ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು. ಆ ಒಂದೇ ಒಡೆತಕ್ಕೆ ತಣ್ಣಗಾದ ಕರು ಅಂಬೋ ಅನ್ನುವಷ್ಟರಾಗಾ ಆ ಮೊಬ್ಬು ಗತ್ತಲಾಗ ಕುಕ್ಕುರುಗಾಲಿನಲ್ಲಿ ಕುಂತಿದ್ದ ಕೆಂಪಾಲಗನಿಗೆ.
ಅಶ್ವಥ ಕೆ.ಎನ್. ಹಾಗೂ ಶಂಕರಪ್ಪ ಕೆ.ಪಿ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಕಾನನ’ ಈ ಪತ್ರಿಕೆಯ ಆಯ್ದ ಕತೆಗಳ ಸಂಕಲನ “ಜೀವಾಂಕುರ-ಕಾನನ ಕತೆಗಳು” ಇಂದು ಪ್ರಕಟಗೊಳ್ಳುತ್ತಿದೆ. ಈ ಸಂಕಲನದ ಒಂದು ಕತೆ ನಿಮ್ಮ ಓದಿಗೆ

 

ಇಡೀ ಕಾಡಿಗೆ ಕಾಡು-ರಾಜನಾದ ದೊಡ್ಡ ಮೀಸೆಯ ದೊಡ್ಡ ಸಾಹೇಬ ಪಿ.ನಂಜಪ್ಪನವರು ಇವರು. ಬಹಳಾ ಶಿಸ್ತುಬದ್ಧವಾಗಿ ತನ್ನ ಎಲ್ಲಾ ಕಿರಿ ಆಳುಗಳನ್ನ ದುಡಿಸಿದ್ದಕ್ಕೆ, ಆ ಕಿರಿ ಆಳುಗಳು ಕೋಪಗೊಂಡು, ಕೋಪವು ದ್ವೇಷವಾಗಿ ಆ ದ್ವೇಷವನ್ನು ನಂಜಪ್ಪನ ಮೇಲೆ ನೇರವಾಗಿ ತೋರಿಸಲಾಗದೇ, ಅದುಮಿಕ್ಕಿದಷ್ಟೂ ಒತ್ತಡ ಜಾಸ್ತಿಯಾಗಿ, ಒಂದು ದಿನ ರಾಜಪ್ಪನ ಸುಪರ್ದಿಯಲ್ಲಿದ್ದ ಝೂನ ಗಡ್ದುಲಿಗಳನ್ನು ಆ ಕಿರಿ ಆಳುಗಳು ಕಾಡಿಗೆ ಬಿಟ್ಟು ಬಿಟ್ಟರು! ಆ ಕಾಡಿನ ಮಧ್ಯದಾಗ ಇರುವ ಸೊಳ್ಳೆಪುರವೆಂಬ ಆ ಊರಿಗೆ ಕೆಂಪಾಲಗನೇ ದೊರೆ. ಅವನ ಹುಲ್ಲು ಜೋಪಡಿಯ ತಡಿಕೆ ಬಾಗಿಲು ಗೆದ್ಲಿಡ್ದು ಇನ್ನೇನು ಬೀಳೋ ಸ್ಥಿತಿ ತಲುಪಿದ್ದರೂ, ಆ ರಕ್ತ ಮಾಂಸದ ತಡಿಕೆಯಾದ ಕೆಂಪಲಗನು ಗುರುಗುರು ಗೂರುಲುತ್ತಾ ಏದುಸಿರು ಬಿಡುತ್ತಿದ್ದರೆ, ಆ ಜೋಪಡಿಯಾದ ಕೆಂಪಲಗನ ಮನೆಯು, ಹಲಗೆ ಏಟ್ಗೆ ಗಂಡೈಕಳು ಗೆಜ್ಜೆಕಟ್ಟಿ ಕುಣಿದಾಂಗ ಕುಣಿತಿತ್ತು.

