“ಡೆಸ್ಪಿನಾ ತಲುಪಲು ಎರಡು ದಾರಿಗಳಿವೆ: ಹಡಗಿನಿಂದ ಅಥವಾ ಒಂಟೆಗಳ ಮೇಲೆ. ಒಂಟೆಯ ಮೇಲೆ ಬರುವ ಯಾತ್ರಿಗೆ ಈ ಊರು ಒಂದು ಮುಖ ತೋರಿಸಿದರೆ, ಸಮುದ್ರದ ಮೇಲಿಂದ ಬರುವವನಿಗೆ ಬೇರೆಯದನ್ನೇ ತೋರಿಸುತ್ತದೆ. ಒಂಟೆಯ ಸವಾರ ಕಣ್ಣು ಹಾಯಿಸಿದಾಗ, ಪ್ರಸ್ಥಭೂಮಿಯ ದೂರ ದಿಗಂತದಲ್ಲಿ ಗಗನಚುಂಬಿಗಳ  ತುದಿಗಳು, ರಡಾರಿನ ಆ್ಯಂಟೆನಾಗಳು, ಪಟ ಪಟ ಸದ್ದು ಮಾಡುತ್ತಿರುವ ಕೆಂಪು ಬಿಳಿ ಬಣ್ಣದ ಬಾವುಟಗಳು, ಹೊಗೆ ಉಗುಳುತ್ತಿರುವ ಚಿಮಣಿಗಳು ಕಂಡುಬಂದು ಅವನಿಗೆ ಹಡಗಿನ ನೆನಪಾಗುತ್ತದೆ”
ಉಮಾರಾವ್ ಬರೆದ ಖ್ಯಾತ ಇಟಾಲಿಯನ್ ಲೇಖಕ ಇತಾಲೋ ಕಾಲ್ವಿನೋ ನ ಕಾದಂಬರಿಯೊಂದರ ಪರಿಚಯ.

ಇತಾಲೋ ಕೆಲ್ವಿನೋ ಎಂಬ ಜಗದ್ವಿಖ್ಯಾತ ಕಾದಂಬರಿಕಾರ ಅಪೂರ್ವ ವಸ್ತುಗಳಿಗೆ, ವಿಚಿತ್ರ ರೂಪಕಗಳಿಗೆ, ಗೊಂದಲ ಹುಟ್ಟಿಸುವ ಶೈಲಿಗೆ ಹೆಸರಾದವನು. ಪತ್ರಕರ್ತ, ಪ್ರಬಂಧಕಾರನೂ ಆಗಿದ್ದ ಅವನ ‘ಇನ್ವಿಜಿಬಲ್ ಸಿಟೀಸ್’ ಸಾಹಿತ್ಯಾಸಕ್ತರಿಂದ ಅಗಾಧ ಮೆಚ್ಚುಗೆ ಗಳಿಸಿದ ಕೃತಿ. ಕ್ಯೂಬಾದಲ್ಲಿ ಹುಟ್ಟಿ ಇಟಲಿಯಲ್ಲಿ ಬೆಳೆದ ಇತಾಲೋನ ಇತರ ಹೆಸರಾಂತ ಕೃತಿಗಳೆಂದರೆ ಓದುಗರಿಗೆ ಕಬ್ಬಿಣದ ಕಡಲೆಯಿನಿಸುವ ‘ ಆನ್ ಅ ವಿಂಟರ್ಸ್ ನೈಟ್ ಅ ಟ್ರಾವಲರ್’ ಮತ್ತು ‘ದ ಕ್ಯಾಸಲ್ ಆಫ್ ಕ್ರಾಸ್ಡ್ ಡೆಸ್ಟಿನೀಸ್’.

