Advertisement

Month: March 2019

ಗಾಳಿಗೆ ಅಲೆಅಲೆಯಾಗಿ ಅಲ್ಲಾಡುವ ಮುಳಿಹುಲ್ಲು: ಕೆ.ವಿ.ತಿರುಮಲೇಶ್ ಬರಹ

“ನಮ್ಮ ನಮ್ಮ ಜಾನುವಾರುಗಳನ್ನು ಹುಡುಕಿ ಹೊರಟ ಗೋಪಾಲಕರಾದ ನಮ್ಮ ಲಕ್ಷ್ಯ ಕೇವಲ ಜಾನುವಾರುಗಳ ಮೇಲೇ ಇರಲಿಲ್ಲ; ಮಕ್ಕಳಾದ ನಮಗೆ ಈ ಹುಲ್ಲಿನ ವೈಭೋಗವನ್ನು ಆನಂದಿಸುವುದೇ ಮುಖ್ಯ ಇರಾದೆಯಾಗಿತ್ತು. ಅದೂ ಅರಬ್ಬೀ ಸಮುದ್ರದಲ್ಲಿ ಸೂರ್ಯನು ನಿಜವಾಗಿ ಮುಳುಗುತ್ತಿದ್ದ ಕಾಲ! ಕವಿ ಹೇಳುವಂತೆ ಆ ಅಸ್ತಮಯ ಸಮಯದಲ್ಲಿ ಸೂರ್ಯನು ತೊಳತೊಳ ತೊಳಗುವನು.”

Read More

ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಬ್ರೆಕ್ಟನ ನಾಟಕಗಳ ಕುರಿತು

”ಗ್ರೀಕರ ಸಾಂಪ್ರದಾಯಿಕ ಥಿಯೇಟರ್ ಮತ್ತು ತನ್ನ ಕಾಲದ ನಾಟಕಗಳನ್ನು ಧಿಕ್ಕರಿಸಿ ಬ್ರೆಕ್ಟ್ ಎಪಿಕ್ ಥಿಯೇಟರನ್ನು ಪರಿಕಲ್ಪಿಸಿದ. ಸುಮ್ಮನೆ ಅಲ್ಲಾಡದೆ ಕುಳಿತು ನಾಟಕದ ಭಾವಾವೇಶದ ಏರಿಳಿತಗಳೊಂದಿಗೆ ಒಂದಾಗುವ ಪ್ರೇಕ್ಷಕರು ಬ್ರೆಕ್ಟ್ ಗೆ ಬೇಡ. ಪ್ರೇಕ್ಷಕರು ಹೀಗೆ ಒಪ್ಪಿಕೊಳ್ಳುವುದನ್ನು ಬ್ರೆಕ್ಟ್ ವಿಷವೆಂದು ಪರಿಗಣಿಸುತ್ತಾನೆ.”

Read More

‘ಬ್ರೈಡಲ್ ಫಾಲ್’ ನಯಾಗರಾ ಜಲಪಾತ: ಸುಜಾತಾ ತಿರುಗಾಟ ಕಥನ

“ಕೇವಲ ನಲವತ್ತು ವರುಶದ ಹಿಂದೆ ಬೇಸಿಗೆಯಲ್ಲೂ ನೀರ ಸುರುವಿನಲ್ಲಿ ಕಣ್ ತಣಿಸುತ್ತಿದ್ದ ಜಲಪಾತವನ್ನು ನಾವು ನೋಡಿ ಬಂದಿದ್ದೆವು. ಈಗೊಮ್ಮೆ ಜನವರಿ ತಿಂಗಳಿನಲ್ಲಿ ಹೋದಾಗ ಗಬ್ಬೆದ್ದ ಹಳ್ಳಕೊಳ್ಳದಂತೆ ಭಾಸವಾಗಿತ್ತು. ಭೂಮ್ತಾಯಿಯೇ ಎದ್ದು ಬಾಯಿಬಡಿದುಕೊಳ್ಳುವಂತೆ ಒಡಲು ಬರಿದಾಗಿತ್ತು. ಮನುಷ್ಯ ನಡೆದಾಡಿದ ದಾರಿಯಲ್ಲಿ ಹುಲ್ಲೂ ಹುಟ್ಟಲಾರದು ಎಂಬುದು ಜಾನಪದರ ನಂಬಿಕೆ. ಎತ್ತರದ ಜಾಗದಲ್ಲಿ ನಾವು ನಿಂತು ಭೂಮಿಯನ್ನು ನೋಡಿದಾಗ ಮನುಷ್ಯನ ಈ ಆಟಗಳ ಸಣ್ಣತನ ತೋರುತ್ತದೆ.”

Read More

ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯದ ತಾಜಾ ಕಸುವು

“ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ.”