ಪಿಳೇಕಮ್ಮನ ಗರ್ಭಗುಡಿಯಂತೆ ಕತ್ತಾಲಲ್ಲಿದ್ದ ಆ ಜೋಪಡೆಯ ಒಳಗೆ, ಕೆಲವೊಮ್ಮೆ ಸೂರ್ಯ ಪರಮಾತ್ಮನ ಕಿರಣಗಳು ಬರಲೋ ಬ್ಯಾಡವೋ ಎನ್ನುವಂತೆ ಬಂದು ಬಾಗಿಲಸಂದಿಯಲ್ಲಿ ಮರೆಯಾಗುತ್ತಿತ್ತು. ಆ ಗೌಗತ್ತಲಲ್ಲಿ ಆ ಮೂಲೆಯ ಒಲೆಯಲ್ಲೇ ಬೈರಿ ಹೊಗೆಯೆಬ್ಬಿಸಿ, ಕೆಂಡವನ್ನು ಬೆಂಕಿಯಾಗಿಸೋ ಕೇಮೆಯಲ್ಲಿ ಕಣ್ಣೀರು ಸುರಿಸುತ್ತಾ ಕಹ್ಹಾ.. ಖಹ್ಹಾ.. ಕೆಮ್ಮುತ್ತಾ ಊದುಕೊಳವೆಗೆ ತನ್ನ ಶ್ವಾಸವನ್ನೆಲ್ಲಾ ಕೊಟ್ಟು ಕೆಂಡಕ್ಕೆ ಜೀವಬರಿಸುತ್ತಿದ್ದಳು. ಈ ಕಿರಿ ಕೆಂಡವೆಂಬುದು ಬೈರಿಯ ಶ್ವಾಸಕುಲುಮೆಯಲ್ಲಿ ನಿಗಿನಿಗಿ ಕೆಂಡವಾಗಿ, ಆ ಕೆಂಡವು ಬೆಂಕಿಯಾಗಿ, ಬೆಂಕಿಯು ಬೆಳಕಾಗಿ! ಆ ಬೆಳಕಿಗೆ ಕತ್ತಲೆಯು ದಿಗಿಲುಗೊಂಡು ಬಾಗಿಲ ಸಂದಿಯನ್ನು ಸೇರಿಕೊಂಡಿತು.

ವತ್ತಾರೆ ಬೆಳಾಕಾದೊಡನೆ ಎದ್ದ ಕೆಂಪಾಲಗನು, ಬೈರಿ ಕೊಟ್ಟ ಚೆಂಬು ಬಿಸಿನೀರಿನಲ್ಲೇ ಮುಖಾರವಿಂದವನ್ನು ಸಾರಿಸಿ ಗುಡಿಸಿ, ಏಳುಮಲೆ ಎಪ್ಪಲ್ಲೇಳುಮಲೆ ಒಡೆಯನಾದ ಅಪ್ಪಾ ಮಾದಪ್ಪನು ಹುಲಿಮೇಲೆ ಕುಳಿತಿರುವ ಪಟಕ್ಕೆ ಕೈ ಮುಗಿದು, ಈ ‘ನನ್ನ ಮಕ್ಕಂಳಗೆ ಇರೋ ಮೂರು ಆಡು, ನಾಲ್ಕು ಕುರಿಮರಿಗಳನ್ನ, ಗಡ್ದುಲಿ, ದೊಡ್ಬೆಕ್ಕು, ಸೀಳ್ನಾಯಿ, ಮಟ್ಗನಿಂದ ಕಾಪಾಡ್ಬೇಕು ಸ್ವಾಮಿ.’ ಎಂದು ಆಕಾರವಿಲ್ಲದ ನೀರನ್ನು ಕಂಚಿನ ಕಳಸಕ್ಕೆ ತುಂಬಿ ಆಕಾರಕೊಟ್ಟು ಮಡಗಿದ್ದ ಕಳಸಕ್ಕೆ ಕೈಮುಗಿದು ‘ಸತ್ತಮೇಲೆ ಎಲ್ಲರೂ ಭೂಮಿಗೆ, ಈ ಜನ್ಮ.’ ಎಂದು ವಿಭೂತಿಯನ್ನು ರಾಮಪಿತಿಕಸ್ ಸ್ಕಲ್ ನಂತಿದ್ದ ತನ್ನ ಹಣೆಗೆ ಅಡ್ಡಡ್ಡ ಮೂರ್ ಪಟ್ಟೆ ಬಳದುಕೊಂಡಾಗ, ಆ ಬಿಳಿ ಕುಳೆ ಗಡ್ಡ ಒಳಗೊಂಡ ಆ ಮುಖಕ್ಕೆ ಕಳೆಯೆಂಬುದು ಅದೆಲ್ಲಿಂದಲೋ ಚಂಗನೆ ಬರುತ್ತಿತ್ತು.

