” ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು.  ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ.  ಅಲ್ಲಿ ಹಿಂಡು ಹಿಂಡು ಹೆಣ್ಣುಮಕ್ಕಳು, ಒಬ್ಬೊಬ್ಬರದು ಒಂದೊಂದು ಕಥೆ. ಅವರೆಲ್ಲರೂ ಬೇರೆ ಬೇರೆ ಸಾಮಾಜಿಕ, ಆರ್ಥಿಕ ಹಿನ್ನೆಲೆಗಳಿಂದ ಬಂದವರು” 
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸ್.

ಸಾವಿರದೊಂಬೈನೂರ ತೊಂಬತ್ತೈದನೇ ಇಸವಿ. ಆಲ್ಜೀರಿಯಾ ದೇಶ. ಧಾರ್ಮಿಕ ಪ್ರತ್ಯೇಕತಾವಾದಿಗಳು ಮತ್ತು ಸರ್ಕಾರದ ನಡುವೆ ಕಾಳಗ ನಡೆಯುತ್ತಿದೆ. ಮೂಲಭೂತವಾದಿಗಳು ಒಂದರ ನಂತರ ಒಂದರಂತೆ ಹೆಣ್ಣುಗಳ ಕಾಲಿಗೆ ಸಂಕೋಲೆಗಳನ್ನು ತೊಡಿಸುತ್ತಿದ್ದಾರೆ.  ರಾಜಕೀಯ ಅತಂತ್ರತೆ, ಕಟ್ಟರ್ ಧಾರ್ಮಿಕತೆ ಮತ್ತು ಅವರೆಡನ್ನೂ ಬಳಸಿಕೊಂಡು ನಿಯಂತ್ರಿಸುವ ಗಂಡಿನ ದಬ್ಬಾಳಿಕೆ ಹೆಣ್ಣುಗಳ ಉಸಿರು ಕಟ್ಟಿಸುತ್ತಿದೆ.  ಅವರು ಹೆಂಡತಿ, ಮಗಳು, ತಾಯಿ, ಅಕ್ಕ, ತಂಗಿ ಯಾವ ಪಾತ್ರದಲ್ಲೂ ಸುರಕ್ಷಿತರಲ್ಲ.  ಬೀದಿಯಲ್ಲಿ ನಡೆಯುವಾಗ ಹತ್ತು ವರ್ಷದ ಹುಡುಗನೊಬ್ಬ, ತನ್ನ ತಾಯಿಯ ವಯಸ್ಸಿನ ಹೆಣ್ಣನ್ನು ಆಟದ ಕತ್ತಿಯಲ್ಲಿ ಚುಚ್ಚುತ್ತಾ ‘ಅಲ್ಲಾ ಹೋ ಅಕ್ಬರ್’ ಎಂದು ಘೋಷಣೆ ಕೂಗುತ್ತಾನೆ.  ಹೆಣ್ಣನ್ನು ಹಾಗೆಯೇ ನೋಡಬೇಕು, ಅದೇ ಆತನ ‘ಗಂಡಸ್ತಿಕೆ’ ಎನ್ನುವುದನ್ನು ಆತ ಹಿರಿಯರನ್ನು ನೋಡಿ ಕಲಿತಿದ್ದಾನೆ.

ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು.  ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ.  ಅಲ್ಲಿ ಹಿಂಡು ಹಿಂಡು ಹೆಣ್ಣುಮಕ್ಕಳು, ಒಬ್ಬೊಬ್ಬರದು ಒಂದೊಂದು ಕಥೆ. ಅವರೆಲ್ಲರೂ ಬೇರೆ ಬೇರೆ ಸಾಮಾಜಿಕ, ಆರ್ಥಿಕ ಹಿನ್ನೆಲೆಗಳಿಂದ ಬಂದವರು.  ಆದರೆ ಎಲ್ಲರಲ್ಲೂ ಒಂದು ಸಮಾನ ಎಳೆ ಇದೆ, ಅದು ಆ ಗಂಡು ಜಗತ್ತಿನಲ್ಲಿ ಅವರ ಸ್ಥಾನಮಾನ.

