ವಿಜಯಾ ಮೋಹನ್ ಬರೆದ ಈ ಭಾನುವಾರದ ಕತೆ
ಸ್ವಂತ ಅವಳ ಮನೆದೇವ್ರು ಮಲ್ಲಮ್ಮನ ಪೂಜೆಯೊಳಗೆ, ಕಾರ್ತಿಕ್ಮಾಸದಲ್ಲಿ ನಡೀತಿದ್ದ ತಿಂಗಳ ಪೂಜೇಲಿ ಸಂಜೆಯೊಳಗೆ ಹಾಡೇಳಲು ಕುಂತುಕೊಳ್ಳುತ್ತಿದ್ದ ಸಂಕಮ್ಮ ಪೂಜೆ ಮುಗಿಯುವ ತನಕವು ಅವಳ ಗೆಳತಿಯರ ಜೊತೆ, ಶೃತಿ ಸೇರಸ್ಕೊಂಡು ಹೇಳ್ತಿದ್ದವಳನ್ನ, ಅಮ್ಮ ಸಾಕು ನಡೀರ್ರೆ ನಿದ್ದೆ ಬರ್ತೈತೆ ಅಂದ್ರು ನಿಲ್ಲಸ್ದಂಗೆ ಹೇಳಿ ಹೇಳಿ ದಣಿದು ಬಂದು ಮಲಗುತ್ತಿದ್ದವಳ ಹಾಡುಗಳನ್ನ ಈಗೀಗ ಅಷ್ಟಾಗಿ ಯಾರೂ ಕೇಳಿಸಿಕೊಳ್ಳದಾದರು…
ವಿಜಯಾ ಮೋಹನ್ ಬರೆದ ಹೊಸ ಕತೆ “ಹಾಡು” ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು
ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ
ನಾನು ಯಾವತ್ತೂ ಅವಳು ಈ ರೀತಿಯಾಗಿ ಕನಸಿನಲ್ಲಿ ಮಾತಾಡಿದ್ದು ನೋಡಿದ್ದೇ ಇಲ್ಲ. ಹೆಚ್ಚು ಕಡಿಮೆ ನನಗೆ ಎಪ್ಪತ್ತರ ವಯಸ್ಸು. ಮದುವೆಯಾಗಿ ಐವತ್ತು ಸಂವತ್ಸರಗಳೇ ನಮ್ಮ ನಡುವೆ ಹಾಗೇ ಕಳೆದು ಹೋಗಿತ್ತು. ಅಷ್ಟೂ ವರ್ಷಗಳಲ್ಲಿ ಜಾನಕಿ ಕನಸಿನಲ್ಲಿ ಮಾತಾಡಿದ್ದು, ಉಹೂಂ.. ನಾನಂತು ಒಮ್ಮೆಯೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ. ಆದರೂ ಆ ರಾತ್ರಿ ಮೊದಲ ಬಾರಿಗೆ ಜಾನಕಿ ಕನಸಲ್ಲಿ ಮಾತಾಡಿದ್ದಳು!!
ಎ.ಬಿ. ಪಚ್ಚು ಬರೆದ ಕಥೆ “ಪೌರ್ಣಮಿ” ನಿಮ್ಮ ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿ: ಸಂತೆಬೆನ್ನೂರು ಫೈಜ್ನಟ್ರಾಜ್ ಕತೆ
ಜಮೀಲಾಗೆ ಯಾಕೋ ಮಸೀದಿ ದಾರಿಯೇ ನೋಡುವಂತಾಗಿತ್ತು. ಮಗ ಮುನೀರ ರೋಜಾ ಬಿಡಲು ಮಸೀದಿಗೆ ಹೋಗಿದ್ದ. ಇಡೀ ದಿನ ಉಪವಾಸವಿದ್ದು ನಾಲ್ಕನೆಯ ತರಗತಿ ಓದ್ತಿದ್ದ ಮುನೀರನಿಗೆ ಅಪ್ಪ ಹಸೇನ್ ಎಂದರೆ ಪಂಚಪ್ರಾಣ. ಮದುವೆಯಾದ ವರುಷಕ್ಕೇ ಝಿಕ್ರಿಯಾಸಾಬ್ ತೋಟ ಬಿಟ್ಟು ಐಸ್ ಮಾರ್ತಾ ಹೊಸ ಜೀವನ ಶುರು ಮಾಡಿದ್ದ ಹಸೇನ್.
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಕತೆ ‘ಅಲ್ಲಾ ದೇವರು, ಅನ್ನ ದೇವರು!’