ಝೂನಿಂದ ತಪ್ಪಿಸಿಕೊಂಡಿದ್ದ ಆ ಗಡ್ದುಲಿಯು, ಜೇನುಕಲ್ಲಿನ ಗುಡ್ಡದ ಮೇಲೆ ಇರೋ ಕಲ್ಲುಗುಡ್ಡದ ನೆರಳಲ್ಲಿ ಮಲಗಿ ಆಕಡೆ ಈಕಡೆ ಹೊರಳಾಡುತ್ತಾ ತನ್ನ ನಿಗಿನಿಗಿ ಕೆಂಪಾಗಿದ್ದ ಕಣ್ಣುಗಳನ್ನು ಮುಚ್ಚಿ, ನೆರಳಿನಲ್ಲಿ ನಿದ್ರಿಸುತ್ತಿದುದ್ದನ್ನು ಸೌದೆ ತರಲು ಹೋಗಿದ್ದ ಮೂರ್ನಾಲ್ಕು ಹೆಣ್ಣುಮಕ್ಕಳು ನೋಡಿದ್ದರು.
ಸಂಜೆಯಾಗುತ್ತಾ ಪಡುವಣದಲ್ಲಿ ದೂರಕ್ಕೆ ಕಾಣುವ ಘಟ್ಟಸಾಲಿನಲ್ಲಿ ಜೇನುಕಲ್ಲಿನ ಹಿಂಭಾಗದಲ್ಲಿ ಸೂರ್ಯ ಸ್ವಾಮಿ ಮುಳುಗುತ್ತಿದ್ದಾಗ, ತಪ್ಪಲಿನಂತಿದ್ದ ಆ ಊರಿನ ಸಕಲ ಸೀಮೆ ಎಣ್ಣೆ ಬುಡ್ಡಿಗಳು ಬೆಂಕಿ ಹಚ್ಚಿಕೊಂಡು ಉರಿದಾಗ ಮಿಂಚು ಹುಳುಗಳು ಮಿನುಗುವಂತೆ ಕಾಣುತ್ತಿತ್ತು. ಬೈರಿಯ ಮನೆಯ ಹಿಂಬಾಗಿಲಿಗೆ ಇರುವ ವಪ್ಪಾರದ ಕೊಟ್ಟಿಗೆಯಲ್ಲಿ ಕೂಡಿದ್ದ ಆಡುಕುರಿಗಳು ಸಹಾ ಕಣ್ಣು ಮುಚ್ಚಿ, ಮೆಲಕು ಹಾಕುತ್ತಿದ್ದವು. ಕೆಂಪಲಗನು ಮೋಟು ಗೋಡೆಗೆ ಒರಗಿ ಕುಳಿತಿದ್ದ. ಅವನ ಎರಡನೇ ಹೆಂಡರು ಲಚ್ಮಿ ಮಾಡುತ್ತಿದ್ದ ಸಾರು ವಗ್ರಣ್ಣೆಗೊಂಡು, ಆ ವಾಸನೆಯೂ ಸೀಮೆ ಬುಡ್ಡಿಯ ವಾಸನೆಯೂ ಮಿಳಿತವಾಗಿ ಕಂಪು ಎಲ್ಲೆಡೆ ಪಸರಿಸುತ್ತಿತ್ತು.

ಉಳ್ಳುಳ್ಳಗಿದ್ದ ಕಲಗಚ್ಚು ನೀರನ್ನು ಆಡುಕುರಿಗೆ ಕುಡಿಸಿ ಹಟ್ಟಿಗೆ ಆನುಕೊಂಡಿದ್ದ ದೊಡ್ಡಿಗೆ ಅವುಗಳನ್ನು ಕೂಡಿ ಕಣ್ಜಕ್ಕೊರಗಿ ಕುಕ್ಕುರಗಾಲಲ್ಲಿ ಕೂತಿದ್ದನಲ್ಲಾ ಕೆಂಪಾಲಗನು.

ಇನ್ನೂ ಅವರಮ್ಮನೋ ನಡುಮನೆಯ ಮಧ್ಯೆ ಒಂದು ಮಕ್ಕರಿ ಅವರೆಕಾಯಿ ರಾಶಿಮಾಡಿ ಹಾಕಿಕೊಂಡು, ಕಿರು ಬುಡ್ಡಿ ಮಿಣಮಿಣ ಬೆಳಕಿನಲ್ಲಿ ಆ ಅವರೆಕಾಯಿ ಬೆಟ್ಟವನ್ನು ಕಾಳಾಗಿಸುತ್ತಿದ್ದಳು. ಸುತ್ತಲೂ ಕತ್ತಲಿತ್ತು.

ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು. ಆ ಒಂದೇ ಒಡೆತಕ್ಕೆ ತಣ್ಣಗಾದ ಕರು ಅಂಬೋ ಅನ್ನುವಷ್ಟರಾಗಾ ಆ ಮೊಬ್ಬು ಗತ್ತಲಾಗ ಕುಕ್ಕುರುಗಾಲಿನಲ್ಲಿ ಕುಂತಿದ್ದ ಕೆಂಪಾಲಗನಿಗೆ. ಕಣಜದ ಮೇಲೆ ಮಡಗಿದ್ದ ತರಳು ಮೂಟೆ ಉರಳಿ ಕರುಮೇಲೆ ಬಿದ್ದೋದಂಗೆ ಆಗಿ, ಏನೋ ಎಂದು ಗಕ್ಕನೆ ಓಡಿಹೋಗಿ ಎರಡೂ ಕೈಯಲ್ಲೂ ಕರುವಿನ ಮೇಲೆ ಬಿದ್ದಿದ್ದ ಮೂಟೆಗೆ ಕೈ ಹಾಕಿ ತಬ್ಬಿ ಎತ್ತ ತೊಡಗಿದಾಗ ಕೈಯಿಗೆ ಎರಡು ಕೆವಿಗಳು ಸಿಕ್ಕವು. ಕರುವಿನ ಗ್ವಾಮಾಳೆ ಕಿತ್ತು ರಕುತವೆಂಬೋ ರಕುತವನ್ನ ಜೋರ್ ಎಂದು ಪಾನಮಾಡುತ್ತಿದ್ದ ಜೀವಿಗೆ ಯಾರೋ ತನ್ನ ಕಿವಿಗಳನ್ನು ಹಿಂಡಿದಂಗೆ ಭಾಸವಾಯಿತು.