ಈ ಪುಸ್ತಕದಲ್ಲಿ ಚೈನಾದ ವೃದ್ಧ ದೊರೆ ಕುಬ್ಲೈ ಖಾನ್ ಗೆ ಮಾರ್ಕೋ ಪೋಲೋ ತನ್ನ ಅಲೆದಾಟದಲ್ಲಿ ‘ಕಂಡ’ ಶಹರುಗಳ ಬಗ್ಗೆ ಹೇಳುತ್ತಾನೆ. ಓದುತ್ತಾ ಹೋದಂತೆ ಅವನು ಹೇಳುತ್ತಿರುವುದು ಬೇರೆ ಬೇರೆ ಶಹರುಗಳ ಬಗ್ಗೆ ಅಲ್ಲ, ಕೇವಲ ವೆನಿಸ್ ಬಗ್ಗೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇಂಥಾ ಅದ್ಭುತ ಬರವಣಿಗೆಯನ್ನು ಆನಂದಿಸಲು ಈ ಸ್ಪಷ್ಟೀಕರಣದ ಅವಶ್ಯಕತೆಯಿಲ್ಲ. ಈ ಕೃತಿಯ ಬಗ್ಗೆ ಅಷ್ಟು ಸರಳವಾಗಿ ಏನು ಹೇಳುವುದೂ ಸಾಧ್ಯವಿಲ್ಲ. ಜೇನೆಟ್ ವಿಂಟರ್ ಸನ್ ಹೇಳುವಂತೆ “ಒಂದು ನಿರ್ಜನ ದ್ವೀಪದ ಮೇಲೆ, ನಾನು ತಲೆದಿಂಬಾಗಿ, ತಟ್ಟೆಯಾಗಿ ಆರಿಸುವುದು ಈ ಪುಸ್ತಕ.”

ಶಹರುಗಳು ಮತ್ತು ಗುರುತುಗಳು

ಝಿರ್ಮಾ ಎಂಬ ಊರಿನಿಂದ ಪ್ರವಾಸಿಗಳು ನಿಚ್ಚಳ ನೆನಪುಗಳೊಂದಿಗೆ ಮರಳುತ್ತಾರೆ: ಒಬ್ಬ ಕಪ್ಪು ಕುರುಡ ಜನಜಂಗುಳಿಯಲ್ಲಿ ಅರಚುತ್ತಿರುವುದು, ಹುಚ್ಚನೊಬ್ಬ ಗಗನಚುಂಬಿ ಕಟ್ಟಡ ಒಂದರ ತುದಿಯ ಅಲಂಕಾರಿಕ ಪಟ್ಟಿಯ ಮೇಲೆ ತತ್ತರಿಸುತ್ತಾ ನಡೆಯುತ್ತಿರುವುದು, ಹುಡುಗಿಯೊಬ್ಬಳು ಕಾಡುಬೆಕ್ಕೊಂದಕ್ಕೆ ಪಟ್ಟಿ ಹಾಕಿ ನಡೆಸಿಕೊಂಡು ಹೋಗುತ್ತಿರುವುದು. ಹಾಗೆ ನೋಡಿದರೆ ಝಿರ್ಮಾದ ಕಲ್ಲು ಹೊದೆಸಿದ ಹಾದಿಗಳಲ್ಲಿ ತಮ್ಮ ಕೋಲುಗಳನ್ನು ಕುಟ್ಟುವ ಅಂಧರಲ್ಲಿ ಕಪ್ಪು ಜನರೇ ಹೆಚ್ಚು: ಪ್ರತಿ ಗಗನಚುಂಬಿ ಕಟ್ಟಡದಲ್ಲಿ ಯಾರೊಬ್ಬರಿಗೋ ಹುಚ್ಚು ಹಿಡಿಯುತ್ತಿರುತ್ತದೆ; ಎಲ್ಲ ತಲೆ ಕೆಟ್ಟವರೂ ಗಂಟೆಗಟ್ಟಲೆ ಕಟ್ಟಡದ ತುದಿಯ ಮೇಲೆ ಕಳೆಯುತ್ತಾರೆ; ಖಯಾಲಿಗಾಗಿ ಯಾವುದೋ ಹುಡುಗಿ ಸಾಕದ ಕಾಡುಬೆಕ್ಕೇ ಇಲ್ಲ. ಈ ಊರಿನ ಅವಶ್ಯಕತೆಯೇ ಇಲ್ಲ: ಮನಸ್ಸಿನಲ್ಲಿ ಏನಾದರೂ ಒಂದಿಷ್ಟು ಉಳಿಸುವಂತೆ ಅದು ತನ್ನನ್ನೇ ತಾನು ಪುನರಾವರ್ತಿಸಿಕೊಳ್ಳುತ್ತಿದೆ.

