ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ತನ್ನ ಬಗ್ಗೆ ಇರದಿದ್ದರೆ ಹೋಗಲಿ ತಾನೇ ಕಾರಣನಾದ ಇನ್ನೂ ಬೆಳಕು ಕಾಣದ ಕಂದನ ಬಗ್ಗೆಯೂ ಕೂಡ ಅಷ್ಟೆ, ಯಾವುದೇ ಲೆಕ್ಕಕ್ಕಿಲ್ಲ. ಅವನಿಗೆ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ. ಅವನೊಳಗಿನ ನೆಲೆಯನ್ನು ಸರಿಯಾಗಿ ತಿಳಿದುಕೊಳ್ಳದೆ ಸುಮ್ಮನೆ ಒಪ್ಪಿ ಸ್ವೀಕರಿಸಿದೆ ಎನಿಸಿತವಳಿಗೆ.
ಎ. ಎನ್. ಪ್ರಸನ್ನ ಬರೆದ ವಾರದ ಕತೆ.

 

ಅಂಗಾತಳಾಗಿ ಮಲಗಿ ಬೆಳಗಾಗುವುದನ್ನೇ ಜಲಜ ಕಾಯುತ್ತಿದ್ದಳು. ತಲೆದಿಂಬಿನಡಿ ಇಟ್ಟಿದ್ದ ಬಲ ಅಂಗೈ ಹೊರಗೆ ಚಾಚಿ ನಾಲ್ಕು ಬೆರಳುಗಳು ಕೊಂಚ ನೋಯುವಷ್ಟು ಬಲವಾಗಿ ಮುಷ್ಟಿ ಬಿಗಿ ಹಿಡಿದಳು. ಸಣ್ಣಗೆ ನಿಟ್ಟುಸಿರು ಬಿಟ್ಟು ಕೈ ಸಡಲಿಸಿ ಇನ್ನೊಂದು ಕಡೆ ಹೊರಳಿ ಸುಮ್ಮನೆ ಕ್ಷಣಗಳನ್ನು ಕಲೆ ಹಾಕಿದ್ದಷ್ಟೆ. ಇನ್ನೂ ಬೆಳಗಾಗದಿದ್ದರೆ ಆ ಸೂರ್ಯನ ಹುಟ್ಟಡಗಿಸುತ್ತೀನಿ ಎಂಬ ಆಲೋಚನೆ ಇಳುಕಿ ನಗು ಬಂತು. ಹೊದಿಕೆಯನ್ನು ಬದಿಗೆ ಸರಿಸಿದ ಕೈ ಅವಳಿಗೆ ಅರಿವಿಲ್ಲದೆಯೇ ಕಿಬ್ಬೊಟ್ಟೆಯನ್ನೂ ಸವರಿತು. ಅದರೊಂದಿಗೇ ಸಣ್ಣಗೆ ಬೆಚ್ಚಿ ಕಣ್ಣು ಬಿಟ್ಟ ಅವಳಿಗೆ ಬೆಳಗಿನ ಮೊದಲ ಪದರು ಗೆಲುವು ಮೂಡಿತು. ಕಿಟಕಿಯಿಂದ ಒಳಗಿಳಿದ ಬೆಳಕಿನಲ್ಲಿ ಅವಳಿಗೆ ಕಂಡದ್ದು ಎರಡು. ಆಗೊಮ್ಮೆ-ಈಗೊಮ್ಮೆ ಸಣ್ಣಗೆ ಗೊರಕೆ ಹೊಡೆಯುತ್ತಿದ್ದ ಅಮ್ಮ ರಾಜಮ್ಮ ಮತ್ತು ಗೋಡೆಯ ಪಕ್ಕದಲ್ಲಿ ತಾನು ಕೆಲಸ ಮಾಡುತ್ತಿದ್ದ ಡೇ ಕೇರ್ ನ ಮ್ಯಾನೇಜರ್ ಗಿರಿಜಮ್ಮ ತನ್ನ ಮೇಲಿನ ಪ್ರೀತಿಯಿಂದ, ಒತ್ತಾಯದಿಂದ ಕೊಡಿಸಿದ್ದ ಡ್ರೆಸಿಂಗ್ ಟೇಬಲ್ ಮೇಲೆ ಯಾವುದೋ ಯೋಚನೆಯಲ್ಲಿ ಮಡಚಿ ಇಟ್ಟಿದ್ದ ಆ ಚೀಟಿ. ಅವಳು ಒಂದು ಕ್ಷಣ ತತ್ತರ ನಡುಗಿದಳು. ಅಮ್ಮ ಏನಾದರೂ ಅದನ್ನು ನೋಡಿದರೆ ಏನು ಗತಿ ಎನಿಸಿತು. ಒಂದು ಪಕ್ಷ ನೋಡಿದರೂ ಅದರ ತಲೆಬುಡ ತಿಳಿಯಲು ಸಾಧ್ಯವೇ ಇಲ್ಲ ಎಂದು ಸ್ವಲ್ಪ ಸಮಾಧಾನಪಟ್ಟುಕೊಂಡಳು. ಅದೇನಿದ್ದರೂ ತಾನು ಮಾಡಿರುವುದು ಸರಿಯಲ್ಲ ಎಂದು ಎದ್ದು ಆ ಸಣ್ಣ ರೂಮಿನಲ್ಲಿಯೇ ಮೂರು ಹೆಜ್ಜೆಯಿಟ್ಟು ಡ್ರೆಸಿಂಗ್ ಟೇಬಲ್ ಕಡೆ ಹೋಗುವಷ್ಟರಲ್ಲಿ ಅಲ್ಲಿದ್ದ ಬಟ್ಟಲು ಕಾಲಿಗೆ ತಾಗಿ ಬಿದ್ದು ‘ಠಣ್’ ಎಂದು ಶಬ್ದವಾಯಿತು.

“ಏನು ಮಾಡ್ದೆ ಜಲಜಾ…. ರಾತ್ರಿಯೆಲ್ಲ ನೋವಿಂದ ನಿದ್ದೇನೇ ಬಂದಿರಲಿಲ್ಲ….” ಎಂದು ರಾಗ ಎಳೆದರು ರಾಜಮ್ಮ.

“ಕಾಣಿಸ್ಲಿಲ್ಲಮ್ಮಾ” ಎಂದು ಹೇಳುತ್ತಲೇ ಅವಳು ಆ ಕಾಗದವನ್ನು ತೆಗೆದು ತನ್ನ ಸಣ್ಣ ಪರ್ಸ್ ನಲ್ಲಿ ಹಾಕಿ ಜಿಪ್ ಹಾಕಿದಳು. ಇದರಿಂದ ಒಂದು ರೀತಿಯ ಸಮಾಧಾನ ಉಂಟಾದರೂ ಆ ಕ್ಷೀಣ ಬೆಳಕಿನಲ್ಲಿಯೇ ತನ್ನ ಇಡೀ ಆಕೃತಿಯನ್ನು ಕಂಡು ಒಂದು ಕ್ಷಣ ಹಾಗೆಯೇ ನಿಂತಳು. ಏಕೋ ಅವಳಿಗೆ ಇನ್ನೂ ಯೋಚನೆಪಡುವಷ್ಟಿಲ್ಲ ಎಂದು ತೋರಿತು. ಪಕ್ಕಕ್ಕೆ ತಿರುಗಿದಾಗ ಮಂಡಿಯೂತಕ್ಕೆ ರಾಜಮ್ಮ ಕಟ್ಟಿಕೊಂಡಿದ್ದ ತಣ್ಣೀರು ಪಟ್ಟಿ ಒಣಗಿದ್ದು ಕಾಣಿಸಿತು.

“ನೋಡಮ್ಮ, ನೀನೇನೂ ಮಾಡಕ್ಕೆ ಹೋಗ್ಬೇಡ….. ಇನ್ನೊಂದು ಸರ್ತಿ ಪಟ್ಟಿ ಕಟ್ತೀನಿ….. ಊತ ಇಳಿಯುತ್ತೆ”.

ಅವಳು ಒಮ್ಮೆ ಬಟ್ಟೆ, ಜಡೆ ಸರಿ ಮಾಡಿಕೊಂಡು ಮುಖಕ್ಕೆ ತಣ್ಣೀರು ಎರೆಚಿ, ಒರೆಸಿಕೊಂಡು ಕಾಫಿ ಮಾಡಲು ಹೊರಟಳು. ಸ್ಟೌವ್ ಹಚ್ಚಿ, ನೀರಿನ ಪಾತ್ರೆಯಿಟ್ಟು, ಕಾಫಿ ಪುಡಿ ಹಾಕುತ್ತಿದ್ದಂತೆ ಕೆಲವೇ ಸಮಯದಲ್ಲಿ ಕುದಿಯುವುದಕ್ಕೆ ಶುರುವಾಯಿತು. ರಾಜಮ್ಮ “ಇದೇನೇ ಇಷ್ಟು ಜೋರಾಗಿ ಉರಿ ಮಾಡಿದೀಯಾ” ಎಂದದ್ದು ಕೇಳಿ ಕುದಿತವನ್ನೇ ನೋಡುತ್ತಿದ್ದ ಜಲಜ ಅದರ ಪ್ರಮಾಣ ಕಡಿಮೆ ಮಾಡಿದಳು.

ಕಾಫಿ ಲೋಟಗಳನ್ನು ಹಿಡಿದು ಬಂದು ಒಂದನ್ನು ರಾಜಮ್ಮನ ಮುಂದಿಟ್ಟು ಗೋಡೆಯ ಮೇಲಿನ ಗಡಿಯಾರದ ಕಡೆ ದೃಷ್ಟಿ ಹಾಯಿಸಿದಳು. ಉರುಳುವ ನಿಮಿಷಗಳು ಈಗ ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತಿರುವಂತೆ ಭಾಸವಾಯಿತು. ಮಕ್ಕಳು ಬಂದು ಎಂದಿನ ಕೆಲಸ ಪ್ರಾರಂಭವಾಗುವುದಕ್ಕೆ ಮುಂಚೆ ಮ್ಯಾನೇಜರ್ ಗಿರಿಜಮ್ಮನ ಬಳಿ ಮಾತಾಡಲೇಬೇಕು. ಜೊತೆಗೆ ಸೀನು ಈಗಲಾದರೂ ಮಾತು ಉಳಿಸಿಕೊಳ್ಳುತ್ತಾನೆಂಬ ಭರವಸೆಯ ಹೊಯ್ದಾಟ ಅವಳಲ್ಲಿ. ಅವನು ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾನೆಂದೂ, ಬಿಡುವಾದಾಗ ಸ್ನೇಹಿತನ ಜೊತೆ ಮಕ್ಕಳನ್ನು ಡೇ ಕೇರ್ ಗೆ ಕರೆದುಕೊಂಡು ಬರುತ್ತಾನೆಂದೂ ಗೊತ್ತಿತ್ತು. ಇನ್ನಷ್ಟು ವಿವರಗಳನ್ನು ಕೇಳಬೇಕೆನ್ನುವಷ್ಟರಲ್ಲಿ ಮಾತು ಬೇರಾವುದೋ ದಿಕ್ಕಿಗೆ ತಿರುಗುತ್ತಿತ್ತು. ಮತ್ತೆ ಒಬ್ಬಳೇ ಇದ್ದಾಗ ಅದು ನೆನಪಾಗಿ ಮುಂದಿನಸಲ ಬಿಡಲೇಬಾರದು ಎಂದುಕೊಳ್ಳುತ್ತಿದ್ದಳು.

“ಸೀನು ಈ ಕಡೆ ಬರ್ದೆ ಸುಮಾರು ದಿನ ಆಯ್ತಲ್ವಾ?” ಎಂದು ಅಲ್ಲಿದ್ದ ಅವನ ಟೋಪಿಯನ್ನು ಕೈಗೆತ್ತಿಕೊಂಡು ಅದರ ಕಡೆ ಕಣ್ಣು ಹಾಯಿಸಿ, “ಇದೇನು ಇಲಿ ಕಚ್ಚಿ ತುಂಡು ತುಂಡು ಮಾಡಿದೆ” ಎಂದು ಜಲಜಳ ಎದುರು ಹಿಡಿದರು ರಾಜಮ್ಮ.

“ತುಂಬಾ ಆಗ್ಹೋಗಿದೆ. ಇಲಿ ಪಾಷಾಣ ಹಾಕ್ಬೇಕು….. ಇಲ್ದಿದ್ರೆ ನಡೆಯಲ್ಲ…… ಅವು ಕಡ್ದು ನಂದೂ ಒಂದೆರಡು ಫ್ರಾಕ್ ಹಾಳಾಗಿದೆ” ಎಂದಳು ಅದನ್ನು ನೋಡುತ್ತ.

ಜಲಜಳಿಗೆ ತನ್ನ ಬಟ್ಟೆಗಳನ್ನು ಬೀರುವಿನಲ್ಲಿಟ್ಟು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೂ ಇತ್ತೀಚೆಗೆ ಕೆಲವು ನಾಶವಾಗುತ್ತಿದ್ದದ್ದು ತೀವ್ರವಾಗಿ ಕಾಡಿತ್ತು. ಈಗ ಉಳಿದವುಗಳನ್ನು ಪರೀಕ್ಷಿಸಿದಳು. ಆ ಕ್ಷಣದಲ್ಲಿ ಇನ್ನಷ್ಟು ನಾಶವಾಗಿರದೆ ಹಗುರೆನಿಸಿದರೂ ನಷ್ಟವಾದದ್ದಕ್ಕೆ ಬೇಸರವಾಯಿತು. ಹಾಗೆಯೇ ಸೀನು ಟೋಪಿಯನ್ನು ಅವನಿಗೆ ತೋರಿಸಿ ತಮಾಷೆ ನೋಡಲು ತಾನು ತೆಗೆದುಕೊಂಡು ಹೋಗುವ ಬ್ಯಾಗ್ ನಲ್ಲಿ ತುರುಕಿದಳು.

“ಏನಿಲ್ಲದಿದ್ದರೂ ದಿನಾ ಸ್ನಾನ ಮಾಡಿ, ಇಸ್ತ್ರಿ ಮಾಡಿದ ಬಟ್ಟೆ ಹಾಕ್ಕೊಂಡು ಬರ್ಬೇಕು ಗೊತ್ತ? ಇಲ್ಲಿ ಬರೋವೆಲ್ಲ ಚಿಕ್ಕ ಮಕ್ಳು” ಎಂದು ಮ್ಯಾನೇಜರ್ ಗಿರಿಜಮ್ಮ ಮೊದಲನೆ ದಿನವೇ ತಾಕೀತು ಮಾಡಿದ್ದರು. ಅದನ್ನು ತಪ್ಪದೆ ಪಾಲಿಸುತ್ತಿದ್ದ ಜಲಜ, ಬಚ್ಚಲು ಮನೆಗೆ ಹೋಗಿ ಬಾಗಿಲು ಹಾಕಿಕೊಂಡಳು. ಬೆಳಕು ಅಲ್ಲಿ ಕಿಟಕಿಯಿಂದ ಬರುತ್ತಿತ್ತು. ಬಕೆಟ್ ಗೆ ನೀರು ಬಿಟ್ಟು, ವಾರಕ್ಕೊಮ್ಮೆ ಮಾಡುತ್ತಿದ್ದಂತೆ ಅಲ್ಲಿ ಅಟ್ಟದ ಮೇಲೆ ಸ್ವಲ್ಪ ಕಾಣದಂತೆ ಹಿಂದಕ್ಕಿಟ್ಟಿದ್ದ ಡಬ್ಬಿಯನ್ನು ಎಳೆದುಕೊಂಡಳು. ಅದರ ಮುಚ್ಚಳ ತೆಗೆದೊಡನೆ ಅಳೆಯುವ ಟೇಪ್ ಸಿಕ್ಕಿತು. ಒಂದು ಕ್ಷಣ ಉಸಿರು ಬಿಗಿ ಹಿಡಿದು ಸುಮ್ಮನೆ ನಿಂತಳು. ಅನಂತರ ಸಾವರಿಸಿಕೊಂಡು ಮಗ್ ನಿಂದ ನೀರು ಹಾಕಿಕೊಳ್ಳುವುದಕ್ಕೆ ಮೊದಲು ಹೊಟ್ಟೆಯ ಅಳತೆಯನ್ನು ಪರೀಕ್ಷಿಸಿಕೊಂಡಳು. ಏನು ಎತ್ತ ಗೊತ್ತಿಲ್ಲದೆ ಅರ್ಧವೋ ಮುಕ್ಕಾಲೋ ಇಂಚು ಅಥವಾ ಇನ್ನೊಂದಿಷ್ಟು ಹೆಚ್ಚಿಗೆ ತೋರಿಸುತ್ತಿದ್ದಂತೆ ಕಾಣಿಸಿತು. ಧಿಡೀರನೆ ಅಲ್ಲಲ್ಲಿ ಮೈಯ ಸಂದಿಗೊಂದಿಗಳಲ್ಲಿ ತೆಳು ಬೆವರಿನ ಪದರು ಕಾಣಿಸಿಕೊಂಡು ಕಾವು ಹಬ್ಬಿತು. ಸುಮ್ಮನೆ ಕಣ್ಮುಚ್ಚಿದಳು. ತಕ್ಷಣವೇ ಅಂಗೈ ಅಗಲಿಸಿ ಬೆರಳು ಮಡಿಸಲು ತೊಡಗಿದಳು. ಅದರ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವಾಯಿತು. ಕಿಟಕಿಯ ಕಡೆ ಮುಖ ಮಾಡಿ ನಿಂತು ಹಗುರು ಮಾಡುವ ತಿಳಿಗಾಳಿಗಾಗಿ ಒಂದೆರಡು ಕ್ಷಣ ಕಾದಳು. ನುಸುಳಿದ ತೀಕ್ಷ್ಣ ಬೆಳಕು ಎಲ್ಲ ಓರೆಕೋರೆಗಳಿಗೆ ಹಬ್ಬಿತಷ್ಟೆ.