ಕರುವಿನ ಮೇಲೆ ಕುಂತಿದ್ದು ಗಡ್ದುಲಿಯೂ ಗಡ್ದುಲಿಯ ಮೇಲೆ ಕಾಲಾಕಿ ತಬ್ಬಿಕೊಂಡು ಕುಂತಿದ್ದ ಕೆಂಪಾಲಗನನ್ನು ನೋಡಿದ ಲಚ್ಮಿಗೆ ಸ್ವಾಮಿ ಮಾದಪ್ಪನೇ ಮನೆಗೆ ಬಂದಂಗೆ ದರುಶನವಾಗಿ ಕೈ ಮುಗಿದು ನಿಂತಳು. ರಕ್ತಪಾನಕ್ಕೆ ಡಿಸ್ಟರ್ಬ್ ಮಾಡಿದ್ದಕ್ಕೆ ತನ್ನ ನಿಗಿನಿಗಿ ಕಣ್ಣುಗಳನ್ನು ಅರಳಿಸಿ ತನ್ನ ಕಟವಾಯಿಯನ್ನು ಮೇಲೆ ಸರಿಸಿ ಹಲ್ಲುಗಳನ್ನು ಪ್ರದರ್ಶನ ಮಾಡಿ ಗುರಗುಟ್ಟಿತ್ತು ಗಡ್ದುಲಿಯು. ಅದರ ಒಂದೇ ಒದರಿಗೆ ಕೆಂಪಾಲಗನೂ ತಡಕೆಯಾಚೆ ಬಿದ್ದು. ‘ಅಯ್ಯಯ್ಯೋ! ಏ ಮಾರಿ ಲಚ್ಮಿ… ಲವ್ವೋ… ಗಡ್ದುಲಿ ಬಂದ್ಬುಟದೇ ಬಾರ್ರೇ’ ಎಂದು ಬೊಬ್ಬೆಯಿಟ್ಟನು.

ಆ ಕೂಗಾಟವು ಕಿರಿಚಾಟವಾಗಿ ಕಿರಿಚಾಟಕ್ಕೆ ಅವನ ಬಾಮೈಕ್ಳು, ಸದ್ಯ ಮಾವನಾದ ಗೂಸ ಬೈರನು, ಕುಳ್ಳೀರ, ಸಾಕನು ಎಲ್ಲರಿಗೂ ಮೈಯಲ್ಲಿ ಅಡ್ರಿನಾಲಿನ್ ರಿಲೀಸ್ ಆಗಿ, ಬೇಟೆಯೆಂಬುದು ಮೃಗವೆಂಬುದು ಹಳ್ಳಿಗೆ ಲಗ್ಗೆ ಇಕ್ಕಿದ್ದು ತಿಳಿದು, ಸಬ್ಬಲು, ಬರ್ಜಿ, ಕುಡುಗೋಲು, ಬೆಟ್ ಕುಡ್ಲುಗಳನ್ನು, ಓಡೋಡಿ ತರುವಷ್ಟರಲ್ಲಿ ಅವರಿಗೆ ಆಯುಧಗಳು ಸಾಲ್ಟೇಜ್ ಇದೆ ಅನ್ನಿಸಿತು. ಮೊದಲು ಬಂದ ಹಿರಿತಲೆ ಸಿದ್ದನು ತನ್ನ ಬೆಟ್ ಕುಡ್ಲುನಿಂದ ದೂರದಿಂದಲೇ ಕರುವಿನ ಮೇಲೆ ಅವುಚಿ ರಕ್ತ ಕುಡಿತಿದ್ದ ಗಡ್ದುಲಿಗೆ ಬೀಸಿದ. ಆ ಹೊಡೆತಕ್ಕೆ ಕುಡ್ಲು ಗುಯ್ಯನೆ ತಿರುಗಿ ಗಡ್ದುಲಿಯ ಗಡ್ಡದ ಜುಬ್ರಕ್ಕೆ ಬಡಿದು ಗೊಂತು ಕಲ್ಲಿಗೆ ತಗುಲಿ ಮುರುದಿಕ್ಕಿಕೊಂಡಿತು.

