ಸಂಜೆಯಾಗಿಹೋಯಿತೇ…

ಬಿಸಿಲ ಕೊಳವೆಗಾಳಿ ಹೀರಿ
ಹೊತ್ತಿ ಹಗಲು ಉರಿಯುವಾಗಲೇ..
ಮತ್ತೆ ಬರುವೆನೆಂದು ಹೊರಟ
ಘಳಿಗೆ ತಿರುಗಿ ನೋಡುವಾಗಲೇ..
ಮಡಿಸಿ ಇಟ್ಟ ಪುಟಕೆ
ಮರಳಿ ಹೋಗುವಾಗಲೇ..
ಆರಿ ಹೋದ ಮೌನವೊಂದು
ಮಾತಾಗಿ ಮೂಡುವಾಗಲೇ..
ಬಿಡುವು ಮಾಡಿಕೊಂಡು ಬಂದ
ನಗುವು ಹೊರಡುವಾಗಲೇ..
ಬಿಡಿಸಿದೊಂದು ಚಿತ್ರವೂ
ಭಿತ್ತಿಯಲಿ ಬಂಧಿಯಾಗುವಾಗಲೇ…
ಮೋಡ ತಿಂದ ತುಟಿಯ ಗುರುತು
ಕೆಂಪು ಕೆನ್ನೆಯಲ್ಲಿ
ಗಗನ ನೀಲಿಯಾಗುವಾಗಲೇ..
ಸಂಜೆಯಾಗಿ ಹೋಯಿತೇ …

ಸಚಿನ್‌ ಹೊಸನಗರದ ಹುಂಚಾ ಊರಿನವರು
ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಕವಿತೆ ಕಥೆಗಳನ್ನು ಓದುವುದು ಇವರ ಹವ್ಯಾಸ