ಎಲ್ಲ ನಾಡುಗಳ ದುಡಿಮೆಗಾರರೂ ಒಂದಾಗಲಿ ಎಂದವನು
ಜೀವಂತಿಕೆಯಿಂದ ತುಂಬಿ ತುಳುಕುತ್ತಿದ್ದ ಸೊಹೊ ಪ್ರದೇಶ, ಅಪಾಯಕಾರಿ ಅನಾರೋಗ್ಯಕರ ಸ್ಥಳವೂ ಆಗಿತ್ತು. ಸರಾಸರಿ ಹದಿನಾಲ್ಕು ಜನರು ಒಂದೇ ಮನೆಯಲ್ಲಿ ವಾಸಿಸುವಂತಹ ಜನಸಂದಣಿ, ಬಡತನದ ಬೀಡಾಗಿತ್ತು. ಕಾಯಿಲೆಗಳ ಗೂಡಾಗಿತ್ತು. ೧೮೫೪ರಲ್ಲಿ ಈ ಪ್ರದೇಶ ಕಾಲರಾ ಬಾಧೆಯಿಂದ ಬಳಲಿತು. ಸರಿಯಾದ ಕೆಲಸವಿಲ್ಲದ, ಹಣದ ನಿರ್ವಣೆಯಲ್ಲಿ ಚತುರನಲ್ಲದ ಮಾರ್ಕ್ಸ್ ನಿರಂತರವಾಗಿ ಗೆಳೆಯರ ಕೊಡುಗೆಯಲ್ಲಿ ಜೀವನ ಸಾಗಿಸುತ್ತಿದ್ದ. ಆಪ್ತನಾದ ಎಂಗೆಲ್ಸ್, ಬೇಕರಿ, ಹಾಲು, ತರಕಾರಿ, ಚಹಾ ಅಂಗಡಿಯವರ ಬಳಿ ಮಾರ್ಕ್ಸ್ ಮಾಡಿದ ಸಾಲವನ್ನು ತೀರಿಸುತ್ತಿದ್ದ.
ಯೋಗೀಂದ್ರ ಮರವಂತೆ ಬರೆಯುವ ಸರಣಿ
ಪೋಲಿಸ್ ಕಿ ಬೇಟಿ…
ನಾನು ಎಲ್ಲರ ಮುಖವನ್ನು ಒಂದೊಂದಾಗಿ ನೋಡುತ್ತ ಹೋದೆ. ಎಲ್ಲ ಹೆಂಗಸರೂ ಚೆನ್ನಾಗಿ ತಲೆ ಬಾಚಿ ಕೊಂಡಿದ್ದಾರೆ. ಮುಖಕ್ಕೆ ಪೌಡರು, ಕಣ್ಣಿಗೆ ಸುಖ ಕೊಡುವ ಸೀರೆಗಳು, ಒಂದಿಷ್ಟು ಅಮ್ಮಿ ಕಾಣುವಂಥ ಬ್ಲೌಜುಗಳು, ಕೈತುಂಬ ರಂಗುರಂಗಿನ ಬಳೆಗಳು, ಬಾಯಿತುಂಬ ಎಲೆ ಅಡಿಕೆ. ಜನ ‘ಗಳಸವರುʼ ಎಂದು ಕರೆಯುವುದು ಇವರಿಗೇನೆ ಇರಬಹುದು ಎಂಬ ಗುಮಾನಿ ಶುರುವಾಯಿತು. ಅದೇನೇ ಇದ್ದರೂ ಅವರು ಅಷ್ಟೊಂದು ಸುಖವಾಗಿ ಇದ್ದದ್ದು ನನಗೆ ಹೊಸ ಅನುಭವವನ್ನು ಕೊಡುತ್ತಲಿತ್ತು.
