Advertisement

Month: April 2024

ಪ್ರೀತಿ ಇರಬಹುದಾದರೆ ಹೀಗೆ ಮಾತ್ರ: ಕೃಷ್ಣ ದೇವಾಂಗಮಠ ಅಂಕಣ

“ಕೊನೆಗೆ ದಾರಿ ತೋಚದೇ ಮನೆಗೆ ಓಡಿ ಹೋಗಿ ಕಪಾಟಿನಲ್ಲಿದ್ದ ಹಣವನ್ನು ಜೇಬಿಗಿಳಿಸಿ ಆಟೋ ಹಿಡಿದು ಅಮ್ಮನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ “ಡ್ಯೂಟಿ ಡಾಕ್ಟರ್ ಇಲ್ಲ ಅವರು ಬರುವುದು ತಡವಾಗುತ್ತದೆ. ಕಾಯುತ್ತಿರಿ.” ಎಂದು ದಾದಿಗಳು ಕೂಡಾ ಕಾಲ್ಕಿತ್ತರು. ನನಗೊಂದೂ ತಿಳಿಯಲಿಲ್ಲ.”

Read More

ಅಮೀನ್ ಅತ್ತಾರ ತೆಗೆದ ಈ ದಿನದ ಚಿತ್ರ

ಕೂಡಲಸಂಗಮ ಮೂಲದ ಅಮೀನ್ ಸದ್ಯ ಕುಷ್ಟಗಿಯಲ್ಲಿದ್ದಾರೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಬಾಗಲಕೋಟೆಯಲ್ಲಿ ಹಿರಿಯ ಉಪನಿರ್ದೇಶಕರಾಗಿದ್ದಾರೆ. ಕತೆ, ಕವಿತೆ ಇವರ ಛಾಯಾಗ್ರಹಣ ಪ್ರವೃತ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು

“ಪಾತಾಳಕ್ಕೆ ಹೊರಟವನ
ಆಯುಷ್ಯದ ಅವಧಿಯಲ್ಲಿ
ಗಡಿಯಾರವಿನ್ನೂ ಮಂಕಾಗದೇ
ಕುದಿಯುತ್ತಿರುವುದೇ ಆಗಿದ್ದಲ್ಲಿ,
ಕೇತಕಿಯ ಘಮ ಗುಲ್ಲೆಬ್ಬಿಸಿ
ಕಟ್ಟಿಹಾಕುತ್ತದೆ……” ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.

Read More

ಶಾಪಿಂಗ್ ಭೂತದ ಬೆನ್ನೇರಿ: ರೂಪಶ್ರೀ ಕಲ್ಲಿಗನೂರ್ ಅಂಕಣ

“ಚುಮ್ಮಿಗೆ ನಾನು “ಕರ್ನಾಟಕ” ಕೊಡಿಸಲ್ಲ ಅಂತ ಖಾತ್ರಿಯಾದದ್ದೇ, ಅವಳೂ ಓಡಾಟವನ್ನು ನಿಲ್ಲಿಸಿ, ಬಂದು ನನ್ನ ಪಕ್ಕದಲ್ಲಿ ಕುಳಿತಿದ್ದಳು. ನಮ್ಮೆದುರಿಗೇ ಬಿಲ್ಲಿಂಗ್ ಕೌಂಟರ್ ಇತ್ತು. ಅಂಗಡಿಯ ಹೊರಗೆ-ಒಳಗೆಲ್ಲ ಆಫರ್ ಬೋರ್ಡುಗಳ ಸುರಿಮಳೆ. ಆಫರ್ ಅಂದಮೇಲೆ ಗೊತ್ತಲ್ಲ. 900 ವಸ್ತುವಿಗೆ 1500 ರೂ ಬೆಲೆ ಹಾಕಿ, ಮತ್ತದರ ಮೇಲೆ ಗೀಟು ಎಳೆದು 300 ರೂ ಆಫರ್ ಅಂತ ಹಾಕಿರೋದನ್ನೂ ಕಣ್ಣುಮುಚ್ಚಿ ತೆಗೆದುಕೊಳ್ತಾರೆ.”

Read More

ತಲ್ಲೂರಲ್ಲೊಂದು ದಿನದ ಸುತ್ತು: ಸುಜಾತಾ ತಿರುಗಾಟ ಕಥನ

“ತಮ್ಮ ಕುಟುಂಬದ ಒಂದು ಮಗುವಿಗಾಗಿ ಅವರ ಅಪ್ಪಅಮ್ಮರಿಗೆ ಇಡೀ ಕುಟುಂಬ ಒತ್ತಾಸೆಯಾಗಿ ನಿಂತು ಅವರನ್ನು ಗಟ್ಟಿಮಾಡಿದ್ದೂ ಅಲ್ಲದೆ ಆ ಮಗುವಿಗೆ ತರಬೇತಿಯ ಜೊತೆಗೆ ಅಕ್ಕರೆಯಿಂದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಆ ಕುಟುಂಬದ ಹಿರಿಕಿರಿಯ ಎಲ್ಲರಿಗೂ ಇರುವುದು, ಹಾಗೆಯೇ ಆ ಮನೆಯವರ ಒಗ್ಗಟ್ಟನ್ನು ನೋಡಿದಾಗ ‘ಕೂಡಿ ಬಾಳೋಣ’ ಎನ್ನುವ ಹಾಡು ನೆನಪಾಯಿತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