ನಿರಾಯುಧರಾಗಿ ನಿಂತಿದ್ದ, ಬೊಬ್ಬೆಯಾಕುತ್ತಾ, ಚೀರುತ್ತಾ, ಅಳುತ್ತಾ, ಇದ್ದ ಮಾನವ ಪ್ರಾಣಿಗಳನ್ನು ಕಂಡು ಬೆದರಿದ ಗಡ್ದುಲಿಯು ಚಂಗನೆ ಕಣಜದ ಮೇಲೆ ಎಗರಿ ಡಿಫೆನ್ಸಿವ್ ಮೋಡ್ ನಲ್ಲಿ ಕುಳಿತು, ಇನ್ಸ್ ಎಂದು ಬಾಯಿ ಕಳಚಿ ಆವ್೦… ಎಂದಿದ್ದಕ್ಕೆ. ಬಾಗಲಲ್ಲಿ ನಿಂತಿದ್ದ ಗಂಡುಗಳು, ಹೆಣ್ಣುಗಳು, ಮುದುಕಿ-ಮುದುಕರು ತಡಕ್ಕನೆ ಎಗರಿ ಮೂರು ಗಜ ಹಿಂದಕ್ಕೆ ಬಿದ್ದರೆ, ಕೆಲವರ ಕಾಲು ನಡುಗುತ್ತಿತ್ತು, ಸಿದ್ದನಿಗೆ ಒಂದಕ್ಕೆ ಹೋಗಬೇಕೆನಿಸಿತು.

ಪಿಳೇಕಮ್ಮನ ಗರ್ಭಗುಡಿಯಂತೆ ಕತ್ತಾಲಲ್ಲಿದ್ದ ಆ ಜೋಪಡೆಯ ಒಳಗೆ, ಕೆಲವೊಮ್ಮೆ ಸೂರ್ಯ ಪರಮಾತ್ಮನ ಕಿರಣಗಳು ಬರಲೋ ಬ್ಯಾಡವೋ ಎನ್ನುವಂತೆ ಬಂದು ಬಾಗಿಲಸಂದಿಯಲ್ಲಿ ಮರೆಯಾಗುತ್ತಿತ್ತು. ಆ ಗೌಗತ್ತಲಲ್ಲಿ ಆ ಮೂಲೆಯ ಒಲೆಯಲ್ಲೇ ಬೈರಿ ಹೊಗೆಯೆಬ್ಬಿಸಿ, ಕೆಂಡವನ್ನು ಬೆಂಕಿಯಾಗಿಸೋ ಕೇಮೆಯಲ್ಲಿ ಕಣ್ಣೀರು ಸುರಿಸುತ್ತಾ ಕಹ್ಹಾ.. ಖಹ್ಹಾ.. ಕೆಮ್ಮುತ್ತಾ ಊದುಕೊಳವೆಗೆ ತನ್ನ ಶ್ವಾಸವನ್ನೆಲ್ಲಾ ಕೊಟ್ಟು ಕೆಂಡಕ್ಕೆ ಜೀವಬರಿಸುತ್ತಿದ್ದಳು.

ಕೇರಿಗೆ ಸಿಂಬ ಬಂದ ಸುದ್ದಿ ಅತ್ತಗಿರಲಿ, ಈ ಶನಿಯನ್ನು ಊರು ಬಿಟ್ಟು ಓಡಿಸೋದು ಹೆಂಗೆ? ಎಂದು ಹಿರಿಯ-ಕಿರಿಯ ತಲೆಗಳು ತಲೆ ಕೆಡಸಿಕೊಂಡಿದ್ದಾಗ ದೂರದಲ್ಲಿ ಕುಳಿತ ಹಿರಿಯಜ್ಜಿ ಮುದುಕಿ ‘ನಾನೇಳಿಲ್ಲೇನೋ ಮೊನ್ನೇನೆ ಹುಣಸನಳ್ಳಿ ಬಸಪ್ಪನ ಪೂಜೆ ಮಾಡ್ಸ್ ಕೋ ಬಾರೋ ಅಂತ. ಇವತ್ತು ಆ ಸ್ವಾಮಿನೇ? ಪರಮಾತ್ಮನ್ನನೇ? ಮನೆಲೇ ಒಡದ್ ಸಾಯಸ್ತಿಯೇನೋ?

ಸಿವಾ? ಇನ್ನಾ ಏನೇನ್ ನೋಡ್ಬೇಕೋ ಈ ಕಣ್ಣಾಗ’ ಎಂದು ಎಂದಿದ್ದಕ್ಕೆ ಅವರ ಸೊಸೆಯು ಸೋಭಾನವಾಗಿ ‘ಆಹಾಹ… ಬಂದ್ಬುಟ್ಲು ಇಲ್ಲಿ! ಆರ್ ತಿಂಗಳಿಂದ ಸಾಕಿದ್ದೇ ಕರ, ಅದರ ಪಡೆ ಕಿತ್ತೋಗಾ ಬಾಯಾಗ ಇಕ್ಕೋಂತು. ಅದಕ್ಕೆ ಮಾಡ್ತಾ ಇರೋದೇ ಸರಿ ಸುಮ್ನೆ ಇರೇ ಮುದ್ಕಿ’ ಎಂದು ತೆಪ್ಪಗಾಗಿಸಿದಳು.

