಕಾದ ಕೆಲಸ ಸಟ್ಟನೆ ಮಾಡಬಹುದು ಅನ್ನಿಸುತ್ತಿತ್ತು. ಏನು ಕೆಲಸ? ಅದೇ ಮರೆತುಹೋಗಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”
ಎಲ್ಲಿ ನೋಡಿದರೂ…!: ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ಎರಡನೇ ಭಾಗದ ಎರಡನೆಯ ಅಧ್ಯಾಯ
“ಕೊನ್ನೊಗ್ವಾಡೆಯೆಸ್ಕಿ ಬುಲೆವಾಕ್ಕೆ, ಎರಡು ದಿನದ ಹಿಂದೆ ಹುಡುಗಿ ಸಿಕ್ಕಿದ್ದಳಲ್ಲ, ಅದೇ ಬೀದಿಗೆ ತಿರುಗುವಾಗ, ಅವನ ನಗು ಹೊರಟು ಹೋಯಿತು. ಬೇರೆಯ ಯೋಚನೆಗಳು ತಲೆ ಎತ್ತುವುದಕ್ಕೆ ಶುರುಮಾಡಿದವು. ಆ ದಿನ ಆ ಹುಡುಗಿ ಹೋದ ಮೇಲೆ ಬಹಳ ಹೊತ್ತು ಕೂತು ಯೋಚನೆ ಮಾಡಿದ್ದೆನಲ್ಲಾ ಆ ಬೆಂಚಿನ ಹತ್ತಿರ ಹೋಗುವುದು ಬೇಡ ಅನ್ನಿಸಿತು. ಅವನು ಇಪ್ಪತ್ತು ಕೊಪೆಕ್ ಕೊಟ್ಟಿದ್ದ ಮೀಸೆ ಪೋಲೀಸಿನವನು ಮತ್ತೆ ಕಣ್ಣಿಗೆ ಬಿದ್ದರೆ ಕಷ್ಟವಾಗತ್ತೆ ಅನ್ನಿಸಿತು.”
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನೆಮಾ ಟಾಕೀಸ್ʼ ಆರಂಭ!
“ಈಗ ಪ್ರಪಂಚದಲ್ಲಿ ಕಾಣೆಯಾಗುತ್ತಿರುವ ನೈತಿಕತೆ ಎನ್ನುವುದನ್ನು ಪ್ರಮುಖ ಪರಿಶೋಧನೆಗೆ ತೊಡಗುತ್ತಾನೆ ಫರ್ಹಾದಿ. ಪರಮಶಾಂತಿ ಪರಿಹಾರ ತೆಗೆದುಕೊಳ್ಳುವುದು ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ನೆರವೇರಿಸಲು ಅಲ್ಲಿನ ಕೌಟುಂಬಿಕ ವ್ಯವಸ್ಥೆಯೊಂದನ್ನು ರೂಪಿಸಿದ್ದಾನೆ. ಹಾಗೂ ಅದರಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಅಪರೂಪವೆನ್ನಿಸಿದ ಸಮಸ್ಯೆ ಇರುವಂತ, ಕಥಾವಸ್ತುವನ್ನು ಕಲ್ಪಿಸಿದ್ದಾನೆ.”
ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೇ ಭಾಗದ ಮೊದಲ ಅಧ್ಯಾಯ
“ನಾಲ್ಕನೆಯ ಮಹಡಿಗೆ ಹತ್ತುತ್ತಿರುವಾಗ, ‘ಹೋಗುತಿದ್ದ ಹಾಗೆ ಮೊಳಕಾಲೂರಿ ಕೂತು ಅವರಿಗೆ ಎಲ್ಲಾ ಹೇಳಿಬಿಡತೇನೆ,’ ಅಂದುಕೊಂಡ. ಮೆಟ್ಟಿಲು ಇಕ್ಕಟ್ಟಾಗಿದ್ದವು, ಕಡಿದಾಗಿದ್ದವು, ನೀರು ಚೆಲ್ಲಿ ವದ್ದೆಯಾಗಿದ್ದವು. ಎಲ್ಲ ಅಪಾರ್ಟ್ಮೆಂಟುಗಳ ಅಡುಗೆಮನೆಗಳೂ ಮೆಟ್ಟಿಲಿಗೆ ಮುಖ ಮಾಡಿಕೊಂಡು ಸುಮಾರಾಗಿ ಇಡೀ ದಿನ ಬಾಗಿಲು ತೆರೆದೇ ಇರುತಿದ್ದವು. ಹಾಗಾಗಿ ಯಾವಾಗಲೂ ಬಿಸಿ ಹಬೆಗೆ, ವಾಸನೆಗೆ ಉಸಿರು ಕಟ್ಟುತಿತ್ತು.”