(ಇತಾಲೋ ಕೆಲ್ವಿನೋ )

ಈ ಪುಸ್ತಕದಲ್ಲಿ ಚೈನಾದ ವೃದ್ಧ ದೊರೆ ಕುಬ್ಲೈ ಖಾನ್ ಗೆ ಮಾರ್ಕೋ ಪೋಲೋ ತನ್ನ ಅಲೆದಾಟದಲ್ಲಿ ‘ಕಂಡ’ ಶಹರುಗಳ ಬಗ್ಗೆ ಹೇಳುತ್ತಾನೆ. ಓದುತ್ತಾ ಹೋದಂತೆ ಅವನು ಹೇಳುತ್ತಿರುವುದು ಬೇರೆ ಬೇರೆ ಶಹರುಗಳ ಬಗ್ಗೆ ಅಲ್ಲ, ಕೇವಲ ವೆನಿಸ್ ಬಗ್ಗೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇಂಥಾ ಅದ್ಭುತ ಬರವಣಿಗೆಯನ್ನು ಆನಂದಿಸಲು ಈ ಸ್ಪಷ್ಟೀಕರಣದ ಅವಶ್ಯಕತೆಯಿಲ್ಲ. ಈ ಕೃತಿಯ ಬಗ್ಗೆ ಅಷ್ಟು ಸರಳವಾಗಿ ಏನು ಹೇಳುವುದೂ ಸಾಧ್ಯವಿಲ್ಲ. ಜೇನೆಟ್ ವಿಂಟರ್ ಸನ್ ಹೇಳುವಂತೆ “ಒಂದು ನಿರ್ಜನ ದ್ವೀಪದ ಮೇಲೆ, ನಾನು ತಲೆದಿಂಬಾಗಿ, ತಟ್ಟೆಯಾಗಿ ಆರಿಸುವುದು ಈ ಪುಸ್ತಕ.”

