ಸೇಡಿಯಾಪು ಕೃಷ್ಣ ಭಟ್ಟರು ಬರೆದ ಕತೆ “ನಾಗರ ಬೆತ್ತ”: ಓಬೀರಾಯನ ಕಾಲದ ಕತೆಗಳು
“ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು. ಅವರು ಏನು ಮಾಡುವುದೆಂದು ತಿಳಿಯದೆ ಕಣ್ಣಗಲಿಸಿ ಗಂಡನ ಮುಖವನ್ನು ನೋಡಿ ಕಣ್ಣೀರು ತುಂಬಿ ನಡುನಡುಗಿದರು. ಈ ವಿಹ್ವಲತೆಯನ್ನು ಕಂಡು ಗಂಡನಿಗೆ ಕರುಣೆ ಹುಟ್ಟಿತೆಂದು ತೋರುತ್ತದೆ.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯಲ್ಲಿ ಸೇಡಿಯಾಪು ಕೃಷ್ಣ ಭಟ್ಟರು ಬರೆದ ಕತೆ “ನಾಗರ ಬೆತ್ತ”