ಒಂದಲ್ಲ… ಎರಡು…! : ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಏಳನೆಯ ಅಧ್ಯಾಯ
“ಹೆಜ್ಜೆ ಶಬ್ದ ದೂರದಿಂದ, ನೆಲ ಅಂತಸ್ತಿನ ಮೆಟ್ಟಿಲಿಂದ ಬರುತಿತ್ತು. ಅದು ಕಿವಿಗೆ ಬಿದ್ದ ತಕ್ಷಣವೇ ಯಾರೋ ಇಲ್ಲಿಗೇ, ನಾಲ್ಕನೆಯ ಮಹಡಿಗೇ, ಮುದುಕಿಯ ಮನೆಗೇ ಬರುತಿದ್ದಾರೆ ಅನ್ನುವ ಅನುಮಾನ ಹುಟ್ಟಿತು ಅನ್ನುವುದು ಆಮೇಲೂ ಕೂಡ ಅವನಿಗೆ ಸ್ಪಷ್ಟವಾಗಿ ನೆನಪಿತ್ತು. ಹೆಜ್ಜೆ ಸದ್ದು ಯಾಕೆ ಅಪಶಕುನದ ಹಾಗಿತ್ತೋ? ಭಾರವಾದ, ಆತುರವಿಲ್ಲದ ಹೆಜ್ಜೆಗಳು. ಮೊದಲ ಮಹಡಿ ದಾಟಿದ್ದವು. ಮೇಲೇರುತಿದ್ದವು. ಬರುತಿದ್ದವನ ಹೆಜ್ಜೆ ಶಬ್ದ ಜೋರಾಗುತಿತ್ತು.”
ಇಂಚಿಂಚು ಸಂಚು ರೂಪಿಸುತ್ತಾ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಆರನೆಯ ಅಧ್ಯಾಯ
“ರಾಸ್ಕೋಲ್ನಿಕೋವ್ ನ ಮನಸ್ಸು ಕದಡಿತ್ತು. ಅದು ಎಲ್ಲ ಯುವಕರೂ ಸಾಮಾನ್ಯವಾಗಿ ಆಡುವಂಥ ಮಾತು, ಮಾಡುವಂಥ ಯೋಚನೆ. ಅವನೇ ಅಂಥ ಮಾತನ್ನ ಎಷ್ಟೋ ಸಾರಿ, ಎಷ್ಟೋ ಸಂದರ್ಭದಲ್ಲಿ, ಎಷ್ಟೋ ವಿಷಯಗಳ ಬಗ್ಗೆ ಕೇಳಿಸಿಕೊಂಡಿದ್ದ. ಆದರೆ, ಸರಿಯಾಗಿ ಇಂಥವೇ ಮಾತು, ಸರಿಯಾಗಿ ಇಂಥದೇ ಹೊತ್ತಲ್ಲಿ, ಅವನ ತಲೆಯಲ್ಲೂ ಸುಮಾರಾಗಿ ಅಂಥದೇ ವಿಚಾರ ಇರುವಾಗ ಯಾಕೆ ಕಿವಿಗೆ ಬೀಳಬೇಕಾಗಿತ್ತು?”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”
ಸತ್ತ ಕುದುರೆಯ ಎದೆಗೆ ಮತ್ತೆಮತ್ತೆ ಬಡಿಯುತ: ʼಅಪರಾಧ ಮತ್ತು ಶಿಕ್ಷೆʼ ಐದನೆಯ ಅಧ್ಯಾಯ
“ರಾಸ್ಕೋಲ್ನಿಕೋವ್ ಭಯಂಕರವಾದ ಕನಸು ಕಂಡ. ಪುಟ್ಟ ಊರಿನಲ್ಲಿ ಮಗುವಾಗಿದ್ದಾಗಿನ ಕನಸು. ಈಗ ಅವನಿಗೆ ಏಳು ವರ್ಷ. ಯಾವುದೋ ಹಬ್ಬದ ದಿನ ಅಪ್ಪನ ಜೊತೆಯಲ್ಲಿ ಸಾಯಂಕಾಲದ ಹೊತ್ತು ಉರಾಚೆ ನಡೆದುಕೊಂಡು ಹೋಗುತ್ತಿದ್ದಾನೆ. ಧಗೆಯ ದಿನದ ಮಂಕು ಸಂಜೆ. ಹಳ್ಳಿ ಅವನ ನೆನಪಿನಲ್ಲಿ ಹೇಗೆ ಉಳಿದಿತ್ತೋ ಕನಸಿನಲ್ಲೂ ತದ್ವತ್ ಹಾಗೇ ಕಾಣುತ್ತಿತ್ತು. ನೆನಪಿನಲ್ಲಿ ಮಸುಕಾಗಿದ್ದ ಊರು ಕನಸಿನಲ್ಲಿ ಸ್ಪಷ್ಟವಾಗಿತ್ತು.”