ಅಂದು ಸೀನು ಬಂದ ದಿನ ಏಕಾಂತ ಸಿಗುವುದಕ್ಕೆ ಮುಂಚೆಯೇ ಸನ್ನೆಯಲ್ಲಿ ತನ್ನ ಬದಲಾದ ಸ್ಥಿತಿಯನ್ನು ತಿಳಿಸುವ ಅವಳ ಪ್ರಯತ್ನ ಲಗಾಟ ಹೊಡೆದು ಪೆಚ್ಚಾಗಿದ್ದಳು. ಅದರ ಹಿಂದೆಯೇ ನುಗ್ಗಿದ ಸಿಟ್ಟಿಗೆ ಇವನೆಂಥ ಪೆದ್ದ ಎನಿಸಿತ್ತು. ಆದರೆ ಸೀನುಗೆ ತಾನು ತೀರ ಇಷ್ಟಪಡುವ ಹುಡುಗಿಯ ಸಂಬಂಧ ನಿಶ್ಚಿತ ತಿರುವು ಪಡೆದುಕೊಂಡ ಸೂಚನೆ ಆ ಕ್ಷಣದಲ್ಲಿಯೇ ಅರ್ಥವಾಗಿ ಪುಳಕಗೊಂಡಿದ್ದ. ತಕ್ಷಣವೇ ಅದಕ್ಕೆ ಸೂಕ್ತ ಪ್ರತಿಕ್ರಿಯೆ ವ್ಯಕ್ತಪಡಿಸುವುದನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡ. ಅದಕ್ಕೆ ಪ್ರಮುಖ ಕಾರಣ ಅಪ್ಪ ಸತ್ತ ಮೇಲೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಅಣ್ಣ ತಮ್ಮಂದಿರಲ್ಲಿ ತಲೆದೋರಿದ್ದ ವಿಷಮ ಪರಿಸ್ಥಿತಿ ಕೋರ್ಟ್ ಮಟ್ಟಿಲೇರುವಂತೆ ಮಾಡಿದ್ದು ಒಂದಾದರೆ ಫ್ಯಾಕ್ಟರಿಯಲ್ಲಿ ಇನ್ನೂ ಸ್ಥಿರವಾಗದ ತನ್ನ ಕೆಲಸದ ನೆಲೆ ಮತ್ತೊಂದು. ಅಲ್ಲಿ ಒಂದಿಲ್ಲೊಂದು ಪೈಪೋಟಿ; ಅನಿವಾರ್ಯ ಕುದಿತ. ಹಾಗಾಗಿ ಯಾವುದೂ ಗೆರೆ ಹಾಕಿದಂತೆ ಜರುಗುವುದು ಅಸಾಧ್ಯವೆಂಬುದು ಅರಿವಾಗಿತ್ತು. ಇವುಗಳಿಂದಾಗಿಯೇ ಯಾವುದೇ ವಿಷಯವಾದರೂ ಹಿಂಜರಿಕೆಯೇ ಮುಂದಾಗುತ್ತಿತ್ತು. ಈಗ ಜಲಜಳ ಬಗ್ಗೆ ಉಂಟಾದ ಭಾವನೆ ಹೊರಹೊಮ್ಮುವುದಕ್ಕೆ ಮುಳುವಾದದ್ದು ಕೂಡ ಅದೇ. ಅದಕ್ಕಾಗಿ ಅವನಲ್ಲಿ ಇನ್ನಿಲ್ಲದಷ್ಟು ನೋವಿನ ಝಳಕು ಹರಿಯಿತು. ಜೊತೆ ಇನ್ನು ಮುಂದೆ ಹಲವು ಒಡನಾಟಗಳನ್ನು ಬಿಡಬೇಕು ಎಂದುಕೊಂಡ.

ಅದಾದ ನಂತರ ಸೀನು ಬಂದಾಗ, “ಇನ್ನು ಕಾಯೋ ಹಾಗೆ ಇಲ್ಲ… ಏನಿದ್ರೂ ವಾರ-ಎರಡು ವಾರದಲ್ಲಿ ಮುಗಿಬೇಕು. ಗೊತ್ತಾಯ್ತಾ?” ಎಂದಿದ್ದಳು. ಅವನು, “ನಾನೇನು ಎಳೆಮಗೂನಾ… ತಿಳಿಯತ್ತೆ … ನಿಂಗೆ ಏನೇನು ಅಂತ ಹೇಳೋದು… ತಲೆ ಯಾವಾಗಲೂ ಗಿಮ್ ಅಂತಿರತ್ತೆ” ಎಂದು ಮಾತಿನ ದಿಕ್ಕು ಬದಲಾಯಿಸಿದಾಗ ಜಲಜಳಿಗೆ ಪ್ರತಿಯೊಂದೂ ಪ್ರಶ್ನೆಯಾಗಿತ್ತು. ಅನಂತರ ಕೆಲವು ಬಾರಿ ತಾನು ಹೇಳಿದಾಗ ಒತ್ತಾಯಿಸುತ್ತಿರುವಂತೆ ತಿಳಿದುಕೊಳ್ಳುತ್ತಾನೆ. ಅಲ್ಲದೆ ಬೇರೇನೋಏನೋ ಕಾರಣ ಹೇಳಿ ತನ್ನ ಕೆಲಸ ಮುಗಿಸಿ ಅವಸರದಿಂದ ಹೋಗಿಬಿಡುತ್ತಾನೆ. ಅವನನ್ನು ಸರಿಪಡಿಸುವುದು ಹೇಗೆ? ಗೊತ್ತಾಗಲ್ಲ… ತಕ್ಷಣವೇ ಏನಾದರೂ ದಾರಿ ಹುಡುಕಬೇಕು… ಹೇಗೆ? ಎಂದು ಡೇ ಕೇರ್ ನ ಹಾಲ್ ನಲ್ಲಿ ಆಟವಾಡುವ ಮಕ್ಕಳ ಕಡೆ ನೋಡಿಯೂ ನೋಡದಂತೆ ಯೋಚಿಸುತ್ತಾಳೆ.

ಆ ಸಲ ಸೀನು ಕಳೆದ ಅನೇಕ ಬಾರಿಗಿಂತ ಕಳೆದುಂಬಿದವನಂತೆ ಕಂಡ ಜಲಜಳಿಗೆ. ಅವಳಿಗೂ ಉತ್ಸಾಹ ಮೂಡಿತ್ತು. ದೊರೆತ ಏಕಾಂತಕ್ಕೆ ಅಣಿಯಾಗುತ್ತಲೇ “ಏನಾಯ್ತು ಫ್ಯಾಕ್ಟರಿ ವಿಷ್ಯ?… ಎಲ್ಲ ಸರಿಹೋಯ್ತಾ?” ಎಂದ ಅವಳ ಪೀಠಿಕೆಗೆ, “ಹಲ್ಕಾ ನನ್ಮಕ್ಳು… ಹಳೇದರ ಸಮಾಚಾರಾನೇ ಬೇಡಾಂತ ಹೊಸದಕ್ಕೆ ಏಟು ಹಾಕಿದೀನಿ? ಒಳ್ಳೆ ಜನ. ಇನ್ನೆರಡು ದಿನದಲ್ಲಿ ಫಿಕ್ಸ್ ಆಗತ್ತೆ” ಎಂದು ಮುಂದಿನ ಸಮಾರಂಭಕ್ಕೆ ದಿನ ಗೊತ್ತುಮಾಡುವುದಷ್ಟೇ ಬಾಕಿ ಎನ್ನುವಂತೆ ಹೇಳಿದ್ದ. ಹೇಳಿದ ಮಾತಿನಲ್ಲಿ ದೃಢತೆ ಇರುವಂತೆ ಭಾಸವಾದರೂ ಮುಖಮುದ್ರೆ ಕಂಡಿದ್ದರೆ ಇನ್ನಷ್ಟು ಸ್ಪಷ್ಟವಾಗುತ್ತಿತ್ತು ಎಂದುಕೊಂಡಿದ್ದಳು ಜಲಜ. ಅದಾದ ಎರಡು ದಿನ ಜಲಜ ಯಾವ ಫೋನ್ ಬಂದರೂ ಅದು ಅವನಿಂದ ಎಂದು ನಿರೀಕ್ಷಿಸುತ್ತಲೇ ಕಳೆದಳು. ಅದೇ ಗುಂಗಿನಲ್ಲಿದ್ದ ಅವಳು ಮನೆಯಲ್ಲಿ ನಲ್ಲಿಯಿಂದ ನೀರು ಬಂದು ಕೊಡ ತುಂಬಿ ಅಡುಗೆ ಮನೆಯಲ್ಲ ಹರಿಯುತ್ತಿದ್ದರೂ ರಾಜಮ್ಮನಿಂದ ಬೈಸಿಕೊಂಡು ಸರಿಪಡಿಸಬೇಕಾಯಿತು. ಹಾಗಾದರೆ ಅವನು ಹೇಳಿದ್ದು ನಿಜವೋ ಅಲ್ಲವೋ ಎಂಬ ಅನುಮಾನ ಅವಳಿಗೆ.

ಡೇ ಕೇರ್ಗೆ ಹೋಗುವ ರಸ್ತೆಯ ಬದಿಯಲ್ಲಿ ಆಸ್ಪತ್ರೆಗೆ ಅತಿ ಹತ್ತಿರದಲ್ಲಿಯೇ ಇದ್ದ ಗಣೇಶನ ಗುಡಿಯ ನೆನಪಾಯಿತು. ತಾನು ಮಕ್ಕಳನ್ನು ನೋಡಿಕೊಳ್ಳುತ್ತಿರುವಾಗ ಅಲ್ಲಿ ಮೊಳಗುವ ಗಂಟೆಗಳ ಶಬ್ದವೂ ಅವಳಿಗೆ ದಿನವೂ ಕೇಳಿಸುತ್ತಿತ್ತು. ಗುಡಿಯಲ್ಲಿ ಜನರಿರಲಿ ಬಿಡಲಿ, ಆಸ್ಪತ್ರೆಯ ಡಾಕ್ಟರ್ ವಸುಧಾ ಒಂದು ಕ್ಷಣ ನಿಂತು ಕೈಮುಗಿದು ಮುಂದೆ ಹೋಗುತ್ತಿದ್ದರು. ಅಂತಹ ಸಂದರ್ಭವೊಂದರಲ್ಲಿ ಜಲಜಳಿಗೆ ಆಕೆ ಪರಿಚಯವಾದದ್ದು.

ಬಚ್ಚಲಿಂದ ಹೊರಡುವ ಮುಂಚೆ ಟೇಪನ್ನು ಮತ್ತೆ ಡಬ್ಬಿಯಲ್ಲಿಟ್ಟು ಹಿಂದಕ್ಕೆ ತಳ್ಳಿದೆನೋ ಇಲ್ಲವೋ ಎನ್ನುವುದು ಅರಿವಾಗದಷ್ಟು ಅವಳ ಮನಸ್ಸನ್ನು ಸೀನು ತುಂಬಿಕೊಂಡಿದ್ದ. ಹೊರ ಬಂದಾಗ ಕೊಂಚ ಗಂಭೀರವಾಗಿ ಕಾಣಿಸಿದ ಅವಳಿಗೆ “ಯಾಕಿವತ್ತು ಹಾಡೆಲ್ಲ ಬಂದಾಗಿದೆ…. ಬಚ್ಚಲಲ್ಲೂ ಇಲಿಗಿಲಿ ಕಾಣಿಸ್ತೋ ಹೇಗೆ?” ಎಂದ ರಾಜಮ್ಮಳ ಮಾತಿಗೆ ಜಲಜ ಉತ್ತರಿಸಲೂ ಇಲ್ಲ; ಆ ಕಡೆ ಮುಖ ಕೂಡ ತಿರುಗಿಸಲಿಲ್ಲ.

“ಹೊಟ್ಟೆಗೇನೂ ಇಲ್ಲ ಅಂತ ಆಗ್ಲೆ ಮುಖ ಊದಿ ಬಿಡ್ತ?….. ಆಚೆ, ರಸ್ತೆ ಮೂಲೇಲಿ ಸಿಗುತ್ತಲ್ಲ, ಏನಾದ್ರೂ ತಿಂದು ಹೋಗು. ನಂಗೇನೂ ಬೇಡ” ಎಂದ ರಾಜಮ್ಮ ಊತುಕೊಂಡಿದ್ದ ಭಾಗದ ಮೇಲೆ ಅಂಗೈ ಸವರಿದರು. ಜಲಜ ಇದಕ್ಕೂ ಉತ್ತರಿಸದೆ ಮಾಮೂಲಿಗಿಂತೆ ಸಡಿಲವಾಗಿ ಹಿಂದು ಮುಂದಿನ ಭಾಗಗಳಲ್ಲಿ ಏಕಪ್ರಕಾರವಾಗಿ ಕಾಣುವಂತೆ ಸೀರೆ-ಸೆರಗು ಹರಿಬಿಟ್ಟು ಹೊರಟಳು. ಉದ್ವೇಗದಲ್ಲಿ ಪರ್ಸು, ಬ್ಯಾಗು ಮರೆತರೂ ಮತ್ತೆ ಬಂದು ತೆಗೆದುಕೊಂಡಳು.

ಪಕ್ಕದ ರಸ್ತೆಯ ಮೂಲೆಯಲ್ಲಿಯೆ ಅವಳ ಓರಗೆಯ ಸೀತೆ ನಡೆಸುತ್ತಿದ್ದ ತಿಂಡಿಯಂಗಡಿ. ಜಲಜ ಬಿಡುವಾದಾಗ ಕುಳಿತು ಟೀವಿ ಸೀರಿಯಲ್ ಗಳ ಬಗ್ಗೆ, ಡೇ ಕೇರ್ ನ ಮಕ್ಕಳ ತುಂಟಾಟದ ಬಗ್ಗೆ, ಹಲವು ಸಲ ಮಕ್ಕಳ ಅಮ್ಮಂದಿರಿಂದ ಕೆಲಸಕ್ಕೆ ಬಾರದ ವಿಷಯಗಳಿಗೆ ಬೈಸಿಕೊಂಡುದರ ಬಗ್ಗೆ ಮಾತನಾಡುತ್ತ ಕಾಲ ಕಳೆಯುತ್ತಿದ್ದಳು.

ಕೆಲವು ಬಾರಿ ತಾನು ಹೇಳಿದಾಗ ಒತ್ತಾಯಿಸುತ್ತಿರುವಂತೆ ತಿಳಿದುಕೊಳ್ಳುತ್ತಾನೆ. ಅಲ್ಲದೆ ಬೇರೇನೋಏನೋ ಕಾರಣ ಹೇಳಿ ತನ್ನ ಕೆಲಸ ಮುಗಿಸಿ ಅವಸರದಿಂದ ಹೋಗಿಬಿಡುತ್ತಾನೆ. ಅವನನ್ನು ಸರಿಪಡಿಸುವುದು ಹೇಗೆ? ಗೊತ್ತಾಗಲ್ಲ… ತಕ್ಷಣವೇ ಏನಾದರೂ ದಾರಿ ಹುಡುಕಬೇಕು… ಹೇಗೆ? ಎಂದು ಡೇ ಕೇರ್ ನ ಹಾಲ್ ನಲ್ಲಿ ಆಟವಾಡುವ ಮಕ್ಕಳ ಕಡೆ ನೋಡಿಯೂ ನೋಡದಂತೆ ಯೋಚಿಸುತ್ತಾಳೆ.