ಹಾಡುಗಳು ಶುರುವಾದವು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿ
ಬೆದೆಗೆ ಬಂದವಳ ಮೆದುವಾಗಿ ತಳ್ಳಿಬಿಟ್ಟಿದ್ದೆ
ಅವಳು ಬಿಗಿಯಾಗಿ ನನ್ನ ಕೈ ಹಿಡಿದೇ ಇದ್ದಳು. ವಿದಾಯದ ಗಳಿಗೆಯಲ್ಲಿ ಅಮರ ಪ್ರೇಮದ ಮೋಹವೇ…’ನಾಳೆ ಸಿಗುವೆ’ ಎಂದಿದ್ದೆ. ‘ನಿಜವಾಗ್ಲೂ… ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ಇನ್ನೊಂದ್ಸಲ ಹೇಳಿ’ ಎಂದು ಪ್ರತಿ ಉತ್ತರಕ್ಕೆ ಕಾದಳು. ಕೈ ಹಿಡಿದು ತಲೆ ಮೇಲೆ ಇಟ್ಟುಕೊಂಡಳು. ‘ನಾಳೆ ಅನ್ನೋದು ಕೂಡ ಒಂದು ಸುಳ್ಳು, ಅಂದಾಜು; ಕೇವಲ ನಿರೀಕ್ಷೆ…ಊಹೆ’ ಎಂದೆ. ‘ಅಷ್ಟೆಲ್ಲ ಬೇಡ. ಸಿಕ್ತೀನಿ; ಸಿಗಲ್ಲಾ ಅನ್ನೊದ್ರಲ್ಲಿ ಯಾವ್ದಾದ್ರು ಒಂದನ್ನ ಹೇಳಿ ಏನೂ ಬೇಜಾರು ಮಾಡ್ಕೋದಿಲ್ಲ’ ಎಂದಳು. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ
ಕತೆಗಳನ್ನು ಕೇಳುತ್ತ ಅರಳುವ ಅವರ ಕಂಗಳು
ಹಿಂದಿನ ದಿನ ಹೇಳಿದ ಕಥೆಯ ಸಣ್ಣ ಸಣ್ಣ ಸಂಗತಿಗಳನ್ನೂ ನೆನಪಿಟ್ಟುಕೊಂಡು ಒಬ್ಬರು ಇನ್ನೊಬ್ಬರಿಗೆ ಹೀಗೆ ಮಾಡು ಎಂದು ನಿರ್ದೇಶನ ಮಾಡುತ್ತಾ ಪಾತ್ರಗಳಾಗಿ ಅಭಿನಯಿಸುವ ಆಟ ಬಹಳ ಸೊಗಸಾಗಿ ನಡೆದಿತ್ತು. ಅವರಲ್ಲಿ ಮೂವರು ಐದು ವರ್ಷ ಆಸುಪಾಸಿನ ಮಕ್ಕಳು. ಅವರಿಗಿನ್ನೂ ಶಾಲೆಯಲ್ಲಿ ಕಲಿಸುವ ಅಕ್ಷರಾಭ್ಯಾಸವೇ ಆಗಿಲ್ಲ. ಆದರೂ ಕಥೆಯನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುವ, ಮತ್ತೆ ಅಲ್ಲಿ ಸಂದರ್ಭಕ್ಕೆ ಬೇಕಾದ ಸಂಭಾಷಣೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಕೌಶಲ ಅವರಿಗಿತ್ತು.