ಒಂದು ಬೆಳಗಿನಿಂದ ಸಂಜೆಯವರೆವಿಗೂ ಹಮಾಮಿನಲ್ಲಿ ನಡೆಯುವ ಘಟನೆಗಳು ಚಿತ್ರದ ವಸ್ತು.  ಬಟ್ಟೆ ಮತ್ತು ಸಿಗರೇಟಿನ ಮೂಲಕ ಹೆಣ್ಣಿನ ಅದಮ್ಯ ಧಾರಣಾಶಕ್ತಿ ಮತ್ತು ಜೀವನೋತ್ಸಾಹವನ್ನು ಈ ಚಿತ್ರ ಹೇಳುತ್ತದೆ.  ಪಿತೃಪ್ರಧಾನ ವ್ಯವಸ್ಥೆ ಮತ್ತು ಧರ್ಮವನ್ನು ಎದುರಿಸಲು ಸಿಗರೇಟು ಅವರ ಬಿಡುಗಡೆ. ಇದೇ ಸಿಗರೇಟಿನ ಪ್ರತಿಮೆಯನ್ನು ‘ಲಿಪ್ ಸ್ಟಿಕ್’ ಚಿತ್ರದಲ್ಲಿ ಅತ್ಯಂತ ಪೇಲವವಾಗಿ ಬಳಸಿಕೊಳ್ಳಲಾಗಿತ್ತು, ಇಲ್ಲಿ ಅದು ಅತ್ಯಂತ ಸಹಜವಾಗಿ ಬಂದಿದೆ.

ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು.  ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ.  ಅಲ್ಲಿ ಹಿಂಡು ಹಿಂಡು ಹೆಣ್ಣುಮಕ್ಕಳು, ಒಬ್ಬೊಬ್ಬರದು ಒಂದೊಂದು ಕಥೆ. ಅವರೆಲ್ಲರೂ ಬೇರೆ ಬೇರೆ ಸಾಮಾಜಿಕ, ಆರ್ಥಿಕ ಹಿನ್ನೆಲೆಗಳಿಂದ ಬಂದವರು.  ಆದರೆ ಎಲ್ಲರಲ್ಲೂ ಒಂದು ಸಮಾನ ಎಳೆ ಇದೆ, ಅದು ಆ ಗಂಡು ಜಗತ್ತಿನಲ್ಲಿ ಅವರ ಸ್ಥಾನಮಾನ.

ಒಂದು ಪಟ್ಟಣ, ಊರಿನ ವಾಟರ್ ಟ್ಯಾಂಕಿಗೆ ಬಾಂಬ್ ಬಿದ್ದಿದೆ, ಹತ್ತು ದಿನಗಳಿಂದ ನೀರು ಬಂದಿಲ್ಲ, ಅಂದು ನೀರು ಬಂದಿದೆ. ಅಲ್ಲಿ ಮನೆಗಳಲ್ಲಿ ಸ್ನಾನಗೃಹಗಳಿಲ್ಲ, ಅಲ್ಲಿರುವುದು ಊರಿಗೆಲ್ಲಾ ಒಂದು ಹಮಾಮ್. ೧೧ ರಿಂದ ಸಂಜೆ ಐದರವರೆಗೂ ಅದು ಹೆಣ್ಣುಮಕ್ಕಳ ಸ್ನಾನಗೃಹ, ಅದರ ಮೇಲ್ವಿಚಾರಕಿ ಫಾತಿಮಾ. ಚಿತ್ರದ ಪ್ರಾರಂಭದಲ್ಲಿ ಒಂದು ಹೆಣ್ಣುದನಿ ಹೇಳುತ್ತದೆ, ‘ಇಲ್ಲಿ ಎಷ್ಟೊಂದು ಕೊರತೆಗಳು, ನೀರಿನದು, ಸಕ್ಕರೆಯದು, ಕಾಫಿಯದು, ಎಣ್ಣೆಯದು…. ಪ್ರೀತಿಯದು, ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯದು…’ ಆಜಾನ್ ಕರೆ ಆಗುತ್ತಿರುತ್ತದೆ, ಫಾತಿಮಾಳ ಗಂಡ ಅವಳನ್ನು ‘ಬಲಾತ್ಕಾರ’ ಮಾಡುತ್ತಾನೆ.  ಒಂದಿಷ್ಟು ಪ್ರೀತಿ ಇಲ್ಲದೆ, ಅನುನಯ ಇಲ್ಲದೆ, ಅವಳ ಅಗತ್ಯಗಳನ್ನು ಗಮನಿಸದೆ, ಮನೆಕೆಲಸ ಮಾಡುತ್ತಿದ್ದವಳನ್ನು ಎಳೆದುಕೊಂಡು, ಕಮೋಡ್ ಮೇಲೆ ಕೂತು ಎದ್ದಷ್ಟೇ ನಿರ್ಭಾವುಕತನದಿಂದ ಕೆಲಸ ಮುಗಿಸಿ, ನಿರಾಳವಾಗಿ ಮಗ್ಗುಲಾಗುತ್ತಾನೆ.  ಆಮೇಲೆ ಮನೆಯಲ್ಲಿ ಒಂದು ಘಳಿಗೆ ನಿಲ್ಲದೆ ಆಕೆ ಹೊರಟುಬಿಡುತ್ತಾಳೆ. ಹಮಾಮ್ ಸೇರಿದವಳೇ ಚಿಲಕ ಹಾಕಿ, ಬೀಗ ಜಡಿದು, ತಲೆ ವಸ್ತ್ರ ಕಿತ್ತು, ಬುರಖಾ ತೆಗೆದು, ಒಳವಸ್ತ್ರ ಕಿತ್ತೆಸೆದು, ತಣ್ಣೀರಿನಲ್ಲಿ ಸ್ನಾನ ಮಾಡಿ ಗಂಡನ ಮೇಲಿನ ಅಸಹ್ಯವನ್ನೆಲ್ಲಾ ತೊಳೆದುಕೊಂಡು, ಬಿಕ್ಕಿಬಿಕ್ಕಿ ಅತ್ತು, ಸಿಗರೇಟು ಸೇದಲು ಪ್ರಾರಂಭಿಸುತ್ತಾಳೆ. ‘ಎಲ್ಲೋ ಗುಂಡಿನ ಸದ್ದು, ಯಾರು ಹಾಗೆ ಚೀರಿದ್ದು..’