ಡೇ ಕೇರ್ ನ ದೈನಂದಿನ ದಿನಚರಿ ಇನ್ನೂ ಪ್ರಾರಂಭವಾಗಬೇಕಿತ್ತು. ಎಂದಿನಂತೆ ಕೆಲಸದಾಕೆ ಎಲ್ಲವನ್ನೂ ಒಪ್ಪವಾಗಿಡಲು ಶುರುಮಾಡಿದ್ದಳು. ಜಲಜಳಿಗೇಕೋ ಮುಂಜಾವಿನ ಸೂರ್ಯನ ಕಿರಣಗಳು ತೆರೆದ ಬಾಗಿಲಿನ ಹೊಸಿಲನ ಮೇಲೆ ಬಿದ್ದು ವಿಶಿಷ್ಟ ರಂಗು ಪ್ರತಿಫಲಿಸುವಂತೆ ಕಾಣಿಸಿ ಮುದಗೊಂಡಳು. ಗಿರಿಜಮ್ಮ ಇನ್ನೂ ಬಂದಿರಲಿಲ್ಲ. ನಿತ್ಯದಂತೆ ಅವರು ಬರುವರೆಂದು ತಿಳಿದಿದ್ದರೂ ಒಂದು ಪಕ್ಷ ಬೇರೇನೋ ಕಾರಣದಿಂದ ಬರದಿದ್ದರೆ ಈ ಮೊದಲೇ ಅವರಿಗೆ ತಿಳಿಸಿದ್ದ ಮತ್ತು ಅವರೊಂದಿಗೆ ಹಾಕಿಕೊಂಡ ಕಾರ್ಯಕ್ರಮ ಹಾಳಾಗುವುದಲ್ಲ ಎನ್ನುವ ಆಲೋಚನೆ ಅವಳಲ್ಲಿ ಆತಂಕ ಹುಟ್ಟಿಸಿತು. ನಿಮಿಷಗಳು ಕಳೆಯುತ್ತಿರುವಂತೆ ಅವರ ಪ್ರತೀಕ್ಷೆಯಲ್ಲಿಯೇ ತಾನು ಮಾಡಬೇಕಾದದ್ದನ್ನೆಲ್ಲ ಮಾಡದೆ ಸುಮ್ಮನಿದ್ದ ಅವಳಿಗೆ ಸುತ್ತಮುತ್ತ ಆಗಲೇ ಓಡಾಡುತ್ತಿದ್ದವರ ಚಿಕ್ಕಪುಟ್ಟ ಮಾತುಗಳು, ಆಟದ ಸಾಮಾನುಗಳು, ಸಲಕರಣೆಗಳ ಶಬ್ದಗಳು ಯಾವುದೂ ಕಿವಿಯೊಳಗೆ ಇಳಿಯಲಿಲ್ಲ. ಕಣ್ಣಿನಲ್ಲಿಯೂ ನೋಟದಲ್ಲಿನ ಚಲಿಸುತ್ತಿರುವ ಚಿತ್ರಿಕೆಗಳ ಹಾಗಷ್ಟೆ.

ಗಿರಿಜಮ್ಮ ಬಂದ ಕೂಡಲೆ ಇವೆಲ್ಲ ಕೊನೆಗೊಂಡವು. ಜಲಜಳ ಮುಖದಲ್ಲಿ ನಸುನಗು ಕಾಣಿಸಿಕೊಂಡು ಗೆಲುವಾಗುತ್ತಿದ್ದಂತೆ ಆಚೀಚಿನ ಶಬ್ದಗಳು, ಮಾತುಗಳು ಕಿರಿಕಿರಿ ಉಂಟುಮಾಡಿದವು. ಮ್ಯಾನೇಜರ್ ಕುರ್ಚಿಯಲ್ಲಿ ಕುಳಿತು ನಿರುದ್ದೇಶದಿಂದ ಅತ್ತಿತ್ತ ಕಣ್ಣು ಹಾಯಿಸುವುದರಳೊಗೆ ಜಲಜ ಆಕೆಯ ಬಳಿಗೆ ಬಂದು ನಸುನಕ್ಕು ನಮಸ್ಕರಿಸುವಂತೆ ತಲೆಯಾಡಿಸಿ, “ಅದೇ ಮೇಡಂ, ನಿನ್ನೆ ಮಾತಾಡಿಕೊಂಡಂತೆ ಡಾಕ್ಟರ್ ಹತ್ತಿರ ಯಾವಾಗ ಹೋಗೋದು” ಎಂದಳು.

“ಆಗ್ಲಿ, ಹೇಳಿದೀನಲ್ಲ…. ಅವ್ರು ಬರ್ಲಿ…. ಗೊತ್ತಾಗುತ್ತಲ್ಲ.” ಡಾಕ್ಟರ್ ವಸುಧಾ ದಿನನಿತ್ಯ ದೇವಸ್ಥಾನಕ್ಕೆ ಡೇ ಕೇರ್ ಮುಂದೆ ಹೋಗಬೇಕಾದ ಅಭ್ಯಾಸದ ಹಿನ್ನೆಲೆಯಲ್ಲಿ ಹೇಳಿದರು.

“ಮನೇಲಿ ಹೇಳಿದಿ ತಾನೇ?” ಎಂದು ಪೇಪರ್ ಪಕ್ಕಕ್ಕಿಡುತ್ತ ಕೇಳಿದ್ದಕ್ಕೆ ರೆಪ್ಪೆ ಮಿಟುಕಿಸದೆ ನೋಡಿದಳು ಜಲಜ.

“ಮತ್ತೆ ಮದ್ವೇಗೆಲ್ಲ ರೆಡಿ ಮಾಡೋರು ಯಾರು? ಎಲ್ಲಾ ನಡೀತಿದ್ಯಾ ….” ಎಂದು ಬಾಗಿಲಿನಿಂದಾಚೆ ದೃಷ್ಟಿ ಹರಿಸುತ್ತಾ “ಏನಂತಾನೆ ನಿನ್ನ ಚೆಲುವ” ಎಂದು ಮದುವೆಯಾಗಿರದ ಆಕೆ ನಗು ತೇಲಿಸಿದರು. ನಡು ನಲವತ್ತರ ದಢೂತಿ ಆಕಾರದ ಅವರು ತಮ್ಮ ಯೋಗ್ಯತೆಗೆ ಮೀರಿದ ಅತಿ ಅಪೇಕ್ಷೆ-ನಿರೀಕ್ಷೆಗಳಿಂದ ದೊರೆತ ಅವಕಾಶಗಳನ್ನೆಲ್ಲ ತಿರಸ್ಕರಿಸಿದ್ದರು. ಮೂಲಭೂತವಾಗಿ ತಪ್ಪು ದಾರಿ ಹಿಡಿದ ಅವರ ಆಲೋಚನೆಯ ಕ್ರಮವನ್ನು ಸರಿಪಡಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಇದೆಲ್ಲ ತಿಳಿಸಿ ಹೇಳುವುದರಿಂದ ಬಗೆಹರಿಯುವುದಿಲ್ಲ, ಸ್ವಂತಕ್ಕೇ ಅರಿವಾಗುವಂತಾದ್ದು ಎಂದು ಹತ್ತಿರದವರೂ ಆ ವಿಷಯದಲ್ಲಿ ದೂರವಾಗಿದ್ದರು. ಎಲ್ಲ ಕಳೆದುಕೊಂಡ ಮೇಲೆ ಇನ್ನೇನು ಎನ್ನುವ ಭಾವನೆಯ ಜೊತೆ ಉರುಳಿದ ವರ್ಷಗಳಲ್ಲಿ ಕಂಡ ಹಲವಾರು ವಾಸ್ತವ ವಿಷಯಗಳು ಅವರ ಮನಸ್ಸನ್ನು ಬೇರೆ ಬೇರೆ ಬಗೆಯಲ್ಲಿ ಹದಗೊಳಿಸಿವೆ. ಈಗಿರುವ ಸ್ಥಿತಿಗೆ ಅವರು ಹೊಂದಿಕೊಂಡಿದ್ದಾರೆ.

“ಇವತ್ತು ಬಂದೇ ಬರ್ತೀನಿ ಅಂತ ಹೇಳಿದಾನೆ” ಎಂದು ತನ್ನ ಬಳಿ ಬಂದ ಮೂರು ವರ್ಷದ ಮಗುವಿಗೆ ತೊಡಿಸಿದ್ದ ಶೂ ಕಳಚಿ ಬಿದ್ದಿದ್ದನ್ನು ಸರಿಪಡಿಸುತ್ತ ಹೇಳಿದಳು ಜಲಜ.

ಗಿರಿಜಮ್ಮ ಅವಳಿಗೆ ಕಳೆದ ವರ್ಷದಿಂದ ಗೊತ್ತಷ್ಟೆ. ನೋಡಿದ ಕೂಡಲೆ ಆಹಾ ಎನ್ನುವಂತಿರದಿದ್ದರೂ ಲವಲವಿಕೆಯಿಂದ, ಹಿತವಾದ ವರ್ತನೆ-ಮಾತುಗಳಿಂದ ಇಷ್ಟವಾಗಿದ್ದಳು. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದೇ ಒಂದೆರಡು ಸಲ ಏಕಾಂತದಲ್ಲಿ ಪೆಚ್ಚಾಗಿ ಕುಳಿತವಳನ್ನು ಹತ್ತಿರ ಕರೆದು ಹುರಿದುಂಬಿಸಿ ಮಕ್ಕಳನ್ನು ಒಲಿಸಿಕೊಳ್ಳಲು ಬೇಕಾದ ಅಗತ್ಯ ರೀತಿಗಳನ್ನು, ವಿಧಾನಗಳನ್ನು ಹೇಳಿಕೊಟ್ಟಿದ್ದರು. ಅವುಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ ಜಲಜಳನ್ನು ಕಂಡು ಅವರಿಗೆ ತುಂಬ ಸಂತೋಷವಾಗಿತ್ತು. ಇತರರ ಬಗ್ಗೆ ಹೇಗಿದ್ದರೂ ತನ್ನ ಮೇಲಿನ ವಿಶ್ವಾಸ ಹಾಗೂ ಪ್ರೀತಿ ಜಲಜಗೆ ತನ್ನೆಲ್ಲ ವಿಷಯಗಳನ್ನು ಹೇಳಿಕೊಳ್ಳುವುದರಿಂದ ಪ್ರಾರಂಭವಾಗಿ ಅಂತರಂಗವನ್ನು ತೆರೆದಿಡುವ ಮಟ್ಟವನ್ನೂ ತಲುಪಿತ್ತು. ಈಗೀಗ ಜಲಜಳಿಗೆ ಹಿಡಿದುಮುಟ್ಟಿದ್ದಕ್ಕೆಲ್ಲ ಗಿರಿಜಮ್ಮ ಬೇಕು. ಹಾಗಾಗಿ ಸೀನು ಸಂಬಂಧಿತ ವಿಷಯವನ್ನು ಅವರಿಂದ ಈಗ ಬೇಡ, ಆಗ ಬೇಡ ಎಂದು ತಡೆತಡೆದು ಅನಂತರ ಹೇಳಿಬಿಟ್ಟಿದ್ದಳು. ಹೇಳಿ ಹಗುರಾಗಿ ಹಕ್ಕಿಯಂತೆ ಹಾರಿದ ಅವಳ ಕಣ್ಣುಗಳನ್ನು ಕಂಡ ಗಿರಿಜಮ್ಮ ಅರೆಕ್ಷಣ ಬೆರಗಪ್ಪಳಿಸಿದವರಂತೆ ನಿಂತಿದ್ದರು. ತಕ್ಷಣವೇ ಅವಳ ಭುಜ ಹಿಡಿದು ಮೆಲ್ಲನೆ ಅಲುಗಿಸಿ ಭೂಮಿಯ ಮೇಲೆ ನಿಲ್ಲುವಂತೆ ಮಾಡಿ ನಸುನಕ್ಕು ಅವಳ ಸಂಭ್ರಮದೊಳಗೆ ಬೆರೆತಿದ್ದರು. ಇವೆಲ್ಲ ಕೆಲವು ಕ್ಷಣಗಳು ಮಾತ್ರ. ನಿಂತಂತೆಯೇ ಗಿರಿಜಮ್ಮ ಎರಡೂವರೆ ದಶಕಗಳಕ್ಕೂ ಹಿಂದೆ ಹಾರಿದ್ದರು. ಅವು ಜಲಜಳು ಹೇಳಿದ ವಿಷಯ ಮತ್ತು ಭಾವನೆಗಳಿಗೆ ಸರಿಸುಮಾರು ಸಮಾನಾಂತರವಾದಂಥವು. ತಮ್ಮ ನರನಾಡಿಗಳನ್ನು ಮೀಟಿ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದ ಆ ಗಳಿಗೆಗಳು ನಿನ್ನೆ ಮೊನ್ನೆಯಷ್ಟೇ ಜರುಗಿದಂತೆ ಕಂಡವು. ಎಲ್ಲವೂ ಸರಳ, ಸರಾಗ ಎಂದುಕೊಂಡದ್ದು ದಿಕ್ಕು ಬದಲಾಗಿ ಅನಂತರದ ಗಳಿಗೆಗಳು ಕೊರಡಾದದ್ದು ಹೇಗೆ? ತಪ್ಪಾದದ್ದೆಲ್ಲಿ ತಿಳಿಯಲಿಲ್ಲ. ಅಹಂಕಾರಗಳದ್ದೋ, ಅಪೇಕ್ಷೆಗಳದ್ದೋ, ನಿರ್ಧಾರ ತೆಗೆದುಕೊಳ್ಳುವ ಅಸಮರ್ಥತೆಯೋ, ಎಲ್ಲ ಗೊಂದಲ. ಅನಂತರ ವರ್ಷಗಳು ಅವರ ಕಣ್ಣೆದುರು ಕರಗುತ್ತಲೇ ಹೋಯಿತು.

“ಗುಡ್ ಲಕ್” ಎಂದಷ್ಟೇ ಹೇಳಿ ತಮ್ಮ ಬೆಂಬಲವಿದೆ ಎಂದು ಸೂಚಿಸಿದ್ದರು. ಆ ಮಾತು ಜಲಜಳಿಗೆ ಎಲ್ಲಿಲ್ಲದ ಚೈತನ್ಯ ಕೊಟ್ಟಿತ್ತು. ಕನಸಿನ ಲೋಕದ ಬಾಗಿಲು ತೆರೆದು ಪುಟಿಯುವಂತಾಗಿದ್ದಳು. ಅವನ ಫ್ಯಾಕ್ಟರಿ ಕೆಲಸ, ಒಂದಿಬ್ಬರು ಸ್ನೇಹಿತರು, ದೂರದೂರದಲ್ಲಿರುವ ಅಪ್ಪ-ಅಮ್ಮ ಮುಂತಾದವುಗಳ ಬಗ್ಗೆ ತಿಳಿದ ಅರೆ-ಬರೆ ವಿಷಯಗಳನ್ನು ಅವರಿಗೆ ತಿಳಿಸಿದ್ದಳು.

ಗಿರಿಜಮ್ಮನಿಗೆ ಸೀನು ಮೊದಲ ಬಾರಿ ಕಂಡಾಗ ಸಾಮಾನ್ಯ ಹುಡುಗನಂತೆ ಕಂಡಿದ್ದ. ಕೇಳಿದ್ದಕ್ಕೆ ಕಡಿಮೆ ಪದಗಳಲ್ಲಿ ಉತ್ತರಿಸಿದ್ದ. ಅದು-ಇದು ಕೇಳಿ ಮಾತು ಬೆಳೆಸಬೇಕೆಂದು ಆಕೆಗನಿಸಲಿಲ್ಲ. ಪರಸ್ಪರ ಇಷ್ಟವಾದದ್ದು ಮುಖ್ಯ. ಇನ್ನುಳಿದಂತೆ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಹೊಂದಿಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದು ಸುಮ್ಮನಾದರು. ಆದರೆ ಹಾಗೆಯೇ ಬಿಡದೆ, “ನಮ್ಮ ಜಲಜ ಬಹಳ ಹುಷಾರು… ತುಂಬಾ ನಾಜೂಕು, ಸೂಕ್ಷ್ಮ” ಎಂದಷ್ಟೇ ಹೇಳಿ ತಾವೂ ನಕ್ಕು, ಅವನನ್ನೂ ನಗಿಸಿದ್ದರು.

