Advertisement

Month: April 2024

ಲೀಲಾ ಅಪ್ಪಾಜಿ ತೆಗೆದ ನೀಲಿ ಕೊರಳ ಕುಟ್ರ (Blue throated Barbet) ಹಕ್ಕಿಯ ಚಿತ್ರ

ನೀಲಿ ಕೊರಳ ಕುಟ್ರ (Blue throated Barbet) ಹಕ್ಕಿಯ ಚಿತ್ರ ತೆಗೆದವರು ಲೀಲಾ ಅಪ್ಪಾಜಿ. ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದ  ಇವರು ಪ್ರಿನ್ಸಿಪಾಲರಾಗಿ ನಿವೃತ್ತಿ ಹೊಂದಿದವರು. ದೇಶವೆಲ್ಲಾ ಸುತ್ತಾಡುತ್ತ ಛಾಯಾಗ್ರಹಣ ಮಾಡುವುದು ಇವರ ನೆಚ್ಚಿನ ಹವ್ಯಾಸ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

“ನಗರದ ಎದೆಯಲ್ಲೇನಾದರೂ ಕೂತಿರಬಹುದಾ
ನೋಡಲಿಕ್ಕೆ ಇಲ್ಲಿ ಕಣ್ಣುಗಳು ಸಂಧಿಸುವುದಿಲ್ಲ..
ಬರೀ ಬೆಳಕಿನ ವ್ಯಾಪಾರ, ದೇವರು ತೇಜಿಯಾಗಿದ್ದಾನೆ..”- ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

Read More

ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.”

Read More

“ನಟನೆ”: ಸಚೇತನ ಭಟ್ ಅನುವಾದಿಸಿದ ಹರುಕಿ ಮುರಕಮಿ ಬರೆದ ಜಪಾನೀ ಕತೆ

“ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. “

Read More

ರಾಣಿರಾಜ್ಯದಲ್ಲಿ ಬೆಂಕಿ ವಿಕೋಪ, ಪ್ರವಾಹ ತಾಪ: ವಿನತೆ ಶರ್ಮ ಅಂಕಣ

“ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ….”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