ಎಪ್ಪತೈದರ ಹೊಸ್ತಿಲಲಿ ನಿಂತು: ಆಶಾ ಜಗದೀಶ್ ಅಂಕಣ
“ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರದೊಂದಿಗೆ ಗುರುತಿಸಿಕೊಳ್ಳುತ್ತಾ ನನ್ನ ಪ್ರಪಂಚವೇ ದೊಡ್ಡದೆಂದುಕೊಳ್ಳುವ ಭ್ರಾಮಕ ಸಮೂಹದ ಮುಂದೆ ಮನೆ ಕುಟುಂಬ ಎನ್ನುವ ಪುಟ್ಟ ಜಗತ್ತಿನ ಅಗಾಧ ಆಳ ವಿಸ್ತಾರದೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ತಮ್ಮ ಬರಹದಲ್ಲಿ ತಂದವರು ವೈದೇಹಿಯವರು. ಅವರಿಗೆ ತಾವು ಎಂಥದ್ದೋ ಸಾಧನೆ ಮಾಡಿರುವೆ ಎನ್ನುವ ಭ್ರಮೆಯಿಲ್ಲ. ತನಗೆ ತಿಳಿಯದ್ದೂ ಇಲ್ಲಿದೆ ಎನ್ನುವ ಸರಳತೆ ಅವರದ್ದು. ಪುಟ್ಟ ಪುಟ್ಟ ಸಂಬಂಧದ ಎಳೆಗಳು ಒಂದಾಗುತ್ತಾ ದಾರವಾಗುವ, ಹಗ್ಗವಾಗುವ ಸೂಕ್ಷ್ಮ ಹಂತಗಳು ಅವರ ಕೈಯಲ್ಲಿ ಸಲೀಸಾಗಿ ಕತೆಗಳಾಗಿಬಿಡುತ್ತವೆ. ಅವರೇ ಹೇಳುವಂತೆ ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಬಂದ ವೈದೇಹಿಯವರಿಗೆ ಅಲ್ಲಿನ ನೈಜಪಾತ್ರಗಳು, ಅವುಗಳ ನೋವು ನಲಿವುಗಳು…. ಇಂತಹ ಅವರನ್ನು ಕಾಡಿದ ಎಳೆಗಳೇ ಅವರ ಕಥೆಗಳಾದವು.”
ಆಶಾ ಜಗದೀಶ್ ಅಂಕಣ