ರಂಪ ಮಾಡುತ್ತಿದ್ದ ಮಗುವೊಂದಕ್ಕೆ ಅದು ತಂದಿದ್ದ ಬ್ಯಾಗೊಳಗಿನಿಂದ ಬಾಟಲಿಯಿಂದ ನೀರು ಕುಡಿಸಿ ಸಮಾಧಾನ ಮಾಡಿ ಕಣ್ಣೊರಿಸಿ ಬಂದ ಜಲಜಳಿಗೆ “ಅವ್ನು ಬರ್ತಾನಲ್ಲ …. ಈ ಸರ್ತಿ ಎಲ್ಲಾನೂ ಸರಿಯಾಗಿ ಡಿಸೈಡ್ ಮಾಡ್ಬಿಡು” ಎಂದರು.

“ನಾನು ಹೇಳ್ತಾನೇ ಇದ್ದೀನಿ.” ಅವಳ ಮಾತಿನಲ್ಲಿ ದೃಢತೆ ಕಾಣದೆ ನೋವಿನೆಳೆ ಕಂಡು ಗಿರಿಜಮ್ಮ ಪ್ರಶ್ನಿಸುವಂತೆ ನೋಡಿದರು. ಜಲಜ ಅವರಿಗೆ ತುಂಬ ಸೂಕ್ಷ್ಮವೊಂದನ್ನು ತಿಳಿಸಬೇಕೆಂದು ಅವರ ಕಡೆ ತಿರುಗಿದಾಗ ಬಾಗಿಲಲ್ಲಿ ಕೆಲಸದಾಕೆ ಕಾಣಿಸಿಕೊಂಡು “ಏನ್ರವ್ವಾ ನಮ್ಮನೆಯಾಗಾದಂಗೆ ಇಲ್ಲೂ ಇಲಿ ಕಾಟ ಇಪರೀತ ಆಗದೆ…. ಸುಮ್ಕೆ ಬಿಟ್ರೆ ಅಷ್ಟೆ… ಎಂಥದೂ ಉಳಿಯಾಕಿಲ್ಲ” ಎಂದಳು.

“ಅಲ್ಲಿ-ಇಲ್ಲಿ ಒಂದೆರಡು ಇಲಿ ಬೋನು ತಂದಿಟ್ರೆ?” ಎಂದರು ಗಿರಿಜಮ್ಮ.

“ಅದ್ಕೆಲ್ಲ ಗಿಟ್ಟಾಂಗಿಲ್ಲ…. ಇತ್ತೀಚ್ಗೆ ಬಾಳ ಆಗದೆ…. ಪಾಸಾಣನೇ ಗತಿ…. ನಾವು ಮಾಡ್ದಂಗೆ…. ಅಕಾ ನೋಡಿ ಅಲ್ಲಿ ಮಡಿಗಿವ್ನಿ” ಎಂದು ಮೂಲೆಲ್ಲಿ ಇಟ್ಟದ್ದನ್ನು ತೋರಿಸಿದಳು.

ಜಲಜಳಿಗೆ ಸೀನು ಜೊತೆಗಿನ ಭೇಟಿಗೆ ಸಿಗುವ ಪ್ರತ್ಯೇಕವಾದ ವೇಳೆ, ಸ್ಥಳ, ಅವಕಾಶ ಕಡಿಮೆಯಿತ್ತು. ಸೀನುಗೂ ಕೂಡ ಅಷ್ಟೆ. ಮನೆಯಲ್ಲಿ ಭೇಟಿ ಅಸಾಧ್ಯವೆಂದು ಅವಳಿಗೆ ಗೊತ್ತಿತ್ತು. ಹೀಗಾಗಿ ಗಿರಿಜಮ್ಮನವರ ಒಪ್ಪಿಗೆ ಪಡೆದು ಡೇ-ಕೇರ್ ನಲ್ಲಿಯೇ ಕುಳಿತು ಮಾತು ಇತ್ಯಾದಿಯಲ್ಲಿ ಸಮಯ ಕಳೆಯುತ್ತಿದ್ದರು. ಯಾವುದಾದರು ಸದ್ದು, ಮಾತು ಕೇಳಿಸಿದರೆ ದೂರ ಸರಿಯುತ್ತಿದ್ದ ಅವರು ಉಳಿದಂತೆ ತಮಗಿಷ್ಟ ಬಂದಂತೆ ಇರುತ್ತಿದ್ದರು. ಅವರೇನು ಮಾಡುತ್ತಿರಬಹುದೆಂಬ ಅನುಮಾನ ಗಿರಿಜಮ್ಮನಿಗಿದ್ದರೂ ಜಲಜಳ ಬಗ್ಗೆ ಅವರಿಗೆ ಅತೀವ ಭರವಸೆಯಿತ್ತು. ಇದನ್ನೆಲ್ಲ ಮೀರಿ ತಾವು ಪ್ರೇಮಕ್ಕೆ ಒಳಗಾದ ಯುವ ಜೋಡಿಗೆ ಅವಕಾಶ ಮಾಡಿಕೊಡುತ್ತಿರುವುದಕ್ಕೆ ವಿಚಿತ್ರ ಸಂತೋಷವಿತ್ತು. ಇಷ್ಟಾದರೂ ಅವರಿಗೆ ಇತರರು ತಮಗನಿಸಿದ್ದನ್ನು ಒಪ್ಪುವುದಿಲ್ಲ ಎಂಬ ತಿಳಿವಳಿಕೆಯೂ ಇತ್ತು. ಆದರೆ ಅವರಿಗೆ ತಮ್ಮ ಮೇಲೆ, ತಾವು ನಂಬಿದ್ದರ ಮೇಲೆ ಹುಚ್ಚು ಭರವಸೆ.

ತನಗೆ ಎಲ್ಲ ಬಗೆಯಲ್ಲಿ ಬೆಂಬಲಿಸಿರುವ ಗಿರಿಜಮ್ಮನಿಗೆ ತನಗೆ ಮಾತ್ರ ತಿಳಿದಿರುವ ಅತ್ಯಂತ ಮಖ್ಯವಾದ ಲೆಕ್ಕಾಚಾರದ ವಿಷಯವನ್ನು ತಿಳಿಸದೇ ಇರುವುದು ಎಳ್ಳಷ್ಟೂ ಸರಿಯಲ್ಲ. ಅಷ್ಟೇಕೆ, ಒಂದು ವಿಧದಲ್ಲಿ ಅವರ ವಿಶ್ವಾಸಕ್ಕೆ ದ್ರೋಹ ಬಗೆದಂತೆ, ಅವರ ವಾತ್ಸಲ್ಯಕ್ಕೇ ಅರ್ಹವಿಲ್ಲದವಳೆಂಬ ಅನ್ನಿಸಿಕೆ ಒತ್ತರಿಸಿ ಬಂದು ಜಲಜಳ ಮನಸ್ಸು ಕುಗ್ಗಿತು. ಸುತ್ತ ಒಂದಿಲ್ಲೊಂದು ರೀತಿಯಲ್ಲಿ ಮಕ್ಕಳು ಉಂಟುಮಾಡುತ್ತಿದ್ದ ಹೆಚ್ಚಿನ ಪ್ರಮಾಣದ ವಿವಿಧ ಬಗೆಯ ಶಬ್ದಗಳು ಅವಳಿಗನಿಸಿದ್ದನ್ನು ಇನ್ನಷ್ಟು ಹೆಚ್ಚಿಸಿತು. ಏನು ಮಾಡಲೂ ತೋಚದಂತಾಗಿ ತಾನು ನೋಡಿಕೊಳ್ಳಬೇಕಾದ ಮಕ್ಕಳ ಗುಂಪನ್ನು ಸುಧಾರಿಸಲು ಸಾಧ್ಯವಾಗದೆ, ಜೊತೆಗೆ ಕೆಲಸ ಮಾಡುವಾಕೆಯ ಕಡೆ ತಿರುಗಿ, “ಸ್ವಲ್ಪ ಹೆಲ್ಪ್ ಮಾಡ್ತೀಯಾ, ಪ್ಲೀಸ್” ಎಂದು ಅನಿವಾರ್ಯವಾಗಿ ಕೇಳಿದಳು. `ಓ ಹೋ’ ಎಂದು ಮಾರುದ್ದ ಕೈ ಮಾಡಿ ತಾನು ನೋಡಿಕೊಳ್ಳುವ ಮಕ್ಕಳ ಜೊತೆ ತನ್ನವನ್ನೂ ಸೇರಿಸಿಕೊಳ್ಳುತ್ತಿದ್ದ ಹಾಗೆ ತಾನೇಕೆ ಹೀಗೆ ಹುಂಬಳಂತೆ ವರ್ತಿಸುತ್ತಿದ್ದೇನೆ. ಎಲ್ಲವೂ ಇವತ್ತು ಇತ್ಯರ್ಥವಾಗುತ್ತಲ್ಲ. ಅವನ ಮಾತಿಗಿಂತ ತನ್ನ ಬಗ್ಗೆ ನಡೆದುಕೊಳ್ಳುವ ರೀತಿ ನೂರಕ್ಕೆ ನೂರು ಸಹಕಾರಿಯಾಗಿದೆಯಲ್ಲ. ಹೀಗೆ ಸುಮ್ಮನೆ ತಳಮಳಗೊಳ್ಳುವುದು ಸುತಾರಾಂ ಸರಿಯಿಲ್ಲ ಎನ್ನುವ ಆಲೋಚನೆ ಅವಳಲ್ಲಿ ತೀವ್ರತರ ಭಾವನೆ ಹುಟ್ಟಿಸಿ ಮೊದಲಿನದನ್ನು ನಿರ್ನಾಮಗೊಳಿಸುತ್ತದೆ.

ಆಡುತ್ತಿದ್ದ ಮಗುವೊಂದು ಢಿಕ್ಕಿ ಹೊಡೆದದ್ದರಿಂದ ಜಲಜ ಭೂಮಿಗೆ ಬಂದಳು. ಆ ಮಗುವನ್ನು ಸರಿಯಾಗಿ ಹೋಗುವಂತೆ ಮಾಡಿ ಪಕ್ಕಕ್ಕೆ ಕತ್ತು ತಿರುಗಿಸಿದಾಗ ಡಾಕ್ಟರ್ ವಸುಧಾ ರಸ್ತೆಯಲ್ಲಿ ಹೋಗುತ್ತಿದ್ದದ್ದು ಕಂಡಿತು. ಮಾಡುತ್ತಿದ್ದ ಕೆಲಸವನ್ನು ಹಾಗೆಯೇ ಬಿಟ್ಟು ಅವರಿಗೆ ಕಾಣಿಸುವಷ್ಟು ದೂರದಲ್ಲಿ ನಿಂತು ನಮಸ್ಕರಿಸಿದಳು. ಅವರು ಇನ್ನೂ ಬಳಿಗೆ ಬಂದಾಗ “ಬಂದು ಕಾಣ್ತೀನಿ, ಡಾಕ್ಟ್ರೇ” ಎಂದಳು. ಅವರು ನಸುನಗುತ್ತ ಮುಂದೆ ಸಾಗಿದರು.

ಗಿರಿಜಮ್ಮ ಕಂಡ ಕೂಡಲೆ, “ಡಾಕ್ಟ್ರು ಬಂದಿದಾರೆ. ಯಾವಾಗ ಹೋಗೋಣ” ಎಂದು ಸ್ವಲ್ಪ ತವಕದಿಂದಲೇ ಕೇಳಿದಳು.

“ಎಷ್ಟು ಅರ್ಜೆಂಟ್ ನೋಡು…. ಎಲ್ಲ ಸರಿ ಇರತ್ತೆ ಸುಮ್ನಿರು” ಎಂದು ನಗು ಬೆರೆಸಿದರು.

ಪೋಷಕರು ಮಕ್ಕಳನ್ನು ಸ್ಕೂಟರು, ಕಾರುಗಳಲ್ಲಿ ಕರೆದುಕೊಂಡು ಹೋಗುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗುವ ವ್ಯಾನ್ ಗಳಲ್ಲಿ ಮಕ್ಕಳು ಕುಳಿತು ಹೊರಡುವುದು ಮುಂತಾದವು ಮುಗಿಯುವಷ್ಟರಲ್ಲಿ ಸಾಕಷ್ಟು ಸಮಯವಾಗಿತ್ತು. ಜಲಜ ಹೇಳಿದ ಕೆಲಸದಾಕೆ ಇಲಿ ಪಾಷಾಣದ ಕ್ಯಾರಿ ಬ್ಯಾಗನ್ನು ಅಲ್ಲಿಯೇ ಬಿಟ್ಟದ್ದು ಲಕ್ಷಿಯ ಗಮನಕ್ಕೆ ಬಂತು. ಮತ್ತೊಮ್ಮೆ ಗಿರಿಜಮ್ಮನವರನ್ನು ಅವಸರಪಡಿಸಿ ಆಸ್ಪತ್ರೆಯ ಗೈನಕಾಲಜಿ ವಿಭಾಗದಲ್ಲಿ ಕುಳಿತುಕೊಳ್ಳುವ ವೇಳೆಗೆ ಅಲ್ಲಿ ಇನ್ನಿಬ್ಬರಿದ್ದರು. ನರ್ಸುಗಳು, ಸಹಾಯಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಅವರು ಮಾಡುವುದನ್ನು ಸವಿಸ್ತಾರವಾಗಿ ನೋಡಬೇಕೆನಿಸಿತು. ಆದರೆ ಅತ್ತ ಕಡೆ ಕಣ್ಣು ಹಾಯಿಸಿದ ಹತ್ತು ಸೆಕೆಂಡಿನಲ್ಲಿ ಬೇಸರ ತಂದಿತು. ಆನಂತರದ ಕಾಯುವಿಕೆ ಜಲಜಳಿಗೆ ಭಾರವೆನಿಸತೊಡಗಿತು. ಸುಮ್ಮನೆ ಕತ್ತೆತ್ತಿ ತಾರಸಿ ನೋಡಿದ ಅವಳ ಭುಜದ ಮೇಲೆ ಕೈಯಿಟ್ಟ ಗಿರಿಜಮ್ಮ ಸಣ್ಣಗೆ ತಲೆ ಹಾಕಿದರು. ಜಲಜ ತೆಳುನಗೆ ಬೀರಿದಳು.

ತನ್ನ ಸರದಿ ಬಂದಾಗ ಗಿರಿಜಮ್ಮನ ಜೊತೆ ಡಾಕ್ಟರ ಕೊಠಡಿಯನ್ನು ಪ್ರವೇಶಿಸಿ ಮತ್ತೆ ಹೊರಗೆ ಬಂದಾಗ ಅವಳು ಅವಳಾಗಿರಲಿಲ್ಲ. ಮೈಯೆಲ್ಲ ಯೋಚನೆ ತುಂಬಿ ಮೌನದಿಂದ ಮತ್ತೆ ಸಾಲಾಗಿದ್ದ ಕುರ್ಚಿಯಲ್ಲಿ ಕುಳಿತಳು.

“ಈಗೇನು ಅಂಥ ಅಗ್ಬಾರದ್ದು ಆಗಿರೋದು…. ಇದೆಲ್ಲ ನಿಜವಾಗ್ಲೂ ಸೀರಿಯಸ್ ಅಲ್ಲ…. ಒಂದು ಸ್ವಲ್ಪ ಮುಂಚೆ ಅಷ್ಟೇ….” ಅವಳ ಮೌನದ ಭಾರ ತಾಳಲಾರದೆ ಗಿರಿಜಮ್ಮ ಹೇಳಿದರು.

“ನಾನು ಮುಂಚೇನೇ ನಿಮ್ಗೆ ಇಷ್ಟಾಗಿದೆ ಅಂತ ಹೇಳ್ಬೇಕಾಗಿತ್ತು.”

“ಅದ್ರಿಂದೇನೂ ವ್ಯತ್ಯಾಸ ಆಗ್ತಿರ್ಲಿಲ್ಲ…. ಹೋಗ್ಲಿ ಬಿಡು…. ಅವ್ನು ಬರ್ತಾನಲ್ಲ…. ಪಟ್ಟಾಗಿ ಹಿಡ್ಕೊಂಡು ಮುಂದಿನ ವಾರಾನೋ, ಆಚೆ ವಾರಾನೋ ಶಾಸ್ತ್ರ ಮುಗಿಸಿ ಬಿಡಿ ….” ಅವಳಲ್ಲಿ ಲವಲವಿಕೆ ತುಂಬಲು ಪ್ರಯತ್ನಿಸಿದರು ಗಿರಿಜಮ್ಮ.

ರೂಮಿನಿಂದ ಹೊರಗೆ ಬಂದ ಡಾಕ್ಟರ್ ವಸುಧಾ ಹತ್ತಿರದಲ್ಲಿ ಕಂಡ ಜಲಜಳ ಕಡೆ ತಿರುಗಿ, “ಟೇಕ್ ಕೇರ್” ಎಂದು ಗಿರಿಜಮ್ಮಳ ಕಡೆ ನಗು ಬೀರಿ ಮತ್ತೊಂದು ಕಡೆ ಹೋದರು.

