Advertisement

Month: April 2024

ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

“ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ.”

Read More

ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ: ಫಾತಿಮಾ ರಲಿಯಾ

“ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮಂಗಳೂರಿನ ‘ಐಡಿಯಲ್’ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟುಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ.”

Read More

ವಿಪಿನ್ ಬಾಳಿಗ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ವಿಪಿನ್ ಬಾಳಿಗ. ಐಟಿ ಕಂಪೆನಿಯ ಉದ್ಯೋಗಿಯಾಗಿರುವ  ವಿಪಿನ್ ಅವರಿಗೆ ಪರಿಸರ ಸಂರಕ್ಷಣೆ ಇಷ್ಟದ ವಿಷಯ. ಉಭಯಚರ ಪ್ರಾಣಿಗಳು ಹಾಗೂ ಕೀಟಗಳ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಮತ್ತೇನೋ ತಡಕುತ್ತದೆ ಬಹು
ಆಳದ ತಳದಲ್ಲಿ ಭಾರೀ ತೂಕದ ವಸ್ತು
ಅದರ ನೆನಪೆಲ್ಲ ಹೇಳುವುದು ದುಃಖದ
ಕತೆ, ಅಳಲು, ಅಸಹಾಯಕತೆ
ಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿ
ಒಳಗಿಳಿದು ನೋಡಿದರೆ ನನ್ನದೇ ಕಥೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಪದಗಳಾಗದ ಅವರ್ಣನೀಯ ಆನಂದ..: ಆಶಾ ಜಗದೀಶ್ ಅಂಕಣ

“ಅಕ್ಬರ್ ಅರಮನೆಗೆ ಮರಳಿ ಹಲವಾರು ದಿನಗಳಾದರೂ ಹರಿದಾಸರು ಅವರ ಸ್ಮೃತಿಯಿಂದ ದೂರವಾಗುವುದೇ ಇಲ್ಲ… ಕೂತರೂ ನಿಂತರೂ ಹರಿದಾಸರೇ… ಒಂದು ದಿನ ಅಕ್ಬರ್ “ತಾನಸೇನ್ ಅಂತಹಾ ಗುರುಗಳಿಂದ ಪಾಠ ಕಲಿತ ನಿಮ್ಮ ಗಾಯನವೇಕೆ ಆ ಮಟ್ಟಕ್ಕಿಲ್ಲ” ಎಂದು ಕೇಳುತ್ತಾರೆ. ಆಗ ತಾನಸೇನ್ ಹೇಳುತ್ತಾರೆ “ಜಹಾಪನಾ ನಾನು ನಿಮ್ಮನ್ನು ಮೆಚ್ಚಿಸಲಿಕ್ಕಾಗಿ ಹಾಡುತ್ತೇನೆ, ಹಾಗಾಗಿ ನನ್ನ ಕಲೆಗಾರಿಕೆ ಆ ದೈವತ್ವಕ್ಕೆ ಏರಲಿಲ್ಲ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