ನಾನೂ ಝಿರ್ಮಾದಿಂದ ಹಿಂದಿರುಗುತ್ತಿದ್ದೇನೆ: ಕಿಟಕಿಗಳಷ್ಟು ಎತ್ತರದಲ್ಲಿ ಉದ್ದುದ್ದ ಬಲೂನುಗಳು ಎಲ್ಲಾ ದಿಕ್ಕುಗಳಲ್ಲಿ ಹಾರುತ್ತಿರುವುದು ನನ್ನ ನೆನಪಲ್ಲಿ ಉಳಿದಿದೆ: ನಾವಿಕರ ಮೈಮೇಲೆ ಹಚ್ಚೆಗಳನ್ನು ಹಾಕುವ ಅಂಗಡಿಗಳ ಸಾಲು ಸಾಲು; ಸೆಖೆಯಿಂದ ಬಳಲುತ್ತಿರುವ ಧಡೂತಿ ಹೆಂಗಸರನ್ನು ತುಂಬಿಕೊಂಡ ಅಂಡರ್ ಗ್ರೌಂಡ್ ಟ್ರೇನುಗಳು. ಆದರೆ, ನನ್ನ ಸಹ ಪ್ರಯಾಣಿಕರು ಆಣೆಯಿಟ್ಟು ಹೇಳುವ ಪ್ರಕಾರ, ಊರಿನ ಗೋಪುರಗಳ ನಡುವೆ ಅವರು ನೋಡಿದ್ದು ಒಂದೇ ಒಂದು ಉದ್ದ ಬಲೂನು ಹಾರುತ್ತಿರುವುದನ್ನು, ಏಕೈಕ ಹಚ್ಚೆ ಕಲಾವಿದ ತನ್ನ ಸೂಜಿಗಳು ಮತ್ತು ಇಂಕುಗಳನ್ನು ಬೆಂಚಿನ ಮೇಲೆ ಇಟ್ಟು ಅದನ್ನು ಚುಚ್ಚಿ ಚುಚ್ಚಿ ಅಭ್ಯಾಸ ಮಾಡಿಕೊಳ್ಳುತ್ತಿದ್ದುದನ್ನು, ಒಬ್ಬಳೇ ಒಬ್ಬ ಧಡೂತಿ ಹೆಂಗಸು ಟ್ರೇನಿನ ಪ್ಲಾಟ್ ಫಾರ್ಮಿನ ಮೇಲೆ ನಿಂತು ಗಾಳಿ ಹಾಕಿಕೊಳ್ಳುತ್ತಿದುದನ್ನು. ನೆನಪುಗಳ ಅಗತ್ಯವೂ ಇಲ್ಲ: ಈ ಊರಿನ ಇರುವಿಕೆ ಸಾಧ್ಯವಾಗುವಂತೆ ಅವು ತಮ್ಮ ಗುರುತುಗಳನ್ನು ತಾವೇ ಪುನರಾವರ್ತಿಸಿಕೊಳ್ಳುತ್ತವೆ.

ಶಹರುಗಳು ಮತ್ತು ಹಂಬಲ

ಡೆಸ್ಪಿನಾ ತಲುಪಲು ಎರಡು ದಾರಿಗಳಿವೆ: ಹಡಗಿನಿಂದ ಅಥವಾ ಒಂಟೆಗಳ ಮೇಲೆ. ಒಂಟೆಯ ಮೇಲೆ ಬರುವ ಯಾತ್ರಿಗೆ ಈ ಊರು ಒಂದು ಮುಖ ತೋರಿಸಿದರೆ, ಸಮುದ್ರದ ಮೇಲಿಂದ ಬರುವವನಿಗೆ ಬೇರೆಯದನ್ನೇ ತೋರಿಸುತ್ತದೆ. ಒಂಟೆಯ ಸವಾರ ಕಣ್ಣು ಹಾಯಿಸಿದಾಗ, ಪ್ರಸ್ಥಭೂಮಿಯ ದೂರ ದಿಗಂತದಲ್ಲಿ ಗಗನಚುಂಬಿಗಳ  ತುದಿಗಳು, ರಡಾರಿನ ಆ್ಯಂಟೆನಾಗಳು, ಪಟ ಪಟ ಸದ್ದು ಮಾಡುತ್ತಿರುವ ಕೆಂಪು ಬಿಳಿ ಬಣ್ಣದ ಬಾವುಟಗಳು, ಹೊಗೆ ಉಗುಳುತ್ತಿರುವ ಚಿಮಣಿಗಳು ಕಂಡುಬಂದು ಅವನಿಗೆ ಹಡಗಿನ ನೆನಪಾಗುತ್ತದೆ. ಅವನಿಗೆ ಅದೊಂದು ಶಹರೆಂದು ಗೊತ್ತು, ಆದರೆ ಅವನು ಅದು ತನ್ನನ್ನು ಆ ಮರುಭೂಮಿಯಿಂದ ದೂರ ಕರೆದುಕೊಂಡು ಹೋಗುವ ಹಡಗು, ಅದೇ ಕಳಚಿಕೊಳ್ಳಲಿರುವ ಮುರುಕು ದೋಣಿ, ಅಲ್ಲಿ ಬೀಸುತ್ತಿರುವ ಜೋರು ಗಾಳಿ ಆಗಲೇ ಅದರ ಹಾಯಿಯನ್ನು ಅಲ್ಲಾಡಿಸುತ್ತಿದೆ, ಆದರೆ ಅವು ಇನ್ನೂ ತೆರೆದುಕೊಂಡಿಲ್ಲ ಅಥವಾ ಅದು ಕಬ್ಬಿಣದ ಅಡಿಪಾಯದಲ್ಲಿ ಗಡಗಡ ಮಾಡುತ್ತಿರುವ ಬಾಯ್ಲರ್ ಹೊಂದಿದ ಒಂದು ಸ್ಟೀಮ್ ಬೋಟ್ ಅಂದುಕೊಳ್ಳುತ್ತಾನೆ: ಅವನಾಗ ಎಲ್ಲಾ ಬಂದರುಗಳ ಬಗ್ಗೆ, ಹಡಗುಕಟ್ಟೆಯಲ್ಲಿ ಕ್ರೇನ್ ಗಳು ಎತ್ತಿ ಸುರಿಯುತ್ತಿರುವ ವಿದೇಶಿ ಸರಕುಗಳ ಬಗ್ಗೆ, ಬೇರೆ ಬೇರೆ ಧ್ವಜಗಳ ಹಡಗಿನ ಕೆಲಸಗಾರರು ಒಬ್ಬರ ತಲೆಯ ಮೇಲೆ ಒಬ್ಬರು ಬಾಟಲಿಗಳನ್ನು ಒಡೆಯುವ ಟಾವರ್ನ್ ಗಳ ಬಗ್ಗೆ, ದೀಪಹಚ್ಚಿದ ನೆಲಮಾಳಿಗೆಯ ಕಿಟಕಿಗಳ ಬಗ್ಗೆ, ಒಂದೊಂದರಲ್ಲೂ ಕಾಣಬರುವ ತಲೆ ಬಾಚಿಕೊಳ್ಳುತ್ತಿರುವ ಹೆಣ್ಣುಗಳ ಬಗ್ಗೆ ಯೋಚಿಸುತ್ತಾನೆ.