“ಡಾಕ್ಟ್ರು ಕೂಡ ನಮ್ಮ ಜೊತೇನೇ ಇದಾರೆ. ಮುಖ್ಯವಾದದ್ದನ್ನು ನೋಡ್ಕೋ ಸಾಕು. ಉಳಿದದ್ದು ಎಲ್ಲ ತನ್ನಷ್ಟಕ್ಕೆ ತಾನು ಸರಿ ಹೋಗತ್ತೆ…. ಗೊತ್ತಾಯ್ತು ತಾನೆ. ಡಾಕ್ಟ್ರು ಕಡ್ಡಿ ಮುರಿದ ಹಾಗೆ ಹೇಳಿದಾರೆ. ಯಾವುದೇ ವಿಷಯಕ್ಕೂ ಬೇರೆ ದಾರೀನೇ ಇಲ್ಲ. ನಿನ್ನ ವಿಷಯಕ್ಕಷ್ಟೇ ಅಲ್ಲ. ನಿನ್ನ ಮತ್ತು ನಿನ್ನೊಳಗಿರುವುದರ ವಿಷಯಕ್ಕೆ.”

“ಚೆನ್ನಾಗಿ ಗೊತ್ತಾಗಿದೆ” ಅವಳು ಈಗ ಸ್ವಲ್ಪ ಸದೃಢವಾಗಿ ಹೇಳಿದಳು.

“ಅಷ್ಟಾದ್ರೆ ಮುಗೀತು…. ಏನೂ ಯೋಚ್ನೆ ಮಾಡ್ಬೇಡ, ಗಾಬರಿ ಆಗ್ಬೇಡ …. ಬೇಕಿದ್ರೆ ಹೇಳು. ನಾನೇ ಬಂದು ನಿಮ್ಮಮ್ಮನ ಹತ್ರ ಹೇಳ್ತೀನಿ, ಅವನನ್ನೂ ಕೂಡಿಸಿಕೊಂಡು” ಎಂದು ಉತ್ಸಾಹದಿಂದ ಹೇಳಿದರು.

ವಾಪಸು ಬರುವಾಗ ತಿಂಡಿಯ ಅಂಗಡಿಯ ಬಳಿ ಜಲಜ ವೇಗ ಕಡಿಮೆ ಮಾಡಿ ಅತ್ತ ನೋಟ ಬೀರಿದಾಗ ಸೀತೆ ಕೂಗಿ ಕರೆದಳು.

“ಬೆಳಿಗ್ಗೆ ನೀನು ಮೊಬೈಲ್ ಇಲ್ಲೇ ಬಿಟ್ಟು ಹೋಗಿದ್ದೆ …. ಒಂದೆರಡು ಸಲ ರಿಂಗ್ ಆಗಿತ್ತು …. ನಾನು ತೆಗೀಲಿಲ್ಲ” ಎಂದು ಸೀತೆ ಅದನ್ನು ಕೊಟ್ಟಳು. ಜಲಜ ಅವಸರದಿಂದ ಸೀನು ಫೋನ್ ಬಂದಿರಬಹುದೇ ಎಂಬ ನಿರೀಕ್ಷೆಯಲ್ಲಿ ನಿಂತಲ್ಲೇ ನೋಡಿದಳು. ಅವನು ಎರಡು ಸಲ ಪ್ರಯತ್ನಿಸಿದ್ದ. ಜಲಜಗೆ ಹುರುಪು ಚಿಮ್ಮಿತು. ಅಲ್ಲಿಂದಲೇ ಅವನಿಗೆ ಫೋನಾಯಿಸಿದಳು. ಒಂದಲ್ಲ ಎರಡು-ಮೂರು ಬಾರಿ. ಸಿಗಲಿಲ್ಲ. ಪೆಚ್ಚಾದಳು.
ಡೇ ಕೇರ್ ಗೆ ತಲುಪಿದಾಗ ಗಿರಿಜಮ್ಮ ಹೊರಡಲು ಸಿದ್ಧವಾಗುತ್ತಿದ್ದದ್ದು ಕಾಣಿಸಿತು.

“ನಾನಿಲ್ಲೆ ಇರ್ತೀನಿ …. ಅವ್ನಿಗೆ ಕಾಯ್ತೀನಿ …. ಬಂದೇ ಬರ್ತಾನೆ.”

“ಯಾವುದಕ್ಕೂ ಫೋನ್ ಮಾಡು” ಎಂದು ಹೆಜ್ಜೆ ಹಾಕಿದರು ಗಿರಿಜಮ್ಮ.

ಜಲಜ ಬಾಗಿಲ ಬಳಿಯೇ ಕುರ್ಚಿ ಎಳೆದುಕೊಂಡು ಕುಳಿತಿದ್ದಳು. ಸೆಕೆಂಡುಗಳು ಉರುಳುತ್ತಿದ್ದವು. ಸೂರ್ಯನ ಪ್ರಖರತೆ ಹೆಚ್ಚುತ್ತಿತ್ತು. ಬೇಸರದ, ಆತಂಕದ ಹಾಳೆಗಳು ಮನಸ್ಸಿನ ಮೇಲೆ ಒಂದು, ಇನ್ನೊಂದು, ಮತ್ತೊಂದು ಪೇರಿಸುತ್ತಲೇ ಹೋಗುತ್ತಿತ್ತು. ಸುಮ್ಮನೆ ಒಳಗೆ ಕಣ್ಣಾಡಿಸಿದ ಅವಳಿಗೆ ಬಣ್ಣ ಬಣ್ಣದ ಹಾಳೆಗಳು ಮಂಕಾಗಿ ಹರಡಿ ಬಿದ್ದಂತೆ ಕಂಡಿತು. ಜೊತೆಗೆ ಮಕ್ಕಳು ಆಟವಾಡುವ ಬಣ್ಣದ ಚೆಂಡುಗಳು, ಬಣ್ಣದ ಪೆನ್ಸಿಲ್ ಗಳು, ಕ್ರೆಯಾನುಗಳು, ಚಾಕ್ ಪೀಸ್ ಗಳು ದಿಕ್ಕಿಲ್ಲದಂತೆ ಚದುರಿ ಬಿದ್ದಿದ್ದವು. ಹೊರಗಡೆ ನೋಡಿದ ಅವಳಿಗೆ ಕಾಂಪೌಂಡಿನಾಚೆ ರಸ್ತೆಯಲ್ಲಿ ಓಡುವ ವಾಹನಗಳಲ್ಲಿ ಕುಳಿತವರ ಚಲಿಸುವ ತಲೆ ಮಾತ್ರ ಕಾಣುತ್ತಿತ್ತು. ಇದೊಂದು ಬಗೆಯಾದರೆ, ಗೇಟ್ ನ ಕೆಳಭಾಗ ಮಾತ್ರ ಮುಚ್ಚದಿದ್ದುದರಿಂದ ಕಾಣಿಸುತ್ತಿದ್ದದ್ದು ನಡೆಯುವವರ ಕಾಲುಗಳು ಮಾತ್ರ. ಉಳಿದಂತೆ ಅವರ ಹೃದಯ, ಇತ್ಯಾದಿ ಭಾಗಗಳು ದೃಷ್ಟಿಗೆ ಎಟುಕುವಂತಿರಲಿಲ್ಲ. ಮತ್ತಷ್ಟು ಕತ್ತು ತಿರುಗಿಸಿದಾಗ ಕೆಲಸದಾಕೆ ಮರೆತು ಬಿಟ್ಟು ಹೋದ ಇಲಿ ಪಾಷಾಣವಿರುವ ಕ್ಯಾರಿ ಬ್ಯಾಗ್ ಮೂಲೆಗೊರಗಿದ್ದು ಕಂಡಿತು.

ತಲ್ಲಣ ತುಂಬಿ ಏನೊಂದೂ ಸ್ಪಷ್ಟವೆನಿಸದಂತಿದ್ದ ಜಲಜಳನ್ನು ಎಚ್ಚರಿಸುವಂತೆ ಮೊಬೈಲ್ ರಿಂಗಾಯಿತು. ತಟ್ಟನೆ ನೋಡಿದರೆ ಸೀನುವಿನದು. ಅವನು ಬರುತ್ತಿದ್ದೇನೆಂದು ಹೇಳಿ ಮುಂದುವರಿಸುವುದನ್ನು ತಡೆದು ಅವಳು “ಡಾಕ್ಟರ್…. ಡಾಕ್ಟರ್” ಎಂದು ಉದ್ವೇಗದಿಂದ ಬಡಬಡಿಸಿದಳು. ಫೋನ್ ಕಟ್ಟಾಗಿತ್ತು.

ಈಗವಳಿಗೆ ಸಂಭ್ರಮ. ಕಂಡದ್ದಕ್ಕೆಲ್ಲ, ಕೇಳಿದ್ದಕ್ಕೆಲ್ಲ ಮಿರುಗು-ಬೆರಗಿನ ಲೇಪ. ಕುಳಿತಿದ್ದರೂ ಕುಣಿಯುತ್ತಿದ್ದ ಅನ್ನಿಸಿಕೆ. ಕ್ಷಣಗಳಿಗೆ ಬಗೆ ಬಗೆ ಬಣ್ಣದ ರೆಕ್ಕೆ. ಜೊತೆಗೆ ಹಿತವಾದ ಇನಿದನಿಯ ಆಲಾಪ… ಅವಳು ಸೀನುಗೆ ಹೇಳಬೇಕಾದ ವಿಷಯಗಳ ಪಟ್ಟಿ, ಅವು ಅವನಿಗೆ ಮನದಟ್ಟಾಗಬೇಕಾದರೆ ಉಪಯೋಗಿಸಬೇಕಾದ ಮಾತುಗಳು ಇವುಗಳ ಪಟ್ಟಿಯನ್ನು ಸಿದ್ಧಪಡಿಸುತ್ತ ಕುಳಿತಳು.

ಗೇಟ್ ಬಳಿ ಶಬ್ದವಾಗಿ ಸೀನು ಒಳಗೆ ಬಂದ. ಎಣ್ಣೆಗೆಂಪಿನ ಸುಮಾರು ಐದೂಮುಕ್ಕಾಲು ಅಡಿ ಎತ್ತರದ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡವೇ ಎನಿಸುವ ಕಣ್ಣುಗಳ ತುಂಬುಗೂದಲಿನ, ಪೀಚೆಂದು ಕಾಣಿಸದ ಅವನು ಉದ್ದದ ಸದೃಢ ಹೆಜ್ಜೆಗಳನ್ನಿಡುತ್ತ ಬರುತ್ತಿದ್ದದ್ದು ಕಂಡು ಅವಳಿಗೆ ಮುದವೆನಿಸಿತು.

ಅವಳ ಹತ್ತಿರಕ್ಕೆ ಇನ್ನೊಂದು ಕುರ್ಚಿಯನ್ನೆಳೆದು ಕುಳಿತುಕೊಳ್ಳುತ್ತ, “ಕೆಟ್ಟ ಬಿಸಿಲು” ಎಂದು ದೀರ್ಘವಾಗಿ ಉಸಿರೆಳಿದು ಬಿಟ್ಟಾಗ ಅವನ ಕತ್ತು, ಹಣೆಯ ಮೇಲೆ ತೆಳುವಾಗಿ ಬೆವರಂಟಿದ್ದು ಕಾಣಿಸಿತವಳಿಗೆ. ಅಲ್ಲಿ ಕುರ್ಚಿಯ ಮೇಲೆ ಹಾಕಿದ್ದ ಕೆಂಪು ಬಣ್ಣದ ಬಟ್ಟೆಯಿಂದ ಒರೆಸಿಕೊಂಡ. ಜಲಜಳಿಗೆ ಅವನ ಇಲಿ ಕಡಿದ ಟೋಪಿ ನೆನಪಾಯಿತು. ಬ್ಯಾಗಿನಿಂದ ತೆಗೆದು ಅದರಲ್ಲಿ ಇಲಿ ಕಡಿತದಿಂದ ಆಗಿದ್ದ ಸಂದಿಗಳ ಮೂಲಕ ನೋಡಿ ಅಲ್ಲಲ್ಲಿ ಕತ್ತರಿಸಿದಂತೆ ಅವನ ಮುಖ ಕಂಡು ಕಿಸಕ್ಕೆಂದು ನಕ್ಕಳು.

ಅವನು ಅದನ್ನು ಅವಳಿಂದ ಕಿತ್ತುಕೊಳ್ಳುತ್ತಿದ್ದಂತೆ, “ಹಾಕ್ಕೋ, ಕಿರೀಟದ ಹಾಗಿದೆ” ಎಂದು ಮತ್ತೆ ನಕ್ಕಳು.
“ಕರೆಕ್ಟ್, ನಾನೀಗನಿಜವಾಗ್ಲೂ ಚಕ್ರವರ್ತೀನೇ. ನಿಂಗೆ ಹ್ಯಾಗೆ ಗೊತ್ತಾಯ್ತು?” ಎಂದು ರೇಗಿಸುತ್ತ ಹುಬ್ಬೇರಿಸಿ ನಸುನಕ್ಕು ಅದನ್ನು ಉಂಡೆ ಮಾಡಿ ಎಸೆದ.

ಅನಂತರ ಜಲಜ, “ಬೆಳಿಗ್ಗೆ ತಿಂಡಿ ಆಗಿದೆಯಾ?” ಎಂದಳು.

“ಎಲ್ಲಾಗಿದೆ? …. ಸುತ್ತಾನೇ ಇದೀನಿ …. ಹೊಟ್ಟೆ ಬೇರೆ ಸರಿಯಿಲ್ಲ” ಎಂದು ಪ್ಯಾಂಟ್ ಜೇಬಿನಿಂದ ಕರ್ಚೀಫ್ ತೆಗೆದು ಹಣೆ ಒರೆಸಿಕೊಂಡ.

“ಒಂದ್ನಿಮಿಷ ಬಂದೆ ಇರು” ಎಂದು ಎದ್ದಳು

ದಾಪುಗಾಲು ಹಾಕಿ ತಿಂಡಿಯಂಗಡಿ ತಲುಪಿದಳು. ಸೀತೆ ಅಗಲದ ತಟ್ಟೆಯ ತುಂಬ ಸಮೋಸ ಕರಿದಿಟ್ಟಿದ್ದಳು. ಅದಲ್ಲದೆ ಬೇರೇನೂ ಇರಲಿಲ್ಲ. ಪೇಪರಿನಲ್ಲಿ ಚಟ್ನಿಯ ಜೊತೆ ನಾಲ್ಕು ಸಮೋಸ ಸುತ್ತಿದ ಕೂಡಲೆ ಸೀನುಗೆ ಪೆಪ್ಸಿ ಎಂದರೆ ಪ್ರಾಣ ಎನ್ನುವುದು ನೆನಪಾಯಿತು. ಪಕ್ಕದ ಅಂಗಡಿಯ ಫ್ರಿಜ್ ನಲ್ಲಿದ್ದ ಎರಡು ಬಾಟಲಿ ಜೊತೆಗಿರಿಸಿಕೊಂಡು ಬಂದು, “ಮೊದ್ಲು ಹೊಟ್ಟೆಗಷ್ಟು ಹಾಕ್ಕೊ” ಎಂದಳು.

ಅವಳ ಕಕ್ಕುಲಾತಿ ಅವನಿಗೆ ನಸುನಗೆ ತರಿಸಿತು. ಸಮೋಸ ಬಾಯಿಗಿಟ್ಟುಕೊಳ್ಳುತ್ತಲೇ, “ಪೊಜಿಷನ್ ಏನಂತ ನಂಗೊತ್ತು” ಎಂದ ನಸುನಗು ತೇಲಿಸಿ.

ಜಲಜಳಿಗೆ ಆಶ್ಚರ್ಯ, ತೀಕ್ಷ್ಣವಾಗಿ ನೋಡಿದಳು.

ಇಂದಷ್ಟೇ ತನಗೆ ತಿಳಿದ ಸಂಗತಿ, ತಾನು ಇದುವರೆಗೂ ತಿಳಿಸದ ವಿಷಯ ಅವನನ್ನು ತಲುಪಿದ್ದು ಹೇಗೆ? ಏನಾದರೂ ವಿವರಿಸಲಾಗದ ಮುನ್ಸೂಚನೆಯೇ? ತಿಳಿಯದಾದಳು.