ಫ್ಯದೊರ್ ದಾಸ್ತಯೇವ್ಸ್ಕಿಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ನಾಲ್ಕನೆಯ ಅಧ್ಯಾಯ
“ಹೀಗೆ ಪ್ರಶ್ನೆ ಹಾಕಿಕೊಂಡು ಹಿಂಸೆಮಾಡಿಕೊಳ್ಳುತ್ತಾ ಇದ್ದ. ಆಗುವ ಹಿಂಸೆಯಲ್ಲಿ ಒಂದು ಥರ ಸಂತೋಷವನ್ನೂ ಪಡುತ್ತಿದ್ದ. ಈ ಯಾವ ಪ್ರಶ್ನೆಗಳೂ ಹೊಸವಲ್ಲ. ಆ ತಕ್ಷಣಕ್ಕೆ ಹುಟ್ಟಿದವೂ ಅಲ್ಲ. ಈ ಪ್ರಶ್ನೆಗಳೆಲ್ಲ ಹಳೆಯ ನೋವಿನ ಹಾಗೆ ಹಿಂಸೆ ಕೊಟ್ಟು ಕೊಟ್ಟು ಮನಸ್ಸನ್ನು ನವೆಸಿಬಿಟ್ಟಿದ್ದವು. ಈ ನೋವು ಬಹಳ ಬಹಳ ಹಿಂದೆಯೇ ಹುಟ್ಟಿತ್ತು, ಬೆಳೆದಿತ್ತು, ಇತ್ತಿಚೆಗಷ್ಟೇ ಮಾಗಿತ್ತು, ದಟ್ಟೈಸಿತ್ತು..”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ
ಸಿಂಹದ ಮೂಗ ತುದಿಯ ಸವರಿದ ತೆಂಗಿನ ತೋಪಿನವನ ಕಥೆ
“ಕಣ್ಣಿಂದ ಕೆಲವೇ ಕಾಲದಲ್ಲಿ ಮರೆಯಾಗಲಿರುವ ಬಹಳಷ್ಟು ಸಂಗತಿಗಳು ಅಪರಿಮಿತ ಸೌಂದರ್ಯದಿಂದ ಕೂಡಿರುತ್ತವೆ ಎನ್ನುವುದು ಬಲ್ಲವರು ಹೇಳುವ ಮಾತು. ಕಳೆದ ಹದಿನೈದು ಮಾಸಗಳಿಂದ ವಾಸಿಸುತ್ತಿರುವ ಈ ಲಕ್ಷದ್ವೀಪ ಸಮೂಹದ ಕಡಲು ಮತ್ತು ಆಕಾಶದ ಅನೂಹ್ಯ ನೀಲ ನಿಚ್ಛಳ ಬಣ್ಣವನ್ನು ನೋಡುತ್ತಾ ಇದ್ದರೆ ನನಗೂ ಹಾಗೇ ಅನಿಸುತ್ತದೆ. ಹಾಗಾಗಿ ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ…”