ಝಿರ್ಮಾ ಎಂಬ ಊರಿನಿಂದ ಪ್ರವಾಸಿಗಳು ನಿಚ್ಚಳ ನೆನಪುಗಳೊಂದಿಗೆ ಮರಳುತ್ತಾರೆ: ಒಬ್ಬ ಕಪ್ಪು ಕುರುಡ ಜನಜಂಗುಳಿಯಲ್ಲಿ ಅರಚುತ್ತಿರುವುದು, ಹುಚ್ಚನೊಬ್ಬ ಗಗನಚುಂಬಿ ಕಟ್ಟಡ ಒಂದರ ತುದಿಯ ಅಲಂಕಾರಿಕ ಪಟ್ಟಿಯ ಮೇಲೆ ತತ್ತರಿಸುತ್ತಾ ನಡೆಯುತ್ತಿರುವುದು, ಹುಡುಗಿಯೊಬ್ಬಳು ಕಾಡುಬೆಕ್ಕೊಂದಕ್ಕೆ ಪಟ್ಟಿ ಹಾಕಿ ನಡೆಸಿಕೊಂಡು ಹೋಗುತ್ತಿರುವುದು. ಹಾಗೆ ನೋಡಿದರೆ ಝಿರ್ಮಾದ ಕಲ್ಲು ಹೊದೆಸಿದ ಹಾದಿಗಳಲ್ಲಿ ತಮ್ಮ ಕೋಲುಗಳನ್ನು ಕುಟ್ಟುವ ಅಂಧರಲ್ಲಿ ಕಪ್ಪು ಜನರೇ ಹೆಚ್ಚು: ಪ್ರತಿ ಗಗನಚುಂಬಿ ಕಟ್ಟಡದಲ್ಲಿ ಯಾರೊಬ್ಬರಿಗೋ ಹುಚ್ಚು ಹಿಡಿಯುತ್ತಿರುತ್ತದೆ;

