Advertisement

Month: April 2024

ಶ್ರೀಧರ ಬಳಗಾರ ಕಾದಂಬರಿಗೆ ಓ. ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

“ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು…”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

“ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು.”

Read More

ದಾರು ಸಿದರಾಮ ಮತ್ತು ಸಾಸಿವೆ ಡಬ್ಬ: ಡಾ. ಲಕ್ಷ್ಮಣ ವಿ.ಎ. ಅಂಕಣ

“ಕೇರಿಗೊಂದು ದಾರಿಯಿರುವಂತೆ ಊರಿಗೊಬ್ಬ ಸಿದರಾಮನಿದ್ದ. ಹೆಂಡತಿ, ಮಕ್ಕಳು, ಹಿಂದೆ, ಮುಂದೆ, ಎಡಕೆ, ಬಲಕೆ ಯಾರೂ ಇಲ್ಲದ ಅನಾಥ. ಹಾಗಂತ ಅವನು ಯಾರ ಹತ್ತಿರಾನೂ ಅನುಕಂಪ ನಿರೀಕ್ಷಿಸುವವನೂ ಅಲ್ಲ. ಬೆಳಗಾದರೆ ಸೈಕಲ್ ಬೆನ್ನಿಗೆ ಐಸ್ ಡಬ್ಬಾ ಕಟ್ಕೊಂಡು ‘ಗಾರೇಗಾರ’ ಮಾರುವುದು. ರಾತ್ರಿಯಾಗುತ್ತಿದ್ದಂತೆ ಊರಾಚೆಗಿನ ಗೂಡಂಗಡೀಲಿ ದಾರು ಮಾರುತ್ತಿದ್ದ. ಹೀಗಾಗಿ ಊರಲ್ಲಿ ಅವನನ್ನ ಕರೆಯೋದೆ ದಾರು ಸಿದರಾಮ ಅಂತ. ದಾರೂ ಮಾರಿದರೂ ಒಂದು ದಿನವೂ ಸಾರಾಯಿ ಕುಡಿದಿದ್ದನ್ನ ಯಾರೂ ಕೇಳಿರಲಿಲ್ಲ ಕಂಡಿರಲಿಲ್ಲ.”

Read More

ಸುಗತ ಸಂಶಿರೊ- ಭಾಗ 2: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು”

Read More

ಏನು ಏನು ಜೇನು ಜೇನು: ಕೆ. ವಿ. ತಿರುಮಲೇಶ್ ಲೇಖನ

“ಚಿಕ್ಕಂದಿನಲ್ಲಿ ನಾನು ತೋಟದಲ್ಲಿ ಅಪರೂಪಕ್ಕೆ ಹೆಜ್ಜೇನಿನ ಗೂಡುಗಳನ್ನು ನೋಡಿದ್ದಿದೆ, ಆದರೆ ಅವುಗಳ ಜೇನನ್ನು ಇಳಿಸಬೇಕೆನ್ನುವ ವಿಚಾರ ಯಾರೂ ಮಾಡಿರಲಿಲ್ಲ. ಜನ ಹೆಜ್ಜೇನಿನ ತಂಟೆಗೆ ಹೋಗುತ್ತಿರಲಿಲ್ಲ ಎಂದು ಇದರರ್ಥ. ಇದರಿಂದ ಹೆಜ್ಜೇನಿಗೆ ಲಾಭವಾಯಿತೇ ಎಂದರೆ ಹೇಳುವುದು ಕಷ್ಟ. ಮನುಷ್ಯರ ಕೋನದಿಂದ ಜೇನಿನಲ್ಲಿ ಹೆಜ್ಜೇನು ‘ವೈಲ್ಡ್’, ಮನುಷ್ಯರ ಆಯ್ಕೆಗೆ ಒಳಗಾದುದಲ್ಲ. ಕೋಳಿಗಳಲ್ಲಿ ಕಾಡುಕೋಳಿ, ನಾಡುಕೋಳಿ ಇದ್ದಹಾಗೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