“ಒಳ್ಳೇದಾಯ್ತು …. ಹಾಗಿದ್ರೆ ಇವತ್ತು ಎಲ್ಲಾನೂ ಡಿಸೈಡ್ ಮಾಡ್ಬಿಡೋಣ, ಅಂದ್ಕೊಂಡ ಹಾಗೆ ….” ಎಂದಳು ಸಾವರಿಸಿಕೊಂಡು.

“ಮದ್ವೆ ಮಾಡ್ಕೊಳ್ತೀನಿ ಅಂತ ಹೇಳಿದೀನಲ್ಲ …. ಅವಸರ ಪಟ್ರೆ ಹೇಗೆ?”…. ಫ್ಯಾಕ್ಟರೀದು ಫೈನಲ್ ಸ್ಟೇಜ್ನಲ್ಲಿದೆ, ಈ ಸರ್ತಿ ಪಕ್ಕಾ…. ಅಲ್ಲಿಗೆ ಮುಗೀತಲ್ಲ?”

ಅವನ ಮುಖ ಚಹರೆ ಭರವಸೆ ಮೂಡಿಸಿದರೂ ನಂಬಿಕೆ ಹಟ್ಟಿಸುವಂತಿರಲಿಲ್ಲ. ಜಲಜಳಿಗೆ ಗೊಂದಲ ಮುತ್ತಿತು. ಎಂದಿನಂತೆ ಎಲ್ಲವೂ ಅಸ್ಪಷ್ಟ. ಪರಿಸ್ಥಿತಿಯ ತೀವ್ರತೆಯನ್ನು ಅವನು ಸ್ವೀಕರಿಸಿರುವ ಬಗೆ ಹೇಗೆ? ತಮ್ಮ ಭವಿಷ್ಯ ಕುರಿತು ಆಲೋಚನೆಗಳೇನು? ಅವಳಿಗೇನೂ ತಿಳಿಯದಾಯಿತು.

“ತಿಂಗಳುಗಟ್ಲೆ ನೀನು ಹೀಗೇ ಹೇಳ್ತಿದೀಯ …. ಈಗಂತೂ ಸಾಧ್ಯಾನೇ ಇಲ್ಲ …. ನನ್ನ ವಿಷಯ ಗೊತ್ತಾದ ಮೇಲೆ ಕೂಡ ಹೀಗೆ ಹೇಳಿದ್ರೆ?” ದನಿ ಎತ್ತರಿಸಿದಳು ಜಲಜ.

ಅವನು ಇನ್ನೊಂದು ಸಮೋಸ ಮುಗಿಸಿ, ಪೆಪ್ಸಿ ಓಪನ್ ಮಾಡಿ ಕುಡಿದು,

“ಏನಂಥ ವಿಷಯ?…. ನಾನು ಡಾಕ್ಟರನ್ನ ಕಂಡು ಬಂದೆ”.

ಅವರೇನು ಮಾಡುತ್ತಿರಬಹುದೆಂಬ ಅನುಮಾನ ಗಿರಿಜಮ್ಮನಿಗಿದ್ದರೂ ಜಲಜಳ ಬಗ್ಗೆ ಅವರಿಗೆ ಅತೀವ ಭರವಸೆಯಿತ್ತು. ಇದನ್ನೆಲ್ಲ ಮೀರಿ ತಾವು ಪ್ರೇಮಕ್ಕೆ ಒಳಗಾದ ಯುವ ಜೋಡಿಗೆ ಅವಕಾಶ ಮಾಡಿಕೊಡುತ್ತಿರುವುದಕ್ಕೆ ವಿಚಿತ್ರ ಸಂತೋಷವಿತ್ತು. ಇಷ್ಟಾದರೂ ಅವರಿಗೆ ಇತರರು ತಮಗನಿಸಿದ್ದನ್ನು ಒಪ್ಪುವುದಿಲ್ಲ ಎಂಬ ತಿಳಿವಳಿಕೆಯೂ ಇತ್ತು. ಆದರೆ ಅವರಿಗೆ ತಮ್ಮ ಮೇಲೆ, ತಾವು ನಂಬಿದ್ದರ ಮೇಲೆ ಹುಚ್ಚು ಭರವಸೆ.

ಜಲಜಳಿಗೆ ಎಲ್ಲವೂ ಸ್ಥಬ್ದವಾದಂತಾಯಿತು. ಸುಮ್ಮನೆ ಕಣ್ಮುಚ್ಚಿದಳು. ತಾನು ಮದುವೆಯಾಗುವ ಮನುಷ್ಯನಿಂದ ಇಂಥ ಸುಳ್ಳು…. ಉಡಾಫೆ! ಅವನ ತೊಡೆಯ ಮೇಲಿದ್ದ ಕೈಯನ್ನು ತಟ್ಟನೆ ತೆಗೆದಳು. ದೃಷ್ಟಿ ಪಕ್ಕಕ್ಕೆ ತಿರುಗಿಸಿದಳು.

“ಸಂದರ್ಭ ಏನೂಂತ ಗೊತ್ತು…. ಏನು ಎತ್ತ ತಿಳೀದೆ ಏನೇನೋ ಯೋಚ್ನೆ ಮಾಡ್ತಾರೆ …. ಆದರೆ ನೀವು ಇನ್ನೊಂದು-ಮತ್ತೊಂದು ಯೋಚ್ನೆ ಮಾಡೋ ಹಾಗೇ ಇಲ್ಲ …. ಅದೆಲ್ಲ ಟೋಟಲ್ ಡೇಂಜರ್ …. ನಿಮ್ಗೆ, ನಿಮ್ಮಲ್ಲಿರೋದಕ್ಕೆ ಇಬ್ರಿಗೂ” ಎಂದು ತನ್ನ ಮನಸ್ಸು ಅಸ್ಥಿರವಾಗಿರಬಹುದು ಎನ್ನುವ ಅನುಮಾನದಿಂದ ಮತ್ತೆ ಮತ್ತೆ ಹೇಳಿದ್ದರು ಡಾಕ್ಟರ್ ವಸುಧಾ.

ಇವನ ಆಳ, ಅಂತರಂಗದ ಸ್ವರೂಪ ಏನೊಂದೂ ಗೊತ್ತಿರಲಿಲ್ಲ. ಈಗಷ್ಟೇ ತಿಳಿಯಿತಲ್ಲ…. ಒಂದಿಷ್ಟೂ ಸಂದೇಹ ಪಡದೆ ಸುಮ್ಮನೆ ನಂಬಿದೆನಲ್ಲ ….ಕಾಣುವ ಮುಖ ಚಹರೆ ಮೂಡಿಸು ಭಾವ, ಆಡುವ ಮಾತಿನ ಮಾಧುರ್ಯ, ಸಾಮೀಪ್ಯದ ಹಿತ, ಸ್ಪರ್ಶದ ಸೌಖ್ಯ, ಮಾತಿಗೆ ಮೀರಿದ ಮಿಲನದ ಲಹರಿಗಳೆಲ್ಲ ಕೇವಲ ಹುಸಿಯೇ? ಒಂದಿಷ್ಟೂ ಅರ್ಥವಿಲ್ಲದ್ದೇ?. ಇದರ ಕಿಂಚಿತ್ ಪರಿವೆಯಿಲ್ಲದೆ ತನ್ನ ಇಡೀ ಜೀವನವೇ, ಪ್ರಪಂಚವೇ ಧೂಳಿಪಟವಾಗುವ ಸಮಯ ತಂದುಕೊಂಡೆನಲ್ಲ ಎಂದು ಕೂತಲ್ಲೇ ಬಗ್ಗಿ ಮಂಡಿಯ ನಡುವೆ ಮುಖವಿಟ್ಟು ಕೆಲವು ಕ್ಷಣ ಕಣ್ಮುಚ್ಚಿದಳು. ಬೇಡೆಂದರೂ ಬಿಡದೆ ಹೊರನುಗ್ಗಿದ ಕಲವು ಕಣ್ಣಿರ ಹನಿಗಳಿಂದ ಮಂಡಿ ಕೊಂಚ ಒದ್ದೆಯಾಯಿತು. ಇದೇನಿದ್ದರೂ ತನ್ನೊಳಗೆ ನುಗ್ಗುತ್ತಿದ್ದ ಉರಿಯನ್ನು ಹೇಗಾದರೂ ಹೊಡೆದೋಡಿಸಬೇಕು ಎನ್ನುವ ತೀವ್ರಾಭಿಲಾಷೆ ಉಕ್ಕೇರಿತು.

ತನ್ನ ಮಾತಿಗೆ ಜಲಜ ವಿಪರೀತದ ಪ್ರತಿಕ್ರಿಯೆ ತೋರಿಸದೆ ಹೋದದ್ದರಿಂದ ಸೀನು ಮುಖ ಒಂದಷ್ಟು ಅರಳಿತು. ವಿಚಿತ್ರ ಗೆಲುವು ಮೂಡಿತು.

ಜಲಜ ಕಿಟಕಿಯಾಚೆ ರೆಪ್ಪೆ ಬಡಿಯದೆ ನೋಡುತ್ತ ಇನ್ನಷ್ಟು, ಮತ್ತಷ್ಟು ತನ್ನನ್ನು ತಾನು ಒಗ್ಗೂಡಿಸುವುದರಲ್ಲಿ ನಿರತಳಾಗಿದ್ದಳು. ಮುಂದಿನೆರಡು ಸೆಕೆಂಡುಗಳಲ್ಲಿ ಅತ್ಯಂತ ದೃಢ ನಿರ್ಧಾರ ತೆಗೆದುಕೊಂಡಳು. ನಿಜ, ತಾನಿವನನ್ನು ಪ್ರೀತಿಸಿದ್ದೋ, ಮೋಹಿಸಿದ್ದೋ, ಇಷ್ಟಪಟ್ಟಿದ್ದೋ ಏನೇ ಇರಲಿ. ಶುದ್ಧ ಮನಸ್ಸಿನಿಂದ ಅವನವಳಾಗಿದ್ದೆ. ಅಷ್ಟು, ಇಷ್ಟಂತಿಲ್ಲ, ಸಂಪೂರ್ಣವಾಗಿ. ಅಳತೆ ಮೀರಿ ಕಣ್ಣುಗಳಲ್ಲಿ ಬಣ್ಣಗಳಿಳಿದಿದ್ದು ನಿಜ, ನೋಡಿದರೆ ಕಣ್ಣು ನೋಯುವಷ್ಟು ದೂರ ಕನಸುಗಳು ಹಬ್ಬಿದ್ದು ನಿಜ. ಇದರಿಂದ ಎಲ್ಲದರ ಅರಿವನ್ನು ಮೀರಿ ತಾನು ಪಡೆದ ಫಲ ತನ್ನೊಳಗಿದೆ. ಅದು ಚಿಗುರೊಡೆದ ಘಳಿಗೆಯಿಂದ ತನ್ನಲ್ಲಿ ಪದಗಳಿಗೆ ಸಿಗದ ಭಾವನೆಗಳ ಪದರುಗಳು. ತಾನು ಬೇರೆಯದೇ ಪ್ರಪಂಚವನ್ನು ಸೃಷ್ಟಿಸಿದ ಹಾಗೆ. ಅಲ್ಲಿ ಎಲ್ಲವೂ ನೂತನ, ಸಂಭ್ರಮಗಳ ತೋರಣ. ಮಧುರ ದಿನಗಳ ಅಲೆ. ಪ್ರತಿನಿತ್ಯವೂ ಹೊಸ ಕನಸುಗಳ ಮಿರುಗು. ತನ್ನ ಬದಲಾದ ಪರಿಗೆ ತನಗೇ ಬೆರಗಿನ ರೆಕ್ಕೆ ಮೂಡಿದ್ದವು. ಅದನ್ನು ತಾನೊಬ್ಬಳೇ ಸುಖಿಸಿದ್ದಳು. ತನ್ನನ್ನೇ ಅಭ್ಯಾಸ ಮಾಡುತ್ತ ಏಕಾಂತದಲ್ಲಿ ಮುಳುಗುವ ಅಭಿಲಾಷೆ ಕೂಡ. ಅನೇಕ ಬಾರಿ ಡ್ರೆಸಿಂಗ್ ಟೇಬಲ್ ನ ಕನ್ನಡಿ ಎದುರು ನಿಂತು ತನ್ನನ್ನೇ ನೋಡುತ್ತ ತೇಲುತ್ತಿದ್ದಳು. ಇಷ್ಟಕ್ಕೂ ಈ ಪ್ರಾಥಮಿಕ ಮಜಲು ತಲುಪುವ ಮುಂದೆಯೂ ನಿಂತಲ್ಲಿ ಕುಳಿತಲ್ಲಿ ಉತ್ಸಾಹದ ಜೀಕು. ಬೆನ್ನಟ್ಟಿದ್ದ ಅಪೇಕ್ಷೆ-ನಿರಪೇಕ್ಷೆಗಳ ದಂಡು. ಅದರ ಮುಂದೆ ಉಳಿದದ್ದೆಲ್ಲ ತೃಣ. ಯಾರೇನು ಮಾಡಿದರೂ, ಯಾವುದೇ ಕಾರಣಕ್ಕೂ ಅದನ್ನು ವ್ಯರ್ಥಗೊಳಿಸುವುದಿಲ್ಲ. ತಾನೂ ಸಾಯುವುದಿಲ್ಲ. ಉಳಿದದ್ದೆಲ್ಲ ನಾಶವಾದರೂ ಸರಿಯೆ, ತನ್ನ ಪ್ರಪಂಚ ತನಗೆ. ಯಾರನ್ನೂ ಲೆಕ್ಕಿಸುವುದಿಲ್ಲ. .

ಸಣ್ಣಗೆ ಅವಡುಗಚ್ಚಿ, ಮೈ ಬಿಗಿದು ಮತ್ತೆ ಸಡಲಿಸಿದಳು. ಕುಳಿತ ರೀತಿಯಲ್ಲಿಯೇ ಸ್ವಲ್ಪ ತಲೆಯೆತ್ತಿ ಕಣ್ಣೊರೆಸಿಕೊಂಡಳು.

“ಊರಿಗೆ ಹೋಗಿ ಮುಂದಿನ ವಾರ ಬರ್ತೀನಿ…. ಆಗೆಲ್ಲ ಗೊತ್ತಾಗುತ್ತೆ” ಎಂದ.

ಅವಳಿಗೆ ಅದು ಕೇಳಿಸಲೇ ಇಲ್ಲವೆನ್ನುವಂತೆ ಸುಮ್ಮನೆ ಕುಳಿತಿದ್ದಳು.