ಸಮುದ್ರತೀರದ ಮಬ್ಬಿನಲ್ಲಿ, ನಾವಿಕ ಒಂದು ಸೊರಗಿದ ಒಂಟೆಯ ಆಕಾರವನ್ನು ಮಸುಕಾಗಿ ಗ್ರಹಿಸುತ್ತಾನೆ. ತೂಗಾಡುತ್ತಾ ಮುನ್ನಡೆಯಿಡೆಯಿಡುತ್ತಿರುವ ಒಂಟೆ, ಅದರ ಎರಡು ಡುಬ್ಬುಗಳ ನಡುವೆ ಇರುವ ಹೊಳೆಯುವಂಚಿನ ಕಸೂತಿ ಮಾಡಿದ ಜೀನು; ಅವನಿಗದೊಂದು ಶಹರೆಂದು ಗೊತ್ತು: ಆದರೆ ಅವನದನ್ನು ಒಂದು ಒಂಟೆಯೆಂದೂ, ಅದರ ಬೆನ್ನ ಮೆಲಿಂದ ತೂಗಾಡುತ್ತಿರುವ ಮದ್ಯ ತುಂಬಿದ ಚರ್ಮದ ಚೀಲಗಳ ಮೂಟೆಗಳು, ಸಕ್ಕರೆ ಪಾಕಕ್ಕೆ ಹಾಕಿದ ಹಣ್ಣುಗಳು, ಖರ್ಜೂರದ ಮದಿರೆ, ಹೊಗೆಸೊಪ್ಪಿನ ಎಲೆಗಳು… ತನ್ನನ್ನು ಈ ಮರಳುಗಾಡಿನಿಂದ ದೂರ ಕೊಂಡೊಯ್ಯುತ್ತಿರುವ ಈ ಉದ್ದನೆಯ ಕಾರವಾನಿನ ಮುಂದೆ ಸಾಗುತ್ತಿರುವ ತಾನು… ದೂರದಲ್ಲಿ ತಾಳೆ ಮರಗಳ ನೆರಳಿನಲ್ಲಿ ಹೊಳೆಯುತ್ತಿರುವ ನೀಲಿ ನೀರಿನ ಒಯಸಿಸ್. ಅದರಾಚೆ ಇರುವ ದಪ್ಪ ಬಿಳಿ ಗೋಡೆಗಳ ಅರಮನೆಗಳು, ಚದರಬಿಲ್ಲೆ ಹಾಸಿದ ಅಂಗಳಗಳಲ್ಲಿ ಬರಿಗಾಲಿನಲ್ಲಿ ನರ್ತಿಸುತ್ತಿರುವ ಹುಡುಗಿಯರು, ಆಡುತ್ತಿರುವ ಅವರ ಕೈಗಳು, ಅರ್ಧ ಮುಚ್ಚಿದ ಅರ್ಧ ತೆರೆದ ಅವರ ದೇಹಗಳು. ಈ ಎರಡು ಶಹರುಗಳೂ ರೂಪ ತಳೆದಿರುವುದು ತಮ್ಮ ಎದುರಿಗಿರುವ ಮರಳುಗಾಡಿನಿಂದ; ಆದ್ದರಿಂದ ಒಂಟೆ ಸವಾರ ಮತ್ತು ನಾವಿಕ ಡೆಸ್ಪಿನಾವನ್ನು ಎರಡು ಮರಳುಗಾಡುಗಳ ನಡುವಿರುವ ಒಂದು ಗಡಿನಾಡಿನ ಊರಾಗಿ ಕಾಣುತ್ತಾರೆ.