ಅಲ್ಲೇ ಕೆಲಸ ಮಾಡುವ ಸಾಮಿಯಾ ಬದುಕಿನ ಒಂದೇ ಹೆಗ್ಗುರಿ ಮದುವೆ ಆಗುವುದು. ಅಂದು ಕೆಲಸ ಪ್ರಾರಂಭ ಆಗುವ ಮೊದಲು ಅಲ್ಲಿಗೆ ಮರಿಯಂ ಎನ್ನುವ ಪುಟ್ಟ ಹೆಂಗಸು ಬರುತ್ತಾಳೆ, ಅವಿವಾಹಿತೆ, ತುಂಬುಗರ್ಭಿಣಿ. ಅವಳ ಅಣ್ಣನನ್ನು ಅಮ್ಮ ಒಡವೆ ಮಾರಿ ಓದಿಸಲು ಫ್ರ್ಯಾನ್ಸ್ ಗೆ ಕಳಿಸಿದ್ದಾಳೆ.  ಅವನು ಗಡ್ಡಧಾರಿಯಾಗಿ ಹಿಂದಿರುಗಿದ್ದಾನೆ. ಗರ್ಭಿಣಿ ತಂಗಿಯನ್ನು ಕೊಂದು ಸ್ವರ್ಗಕ್ಕೆ ಹೋಗುವುದು ಅವನ ಧ್ಯೇಯ, ಈ ವಿಷಯಕ್ಕಾಗಿ ಅಮ್ಮನನ್ನು ಸಹ ಹೊಡೆದಿದ್ದಾನೆ.