ಅರವಿಂದ ಕುಡ್ಲ ಇಂದಿನ ಬರಹ
ಬಿಟ್ಟೇನೆಂದರೂ ಬಿಡದ ಹಣೆಪಟ್ಟಿಗಳ ಕಳಚುವುದು ಹೇಗೆ…
ಈ ಹೆಸರಿನಿಂದುಂಟಾಗುವ ಸಾಮಾಜಿಕ ಅಪಮಾನದಿಂದ ದೂರಾಗಲು ಈ ಸಮುದಾಯ ತನ್ನ ಹೆಸರನ್ನು ಹೊಸ ವೃತ್ತಿಗನುಗುಣವಾಗಿ ಗಿರಣಿ ವಡ್ಡರ್ ಮುಂತಾಗಿ ಕರೆದುಕೊಂಡಿದ್ದಾರೆ. ಹೀಗಾಗಿ ಡಿನೋಟಿಫೈಡ್ ಸಮುದಾಯ ಅಪರಾಧಿ ಬುಡಕಟ್ಟು ಎನ್ನುವ ಹಣೆಪಟ್ಟಿ ಕಳಚಿದರೂ ಅಪರಾಧದ ಸಂಕೇತವಾದ `ಗಂಟಿಚೋರ್ಸ್’ ಎನ್ನುವ ಹೆಸರಿನಿಂದಲೇ ಈ ಸಮುದಾಯದ ಜನರು ತಮ್ಮ ಇರವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಡಾ. ಅರುಣ್ ಜೋಳದಕೂಡ್ಲಿಗಿ ಸರಣಿ
ಯುದ್ಧ ನಂತರದ ಕತ್ತಲಲ್ಲಿ ಅರಿವಿನ ಬೆಳಕು
ಜೈನಾ ದುಬಾಯಿಂದ ಬೈರುತ್ ಗೆ ಬಂದು ಅಲ್ಲಿಂದ ಆಕ್ರಮಣಕ್ಕೆ ಒಳಗಾದ ಬಿಂಟ್ ಬಿಲ್ ಊರನ್ನು ತಲುಪಿರುತ್ತಾಳೆ. ಟೋನಿಯೊಂದಿಗೆ ಪ್ರಯಾಣ ಸಾಗುತ್ತಿದ್ದಂತೆ ಇಬ್ಬರಿಗೂ ತಮ್ಮಷ್ಟಕ್ಕೆ ಇರುವುದು ಅಸಹಜವೆನ್ನಿಸಿ, ನಿಧಾನವಾಗಿ ಕೇವಲ ವ್ಯಕ್ತಿಗಳಂತೆ ಇದ್ದವರು ಪರಸ್ಪರ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಭಾವಗಳಲ್ಲಿ, ಮುಖಚಹರೆಗಳಲ್ಲಿ ವ್ಯಕ್ತವಾಗುವುದನ್ನು ಸಮೀಪ ಚಿತ್ರಿಕೆಗಳಲ್ಲಿ ನಿರೂಪಿತಗೊಂಡಿವೆ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಲೆಬನಾನ್ನ ʻಅಂಡರ್ ದ ಬಾಂಬ್ಸ್ʼ ಸಿನಿಮಾದ ವಿಶ್ಲೇಷಣೆ
ದೇಸಾಯ್ತಿಯ ಸೀರೆ
ಆಡಳಿತ ನಿರ್ವಹಣೆಯಲ್ಲಿ ತೊಡಗಿದ್ದ ಪುರುಷರು ಮನಸ್ಸು ಇಲ್ಲದ ಮಾರ್ಗದಂತೆ ದೇಸಾಯ್ತಿಯ ಕಾರ್ಯ ನಿರ್ವಹಿಸತೊಡಗಿದರು. 25 ಗ್ರಾಮಗಳ ಕಂದಾಯ ವಸೂಲಿ ಮಾಡುವಲ್ಲಿ ಸಮಸ್ಯೆಯಾಯಿತು. ಈ ಗ್ರಾಮಗಳಲ್ಲಿನ ದೇಶಗತಿಯ ವತನಿ ಭೂಮಿಯೆ 16 ಸಾವಿರ ಎಕರೆಗಳಷ್ಟಿತ್ತು! ಉತ್ತರಾಧಿಕಾರದ ಬಯಕೆಯಿಂದಾಗಿ ದಾಯಾದಿಗಳು ಕೂಡ ಅತೃಪ್ತರಾಗಿದ್ದರು. ಆದರೆ ಕಾಶೀಬಾಯಿ ಎದೆಗುಂದದೆ ಎಲ್ಲ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತದಲ್ಲಿ ಯಶಸ್ಸು ಸಾಧಿಸಿದರು. ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಮೂವತ್ತನೆಯ ಕಂತು
ಯಾವ ಅಖಾಡಗಳಲ್ಲೂ ನಾನು ಗೆಲ್ಲಲಿಲ್ಲ
ಸುಮ್ಮನಿರಲಾರದ ನಾನು ಒಂದು ಚೇಷ್ಟೆ ಮಾಡಿದ್ದೆ. ಹುಡುಗಾಟಿಕೆಯೊ ಬರಹದ ಉತ್ಸಾಹವೊ; ಒಟ್ಟಿನಲ್ಲಿ ಹಾಸ್ಟೆಲಲ್ಲಿ ದೆವ್ವಗಳ ಕಾಟ ಎಂದು ವೆಂಕಟೇಶನ ಭೀತಿಯ ಬಗ್ಗೆ ಲೇಖನ ಬರೆದು ಬಿಟ್ಟಿದ್ದೆ. ಅದನ್ನು ಸಾಮಾನ್ಯರು ಓದಿದ್ದರೆ ಖಂಡಿತ ಹೆದರಿ ನಂಬಿಬಿಡುತ್ತಿದ್ದರು. ಆ ಪರಿಯಲ್ಲಿ ಹಾರಾರ್ ಆಗಿ ಬರೆದಿದ್ದೆ. ಕಲ್ಪನೆಯೇ ಹೆಚ್ಚಾಗಿತ್ತು. ಸುಮ್ಮನೆ ವೆಂಕಟೇಶನ ಜೊತೆ ‘ದೆವ್ವಗಳ ಕಾಟವಂತಲ್ಲಾ’ ಎಂದು ವಿಚಾರಿಸಿದ್ದೆ ಅಷ್ಟೇ. ಆತ ಒಂದಿಷ್ಟು ವಿವರ ಹೇಳಿದ್ದು ನಿಜ. ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ.
ಇರಾನ್ ದೇಶಕ್ಕೆ ತೆರಳಿದ್ದ ಕ್ರೀಡಾಪಟು ಅರ್ಜುನ ಬಸಪ್ಪ ಗಾಯಕವಾಡ
ಗಂಟಿಚೋರ್ ಸಮುದಾಯದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಕ್ರೀಡಾಪಟು ಅಂದರೆ, ಅರ್ಜುನ ಬಸಪ್ಪ ಗಾಯಕವಾಡ. ಕ್ಷೇತ್ರಕಾರ್ಯದಲ್ಲಿ ರಾಯಭಾಗ ಸಮೀಪದ ಶಾಹು ಪಾರ್ಕ್ ನೋಡಲು ಹೋದಾಗ ನಮ್ಮ ಜತೆಗೆ ಎ.ಬಿ. ಗಾಯಕವಾಡ ಅವರ ಮಗ ವಿಜಯ್ ನಮ್ಮ ಜೊತೆಗೆ ಬಂದಿದ್ದರು. ತನ್ನ ತಂದೆಯ ಕ್ರೀಡಾ ಸಾಹಸವನ್ನು ವಿವರಿಸಿದರು. ಗಾಯಕವಾಡರ ರಾಯಭಾಗದ ಮನೆಗೆ ಹೋಗಿದ್ದೆವು. ಅಲ್ಲಿ ಗಾಯಕವಾಡರು ಕ್ರೀಡೆಯಲ್ಲಿ ಭಾಗವಹಿಸಿದ ಫೋಟೋ ಚಿತ್ರಗಳು ನೋಡಲು ಸಿಕ್ಕವು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಇಪ್ಪತ್ತಮೂರನೆಯ ಕಂತು