ವ್ಯಾಪಾರಿ ಶಹರುಗಳು

ಆ ಊರಿನ ಬದುಕು ಸ್ವಸ್ಥವಾಗಿ ಸಾಗುವಂತೆ ಅಲ್ಲಿನ ಸಂಬಂಧಗಳನ್ನು ಸ್ಥಾಪಿಸಲು ಎರ್ಸಿಲಿಯಾದಲ್ಲಿ, ಅಲ್ಲಿನ ವಾಸಿಗಳು ತಮ್ಮ ಮನೆಯ ಮೂಲೆಗಳಿಂದ ದಾರಗಳನ್ನು ಎಳೆದು ಕಟ್ಟುತ್ತಾರೆ. ಆ ಸಂಬಂಧಗಳು ರಕ್ತ ಸಂಬಂಧಗಳೇ, ವ್ಯಾಪಾರೀ ಸಂಬಂಧಗಳೇ, ಆಳ್ವಿಕೆಯ ಸಂಬಂಧಗಳೇ, ದಳ್ಳಾಳೀ ಸಂಬಂಧಗಳೇ ಎಂಬುದಕ್ಕೆ ತಕ್ಕಂತೆ ಕಪ್ಪು ಅಥವಾ ಬಿಳುಪು ಅಥವಾ ಬೂದುಬಣ್ಣ ಅಥವಾ ಕಪ್ಪು-ಬಿಳುಪು ಬಣ್ಣಗಳ ದಾರಗಳನ್ನು ಬಳಸುತ್ತಾರೆ. ಅದರ ಮೂಲಕ ಓಡಾಡಲೂ ಸಾಧ್ಯವಾಗದಷ್ಟು ಅಸಂಖ್ಯಾತ ದಾರಗಳು ಸೇರಿಕೊಂಡಾಗ, ಅಲ್ಲಿನ ಜನರು ಆ ಊರು ಬಿಡುತ್ತಾರೆ: ಮನೆಗಳನ್ನು ಕೆಡವುತ್ತಾರೆ; ಬರೀ ದಾರಗಳು ಮತ್ತು ಅವುಗಳನ್ನು ಕಟ್ಟಿದ ಕೋಲುಗಳು ಉಳಿಯುತ್ತವೆ.

ಒಂಟೆಯ ಮೇಲೆ ಬರುವ ಯಾತ್ರಿಗೆ ಈ ಊರು ಒಂದು ಮುಖ ತೋರಿಸಿದರೆ, ಸಮುದ್ರದ ಮೇಲಿಂದ ಬರುವವನಿಗೆ ಬೇರೆಯದನ್ನೇ ತೋರಿಸುತ್ತದೆ. ಒಂಟೆಯ ಸವಾರ ಕಣ್ಣು ಹಾಯಿಸಿದಾಗ, ಪ್ರಸ್ಥಭೂಮಿಯ ದೂರ ದಿಗಂತದಲ್ಲಿ ಗಗನಚುಂಬಿಗಳ  ತುದಿಗಳು, ರಡಾರಿನ ಆ್ಯಂಟೆನಾಗಳು, ಪಟ ಪಟ ಸದ್ದು ಮಾಡುತ್ತಿರುವ ಕೆಂಪು ಬಿಳಿ ಬಣ್ಣದ ಬಾವುಟಗಳು, ಹೊಗೆ ಉಗುಳುತ್ತಿರುವ ಚಿಮಣಿಗಳು ಕಂಡುಬಂದು ಅವನಿಗೆ ಹಡಗಿನ ನೆನಪಾಗುತ್ತದೆ. ಅವನಿಗೆ ಅದೊಂದು ಶಹರೆಂದು ಗೊತ್ತು, ಆದರೆ ಅವನು ಅದು ತನ್ನನ್ನು ಆ ಮರುಭೂಮಿಯಿಂದ ದೂರ ಕರೆದುಕೊಂಡು ಹೋಗುವ ಹಡಗು, ಅದೇ ಕಳಚಿಕೊಳ್ಳಲಿರುವ ಮುರುಕು ದೋಣಿ, ಅಲ್ಲಿ ಬೀಸುತ್ತಿರುವ ಜೋರು ಗಾಳಿ ಆಗಲೇ ಅದರ ಹಾಯಿಯನ್ನು ಅಲ್ಲಾಡಿಸುತ್ತಿದೆ, ಆದರೆ ಅವು ಇನ್ನೂ ತೆರೆದುಕೊಂಡಿಲ್ಲ ಅಥವಾ ಅದು ಕಬ್ಬಿಣದ ಅಡಿಪಾಯದಲ್ಲಿ ಗಡಗಡ ಮಾಡುತ್ತಿರುವ ಬಾಯ್ಲರ್ ಹೊಂದಿದ ಒಂದು ಸ್ಟೀಮ್ ಬೋಟ್ ಅಂದುಕೊಳ್ಳುತ್ತಾನೆ.

