Advertisement

Month: April 2024

ಗೌರೀಶ್ ಕಪನಿ ತೆಗೆದ ಓರಿಯಂಟಲ್ ವೈಟ್ ಐ ಹಕ್ಕಿಗಳ ಚಿತ್ರ

ಈ ದಿನದ ಚಿತ್ರವನ್ನು ತೆಗೆದವರು ಗೌರೀಶ್ ಕಪನಿ. ಸಾಫ್ಟವೇರ್ ಉದ್ಯೋಗಿಯಾಗಿರುವ ಗೌರೀಶ್ ಅವರಿಗೆ ಪ್ರಕೃತಿ ಮತ್ತು ಪ್ರಕೃತಿಯ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

“ಕಳೆದ ಜಾತ್ರೆಯಲ್ಲಷ್ಟೆ ಖರೀದಿಸಿದ ಹೊಸ ಬಟ್ಟೆಯೊಳಗೆ
ಎಂಥೆಂತೆಹ ವಿಪರೀತ ಬಣ್ಣಗಳು
ತೊಳೆದಷ್ಟು ಬದುಕು ಚರಿತ್ರೆ ಚಹರೆ ಬಿಡಿಸುವಂತೆ
ಮೊಳೆತ ಬೀಜಗಳ ಮುಸುಕುವ ವ್ಯಾಮೋಹ
ಇರುಳ ಮೈಯೊಳಗೆ ಬಂದಿದ್ದಾದರು ಹೇಗೆ!
ಬೆರಗಾದಳು”- ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

Read More

ಓಬೀರಾಯನ ಕಾಲದ ಕತೆಗಳು: ಎಂ. ಎನ್. ಕಾಮತ್ ಬರೆದ ಕತೆ “ಬೊಗ್ಗು ಮಹಾಶಯ”

“ಮೆರವಣಿಗೆಯಲ್ಲಿ ಕಾಣುವ ಮದುಮಗನ ಹಾಗೆ ಹಣೆಗೆ ಬಾಸಿಂಗವನ್ನು ಕಟ್ಟಿದಂತೆ ಅಲಂಕಾರಹೊಂದಿ, ಕೊರಳಿಗೆ ಘಂಟಾಮಣಿಗಳ ಸರವನ್ನು ತೊಟ್ಟುಕೊಂಡು, ಗಂಭೀರವಾಗಿ ಸವಾರಿಗಾಡಿಯನ್ನು ಎಳೆವ, ಬೆನ್ನಮೇಲೆ ಮದುಮಗನ ರೇಶ್ಮೆದುಪ್ಪಟದ ಬದಲು ಗೋಣಿಚೀಲವನ್ನು ಹೊದೆದುಕೊಂಡು, ಒಂದು ಕಣ್ಣನ್ನು ಬಂಡಿಯಾಳಿನ ಬಲಗೈಯ ಮೇಲೂ, ಮತ್ತೊಂದನ್ನು ನಡೆವ ಮಾರ್ಗದ ಮೇಲೂ ಇಟ್ಟು…”

Read More

ಸಿಡ್ನಿ ಮಾರ್ಡಿ ಗ್ರಾ- “ಒಂದು ಭಿನ್ನ ಹಾದಿ”: ಡಾ. ವಿನತೆ ಶರ್ಮಾ ಅಂಕಣ

“ಎಲ್ಲರಿಂದಲೂ ಬೇರ್ಪಟ್ಟು ಒಬ್ಬಂಟಿಯಾಗಿ ನಿಂತದ್ದು ಆ ವ್ಯಕ್ತಿ. ಏಕೆಂದರೆ ಅದು ಆ ವ್ಯಕ್ತಿ ಅವನು ಎಂಬ ವ್ಯಕ್ತಿತ್ವನ್ನು, ಅಸ್ಮಿತೆಯನ್ನು ಬಿಟ್ಟು ಅವಳು ಎಂದು ಆಗಲು ಮಾರ್ಪಾಡಾಗುತ್ತಿದ್ದ ಹಂತದ ಕಥೆ. ಆ ಒಂದು ವಿಶಿಷ್ಟ ಹಂತದಲ್ಲಿ ಅವಳು ಸಹಾಯ ಬಯಸಿ ಪ್ರಾಜೆಕ್ಟ್ ಸೇರಿದ್ದಳು. ಇನ್ನೂ ಹರೆಯದ ವಯಸ್ಸು. ಕಾನೂನು ಪ್ರಕಾರ ಇನ್ನೂ ಅವನು ಎಂಬ ಲಿಂಗವೇ ಚಾಲ್ತಿಯಲ್ಲಿತ್ತು.”

Read More

ಕಾಯುತ್ತಲೇ ಇರುವ ಸ್ವರ್ಗದ ಬಾಗಿಲು: ಇ ಆರ್ ರಾಮಚಂದ್ರನ್ ಕಥಾನಕ

“ರಾತ್ರಿ 1 ಗಂಟೆಯ ಸಮಯಕ್ಕೆ ನಮ್ಮ ಟೆಲಿಫೋನ್ ಕೂಗಿತು. ಅಷ್ಟು ಹೊತ್ತಿಗೆ ಬಂದ ಕಾಲ್ ಗೆ ಹೆದರಿ ಹಲೋ ಅಂದೆ. ಸಿನ್ಹಾ ಲೈನಿನಲ್ಲಿ. ಆತ ಗಾಭರಿಯಿಂದ , ‘ಸರ್ಕಾರ್ ಗೆ ಹಾರ್ಟ ಅಟ್ಯಾಕ್ ಆಗಿದೆ. ಬೇಗ ಬನ್ನಿ’ ಎಂದ. ಎಂತಹ ಪರಿಸ್ಥಿತಿಗೆ ತಯಾರಾಗಿದ್ದರೂ ಜೀವನದಲ್ಲಿ ಎಷ್ಟೋ ಸಲ ಅನೀರೀಕ್ಷಿತವಾಗಿ, ತಿರುವು ಬರುತ್ತೆ; ಜೊತೆಗೆ ಜಂಘಾಬಲ ಉಡುಗಿಹೋಗುತ್ತೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