ಹನ್ನೊಂದಾಗುತ್ತದೆ.  ಹೆಣ್ಣುಗಳು ಒಬ್ಬೊಬ್ಬರಾಗಿ ಬರಲಾರಂಭಿಸುತ್ತಾರೆ. ಬಟ್ಟೆಗಳೊಂದಿಗೆ ಅವರ ಹಿಂಜರಿಕೆ, ಹೆದರಿಕೆ ಕಳಚಿಕೊಳ್ಳುತ್ತವೆ. ಅಲ್ಲಿ ಹನ್ನೊಂದು ವರ್ಷಕ್ಕೆ ಮದುವೆಯಾಗಿ, ಆ ವಯಸ್ಸಿನಲ್ಲಿ ಅವನಿಂದ ಬಲಾತ್ಕಾರಕ್ಕೊಳಗಾದ ಲೂಯಿಸಾ ಇದ್ದಾಳೆ. ‘ಅಪ್ಪನ ಸ್ನೇಹಿತ, ಬಂದ, ಯಾವಾಗಲೂ ನನಗೆ ಮಿಠಾಯಿ ಕೊಡುತ್ತಿದ್ದ, ನಗುತ್ತಿದ್ದ, ನಾನು ಕೈನೀಡಿದೆ, ಈ ಸಲ ಅವನು ಮಿಠಾಯಿ ಕೊಡಲಿಲ್ಲ, ಓಡಿದೆ, ಬಾಗಿಲು ಚಿಲಕ ಹಾಕಿತ್ತು, ಹೊರಗೆ ಅಮ್ಮ ಅಳುತ್ತಿದ್ದಳು… ಹೆಂಗಸರು ನಗುತ್ತಿದ್ದರು, ಗಂಡಸರು ಕಿಟಕಿ ಮೇಲೆ ಗುದ್ದುತ್ತಾ, ಬೇಗ, ಬೇಗ, ಬೆಡ್ಶೀಟ್, ರಕ್ತ ಎಂದು ಹುರಿದುಂಬಿಸುತ್ತಿದ್ದರು.  ನನ್ನ ಮೈಮೇಲೆ ಅವನ ಬೆವರಿದ ಕೈಗಳು… ನಾನು ಹೆದರಿ ಉಚ್ಚೆ ಮಾಡಿಕೊಂಡೆ, ನನ್ನನ್ನು ಕೆಳಕ್ಕೆ ತಳ್ಳಿದ…. ಎಷ್ಟು ತೂಕ ಇದ್ದ ಅವನು’ ಸಣ್ಣ ಸಣ್ಣ ವಾಕ್ಯಗಳು, ಅವಳ ತಣ್ಣನೆಯ ದನಿಯಲ್ಲಿನ ವಿಷಣ್ಣತೆ ಚೂರಿಯಂತೆ ಮನಸ್ಸನ್ನು ಚುಚ್ಚುತ್ತದೆ.

ಚಿತ್ರದ ಪ್ರಾರಂಭದಲ್ಲಿ ಒಂದು ಹೆಣ್ಣುದನಿ ಹೇಳುತ್ತದೆ, ‘ಇಲ್ಲಿ ಎಷ್ಟೊಂದು ಕೊರತೆಗಳು, ನೀರಿನದು, ಸಕ್ಕರೆಯದು, ಕಾಫಿಯದು, ಎಣ್ಣೆಯದು…. ಪ್ರೀತಿಯದು, ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯದು…’ ಆಜಾನ್ ಕರೆ ಆಗುತ್ತಿರುತ್ತದೆ, ಫಾತಿಮಾಳ ಗಂಡ ಅವಳನ್ನು ‘ಬಲಾತ್ಕಾರ’ ಮಾಡುತ್ತಾನೆ.  ಒಂದಿಷ್ಟು ಪ್ರೀತಿ ಇಲ್ಲದೆ, ಅನುನಯ ಇಲ್ಲದೆ, ಅವಳ ಅಗತ್ಯಗಳನ್ನು ಗಮನಿಸದೆ, ಮನೆಕೆಲಸ ಮಾಡುತ್ತಿದ್ದವಳನ್ನು ಎಳೆದುಕೊಂಡು, ಕಮೋಡ್ ಮೇಲೆ ಕೂತು ಎದ್ದಷ್ಟೇ ನಿರ್ಭಾವುಕತನದಿಂದ ಕೆಲಸ ಮುಗಿಸಿ, ನಿರಾಳವಾಗಿ ಮಗ್ಗುಲಾಗುತ್ತಾನೆ.  ಆಮೇಲೆ ಮನೆಯಲ್ಲಿ ಒಂದು ಘಳಿಗೆ ನಿಲ್ಲದೆ ಆಕೆ ಹೊರಟುಬಿಡುತ್ತಾಳೆ. ಹಮಾಮ್ ಸೇರಿದವಳೇ ಚಿಲಕ ಹಾಕಿ, ಬೀಗ ಜಡಿದು, ತಲೆ ವಸ್ತ್ರ ಕಿತ್ತು, ಬುರಖಾ ತೆಗೆದು, ಒಳವಸ್ತ್ರ ಕಿತ್ತೆಸೆದು, ತಣ್ಣೀರಿನಲ್ಲಿ ಸ್ನಾನ ಮಾಡಿ ಗಂಡನ ಮೇಲಿನ ಅಸಹ್ಯವನ್ನೆಲ್ಲಾ ತೊಳೆದುಕೊಂಡು, ಬಿಕ್ಕಿಬಿಕ್ಕಿ ಅತ್ತು, ಸಿಗರೇಟು ಸೇದಲು ಪ್ರಾರಂಭಿಸುತ್ತಾಳೆ. ‘ಎಲ್ಲೋ ಗುಂಡಿನ ಸದ್ದು, ಯಾರು ಹಾಗೆ ಚೀರಿದ್ದು..’

