Advertisement

Month: April 2024

ನುಡಿದ ಮಾತಿಗೊಂದು ನುಡಿ: ತಮ್ಮದೇ ಅನುವಾದಗಳಿಗೆ ಸ.ರಘುನಾಥ ಪ್ರವೇಶಿಕೆ

”ಅಡಿಗೋಪುಲ ಅವರ ಇಲ್ಲಿನ ಕವಿತೆಗಳಲ್ಲಿ ಕೆಲವು ಕವಿತೆಗಳು ವಾಚ್ಯವೆನ್ನಿಸುವುದುಂಟು. ಕವಿತೆಗಳು ವಾಚ್ಯವೆನ್ನಿಸುವುದೇಕೆಂದರೆ ವಿವರಣಾತ್ಮಕವಾದುದುರಿಂದ. ತೆಲುಗಿನ ‘ವಚನ ಕವಿತ’ ಕಾವ್ಯ ಮಾರ್ಗದ ಲಕ್ಷಣಗಳನ್ನು ಅರಿಯದಿದ್ದರೆ, ತೆಲುಗಿನಲ್ಲಿ ಈ ಶೈಲಿ ಜನಾದರಣೆ, ಮನ್ನಣೆ ಪಡೆದದ್ದು ಎನ್ನುವ ವಿಚಾರವನ್ನು ಗಮನಿಸದಿದ್ದರೆ, ವಾಚ್ಯತೆಯ ಹಿಂದಿನ ಮನೋಧರ್ಮವನ್ನು ತಪ್ಪಾಗಿ ಗ್ರಹಿಸಬೇಕಾಗುತ್ತದೆ.

Read More

ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು

ಕಾಣದೆಲೆ ಹೋಗುವ ಕಾಲ ಕೈತಾಕಿ ನಿಂತಿದ್ದು ನೀ ಬಂದ ಮೇಲೆ
ಕೈ ತಾಕಿ ಮೈ ಸೋಕಿ ಓಡದೆಲೆ ಪಕ್ಕ ಕುಳಿತಿದ್ದು ನೀ ಬಂದ ಮೇಲೆ…… ಅರ್.ದಿಲೀಪ್ ಕುಮಾರ್ ಬರೆದ ಎರಡು ಗಜಲುಗಳು

Read More

ಓಬೀರಾಯನ ಕಾಲದ ಕತೆಗಳು:ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ “ದೊರೆಯ ಪರಾಜಯ”

ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು.

Read More

ನೆದರ್ ಲ್ಯಾಂಡ್ಸ್ ನ ಸೈಕಲ್ ಸಂಸ್ಕೃತಿ:ಸೀಮಾ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

“ಡಚ್ಚರಿಗೆ ತಮ್ಮ ಸೈಕಲ್ ಸವಾರಿಯ ಬಗ್ಗೆ ಅಪಾರ ಅಭಿಮಾನ. ಅವರು ನಿದ್ರಿಸುತ್ತಲೂ ಸೈಕಲ್ ತುಳಿಯಬಲ್ಲರೇನೋ ಎನಿಸುತ್ತದೆ. ನಾನು ಎಲ್ಲಿ ಬೇಕಾದಲ್ಲಿ, ಎಂಥ ಜನನಿಬಿಡ ಪ್ರದೇಶದಲ್ಲೂ ಆರಾಮಾಗಿ ಸೈಕಲ್ ಸವಾರಿ ಮಾಡಬಲ್ಲೆ, ಆದರೆ ಒಬ್ಬ ಡಚ್ ವ್ಯಕ್ತಿ ಯಾವ ಆತ್ಮವಿಶ್ವಾಸದೊಂದಿಗೆ ಸೈಕಲ್ ಸವಾರಿ ಮಾಡುತ್ತಾನೋ ಅಷ್ಟು ವಿಶ್ವಾಸದಿಂದ ನಾನೆಂದಿಗೂ ಮಾಡಲು ಸಾಧ್ಯವಿಲ್ಲ.”

Read More

ಜ್ಯೋತಿಷಿ ಹೇಳಿದ ಮಾತು:ಇ.ಆರ್.ರಾಮಚಂದ್ರನ್ ಬರಹ

“ಶ್ರೀದೇವಿಯ ಸರದಿ ಬಂದಾಗ, ಜ್ಯೋತಿಷಿ ಸ್ವಲ್ಪ ಗಂಭೀರವಾಗಿ `ಮದುವೆ ನಿನಗೆ ಒಳ್ಳೆಯದು ಮಾಡಲ್ಲ. ನಿನ್ನ ಗಂಡನಾಗುವನಿಗೆ ಆಯಸ್ಸು ಕಡಿಮೆ ಆಗುತ್ತೆ’ ಎಂದ. ಹುಡುಗಿಯರೆಲ್ಲಾ ಶ್ರೀದೇವಿಗೆ ಸಮಾಧಾನ ಮಾಡಿ ಯಾವ ಜ್ಯೋತಿಷಿಯನ್ನೂ ನಂಬಲಾಗುವುದಿಲ್ಲ ಎಂದು ಸಮಾಧಾನ ಮಾಡಿದರು. ಅಷ್ಟಕ್ಕೂ ಅಲ್ಲಿ ಯಾರಿಗೂ ಜ್ಯೋತಿಷ್ಯದಲ್ಲಿ ಹೆಚ್ಚು ನಂಬಿಕೆ ಇರಲಿಲ್ಲ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