ಊರಿನ ಗಂಡುಗಲಿ ನರರೆಲ್ಲಾ ಸೇರಿ ಹಿರಿ ತಲೆಗಳು. ಕಿರಿ ತಲೆಗಳು ಬೆರೆತು ಬೀಡಿ ಹಚ್ಚಿ ಪಿಲಾನ್ ನಡೆದು ರಜಾಕಣ್ಣನ್ ಮನೆಗಿರೋ ಗನ್ನು ತರಸಿ, ಆ ಸರಿರಾತ್ರೀಲಿ ಆರು ಇಂಚು ಲೋಡ್ ಮಾಡಿ, ಸಕಲರೂ ತಮ್ಮ ತಮ್ಮ ಶಕ್ತಾನುಸಾರವಾಗಿ ಆ ಮಚ್ಚು, ದೊಣ್ಣೆ, ಬೆಟ್ ಕುಡ್ಲು, ಚಾಕು, ಗಡಾರಿ ಎಲ್ಲಾ ಸರಿ ಮಾಡ್ಕೊಂಡು ಕಣಜದ ಮೇಲೆ ಕುಳಿತ ಗಡ್ದುಲಿ ಬೇಟೆಗೆ ನಿಂತರು.

‘ನನ್ನ ಬೇಗ ಕರಕೋ ಬಾರದೇನಪ್ಪ, ನನ್ನ ಜೊತೆಗಾರರೆಲ್ಲಾ ಹೋಗ್ಬಿಟ್ರು’ ಇದನ್ನಾ ನೋಡಾಕಿಂತಾ. ನಾನು ಯಾವಾಗಪ್ಪಾ ಸಾಯೋದು ಯಾವಾಗಪ್ಪಾ ನನ್ನ ಗುಂಡಿ ತೋಡಿ ಮುಚ್ಚೋದು ಎಂದು ಒಬ್ಬಳೇ ಕಲ್ಲು ಚಪ್ಪಡಿ ಮೇಲೆ ಕುಳಿತು ಹನಿ ಹನಿ ಮಳೆಯಂತೆ ತೊಟಕಾ ತೊಟಕಾ ಎಂದು ಮಾತಾಡುತ್ತಿದ್ದರೆ ಮುದುಕಿ, ‘ಮುಚ್ಚೇ ಬಾಯಿ! ಅಮ್ಮ … ತಾಯಿ’ ಎಂದು ಸುಮ್ಮನಾಗಿಸಿದಳು ಸೊಸೆ.

ಮುಂದೆ ಗನ್ನುಧಾರಿ, ರಜಾಕಣ್ಣನೂ ಕಣಜದ ಮೇಲೆ ಅವುಚಿಕೊಂಡು ಕುಂತಿದ್ದ ಧಡಿ ತಲೆ ಗಡ್ದುಲಿಗೆ ಒಂದೇ ಒಂದು ಢಮ್ ಅನಿಸಿದನು. ಆ ಸದ್ದಿಗಾಗಿ ಕಾದು ನಿಂತಿದ್ದ ಗಂಡುಗಳು ಎಲ್ಲರು ಒಮ್ಮೆಲೆ ನುಗ್ಗಿ ತಲೆಗೊಂದು ಏಟಂತೆ ಬೊಬ್ಬೆ ಇಡುತ್ತಾ ಚೆನ್ನಾಗಿ ಚಚ್ಚುವಾಗ ಮೂರ್ನಾಲ್ಕು ಜನರ ಕೈ ಕಾಲುಗಳಲ್ಲಿ ರಕ್ತ ಸುರಿಸಿಕೊಂಡು ಕೂಗುತ್ತಾ ಬಂದರು. ಕುಳ್ಳೀರನ ಕಿರುಬೆರಳು ಮಾತ್ರ ಅರ್ಧ ಕಟ್ ಆಗಿ ನ್ಯಾತಾಡುತ್ತಿತ್ತು. ಅಡ್ರಿನಾಲಿನ್ ಪರವಶವಾಗಿ ಹೋಗಿದ್ದ ಗಂಡುಗಳು ತಮ್ಮ ಇದ್ದಬದ್ದ ಕ್ವಾಪವನ್ನು ಸಿಂಹಕ್ಕೆ ತೋರಿಸಹೋಗಿ ಕತ್ತಲೆಯಲ್ಲಿ ಅವರವರ ಕತ್ತಿ ಮಚ್ಚುಗಳಿಂದ ಅವರವರ ಕಾಲು ಕೈಗಳಿಗೆ ಚಚ್ಚಿಕೊಂಡಿದ್ದರು. ಕೊನೆಗೂ ಸಿಂಬದ ಹೆಣವನ್ನು ಬಾಗಿಲ ಮುಂದೆ ಹೊತ್ತು ತಂದು ಹಾಕಿದರು.