ಲೈಲಾ ಫಾತಿಮಾ ಸಾಕಿದ ಮಗು. ಅವಳ ಕಣ್ಣೆದುರಲ್ಲಿ ಧರ್ಮಾಂಧರು ಅವಳ ಸೋದರಿಯರ ಬಲಾತ್ಕಾರ ಮಾಡಿದ್ದಾರೆ, ತಾಯಿಯನ್ನು ಕೊಂದಿದ್ದಾರೆ.  ಹಾಗೆ ಮಾಡುವಾಗೆಲ್ಲಾ ಕುರಾನಿನ ಶ್ಲೋಕಗಳನ್ನು ಪಠಿಸಿದ್ದಾರೆ.  ಮೂಕಿಯಾಗಿರುವ ಆ ಹುಡುಗಿ ಈಗ ಕುರಾನ್ ಕೇಳಿದರೆ ನಡುಗುತ್ತಾಳೆ.

‘ನನಗೆ ವಿಚ್ಛೇದನ ಸಿಕ್ಕಿತೂ…..’ ಎಂದು ಖುಷಿಯಿಂದ ನರ್ತಿಸುವ ನಾದಿಯಾ ಇದ್ದಾಳೆ.  ಅಲ್ಲೇ ಅವಳ ಅತ್ತೆ, ‘ನನ್ನ ಮಗನ ಜೀವನ ನೀನು ಹಾಳು ಮಾಡಿದೆ’ ಎಂದು ಗೊಣಗುತ್ತಿದ್ದಾಳೆ. ಸೊಸೆಗೆ ಅವಳೆದುರಲ್ಲಿ ಸಿಗರೇಟು ಸೇದಿ ಹಳೆಯ ಯಾವುದೋ ಬಾಕಿ ತೀರಿಸುವ ಹುಕಿ. ಗಂಡನ ಪ್ರೀತಿಯನ್ನು ಸಂಪೂರ್ಣವಾಗಿ ಅನುಭವಿಸಿದ ಟೀಚರ್ ಇದ್ದಾಳೆ.  ಮೂರು ತಿಂಗಳಿಗೊಮ್ಮೆ ಬರುವ ಗಂಡನಿಗಾಗಿ ತಯಾರಾಗಾಲು ಬಂದಿದ್ದಾಳೆ.  ಮಿಲನ ಅವಳಿಗೆ ಸಂಭ್ರಮ. ಮತ್ತೊಬ್ಬಳು ನವವಧು ಶಾಸ್ತ್ರಸ್ನಾನಕ್ಕಾಗಿ ಬಂದಿದ್ದಾಳೆ. ಇನ್ನೊಬ್ಬಳು ಧರ್ಮಸೈನಿಕನ ಹೆಮ್ಮೆಯ ವಿಧವೆ, ಆ ಹೆಂಗಸರಿಗೆ ಅವಳ ಮೇಲೆ, ಅವಳ ಗಂಡನ ಧರ್ಮಾಂಧತೆಯ ಮೇಲೆ ಎಷ್ಟು ಸಿಟ್ಟೆಂದರೆ ಅವಳನ್ನು ಯಾರೂ ಮಾತನಾಡಿಸುವುದಿಲ್ಲ.  ಅವಳ ಗಂಡನ ಕಡೆಯವರು ನಾದಿಯಾ ಕಾಲೇಜಿನಲ್ಲಿ ಸ್ಕರ್ಟ್ ಹಾಕಿಕೊಂಡಿದ್ದಳು, ರಾಜಕೀಯ ಕಾರ್ಯಕರ್ತೆ ಆಗಿದ್ದಳು ಎಂದು ಅವಳ ಹೊಟ್ಟೆಯ ಮೇಲೆ ಆಸಿಡ್ ಎರಚಿದ್ದಾರೆ.  ‘ನೀನು ಕಮ್ಯುನಿಸ್ಟರ ಜೊತೆ ಇದ್ದೀಯಾ, ನಾವು ದೇವರಿಗೆ ಹೆದರುವವರು’ ಎನ್ನುವ ಆ ಧರ್ಮಭೀರು ಹೆಣ್ಣಿಗೆ ನಾದಿಯಾ ಹೇಳುತ್ತಾಳೆ, ‘ನೀವು ದೇವರಿಗೆ ಹೆದರುವುದಿಲ್ಲ, ನೀವೇ ದೇವರು ಎಂದುಕೊಳ್ಳುತ್ತೀರಿ, ಅದು ಸಮಸ್ಯೆ. ನಿನ್ನ ಇಸ್ಲಾಂ ನಮ್ಮ ಇಸ್ಲಾಂ ಅಲ್ಲ!, ನಿನ್ನ ಇಸ್ಲಾಂ ರಿಪಬ್ಲಿಕ್ ಸೋಲಿಸಲು ನಾನು ಸೈತಾನ್ ಜೊತೆ ಸಹ ಕೈಜೋಡಿಸಲು ಸಿದ್ಧಳಿದ್ದೇನೆ.’

