Advertisement

Month: April 2024

ಸನಾದಲ್ಲಿ ಬರೆದ ಕೆಲವು ಅಪೂರ್ಣ ಟಿಪ್ಪಣಿಗಳು: ಕೆ. ವಿ. ತಿರುಮಲೇಶ್ ಬರಹ

“ಪ್ರಜಾಪ್ರಭುತ್ವವನ್ನು ಟೀಕಿಸುವವರಿಗೆ ಬೇರೆ ಯಾವ ಪದ್ಧತಿ ಯಾವ ಉತ್ತಮ ಕಾರಣಕ್ಕೆ ಬೇಕೋ ತಿಳಿಯುವುದಿಲ್ಲ. ಪ್ರಜಾಪ್ರಭುತ್ವವೊಂದನ್ನು ಬಿಟ್ಟು ಇನ್ನುಳಿದ ಯಾವುದೇ ರಾಜಕೀಯ ವ್ಯವಸ್ಥೆಯೂ ಇವರಿಗೆ ಒಪ್ಪಿಗೆಯೇ? ಪ್ರಜಾಪ್ರಭುತ್ವವೆಂದರೆ ಯಾಕೆ ಇವರಿಗೆ ಇಷ್ಟೊಂದು ಹೆದರಿಕೆ? ಹಾಂ! ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿದೆ. ಇದು ಇವರಿಗೆ ಸಹ್ಯವಲ್ಲ”

Read More

ಭಾಗ್ಯಜ್ಯೋತಿ ಹಿರೇಮಠ ಬರೆದ ಮೂರು ಕವಿತೆಗಳು

“ಶತಮಾನದಿಂದಿನ ಪಿಂಡಾಂಗಗಳಿಗೆ
ಅಕ್ಕಡಿಕಾಳಿಗೆ ಬನದ ಹೋರಿಗಳು
ಹದಗೊಳಿಸಿದ ಮಣ್ಣು
ನನ್ನಪ್ಪ, ಅಜ್ಜ, ಮುತ್ತಜ್ಜರ ನೆನಪಿಗೆ
ಒಕ್ಕಲು ಮಕ್ಕಳ ಕಣ್ಣು ತಂಪಾಗಿಸಿದೆ”- ಭಾಗ್ಯಜ್ಯೋತಿ ಹಿರೇಮಠ ಬರೆದ ಮೂರು ಕವಿತೆಗಳು

Read More

ತತ್ವಗಳ ಚರ್ಚಿಸುತ್ತಾ…: ಮಧುಸೂದನ್ ವೈ ಎನ್ ಅಂಕಣ

“ಪಶ್ಚಿಮರು ಅನುಭವಿಸುತ್ತಿದ್ದಂಥ ಕಷ್ಟಗಳನ್ನು ನಮ್ಮಲ್ಲಿ ಯಾರೂ ಅನುಭವಿಸಿಯೇ ಇಲ್ಲವೇ? ಇದ್ದಾರೆ ಆದರೆ ಇಲ್ಲಿನವರ ಕಷ್ಟಗಳ ಕಾರಣೀಕರ್ತನು ಬೇರೆ ಅಲ್ಲಿನ ಕಷ್ಟಗಳ ಕಾರಣೀಕರ್ತನು ಬೇರೆ. ಅಲ್ಲಿ ಶಿಕ್ಷೆ ಕೊಡುತ್ತಿದ್ದುದು ಪ್ರಕೃತಿ. ಪ್ರಕೃತಿ ಎಲ್ಲಾರಿಗೂ ಒಂದೇ ಮಾದರಿಯಲ್ಲಿ ಒಂದೇ ಮೊತ್ತದಲ್ಲಿ ಶಿಕ್ಷೆ ಕೊಡುವಂತಹ ವಿಶಿಷ್ಟ ಚಿತ್ರಗುಪ್ತ.”

Read More

ನಾಗೇಶ್ ಓ ಎಸ್ ತೆಗೆದ ಈ ದಿನದ ಚಿತ್ರ

ನಾಗೇಶ್ ಓ ಎಸ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಡುವಿನ ಒಂದು ಪುಟ್ಟ ಹಳ್ಳಿಯವರು. ದಯಾನಂದ ಸಾಗರ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಸರ್ಗದ ಮಡಿಲಲ್ಲಿ ಬೆಳೆದ ಕಾರಣ ಪರಿಸರ ಮತ್ತು ಅದರ ಸಂರಕ್ಷಣೆಯತ್ತ ಇವರಿಗೆ ಒಲವು. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕೆಲ ಗೆಳೆಯರೊಟ್ಟಿಗೆ ಸೇರಿ WCG ಎಂಬ ಸಂಘ ಸಂಸ್ಥೆಯನ್ನು ಕಟ್ಟಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಡಾ. ಕೆ. ಚಿನ್ನಪ್ಪ ಗೌಡರ ಕವನಸಂಕಲನಕ್ಕೆ ಡಾ. ಬಿ.ಎ. ವಿವೇಕ ರೈ ಮುನ್ನುಡಿ

“ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