ಯಾವುದೋ ಪರ್ವತದ ಮೇಲೆ ತಮ್ಮ ಕುಟುಂಬದ ಸಾಮಾನು ಸರಂಜಾಮುಗಳೊಂದಿಗೆ ಬೀಡು ಬಿಟ್ಟಿರುವ ಆ ಜನ ದೂರದಲ್ಲಿ ಕಾಣಬರುವ ಗಟ್ಟಿಯಾಗಿ ಎಳೆದು ಕಟ್ಟಿರುವ ದಾರಗಳ ಸಂಕೀರ್ಣ ಜಾಲವನ್ನೂ, ಅದರ ಅಕ್ಕಪಕ್ಕ ಎದ್ದು ನಿಂತಿರುವ ಕೋಲುಗಳನ್ನೂ ನೋಡುತ್ತಾರೆ. ಈಗಲೂ ಅದು ಎರ್ಸಿಲಿಯಾ ಎಂಬ ಊರೇ, ಆದರೆ ಅವರು ಏನೂ ಅಲ್ಲ. ಅವರು ಎರ್ಸಿಲಿಯಾವನ್ನು ಇನ್ನೆಲ್ಲೋ ಕಟ್ಟುತ್ತಾರೆ. ಅವರು ಮತ್ತೊಂದು ವಿನ್ಯಾಸದ ಜಾಲವನ್ನು ನೇಯುತ್ತಾರೆ. ಅದು ಮತ್ತೂ ಸಂಕೀರ್ಣವಾಗಿಯೂ, ಜೊತೆಗೇ ಮತ್ತಷ್ಟು ವ್ಯವಸ್ಥಿತವಾಗಿಯೂ ಇರಲೆಂದು ಬಯಸುತ್ತಾರೆ. ಮತ್ತೆ ಅವರು ಅದನ್ನು ಅಲ್ಲೇ ಬಿಟ್ಟು ತಮ್ಮನ್ನು, ತಮ್ಮ ಮನೆಗಳನ್ನು ಇನ್ನೂ ದೂರ ಕೊಂಡೊಯ್ಯುತ್ತಾರೆ.  ಹಾಗಾಗಿ, ಎರ್ಸಿಲಿಯಾ ಪ್ರದೇಶದಲ್ಲಿ ಪ್ರವಾಸ ಮಾಡುವಾಗ, ನಮಗೆ ಕಾಣಬರುವುದು ಹಾಳುಬಿದ್ದ ಶಹರುಗಳ ಪಳೆಯುಳಿಕೆಗಳೇ. ಗೋಡೆಗಳು ಉರುಳಿಬಿದ್ದಿವೆ, ಶವಗಳ ಮೂಳೆಗಳು ಗಾಳಿಗೆ ಸಿಕ್ಕಿ ಉರುಳುತ್ತಾ ಹೋಗಿವೆ; ಸೂಕ್ಷ್ಮ ಸಂಬಂಧಗಳ ಜೇಡರಬಲೆ ಆಕಾರವನ್ನು ಅರಸುತ್ತಿದೆ.

 

(ಚಿತ್ರಗಳು:ಅಂತರ್ಜಾಲದಿಂದ)