(ನಿರ್ದೇಶಕಿ ರೆಹಾನಾ)

ಗಂಡಸರ ಹುಚ್ಚಾಟಗಳಿಂದ ರೋಸಿಹೋಗಿರುವ ಎಲ್ಲರೂ ಒಬ್ಬೊಬ್ಬ ದಾನಮ್ಮ ಆಗಿದ್ದಾರೆ.  ಸೆಕ್ಸ್, ಗಂಡು ಹೆಣ್ಣಿನ ಸಂಬಂಧ, ಮಿಲನದ ಉತ್ಕಟ ಕ್ಷಣ, ಅವರ ತೊಂದರೆಗಳು, ರಾಜಕೀಯ, ಧರ್ಮ, ಫೆಮಿನಿಸಂ ಎಲ್ಲದರ ಬಗ್ಗೆ ಅವರು ಮಾತನಾಡುತ್ತಾರೆ, ಪರಸ್ಪರರಿಗೆ ನಿವೇದನೆ ಮಾಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ, ಒಮ್ಮೊಮ್ಮೆ ಪ್ರಶ್ನಿಸುತ್ತಾರೆ, ಉತ್ತರಿಸುತ್ತಾರೆ, ಹಗುರಾಗುತ್ತಾರೆ.  ಈ ಹಮಾಮಿನಲ್ಲಿ ಅವರಿಗೇ ಗೊತ್ತಿಲ್ಲದಂತೆ ಅವರೆಲ್ಲರ ನಡುವೆ ಒಂದು ಮಾತಿಗೆ ನಿಲುಕದ ಬಂಧ ಬೆಳೆದಿದೆ. ಗಂಡಸರ ಜಗತ್ತನ್ನು ಎದುರಿಸಲು ನಾವು ಒಗ್ಗಟ್ಟಿನಲ್ಲಿರಬೇಕು ಎನ್ನುವುದು ಅವರ ಅನುಭವ ಕಲಿಸಿದ ಪಾಠ.  ಅವರಿಗೆ ತೋಚಿದ ಹಾಗೆ ಅವರು ತಮ್ಮ ಸಮಸ್ಯೆಗಳಿಂದ ಪಾರಾಗುವ ದಾರಿ ಹುಡುಕಿಕೊಂಡಿದ್ದಾರೆ.  ಲೂಯಿಸಾಳಿಗೆ ಮೈದುನನ ಪ್ರೀತಿ ಸಿಕ್ಕಿದೆ, ನಾದಿಯಾ ಪಿಲ್ ಬಳಸಿ ಮಗು ಆಗದಂತೆ ನೋಡಿಕೊಂಡು ವಿಚ್ಚೇದನ ಪಡೆದಿದ್ದಾಳೆ, ಫಾತಿಮಾ ಸಿಗರೇಟಿನಲ್ಲಿ ಬಿಡುಗಡೆ ಪಡೆಯುತ್ತಾಳೆ.  ಅಸಹನೀಯ ಬದುಕನ್ನು ಸಹನೀಯವಾಗಿಸಿಕೊಳ್ಳಲು ಒಮ್ಮೊಮ್ಮೆ ಕಾರಣಗಳು ಸಿಗುತ್ತವೆ, ಒಮ್ಮೊಮ್ಮೆ ನೆಪಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ.

