ಕಪ್ಪು ಬಣ್ಣದ ಸೌಂದರ್ಯ (ಬ್ಯೂಟಿ ಆಫ್ ಬ್ಲ್ಯಾಕ್)
(ಮೇ 22, 1965)

ನಮ್ಮನ್ನು ನಾವು ನೋಡಿದಾಗಲೂ
ನಾವು ನಮ್ಮ ಕಣ್ಣುಗಳ ಮೂಲಕವೇ ನೋಡುತ್ತೇವೆ
ಅಪಾರದರ್ಶಕ ಚೆಲುವನ್ನು ಮಾತ್ರವೇ ನೋಡಲು
ಅವುಗಳಿಗೆ ಶಿಕ್ಷಣ ನೀಡಲಾಗಿದೆ, ಶಿಕ್ಷಿತ ಮನಸ್ಸು ನುಡಿವುದು

ನಮ್ಮ ಚರ್ಮವು ಸುಂದರವಾಗಿರುತ್ತದೆ,
ನಮ್ಮ ಕಣ್ಣುಗಳು ಹೊಳೆಯುತ್ತವೆ, ಬೆಳಗುತ್ತವೆ
ನೇರವಾದ ಕೂದಲು ನಮ್ಮನ್ನು ಸುಂದರವಾಗಿಸುತ್ತದೆ,
ತೆಳ್ಳಗಿನ ತುಟಿಗಳು ಸಹ ನಮಗೆ ಸುಂದರವಾಗಿ ಒಪ್ಪುತ್ತವೆ,
ನಮ್ಮ ದೇವ ದೇವತೆಗಳು
ಬೆಳಗಿನ ಬಿಳುಪಿನಲ್ಲಿ ಹೊಳೆಯುತ್ತವೆ
ಅನುದಿನ ನಾವು ಈ ದೇಗುಲದಲ್ಲಿ ಪೂಜಿಸುತ್ತೇವೆ.

ನಮಗೆ ನಮ್ಮ ಎಣ್ಣೆಗಪ್ಪು ಚರ್ಮ ಅಸಹ್ಯ,
ನಮ್ಮ ದಪ್ಪ ತುಟಿಗಳು ಅಸಹ್ಯ,
ನಮ್ಮ ನಡುರಾತ್ರಿಯ ಕಣ್ಣುಗಳು ಅಸಹ್ಯ,
ನಮ್ಮ ಗುಂಗುರು ಕೂದಲು ಅಸಹ್ಯ
ಹೀಗೆ ನಾವು ನಮ್ಮ ಚಿತ್ರವನ್ನು ನಿರಾಕರಿಸಿದ್ದೇವೆ ಅಸಹ್ಯಿಸಿ

ಆದರೆ ಇದು ಹೀಗೆ ಇರಬೇಕಾಗಿಲ್ಲ
ನಾವು ಕಪ್ಪು ಜನರು ಮತ್ತೆ ಹುಟ್ಟಬೇಕು.
ಕಪ್ಪು ಜನರು ಇತರ ಜನಾಂಗಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದು
ತಮ್ಮದೇ ವಿಶಿಷ್ಟ ಸೌಂದರ್ಯ ಹೊಂದಿರುವೆವೆಂದು ಬಗೆದು,
ಅಧೋಲೋಕದ ಸ್ಟೈಜಿಯನ್ ರಾತ್ರಿ ಕೂಡ ಸುಂದರವಾಗಿದೆ ಎಂದು ತಿಳಿದು.

 (ಮಾರ್ಗರೇಟ್ ಬರೋಸ್)

*(ಅರ್ಥಕ್ಕಾಗಿ ತುಸು ವಿವರಿಸಿಕೊಳ್ಳಲಾಗಿದೆ)