ಜಲಜ ಎದುರಿಗಿದ್ದರೂ ತಾನು ಸುಮ್ಮನಿರುವುದು ಸೀನುಗೆ ಸರಿ ಎನಿಸಲಿಲ್ಲ. ಎದ್ದು ಬಾಗಿಲ ಚಿಲಕ ಹಾಕಿ ಬಂದು ಅವಳನ್ನು ಹಿಡಿದೆಬ್ಬಿಸಿ ತುಟಿಯ ಹತ್ತಿರ ತುಟಿ ತಂದು ಅವಳ ಸೊಂಟದ ಸುತ್ತ ಕೈ ಬಳಸಿ ಜೋರಾಗಿಯೇ ಸೆಳೆದ. ಪರಸ್ಪರ ದೇಹಗಳು ಅಂಟಿಕೊಳ್ಳುತ್ತವೇನೋ ಎನ್ನುವಂತಾಯಿತು. ಸೀನೂನ ಈ ದಿಢೀರ್ ವರ್ತನೆಗೆ ಜಲಜ ಸ್ವಲ್ಪವೂ ಸಿದ್ಧವಿರಲಿಲ್ಲ. ಅವಳ ಇಡೀ ಮೈ ಧಗಧಗಿಸಿತು. ಅವನ ಮೈಗೆ ತಾಕಿದ ತನ್ನ ಮೈಯ ಭಾಗಗಳು ಬೆಂಕಿಯುಂಡೆಯಾಗಿದ್ದವು. ಅರೆಕ್ಷಣದ ಅವನ ತುಟಿಗಳ ಸ್ಪರ್ಶ ಅವಳ ತುಟಿಗಳನ್ನು ಜ್ವಾಲಾಮುಖಿಯ ತುಣುಕುಗಳನ್ನಾಗಿಸಿತು. ಅವಳಿಗೆ ತಳವಿರದ ಕತ್ತಲ ಕೂಪದಲ್ಲಿ ಅತಿವೇಗವಾಗಿ ಬೀಳುತ್ತಿರುವಂತೆ ಎನಿಸಿತು. ಏನಿದೇನಿದು ಎಂದುಕೊಳ್ಳುವಷ್ಟರಲ್ಲಿ ಅವಳಿಗೆ ತಾನು ಮತ್ತು ತನ್ನ ಸಧ್ಯದ ಸ್ಥಿತಿಯ ಬಗ್ಗೆ ಹಠಾತ್ ಅರಿವಾಯಿತು. ತಕ್ಷಣವೇ ಹೆಜ್ಜೆ ಹಿಂದಕ್ಕಿಟ್ಟು ಎರಡೂ ಕೈಗಳಿಂದ ಅವನನ್ನು ಬಲವಾಗಿ ನೂಕಿದಳು. ಎದುರಿನ ಗೋಡೆಗೆ ಢಿಕ್ಕಿ ಹೊಡೆದು ಬಿದ್ದ. ಅನೇಕ ಬಾರಿ ತನ್ನ ನಿರೀಕ್ಷೆಗಿಂತಲೂ ಹೆಚ್ಚು ಸಹಕರಿಸುತ್ತಿದ್ದವಳು ಹೀಗೆ ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದರ ಕಾರಣ ಅವನಿಗೆಟುಕಲಿಲ್ಲ. ಅವಳು ರೆಪ್ಪೆ ಅಲುಗಿಸದೆ ನೋಡುತ್ತಿದ್ದದ್ದನ್ನು ಕಂಡು ದಂಗಾದ. ಅನಿರೀಕ್ಷಿತವೆನಿಸುವಂತೆ ಇಡೀ ಸಂದರ್ಭದಲ್ಲಿ ಉಂಟಾದ, ಊಹಿಸಲಾಗದ ಬದಲಾವಣೆಯಿಂದ ಅವನಿಗೆ ಎದ್ದೇಳಲೂ ತೋಚಲಿಲ್ಲ.. ಆದರೆ ಮರುಕ್ಷಣ ಅವಳ ತೀಕ್ಷ್ಣ ದೃಷ್ಟಿ, ನಿಂತ ನಿಲುವು, ಭಂಗಿ ಎಲ್ಲವೂ ಹಲವು ಪ್ರಶ್ನೆಗಳ ಜೊತೆ ಅಗಾಧ ಸಿಟ್ಟಿಗೆ ಕಾರಣವಾಯಿತು. ತನ್ನನ್ನು ಹೀಗೆ ನಿರಾಕರಿಸುವ ಕೊಬ್ಬು ಅವಳಿಗೆ ಬಂದಿದ್ದೆಲ್ಲಿಂದ?…. ತನ್ನನ್ನು ಬಿಟ್ಟರೆ ಅವಳಿಗೆ ಉಳಿದದ್ದೆಲ್ಲ ದೊಡ್ಡ ಸೊನ್ನೆ. ತಾನು ದಕ್ಕಿದ್ದರಿಂದ ಎಲ್ಲವನ್ನೂ ಪಡೆದ ಹಾಗೆ. ಇಡೀ ಜೀವನದಲ್ಲಿ ಬೇರೇನೂ ಬಯಕೆಯಿಲ್ಲ. ತನ್ನ ಮೇಲಿರುವ ಪ್ರೀತಿ ಕಿಂಚಿತ್ ಕಡಿಮೆ ಆಗದಿರುವುದೇ ದೇವರಲ್ಲಿ ಪ್ರಾರ್ಥನೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದವಳ ಬದಲಾದ ರೀತಿಗೆ ಕಾರಣವೇನು ಎನ್ನುವ ಗೊಂದಲ ಸೀನುಗೆ.

ಇಬ್ಬರಿಂದಲೂ ಮಾತು ಹೊರಡುವುದಕ್ಕೆ ಕೊಂಚವೂ ಅವಕಾಶವಿರಲಿಲ್ಲ. ಮೌನದ್ದೇ ಆಧಿಪತ್ಯ. ದಿಕ್ಕು ದೆಸೆ ಇಲ್ಲದ ಅಸ್ಪಷ್ಟ ಆಲೋಚನೆಗಳನ್ನು ಹೊರತುಪಡಿಸಿದರೆ ಒಳಗೆ ಪ್ರವೇಶಿಸುತ್ತಿದ್ದದ್ದು ರಸ್ತೆಯಲ್ಲಿ ಹಾದು ಹೋಗುವ ವಾಹನಗಳ ಸದ್ದು.

ಅವಳಲ್ಲಿ ಭಾವನೆಗಳ ಉಬ್ಬರಗಳೆದ್ದಿತ್ತು. ಅವನ ತುಟಿಗಳು, ಹರವಾದ ರೋಮಭರಿತ ಎದೆ, ಬಲಿಷ್ಠ ರಟ್ಟೆ-ಕೈಗಳು ಅವಳಲ್ಲಿ ಬಗೆದಷ್ಟೂ ತೀರದ, ಮಾತು ಮೀರಿದ ಸಂತೋಷವನ್ನು ಕೊಟ್ಟಿದ್ದವು. ಮೈಗಳು ಬಿಗಿದು ಹರ್ಷದುಯ್ಯಾಲೆ ಪ್ರಪಂಚವನ್ನೇ ಮರೆಸುವಷ್ಟು ಮದವೇರಿಸಿತ್ತು. ಇವೆಲ್ಲಕ್ಕೆ ಅಸ್ತಿಭಾರವಾಗಿದ್ದದ್ದು ಮದುವೆಯ ಬಗ್ಗೆ ಇದ್ದ ಭರವಸೆ. ಇದನ್ನು ರೂಪಿಸುವಾಗಲೂ ಅವಳು ತನ್ನ ಓದು, ಸಾಮಾನ್ಯ ಜ್ಞಾನ, ತಿಳಿವಳಿಕೆ, ವಾಸ್ತವದ ಅರಿವು ಇವುಗಳೊಂದಿಗೆ ತಿಳಿದ ಅವನ ವಿಷಯಗಳನ್ನು ಜೋಡಿಸಿದ್ದಳು.

ಅವಳು ಎದುರು ನೋಡುತ್ತಿದ್ದದ್ದೇ ಎಲ್ಲವೂ ನಿರ್ಧರಿತವಾಗುವ, ತಮ್ಮಿಬ್ಬರ ಜೀವನ ನೆಲೆಗೊಳ್ಳುವ ನಿಶ್ಚಿತ ಘಟನೆಗಾಗಿ; ಮುಖ್ಯವಾದದ್ದರ ಪರಿಹಾರಕ್ಕಾಗಿ. ಈ ತುರ್ತಿನ ಜೊತೆಗೆ ಅದನ್ನು ನೂರರಷ್ಟು ಹೆಚ್ಚು ಮಾಡುವಂತೆ ಡಾಕ್ಟರ್ ವಸುಧಾರ ಸೂಕ್ಷ್ಮ ಮತ್ತು ಅನ್ಯಮಾರ್ಗವಿರದಂಥ ಮಾತುಗಳು.

ಒಂದಷ್ಟು ಸಾವರಿಸಿಕೊಂಡು, ಮೈ ಕೊಂಚ ಸಡಿಲಿಸಿ, “ಡಾಕ್ಟರ್ ಏನು ಹೇಳಿದರು ಗೊತ್ತಾ?” ಎಂದು ಅವನ ಕಣ್ಣಲ್ಲಿ ಕಣ್ಣು ನೆಟ್ಟಳು.

ಅವನು ಮಾತನಾಡಲಿಲ್ಲ. ಎದ್ದು ಕುಳಿತ.

“ಐದು ತಿಂಗಳು ದಾಟಿದೆ…. ಈಗೇನೂ ಸಾಧ್ಯವಿಲ್ಲ…. ಹುಚ್ಚುಚ್ಚು ಯೋಚ್ನೆ ಬೇಡ …. ನಂಗೂ, ಮಗೂಗೂ ಫುಲ್ ಡೇಂಜರ್, ಅಂದ್ರು.”

ಅವಳ ಕಡೆ ನೋಡುತ್ತಿದ್ದವನು ದೃಷ್ಟಿ ಬೇರೆ ಕಡೆ ಮಾಡಿದ.

“ಇದು ನನ್ನ ಮಾತಲ್ಲ…. ಎಲ್ಲ ಅವರದ್ದೇ…. ಅವರಿಗೆ ತಾನೆ ಸರಿಯಾಗಿ ಗೊತ್ತಾಗೋದು.”

ಅವಳು ಹೇಳುತ್ತಿರುವುದು ತನ್ನ ಮೇಲೆ ಒತ್ತಡ ಹೆಚ್ಚಿಸುವುದಕ್ಕಾಗಿ ಎಂದು ತಿಳಿದು ಒಮ್ಮೆ ಜೋರಾಗಿ ನಕ್ಕ. ಅವಳಿಗೆ ಇದೇನಾಯಿತು, ಹೀಗೇಕಾಯಿತು ತಿಳಿಯಲೇ ಇಲ್ಲ. ಗರಬಡಿದವಳಂತೆ ಒಂದರೆಗಳಿಗೆ ಮೂಕಳಾದಳು. ಅವಳ ಮೌನ ಪ್ರತಿಕ್ರಿಯೆ ಅವನಿಗೆ ಉತ್ಸಾಹ ಮೂಡಿಸಿತು. ಎದ್ದು ಬಂದು ಅವಳ ಪಕ್ಕದಲ್ಲಿ ಕುಳಿತು ಹಿಂದಿನಂತೆ ಎಳೆದುಕೊಂಡು ನೇವರಿಸುತ್ತ ಎಲ್ಲೆಂದರಲ್ಲಿ ಕೈಯಾಡಿಸಲು ಪ್ರಯತ್ನಿಸಿದ.

ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಅವನನ್ನು ಅತ್ತ ದೂಡಿದಳು. ಅದು ಕೊಟ್ಟ ಸೂಚನೆಯಿಂದ ಸುಮ್ಮನಾದ.

ಅಲ್ಲಿ ಎಲ್ಲವೂ ನೂತನ, ಸಂಭ್ರಮಗಳ ತೋರಣ. ಮಧುರ ದಿನಗಳ ಅಲೆ. ಪ್ರತಿನಿತ್ಯವೂ ಹೊಸ ಕನಸುಗಳ ಮಿರುಗು. ತನ್ನ ಬದಲಾದ ಪರಿಗೆ ತನಗೇ ಬೆರಗಿನ ರೆಕ್ಕೆ ಮೂಡಿದ್ದವು. ಅದನ್ನು ತಾನೊಬ್ಬಳೇ ಸುಖಿಸಿದ್ದಳು. ತನ್ನನ್ನೇ ಅಭ್ಯಾಸ ಮಾಡುತ್ತ ಏಕಾಂತದಲ್ಲಿ ಮುಳುಗುವ ಅಭಿಲಾಷೆ ಕೂಡ. ಅನೇಕ ಬಾರಿ ಡ್ರೆಸಿಂಗ್ ಟೇಬಲ್ ನ ಕನ್ನಡಿ ಎದುರು ನಿಂತು ತನ್ನನ್ನೇ ನೋಡುತ್ತ ತೇಲುತ್ತಿದ್ದಳು.

ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ತನ್ನ ಬಗ್ಗೆ ಇರದಿದ್ದರೆ ಹೋಗಲಿ ತಾನೇ ಕಾರಣನಾದ ಇನ್ನೂ ಬೆಳಕು ಕಾಣದ ಕಂದನ ಬಗ್ಗೆಯೂ ಕೂಡ ಅಷ್ಟೆ, ಯಾವುದೇ ಲೆಕ್ಕಕ್ಕಿಲ್ಲ. ಅವನಿಗೆ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ. ಅವನೊಳಗಿನ ನೆಲೆಯನ್ನು ಸರಿಯಾಗಿ ತಿಳಿದುಕೊಳ್ಳದೆ ಸುಮ್ಮನೆ ಒಪ್ಪಿ ಸ್ವೀಕರಿಸಿದೆ ಎನಿಸಿತವಳಿಗೆ. ಪರಿಣಾಮದ ಫಲ ತನ್ನೊಳಗಿದೆ… ಡೇ ಕೇರ್ ನಲ್ಲಿ ಮಕ್ಕಳು, ಸುತ್ತ-ಮುತ್ತ ಸುಳಿಯುತ್ತಿದ್ದ ಅಮ್ಮ, ಗಿರಿಜಮ್ಮ ಇವರೆಲ್ಲರನ್ನು ಅಷ್ಟು ದೂರದಲ್ಲಿ ನಿಂತು ರಂಗದ ಮೇಲೆ ನೋಡುತ್ತಿರುವ ಹಾಗೆ. ತನ್ನ ಬದುಕು ಬೇರೊಂದು ನೆಗೆತಕ್ಕೆ ಸಿದ್ಧವಾಗಿ ಚಿಮ್ಮು ಹಲಗೆಯ ಮೇಲೆ ನಿಂತ ಹಾಗೆ

“ಹೌದಾ” ಎಂದು ಕಣ್ಣರಳಿಸಿದ. ಅಷ್ಟೇ ಖುಷಿ ಕೂಡ. ಅನಂತರ ಗಂಡಸುತನದಿಂದ ಆದರೆ ತಕ್ಷಣವೇ “ಹೊಸ ಬೈಕ್ ತೊಗೊಂಡಿದೀನಿ” ಎಂದಿದ್ದ. ಪೆಚ್ಚಾಗಿ ಪಕ್ಕಕ್ಕೆ ಸರಿದಿದ್ದಳು. ಅವಳ ಸಪ್ಪೆ ಮುಖ ಕಂಡು ಹೆಚ್ಚಿನ ಉತ್ಸಾಹದಿಂದ ರಮಿಸಲು ಪ್ರಯತ್ನಿಸಿದ್ದ. ಅವಳಿಗೆ ಇದೇನು ಗಂಡಸು ಎಂಬ ಭಾವನೆ ಮೂಡಿತ್ತು.

“ನಮ್ಮ ವಿಷಯಕ್ಕೆ ಮುಂದೆ ಏನೇನು ಆಗ್ಬೇಕೋ ಎಲ್ಲಾ ಮಾಡ್ತೀನಿ” ಎಂದು ಜವಾಬ್ದಾರಿ ಅರಿತವನಂತೆ ಹೇಳಿದ್ದು ಮೆಚ್ಚುಗೆಯಾಗಿತ್ತು.

“ಎಲ್ಲ ಫಟಾಫಟ್ ಆಗ್ಬೇಕು” ಎಂದು ಒತ್ತಾಯಿಸಿದಾಗ, “ಅದು ಬೇರೆ ವಿಷಯ …. ಆದರೆ ಈಗಿಂದು ….” ಎಂದು ಅವಳನ್ನು ಎಳೆದುಕೊಂಡಿದ್ದ. ಅಮ್ಮನ ಹತ್ತಿರವಂತೂ ಬಾಯಿ ಬಂದ್. ಗಿರಿಜಮ್ಮನ ಬಳಿಯೂ ಅಷ್ಟೆ. ಏನನ್ನೂ ತಿಳಿಸಲಿಲ್ಲ. ದಿನಚರಿ ಎಂದಿನಂತೆ ಮಾಮೂಲು.

ತಿಂಗಳಲ್ಲಿ ನಾಲ್ಕು ಸಲ ಬಂದಿದ್ದರೂ ತನ್ನ-ತಮ್ಮಿಬ್ಬರ ವಿಷಯ ತಲೆಗೆ ಹಚ್ಚಿಕೊಳ್ಳದೆ ಬಿಡುಬೀಸಾಗಿರುವುದನ್ನು ಕಂಡು ವಿಚಲಿತಗೊಂಡಿದ್ದಳು. ಒಂದು ಸಲ ಮನೆ ಪ್ರಾಬ್ಲಮ್, ಊರಿಗೆ ಹೋಗ್ಬೇಕು ಎಂದರೆ, ಮತ್ತೊಂದು ಸಲ ಫ್ಯಾಕ್ಟರೀಲಿ ಪ್ರಾಬ್ಲಮ್ ಎನ್ನುತ್ತಿದ್ದ. ಒಂದು ಸಲ ಹೇಳುತ್ತಿದ್ದಕ್ಕೂ ಮತ್ತೊಂದು ಸಲ ಹೇಳುತ್ತಿದ್ದಕ್ಕೂ ಹೊಂದಾಣಿಕೆ ಕಾಣದೆ ಅವಳು ನಿಜಕ್ಕೂ ತಳಮಳಗೊಂಡಿದ್ದಳು. ಎಲ್ಲವೂ ಅಸ್ಪಷ್ಟ, ಗೊಂದಲ. ಮಾತು ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ, ಪರಿಸ್ಥಿತಿ ಯಾವ ಬಗೆಯಲ್ಲಿದೆ ಎನ್ನುವುದರ ತಳಬುಡ ತಿಳಿಯದೆ ದಿಕ್ಕು ತಪ್ಪಿದಂತಾಗಿತ್ತು. ಒಮ್ಮೊಮ್ಮೆ ಮನೆಗೂ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದರೆ, ಉಳಿದಂತೆ, “ಈಗಷ್ಟೆ ಊಟವಾಯಿತಲ್ಲ” ಎಂದು ಜಲಜಳ ಕಡೆ ನೋಡಿ ನಕ್ಕುಜಾಗ ಖಾಲಿ ಮಾಡುತ್ತಿದ್ದ. ಒಟ್ಟಾರೆ ಪರಿಸ್ಥಿತಿಯ ಬಗ್ಗೆ, ಭವಿಷ್ಯದ ಬಗ್ಗೆ ಯಾವುದೇ ನಿಶ್ಚಿತ ಕ್ರಮಗಳಿರಲಿಲ್ಲ.