ಗರ್ಭ ಧರಿಸಿದ ಆ ಹೆಣ್ಣು ಮಗಳನ್ನು ಕೊಲ್ಲಲೆಂದು ಊರಿನ ಗಂಡಸರು ಕತ್ತಿ ಹಿಡಿದು ಹಮಾಮ್ ಒಳಗೆ ನುಗ್ಗುತ್ತಾರೆ. ಅಷ್ಟರಲ್ಲಿ ಎಲ್ಲರೂ ಸೇರಿ ಆ ಹುಡುಗಿಗೆ ಹೆರಿಗೆ ಮಾಡಿಸಿದ್ದಾರೆ. ಗಲಾಟೆಯಲ್ಲಿ ಮದುವೆಗಾಗಿ ಹಂಬಲಿಸುತ್ತಿದ್ದ ಸಾಮಿಯಾ ಸಾಯುತ್ತಾಳೆ.

‘ನನಗೆ ವಿಚ್ಛೇದನ ಸಿಕ್ಕಿತೂ…..’ ಎಂದು ಖುಷಿಯಿಂದ ನರ್ತಿಸುವ ನಾದಿಯಾ ಇದ್ದಾಳೆ.  ಅಲ್ಲೇ ಅವಳ ಅತ್ತೆ, ‘ನನ್ನ ಮಗನ ಜೀವನ ನೀನು ಹಾಳು ಮಾಡಿದೆ’ ಎಂದು ಗೊಣಗುತ್ತಿದ್ದಾಳೆ. ಸೊಸೆಗೆ ಅವಳೆದುರಲ್ಲಿ ಸಿಗರೇಟು ಸೇದಿ ಹಳೆಯ ಯಾವುದೋ ಬಾಕಿ ತೀರಿಸುವ ಹುಕಿ. ಗಂಡನ ಪ್ರೀತಿಯನ್ನು ಸಂಪೂರ್ಣವಾಗಿ ಅನುಭವಿಸಿದ ಟೀಚರ್ ಇದ್ದಾಳೆ.  ಮೂರು ತಿಂಗಳಿಗೊಮ್ಮೆ ಬರುವ ಗಂಡನಿಗಾಗಿ ತಯಾರಾಗಾಲು ಬಂದಿದ್ದಾಳೆ.  ಮಿಲನ ಅವಳಿಗೆ ಸಂಭ್ರಮ. ಮತ್ತೊಬ್ಬಳು ನವವಧು ಶಾಸ್ತ್ರಸ್ನಾನಕ್ಕಾಗಿ ಬಂದಿದ್ದಾಳೆ. ಇನ್ನೊಬ್ಬಳು ಧರ್ಮಸೈನಿಕನ ಹೆಮ್ಮೆಯ ವಿಧವೆ, ಆ ಹೆಂಗಸರಿಗೆ ಅವಳ ಮೇಲೆ, ಅವಳ ಗಂಡನ ಧರ್ಮಾಂಧತೆಯ ಮೇಲೆ ಎಷ್ಟು ಸಿಟ್ಟೆಂದರೆ ಅವಳನ್ನು ಯಾರೂ ಮಾತನಾಡಿಸುವುದಿಲ್ಲ.  ಅವಳ ಗಂಡನ ಕಡೆಯವರು ನಾದಿಯಾ ಕಾಲೇಜಿನಲ್ಲಿ ಸ್ಕರ್ಟ್ ಹಾಕಿಕೊಂಡಿದ್ದಳು, ರಾಜಕೀಯ ಕಾರ್ಯಕರ್ತೆ ಆಗಿದ್ದಳು ಎಂದು ಅವಳ ಹೊಟ್ಟೆಯ ಮೇಲೆ ಆಸಿಡ್ ಎರಚಿದ್ದಾರೆ.

