Advertisement

Month: March 2024

ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ

“ಕಳ್ಳ ಬೆಕ್ಕಿನಂತೆ ಕೋಣೆಗೆ ಬಂದು
ಮುಸುಕೆಳೆದು ತುಟಿಗೆ ತುಟಿಯಿಟ್ಟರೆ
ನಿನ್ನ ತುಟಿಗಂಟಿದ ಮದಿರೆಯೆಲ್ಲ
ನನ್ನ ತುಟಿಗೆ ದಾಟಿ ಮತ್ತೇರಿದಂತೆ
ಎರಡು ಕ್ಷಣ ಆಸ್ವಾದಿಸಿ ಕಣ್ಬಿಟ್ಟರೆ
ನೀನು ಎದುರಿಗಿಲ್ಲ “- ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ

Read More

ಅಳುವ ಕಂದನಿಗಾಗಿ.. ಅತ್ತಿತ್ತ ನೋಡುತ್ತಾ…: ಶ್ರೀಹರ್ಷ ಅಂಕಣ

“ಕ್ಯಾಪಿಟಲಿಸಂನ ಕೀಲುಗೊಂಬೆಗಳಾಗಿ ಬದುಕುತ್ತಿರುವ ಜನರಿಗೆ ವಿಕಾಸವಾದವನ್ನು ಯೊಚಿಸುವ ವ್ಯವಧಾನವೆಲ್ಲಿದೆ? ತಾವೇ ಕಟ್ಟಿಕೊಂಡ ಸಮಾಜದ ಸರಳುಗಳೊಳಗೆ ಬಂಧಿಯಾಗಿ ಒದ್ದಾಡುತ್ತಿರುವ, ಹುಚ್ಚು ಓಟದೊಳಗೆ ನಮ್ಮನ್ನು ನಾವೇ ಕಳೆದುಕೊಂಡ ನತದೃಷ್ಟ ಪೀಳಿಗೆ ನಮ್ಮದು! ಹಣ ಸಂಪಾದಿಸಲು ಬಂಜೆತನ ತಂದುಕೊಳ್ಳುವುದು, ಕಳೆದುಹೋದ ಫಲವತ್ತತೆಯನ್ನು ಕೊಂಡುಕೊಳ್ಳಲು ಮತ್ತೆ ಅದೇ ಹಣ ಖರ್ಚು ಮಾಡುವುದು! ಎಷ್ಟು ಸೂಕ್ಷ್ಮವಾಗಿ ನಮ್ಮನ್ನು ಈ ಬಂಡವಾಳಶಾಹಿ ವ್ಯವಸ್ಥೆಯು ಯಾವ ಗುರಿಯೂ ಇಲ್ಲದಂತೆ ಓಡುವಂತೆ ಮಾಡುತ್ತದೆ.”

Read More

ಕಥಾಲೋಕದ ‘ಹೊಸನೀರು…’. : ಆಶಾ ಜಗದೀಶ್ ಅಂಕಣ

“ಮನೆಯಲ್ಲಿ ಹಿಡಿ ಕೂದಲಿಲ್ಲ! ಸೌಕಾತಿ ಚವರಿ ಮಾಡಿ ಕೊಡಲು ಹೇಳಿದ್ದಾಳೆ ಬೇರೆ, ಅಂಥವಳಿಗೆ ಮಾಡಿಕೊಟ್ಟರೆ ನಾಲ್ಕು ಕಾಸು ಹೆಚ್ಚಿಗೆ ಸಿಕ್ಕಿತು ಎನ್ನುವ ಆಸೆ ಇವಳಿಗೆ. ಇಂತಹ ಸಂದಿಗ್ಧದಲ್ಲಿ ಅವಳಿಗೆ ಕಾಣಿಸುವ ಒಂದೇ ದಾರಿ ಎಂದರೆ ತನ್ನದೇ ಸೊಂಪು ಕೂದಲನ್ನು ಕತ್ತರಿಸಿ ಚವರಿ ಮಾಡಿಕೊಡುವುದು. ಹಸುವಿಗೆ ಹೆಸರುವಾಸಿ ದುಗ್ಗಿ ಕೊನೆಗೆ ಅದನ್ನೇ ಮಾಡುತ್ತಾಳೆ. ಇದು ತಿಳಿಯದ ಆ ಸೌಕಾತಿ ಚವರಿಯನ್ನು ಮೆಚ್ಚಿ ತಲೆಗೆ ಹಚ್ಚಿಕೊಂಡು…”

Read More

ಸಂಸ್ಕೃತಿಸಂಕರ: ಕೆ.ವಿ. ತಿರುಮಲೇಶ್ ಲೇಖನ

“ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ.”

Read More

ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬಸದಿಯೊಳಕ್ಕೆ ಕಾಲಿರಿಸುತ್ತಿದ್ದಂತೆ ವಿಶಾಲವಾದ ಜಗತಿಯ ಮೇಲೆ ನಿರ್ಮಿತವಾದ ಮಾನಸ್ತಂಭವು ಕಣ್ಸೆಳೆಯುತ್ತದೆ. ಐವತ್ತು ಅಡಿಗಳಷ್ಟು ಎತ್ತರದ ಈ ಭವ್ಯಸ್ತಂಭವನ್ನು ಭೈರರಸನ ಪತ್ನಿ ನಾಗಲಾದೇವಿ ಎಂಬಾಕೆಯು ನಿರ್ಮಾಣ ಮಾಡಿಸಿದಳಂತೆ. ಕಂಬದ ಬುಡದ ಚೌಕದಲ್ಲಿ ಸುತ್ತ ನಾಲ್ಕೂ ಕಡೆಗಳಲ್ಲಿ ಆಕರ್ಷಕ ಕಲಾವಿನ್ಯಾಸಗಳಿವೆ. ಮೇಲೆ ಹೋದಂತೆ ಕಂಬದ ಹೊರಮೈ ಅನೇಕ ಕೋನಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ.”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