Read More

ಸುಮಿತ್ ಮೇತ್ರಿ ಹಲಸಂಗಿ ಬರೆದ ಎರಡು ಹೊಸ ಕವಿತೆಗಳು

“ಹಸಿವು ಯಾರಪ್ಪನ ಮನಿದು
ತುಂಡು ರೊಟ್ಟಿ ಕೊಡು
ಉಸಿರಿನ ಇಂಧನ ತುಂಬಿ
ಶವಪೆಟ್ಟಿಗೆಯ ಅಸ್ಥಿಪಂಜರ ಬಿಗಿಯಬೇಕು”- ಸುಮಿತ್ ಮೇತ್ರಿ ಹಲಸಂಗಿ ಬರೆದ ಎರಡು ಹೊಸ ಕವಿತೆಗಳು

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.
kendasampige
kendasampige4 hours ago
ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ

ಕವಿತೆಗಳ ಕುರಿತ ಚರ್ಚೆಯೇ ಹಾಗೆ. ವೃಥಾ ತಲೆಚಚ್ಚಿಕೊಳ್ಳುತ್ತೇವೆ. ಕವಿತೆಯ ಶರೀರ ಆತ್ಮ ರಸ ರೀತಿ ಶೈಲಿ ದನಿ ಔಚಿತ್ಯ ಅಂತ. ಆದರೆ ನಿಜವಾದ ಕವನ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮುಗುಳ್ನಗುತ್ತಿರುತ್ತದೆ. ಯಾರ ಕೈಗೂ ತಾನು ಸಿಗದೇ ಕಣ್ಣು ಮಿಟುಕಿಸುವ ತುಂಟ ಶಾಮನ ಹಾಗೆ. ಕೈಗೂ ಸಿಗದೇ ಕಣ್ಣಿಗೂ ಸಿಗದೇ ನುಣುಚಿಕೊಳ್ಳುವ ಮಾಯಾಂಗನೆ ಹಾಗೆ. ಕವಿತೆಯ ಸ್ವರೂಪ ಮತ್ತು ವ್ಯಾಕಪತೆ ಕುರಿತ ಒಂದು ನಿರ್ದಿಷ್ಟ ನಿಲುವು ಸಾಧ್ಯವಾಗದೇ ಇರುವುದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬ ಕವಿಯ ಕಾವ್ಯ ಮೀಮಾಂಸೆಗಳೇ ಬೇರೆ ಬೇರೆ.
ಇತ್ತೀಚೆಗೆ ತೀರಿಹೋದ ಕವಿ ಜಿ.ಕೆ ರವೀಂದ್ರಕುಮಾರ್ ಈವರೆಗಿನ ಕಾವ್ಯದ ಕುರಿತು ವಾಸುದೇವ್ ನಾಡಿಗ್ ಬರಹ
Vasudev Nadig

https://bit.ly/35CCf8d
kendasampige
kendasampige1 day ago
ಸೂಡಿಯ ಜೋಡುಕಳಸದ ಗುಡಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

ನಾಗೇಶ್ವರ ಗುಡಿಯ ಹಿಂಭಾಗದ ಆವರಣವೊಂದರಲ್ಲಿ ದೊಡ್ಡದೊಂದು ಗಣಪತಿಯ ವಿಗ್ರಹವನ್ನೂ ನಂದಿ, ಶಿವಲಿಂಗಗಳನ್ನೂ ಇರಿಸಲಾಗಿದೆ. ಪಕ್ಕದಲ್ಲಿಯೇ ಚಾಲುಕ್ಯರ ನಿರ್ಮಾಣದ ಪುರಾತನ ಬಾವಿಯೊಂದಿದೆ. ಬಾವಿಯೂ ಸುತ್ತಲಿನ ಭವ್ಯಕಟ್ಟಡವೂ ಸೊಗಸಾಗಿವೆ. ಇನ್ನಷ್ಟು ಮುಂದೆ ಓಣಿಯೊಂದರಲ್ಲಿ ಸಾಗಿದರೆ, ಅಚಲೇಶ್ವರ ದೇವಾಲಯವು ಕಾಣಸಿಗುತ್ತದೆ. ಪೂರ್ವದಲ್ಲಿ ಈ ಗುಡಿಗೆ ಅಕ್ಕೇಶ್ವರ ದೇವಾಲಯವೆಂಬ ಹೆಸರಿದ್ದಿತು. ಇದು ಸತ್ಯಾಶ್ರಯ ಚಕ್ರವರ್ತಿಯ ಮಗಳು ಅಕ್ಕಾದೇವಿಯು ನಿರ್ಮಿಸಿದ ದೇಗುಲಗಳಲ್ಲೊಂದು. ಅಕ್ಕಾದೇವಿಯು ಆ ಕಾಲದ ಸಮರ್ಥ ಆಡಳಿತಗಾರರಲ್ಲೊಬ್ಬಳಾಗಿದ್ದವಳೆಂದು ಶಾಸನಗಳು ವರ್ಣಿಸುತ್ತವೆ. ದೇಗುಲದ ಮುಖಮಂಟಪ, ಭುವನೇಶ್ವರಿ, ಕಂಬಗಳು ಎಲ್ಲದಕ್ಕೂ ಪುರಾತತ್ವ ಇಲಾಖೆ ಪುನಶ್ಚೇತನ ನೀಡಿದೆ. ಆರು ಪಟ್ಟಿಕೆಗಳುಳ್ಳ ಬಾಗಿಲವಾಡದ ಕೆತ್ತನೆ ಆಕರ್ಷಕವಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಆರನೆಯ ಕಂತು

https://bit.ly/2Bc9zF7
kendasampige
kendasampige2 days ago
ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Premalatha Basavarajaiah

https://bit.ly/2Mh6jih

ನಮ್ಮ ಟ್ವಿಟ್ಟರ್

6 months ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
6 months ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
6 months ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ರಾಜು ಸನದಿ ಪುಸ್ತಕದ ಕುರಿತು ಆಶಾ ಜಗದೀಶ್ ಲೇಖನ

"ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು...

Read More

ವಾರ್ತಾಪತ್ರಕ್ಕಾಗಿ