ನಿರ್ದೇಶಕಿ ರೆಹಾನಾಳ ಮೈಮೇಲೆ ಒಮ್ಮೆ ಧರ್ಮಾಂಧರು ಪೆಟ್ರೋಲ್ ಸುರಿದು ಬೆಂಕಿಹಚ್ಚಲು ಪ್ರಯತ್ನಿಸುತ್ತಾರೆ.  ಆಕೆ ಆ ಅನುಭವದಿಂದ ಒಂದು ನಾಟಕ ಬರೆಯುತ್ತಾಳೆ, ಆಮೇಲೆ ಅದು ಈ ಚಿತ್ರವಾಗುತ್ತದೆ.  ಚಿತ್ರದ ಬಗ್ಗೆ ಎದ್ದಿರಬಹುದಾದ ಫರ್ಮಾನುಗಳನ್ನು, ಗಲಾಟೆಗಳನ್ನು ನಾವು ಊಹಿಸಬಹುದು.  ಆಲ್ಜೀರಿಯಾ ಮತ್ತಿತರ ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿದೆ.  ಒಂದೇ ಕಡೆಯಲ್ಲಿ ನಡೆಯುವ, ಮಾತು ಹೆಚ್ಚಿರುವ ಚಿತ್ರ ಇದು.  ಇದರಲ್ಲಿ ಆಸಕ್ತಿಯನ್ನು ಕಾಪಾಡಿಕೊಳ್ಳುವುದು ನಿರ್ದೇಶಕರಿಗೆ ಸವಾಲೇ ಸರಿ.  ಅದು ಸಾಧ್ಯವಾಗುವುದರಲ್ಲಿ ಚಿತ್ರಕಥೆಯಷ್ಟೇ ಮುಖ್ಯ ಕೊಡುಗೆ ಇರುವುದು ಚಿತ್ರದ ಕಲಾವಿದರದು.  ಎಲ್ಲರೂ ಎಷ್ಟು ಸಂಪೂರ್ಣವಾಗಿ ಅದರಲ್ಲಿ ಮುಳುಗಿದ್ದಾರೆ ಎಂದರೆ ಯಾವ ದೃಶ್ಯವೂ ಅಲ್ಲಿ ಅಶ್ಲೀಲ ಎನ್ನಿಸುವುದಿಲ್ಲ, ಹೇರಿಕೆ ಅನ್ನಿಸುವುದಿಲ್ಲ.

ಚಿತ್ರದುದ್ದಕ್ಕೂ ಹೆಣ್ಣಿನ ದೇಹ ಅತ್ಯಂತ ಸಹಜವಾಗಿ ಎನ್ನುವಂತೆ ಅನಾವರಣಗೊಂಡಿದೆ.  ಎಲ್ಲಾ ಅವಸ್ಥೆಗಳಲ್ಲೂ ಹೆಣ್ಣುಗಳು ಕಾಣಿಸಿಕೊಳ್ಳುತ್ತಾರೆ.  ಆದರೆ ಎಲ್ಲೋ ಒಂದು ಕಡೆ ಇದು ಮುಖ್ಯಭೂಮಿಕೆಗೆ ಬಂದು, ವಿಷಯ ಫೋಕಸ್ ಕಳೆದುಕೊಂಡುಬಿಡುತ್ತದೇನೋ ಎಂದು ಸಹ ಅನ್ನಿಸುತ್ತದೆ. ಈ ಮಿತಿಯಿಂದಲೇ ಇದು ಕೇವಲ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಚಿತ್ರವಾಗುವ ಅಪಾಯ ಸಹ ಇದೆ.

ಇಡೀ ಚಿತ್ರ ಒಂದು ತೂಕವಾದರೆ, ಕಡೆಯ ದೃಶ್ಯವೇ ಒಂದು ತೂಕ : ಆ ಮೂಕ ಹುಡುಗಿ ಲೈಲಾ ನೋಡುತ್ತಿರುವಂತೆಯೇ ಹಿಜಾಬ್ ಗಳಿಗೆಲ್ಲಾ ರೆಕ್ಕೆ ಬಂದು ಕಡೆಗೂ ಅವೆಲ್ಲಾ ಸೀಗಲ್ ಹಕ್ಕಿಗಳಂತೆ ಹಾರುವುದನ್ನು ಕಲಿತಿವೆ.