ಸ್ವಲ್ಪ ಕಾಲ ಯಾರೂ ಮಾತಾಡದೇ ಎಲ್ಲೆಲ್ಲಿ ಗಾಯವಾಗಿದೆ ಎಂದು ತಮ್ಮ ತಮ್ಮ ಕೈ ಕಾಲುಗಳನ್ನು ನೋಡಿಕೊಳ್ಳತೊಡಗಿದರು. ದೂರದಲ್ಲಿದ್ದ ಹೆಂಗಸರು ಹತ್ತಿರ ಬಂದರು, ಮಕ್ಕಳು ಕಣ್ಣು ಬಾಯಿ ಅಗಲಿಸಿ ಪಂಜಿನ ಬೆಳಕಲ್ಲಿ ಸಿಂಬವನ್ನು ಕಂಡವು. ಕಾಲು ಕೈಗಳಿಂದ ರಕ್ತ ಸೋರಿಸಿಕೊಂಡು ಬಂದ ಗಂಡುಗಳಿಗೆ ಅವರವರ ಹೆಂಡರುಗಳು ಔಷಧೋಪಚಾರ ಮಾಡಿ ಕಾರುತ್ತಿದ್ದ ರಕ್ತವನ್ನು ನಿಲ್ಲುವಂತೆ ಮಾಡಿದರು.

‘ಆ ಹೊತ್ತಿಗೆ ಸರಿಯಾಗಿ ಕಾಡು ಕಾಯುವ ಡೂಟಿ ಕೆಲಸಕ್ಕೆ ಸೇರಿದ ಗುಟ್ಟಿಗೆ ಇಂಪರ್ಮೇಸನ್ ಗೊತ್ತಾಗಿ ಡೂಟಿ ಮುಗಿಸಿ ಮನೆಗೆ ಬಂದನು. ಅವನ ಕೆಲಸ ಕಾಡು ಕಾಯುವುದಾದರೂ ಇವನು ಒಮ್ಮೊಮ್ಮೆ ಊರಿನಲ್ಲಿ ನಾಯಿ ಸತ್ತರೂ, ನರಿ ಸತ್ತರೂ, ಮದುವೆಯಾದರೂ, ಕುಟುಕೆಯಾದರೂ, ಉಸಿರಾಡಿದರೂ, ಹೂಸು ಬಿಟ್ಟರೂ ಅದರ ಸುದ್ದಿಯನ್ನು ದೊಡ್ಮನೆ ಗೌಡರಿಗೆ ತಿಳಿಸುವುದು ಇವನ ಆಜನ್ಮ ಸಿದ್ಧ ಹಕ್ಕು ಎಂದೇ ತಿಳಿದಿದ್ದ.

ಗುಟ್ಟಿಯು ಮೂರುದಿನದ ಹಿಂದೆ ತಪ್ಪಿಸಿಕೊಂಡಿದ್ದ ಗಡ್ದುಲಿ ಕಿಲ್ಲಿಂಗ್ ಆಗಿರೊ ಸ್ಪಾಟ್ ಗೆ ಬಂದು ‘ನೋಡಿ ಸಿದ್ದಣ್ಣಾ… ಕಾಡು ಮೃಗ ಮನೆಗೆ ಬರೋದು ದನಕರ ಹಿಡಿಯೋದು ಸಾಮಾನ್ಯ. ಅದಕ್ಕೆ ಪರಿಹಾರ ಕೊಡೋಕೆ ಪಾರೆಸ್ಟರ್ ಅವ್ರೆ, ಗೌರ್ಮೆಂಟ್ ಇದೆ.

ನೀವು ನಮಗೊಂದು ಮೆಸೇಜ್ ತಿಳಿಸ್ದೇ ಕೊಂದಿರೋದು ದೊಡ್ಡ ಕೇಸು. ಏನದರೂ ಇದು ಒಳ್ಳೆ ಕೇಸಲ್ಲ. ಎಂದು ಮೊದಲು ನಾವು ದೊಡ್ಡ ಗೌಡರಿಗೆ ತಿಳಿಸಿಬಿಡಾನ ಎಂದಿದ್ದಕ್ಕೆ ಸಿದ್ದನಿಗೆ ಎಲ್ಲಿಂದಲೋ ಕೋಪಬಂದು, ನಮ್ಮ ಅಟ್ಟಿಗೆ ನುಗ್ಗಿರೋ ಇದನ್ನ ಜೀವಸಹಿತ ಬಿಡ್ಬೇಕೆನ್ ಸ್ವಾಮಿ. ಎಂದು ಸತ್ತಿರುವ ಸಿಂಬದ ಕಳೆಬರಕ್ಕೆ ಜಾಡಿಸಿ ಒದ್ದು ಕೋಪ ತೀರಿಸಿಕೊಂಡನು.