ಪವನ್ ಕುಮಾರ್ ಆರ್. ಬರೆದ ಈ ಭಾನುವಾರದ ಕತೆ
ಅಂಥ ಮಾತುಗಾರನಲ್ಲದೆ ಹೋದರು ವಸೀಬ ಶುದ್ಧ ವ್ಯವಹಾರಸ್ಥನಾಗಿದ್ದ. ಅವನ ಬಳಿ ಬರುವ ಗಿರಾಕಿಗಳೊಂದಿಗೆ ಹೇಗೆ ವರ್ತಿಸಿ ವಿಶ್ವಾಸಗಳಿಸಿಕೊಳ್ಳಬೇಕೆಂಬುದ ಸಾಕಷ್ಟು ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಂಡಿದ್ದ. ಬೆಳಿಗ್ಗೆ 5ರ ಜಾವಕ್ಕೆ ಇವನ ಪೆಟ್ಟಿ ಅಂಗಡಿ ತನ್ನ ಜೋಡಿರೆಕ್ಕೆಯಂತ ಬಾಗಿಲುಗಳ ಬಿಡಿಸಿಕೊಳ್ಳುತ್ತಿತ್ತು. ಅಲ್ಲಿಗೆ ಅಂದಿನ ದಿನಪತ್ರಿಕೆಗಳೆಲ್ಲ ಬಂಡಲ್ನಲ್ಲಿ ಬಂದು ಬೀಳುತ್ತಿದ್ದವು. ಆರ್. ಪವನ್ ಕುಮಾರ್ ಬರೆದ ಈ ಭಾನುವಾರ್ದ ಕತೆ “ವಸೀಬ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ದೇವದಾಸ ಕಳಸದ ಕತೆ
ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಡಾ. ದೇವದಾಸ ಕಳಸದ ಬರೆದ ಕತೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದೀಪ್ತಿ ಭದ್ರಾವತಿ ಕತೆ
ಅರುಂಧತಿಗೆ ಎದೆಯೊಳಗೆ ಕೊಳ್ಳಿದೆವ್ವ ಓಡಾಡಿದಂತೆ ಭಾಸವಾಯಿತು. ನರ್ಸು ಹಲ್ಲು ಕಚ್ಚಿಕೊಂಡಳಾದರೂ, ಆಯಾ ಮಾತ್ರ ಅದನ್ನು ಸಮರ್ಥಿಸಿಕೊಳ್ಳುವವಳಂತೆ “ಅಯ್ಯಾ ಇರೋದನ್ನ ಏಳುದ್ನಪ್ಪ” ಇವ್ರು ರಾತ್ರಿ ಎಲ್ಲ ಸುಖ ಪಟ್ಕೊಂಡು ಈವಾಗ ನಮ್ ತವ ಕೂಗ್ಕೊಂಡ್ರೆ ಏನ್ ಬತ್ತದೆ” ಎಂದಳು. ಅರುಂಧತಿಗೆಒಮ್ಮೆ ಹಾವು ಮೆಟ್ಟಿದಂತಾಗಿ ಸುಮ್ಮನೆ ಅವಳನ್ನೇ ಒಮ್ಮೆ ನೋಡಿದಳು. ಬೋಳು ಹಣೆ, ಬರಿಗೈ, ನಿರ್ವಿಕಾರ ಭಾವ ಅವಳ ಕುರಿತಾಗಿ ಬೇರೆ ಏನನ್ನೋ ಧ್ವನಿಸಿತು. ದೀಪ್ತಿ ಭದ್ರಾವತಿ ಬರೆದ ಕತೆ ‘ಸ್ಫೋಟ’ ನಿಮ್ಮ ಈ ಭಾನುವಾರದ ಓದಿಗೆ
ಡಾ. ಜ್ಯೋತಿ ಬರೆದ ಈ ಭಾನುವಾರದ ಕತೆ
ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದೆ. ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಮೊದಲು ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. -ಡಾ.ಜ್ಯೋತಿ ಬರೆದ ಕತೆ ‘ಕುಂತಿಯ ಮುಸ್ಸಂಜೆ ಮಾತು’ ಇಂದಿನ ಓದಿಗಾಗಿ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಕೆ. ದಯಾನಂದ ಕತೆ
ಕಷ್ಟಪಟ್ಟು ಎದ್ದು ಗೋಡೆಗೆ ಒರಗಿಕೊಂಡ ಆಕೆ ಕೈ ಸನ್ನೆ ಮಾಡಿ ನೀರು ಕೇಳಿದಳು. ಹತ್ತಿರದಲ್ಲೇ ನಿಂತಿದ್ದ ಹುಡುಗಿಯೊಬ್ಬಳು ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಆಕೆ ದೊಡ್ಡ ಉಸಿರು ಬಿಟ್ಟು, ‘ಮಗ ಸತ್ತರೆ ತಾಯಿ ಏನು ಹೇಳ್ತಾಳಪ್ಪ. ಮಗ ಸತ್ತ, ಸಾಯಿಸಿದ್ರು’ ಎಂದು ಅಳಲು ಶುರುಮಾಡಿದಳು. ಕಣ್ಣೀರು ಒರೆಸಿಕೊಳ್ಳುತ್ತಾ, ‘ಇನ್ನೊಬ್ಬ ಮಗ ಇದ್ದಿದ್ರೆ ಆ ಪಾಪಿಗಳನ್ನ ಹೊಡೆದುಕೊಂದು ಈ ಸಾವಿಗೆ ಸೇಡು ತೀರಿಸ್ಕೊ ಅಂತ ಹೇಳಬೋದಿತ್ತು. ಆದ್ರೆ ಇದ್ದವ್ನು ಒಬ್ಬನೇ ಮಗ. ಅವನು ವಾಪಸ್ ಬರ್ತಾನಾ’ ಎಂದು ಬರಿಗಣ್ಣುಗಳಿಂದ ಅವನನ್ನು ನೋಡಿದಳು.