ಸೀನು ಮೊಬೈಲ್ ರಿಂಗಾಯಿತು. ಎತ್ತಿಕೊಂಡು ಮೆಲು ದನಿಯಲ್ಲಿಯೇ ಮಾತನಾಡುತ್ತ ಅನೇಕ ರೀತಿಯಲ್ಲಿ ಪುಸಲಾಯಿಸಲು ತೊಡಗಿದ. ನಡುವೆ ಕೊಂಚ ಗಾಬರಿಯಾದಂತೆ ಕಂಡರೂ ಕೊನೆಗೆ ಹಸನ್ಮುಖನಾಗಿ ಮಾತು ಮುಗಿಸಿದ. ಆನಂತರ ಏಳುತ್ತ, “ಹೇಳಿದ್ನಲ್ಲ, ಬಂದೆ” ಎಂದು ಹಿತ್ತಲಿನ ಕಡೆ ಹೆಜ್ಜೆ ಇಟ್ಟವನು ನಿಂತ. ಟೇಬಲ್ ಮೇಲಿದ್ದ ಇನ್ನೊಂದು ಪೆಪ್ಸಿ ಬಾಟಲಿನ ಮುಚ್ಚಳ ತೆಗೆದು ಅರ್ಧ ಕುಡಿದಿಟ್ಟು ವಿಚಿತ್ರ ಶಬ್ದ ಹೊರಡಿಸಿ ಹೊರಟ.

ಅವಳು ಅಕಾರಣವಾಗಿ ಕತ್ತು ತಿರುಗಿಸಿದಾಗ ಕಂಡದ್ದು ಅವನ ಮೊಬೈಲ್. ತೆಗೆದುಕೊಂಡು ಕೇವಲ ಕುತೂಹಲದಿಂದ ಅದರ ಮೇಲೆ ಬೆರಳಾಡಿಸಿದಾಗ ಕಂಡದ್ದರಿಂದ ದಂಗಾದಳು. ಒಂದಾದ ಮೇಲೊಂದು ಹುಡುಗಿಯರ ಫೋಟೋಗಳು! ಪ್ರತ್ಯೇಕವಾಗಿ ಮತ್ತು ಸೀನು ಜೊತೆಗೆ. ಅವುಗಳ ಸಾಲಿನಲ್ಲಿ ತನ್ನದೂ ಒಂದು! ತಲೆ ತಿರುಗಿದಂತಾದ ಜಲಜಳಿಗೆ ಒಟ್ಟು ನೋಡಿದ್ದೆಷ್ಟು ಲೆಕ್ಕ ಸಿಗಲಿಲ್ಲ. ನೋಡಿದಷ್ಟೂ ಅವರೆಲ್ಲರ ತವಕ, ತಲ್ಲಣಗಳು ಹರಿದು ಬಂದು ತನ್ನೊಳಗೆ ಸೇರಿದಂತೆ ಭಾಸವಾಗಿ ಕೆಲವು ಕ್ಷಣ ಕಣ್ಣು ಮುಚ್ಚಿ ಸಾವರಿಸಿಕೊಂಡಳು.

ಈಗವಳಿಗೆ ಸಂಪೂರ್ಣವಾಗಿ ಮನವರಿಕೆಯಾಗಿತ್ತು. ತಾನಷ್ಟೇ ಏಕೆ ಯಾರಾದರಾಗಲೂ ಸ್ವೀಕರಿಸುವುದಕ್ಕೆ ಅಯೋಗ್ಯ. ಕೇವಲ ತಿರಸ್ಕರಿಸುವುದಕ್ಕೆ ಲಾಯಕ್ಕು. ಅವನಿಗೆ ತಾನು, ತನ್ನೊಳಗಿರುವುದರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಅವನಿಗೇನು ಬೇಕು, ಏಕೆ ತನ್ನ ಹಿಂದೆ ಬಿದ್ದಿದ್ದಾನೆ ಎಂದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದ್ದಂತೆ ಅವನು ಸರಸವಾಡಲು ಬಿಟ್ಟ ತನ್ನ ಮೈ ಎಷ್ಟು ಹೊಲಸಾಗಿದೆ ಎಂಬ ಆಲೋಚನೆಯಿಂದ ಉಗುಳು ನುಂಗಿದಳು. ಅವನು ಕೈಯಿಟ್ಟ ಕಡೆಯೆಲ್ಲ ನರಕ, ಥೂ ಎಂದು ತನ್ನನ್ನೇ ಹಳಿದುಕೊಂಡಳು.

ತಾನು, ಮಗು ಇಬ್ಬರೂ ಸತ್ತರೂ ಅವನಿಗೆ ಕಿಂಚಿತ್ ವ್ಯತ್ಯಾಸವಿಲ್ಲ. ಅವನ ಬಲೆಯಲ್ಲಿ ಹಲವಾರು ಹುಡುಗಿಯರು. ಒಬ್ಬಳಲ್ಲದಿದ್ದರೆ ಇನ್ನೊಬ್ಬಳು. ಅಂಥವರ ಗತಿಯೂ ತನ್ನಂತಾಗಬಹುದು ಎಂದು ನಡುಗಿದಳು. ಅವನ ಬಗ್ಗೆ ದ್ವೇಷ ಉಕ್ಕೇರಿತು.

ಈಗವಳ ಆಲೋಚನೆ ತಿರುಗಿದ್ದು ತನಗಿಂತ ಮಗುವಿನ ಬಗ್ಗೆ. ಏನಿದ್ದರೂ ಸರಿಯೆ ಮಗುವಿನ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಅದು ಎಂದೆಂದಿಗೂ, ತನ್ನ ಸ್ಥಿತಿ ಏನೇ ಇರಲಿ ತನ್ನದೇ ತನ್ನದು ಮಾತ್ರ. ಅದರ ಕ್ಷೇಮಕ್ಕೆ ಏನು ಮಾಡಲೂ ಸಿದ್ಧ. ಈ ದೊಡ್ಡ ಪ್ರಪಂಚದಲ್ಲಿ ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೇನೆ. ಆ ಸವಾಲನ್ನು ಎದುರಿಸುತ್ತೇನೆ. ಸೋಲು ಎನ್ನುವ ಮಾತಿಲ್ಲ. ತೀರ ಸಾಮಾನ್ಯವಾಗಿಯಾದರೂ ಬದುಕುತ್ತೇನೆ. ಇವನ ತೆವಲಿಗೆ ಸಿಕ್ಕಿ ಸುಮ್ಮನೆ ಬಲಿಯಾಗುವುದಿಲ್ಲ, ಹುಸಿಯಾಗಲು ಬಿಡುವುದಿಲ್ಲ.

ಜಲಜ ಇನ್ನಷ್ಟು ಆಲೋಚನೆಗೆ ಒಳಗಾದಳು. ಸೀನು ತನ್ನ ಜೊತೆ ವರ್ತಿಸಿದ ರೀತಿ ಇವತ್ತಿಗೆ ಮಾತ್ರ ಮುಗಿಯುವುದಿಲ್ಲ. ಹೀಗೆಯೇ ಬೇಜವಾಬ್ದಾರಿಯಿಂದ, ಉಡಾಫೆಯಿಂದ ಇರುವುದನ್ನು ಮುಂದುವರಿಸುತ್ತಾನೆ. ತನ್ನ ಬಾಳಿಗೆ ಬುಡವೇ ಸಿಗುವುದಿಲ್ಲ. ಬಿಟ್ಟೇನೆಂದರೂ ಬಿಡದ ಇವನ ಸೂತ್ರಕ್ಕೆ ಸಿಕ್ಕಿಹಾಕಿಕೊಂಡು ಸೆಣೆಸುವುದು ಹೇಗೆ? ತನ್ನ ಮೈಯನ್ನು ಆಕ್ರಮಿಸುತ್ತಲೇ ಇರುತ್ತಾನೆ. ತಾನದರಲ್ಲಿ ಸೋಲಬಾರದು. ಆದರೆ ಸೋಲುವುದು ಅನಿವಾರ್ಯ.

ಅವಳ ಕಣ್ಣುಗಳು ಹನಿಗೂಡಿದವು. ತಾನೀಗ ಇಷ್ಟೊಂದು ದ್ವೇಷಿಸುವವನನ್ನು ಯಾವುದರಿಂದ ತಡೆಯಲಿ? ಈ ಪ್ರಮಾಣದ ಅಸಹ್ಯ, ಹೇಸಿಗೆ ಹುಟ್ಟಿಸುವ ವ್ಯಕ್ತಿಯನ್ನು ಸಹಿಸುವುದು ಸಾಧ್ಯವೇ ಇಲ್ಲ.. ಅವನ ಸಹವಾಸ ಇನ್ನೂ ಕೆಲವರಿಗೆ ವಿವಿಧ ಬಗೆಯ ಕುದಿತವನ್ನು ತಂದಿರಬಹುದು. ಮಾತಿಲ್ಲದೆ, ಕೈಲಾಗದೆ ಸುಮ್ಮನೆ ಬೆಂದು ಹೋಗಿರಬೇಕು. ಎಲ್ಲ ತಿಳಿದೂ ಸುಮ್ಮನಿದ್ದರೆ ಹೇಡಿಯಾದಂತೆ. ಅವನಿಂದ ನನಗೆ ಪೂರ್ಣ ಬಿಡುಗಡೆ ಬೇಕು. ತನ್ನಂಥವರಿಗೂ ಬಿಡುಗಡೆ ಒದಗಿಸಬೇಕು… ಆದರೆ ಅದಕ್ಕೇನು ದಾರಿ? ಏನು ಮಾಡಲಿ ಎಂದು ಪರಿತಪಿಸುತ್ತಾ ಸ್ವಲ್ಪ ಹೊತ್ತು ಸುಮ್ಮನಾದಳು. ಅವಳಿಗರಿವಿಲ್ಲದೆ ಗಂಟಲು ಒಣಗುತ್ತಿತ್ತು. ಸುತ್ತಲಿನದೆಲ್ಲ ಕ್ರಮೇಣ ಕರಗುತ್ತಿರುವ ಹಾಗೆ ….

ಅವಳಲ್ಲಿ ಮಿಂಚು ಹೊಳೆದಂತಾಯಿತು. ಅವಳಿಗೆ ಕಂಡದ್ದು ಕೆಲಸದಾಕೆ ಬಿಟ್ಟು ಹೋಗಿದ್ದ ಮೂಲೆಯಲ್ಲಿದ್ದ ಇಲಿ ಪಾಷಾಣದ ಕ್ಯಾರಿಬ್ಯಾಗ್. ಹಠಾತ್ ಹೊಳೆದ ಆಲೋಚನೆಗೆ ಅವಳ ಮೈ ನಿಲ್ಲಲಾರದಷ್ಟು ನಡುಗಿತು. ಆದರವಳು ಅಸ್ಥಿರಗೊಳ್ಳಲಿಲ್ಲ. ಉಗುಳುನುಂಗಿ ಸಾವರಿಸಿಕೊಂಡಳು. ತಕ್ಷಣವೇ ಅವಳು ಓಡಿ ಹೋಗಿ ಕ್ಯಾರಿ ಬ್ಯಾಗನ್ನು ತಂದಳು. ಅದರಲ್ಲಿದ್ದ ಪೊಟ್ಟಣದಿಂದ ಅರ್ಧವಾಗಿದ್ದ ಪೆಪ್ಸಿ ಬಾಟಲಿಗೆ ಜಾಗರೂಕತೆಯಿಂದ ಒಂದಷ್ಟನ್ನು ಹಾಕಿ ಕದಡಿದಳು. ಸಣ್ಣಗೆ ನಡುಗುತ್ತಿದ್ದ ಕೈ ಮತ್ತು ಅಬ್ಬರದ ಹೃದಯ ಬಡಿತದ ನಡುವೆ ಅದನ್ನು ಪೂರೈಸುವಷ್ಟರಲ್ಲಿ ಮೈಯ ಸಂದುಗೊಂದುಗಳಲ್ಲಿ ಜಿನುಗಿದ ಬೆವರು. ಪಟ್ಟಣವನ್ನು ಮರೆಯಾಗಿಟ್ಟು ಮುಂಗೈಯಿಂದ ಕಣ್ಣು-ಹಣೆ ಒರೆಸಿಕೊಂಡಳು. ತಲೆ ಎತ್ತಿ ನೋಡಿ, ಫ್ಯಾನ್ ಹಾಕಿಕೊಳ್ಳವುದನ್ನೂ ಮರೆತದ್ದು ತಿಳಿದು ಆನ್ ಮಾಡಿದಳು. ಅದೂ ಸಾಲದೆನಿಸಿ ಅರೆಗಣ್ಣು ಮಾಡಿ ಮುಷ್ಟಿ ಹಿಡಿದು, ಉಸಿರುಗಟ್ಟಿ ಕೆಲವು ಕ್ಷಣ ಕಳೆದಳು. ಯೋಚಿಸಿದಷ್ಟೂ ತನ್ನ ನಿರ್ಧಾರ ಸರಿ ಎಂದು ಕಂಡಿತವಳಿಗೆ. ಪರಿಸ್ಥಿತಿ, ಸಂದರ್ಭಗಳು ಬದಲಾದರೆ ಎನ್ನುವ ಆಲೋಚನೆ ಇಣುಕಿತು. ತಾನು ತೆಗೆದುಕೊಳ್ಳುವ ಕ್ರಮದಿಂದ ಉಂಟಾಗುವ ಯಾವುದೇ ಸಮಸ್ಯೆಯನ್ನು ಎದುರಿಸುವುದಕ್ಕೆ ಸಿದ್ಧ. ಎಲ್ಲರೂ ಎಲ್ಲವನ್ನೂ ಕಳೆದುಕೊಳ್ಳಬಹುದು ಆದರೆ ಸಿಗುವ ಸಮಾಧಾನಕ್ಕೆ ಎಲ್ಲಿದೆ ಮಿತಿ ಎಂದುಕೊಂಡಳು. ಸುತ್ತಲಿನ ಪರಿವೆ ಇಲ್ಲದಂತಾಗಿದ್ದ ಅವಳಿಗೆ ರಸ್ತೆಯಲ್ಲಿ ಚಲಿಸುವ ವಾಹನಗಳ ಶಬ್ದ ಕೇಳಿಸತೊಡಗಿತು.

ಸೀನು ಮತ್ತೆ ಕಾಣಿಸಿಕೊಂಡ. ಅವಳು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಎತ್ತಲೋ ನೋಡಿದಳು. ಅವಳ ಭುಜವನ್ನು ಮೃದುವಾಗಿ ತಟ್ಟಿ, “ಇವತ್ತು ನನ್ನ ಉಪವಾಸ ಕಳಿಸ್ತಿದೀಯ….. ಮುಂದಿನ ಸಲ ಬಂದಾಗ ಮಾತ್ರ ಹಬ್ಬದೂಟ ಬೇಕೇ ಬೇಕು, ಮರೀಬೇಡ . ಬರ್ತೀನಿ” ಎಂದು ಬ್ಯಾಕ್ ಪ್ಯಾಕ್ ಬ್ಯಾಗ್ ತೆಗೆದುಕೊಳ್ಳುತ್ತ ಹೇಳಿದ.

“ಇಲ್ಲೇ ಬಿಟ್ಟೆಯಲ್ಲ” ಎಂದು ತಾನು ಸಿದ್ಧಪಡಿಸಿದ್ದ ಪೆಪ್ಸಿ ಬಾಟಲಿಗೆ ಅಲ್ಲೇ ಬಿದ್ದಿದ್ದ ಮುಚ್ಚಳ ತೆಗೆದುಕೊಂಡು ಒತ್ತಿ ಅವನ ಬ್ಯಾಗೊಳಗಿಟ್ಟಳು.

“ಒಳ್ಳೆ ಹುಡುಗಿ…. ನಂಗೇನಿಷ್ಟ ಅಂತ ಗೊತ್ತು ನಿಂಗೆ” ಎಂದು ಹೊರಟ.