ಇಬ್ಬರೂ ಸೇರಿ, ಊರಿನ ಹಿರಿತಲೆಗಳು ಗೌಡರನ್ನ ಸಂಧಿಸಿ ಸಂದೀ ಕಾರ್ಯವನ್ನು ಪ್ರಸ್ತಾಪಿಸಿ, ಕೊನೆಗೆ ಹುಚ್ಚನಕುಂಟೆ ಹಳ್ಳದಲ್ಲಿ ಆಳುದ್ದ ಗುಂಡಿ ತೋಡಿ ಸತ್ತ ಸಿಂಬವ ಮಣ್ಣುಮಾಡಿ ನೆಲವನ್ನೆಲ್ಲಾ ಸಮಮಾಡಿ ಉಚ್ಚೆಳ್ಳು ಕಡ್ಡಿ ಸೋಗೆಯೆಲ್ಲಾ ಹಾಕಿ, ಸುಟ್ಟು ರಾತ್ರೋ ರಾತ್ರಿ ಸುತ್ತಲೂ ಉತ್ತು ಸಮಾ ಮಾಡಿ ಆರಾಮಾಗಿ ಸದ್ದು-ಸುದ್ದು ಇಲ್ಲದೇ ಊರಿಗೆ ಊರೇ ಸಿಂಬಕ್ಕೆ ಹೊಡೆದ ಹೊಡೆತಗಳನ್ನು ಹೇಳಿಕೊಂಡು ಖುಷಿಪಡುತ್ತಿತ್ತು. ಊರನ್ನು ಸಿಂಬದಿಂದ ಕಾಪಾಡಿದ ಗನ್ನುಳ್ಳ ರಾಜಾಕಣ್ಣನಿಗೆ ಪರಾಕುಗಳು ಸಿಕ್ಕವು. ಬನ್ನೇರುಘಟ್ಟ ಝೂ ನಿಂದ ತಪ್ಪಿಸಿಕೊಂಡು ಬಂದ ಮೂರು ಸಿಂಬಗಳನ್ನು ಹುಡುಕುತ್ತಾ ಪೊದೆಗಳನ್ನ ಶೋಧಿಸಿ ಹುಡುಕಿ ಸೊರಗಿದ್ದ ಗುಟ್ಟಿಯ ಬಳಗ ಮತ್ತು ವಾಚರ್ಗಳು ‘ಈ ಕೆಲಸನೂ ಬೇಡ ಏನು ಬೇಡ ಹೋಗಲೇ!’ ಎನ್ನುತ್ತಾ, ಹುಡುಕುತ್ತಾ ಹುಡುಕುತ್ತಾ ಬಳಲಿ ಬರಲಾಗಿ, ಸಕ್ಕರೆಕೆರೆಯ ಬಳಿ ಒಂದು ಸಿಂಬವನ್ನು ಬೋನಿಗೆ ಕೆಡವಿ, ಮತ್ತೊಂದು ಸಿಂಬವು ಸುದ್ದಳ್ಳದಲ್ಲಿ ಬಲೆಗೆ ಬೀಳಲಾಗಿ, ಇನ್ನೊಂದು ಸಿಂಬಕ್ಕಾಗಿ ಕಾಡಿನ ಪೊದೆಪೊದೆಗಳನ್ನು ಸೋಸಿದರೂ ಸಿಗದೇ, ಹಳ್ಳಿಹಳ್ಳಿಯ ದನ ಕುರಿ ಕಾಯುವ ಎಲ್ಲರನ್ನೂ ಕೇಳೀ ತಿಳಿದರೂ ಸಿಗದೆ, ಮೂರ್ನಾಲ್ಕು ತಿಂಗಳು ಹುಡುಕಿದರೂ ಸಿಂಬ ಸಿಗಲಿಲ್ಲ. ಕೊನೆಗೆ ಸಿಂಬ ಕಳೆದು ಹೋಗಿದೆ ಎಂದು ರೆಕಾರ್ಡ್ ಮಾಡಲಾಯಿತು ರೆಕಾರ್ಡ್.

ಕೆಂಪಾಲಗನು ಇನ್ನು ನಶಿಸಿಹೋಗುತ್ತಿರುವ ರಾಷ್ಟ್ರೀಯ ಉದ್ಯಾನದಲ್ಲಿ ಕುರಿ ಮೇಯಿಸುತ್ತಿದ್ದಾನೆ.