Advertisement

Month: April 2024

ಸದಾಶಿವ ಸೊರಟೂರ ಕವನ ಸಂಕಲನಕ್ಕೆ ಆಶಾಜಗದೀಶ್ ಮುನ್ನುಡಿ

“ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ.”

Read More

ಚರ್ಮ: ಎಚ್.ಆರ್.ರಮೇಶ ಬರೆದ ಕತೆ

“ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ…”

Read More

ಕಚ್ಚಾ ಹಾಳೆಯಂತಹ ನನ್ನ ಊರು: ಲಕ್ಷ್ಮಣ ವಿ.ಎ. ಅಂಕಣ

“ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ. ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ, ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ, ಆ ತಿಪ್ಪೆಯಲ್ಲಿ ಎಮ್ಮೆ ಆಡುಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು…”

Read More

ಕಸದಗುಂಡಿಯ ನೆರೆಹೊರೆ: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ನಾಯಕನನ್ನು ಪ್ರಾಂತ್ಯವೊಂದರ ಭೂಗತದೊರೆ ಮಾಡಿದೆ. ಅವನ ಪಾತ್ರವನ್ನು ನಿಕಷಕ್ಕೆ ಒಡ್ಡಲು ಅವನ ಎದುರು ಮತ್ತೊಂದು ಪಾತ್ರವನ್ನು ಇಡಲು ನಿರ್ಧರಿಸಿದೆ. ಮೊದಲು ಈ ಪ್ರತಿನಾಯಕ ಮಾನವೀಯ ಅನುಕಂಪವುಳ್ಳ ಆ ಪ್ರದೇಶದಲ್ಲಿ ತನ್ನ ದವಾಖಾನೆಯನ್ನು ತೆರೆಯುತ್ತಿರುವ ಯುವವೈದ್ಯ ಎಂದುಕೊಂಡೆ. ಆದರೆ ನಾನು ಮತ್ತು ವೆಕ್ಸಾ ಎಷ್ಟೇ ಪ್ರಯತ್ನಿಸಿದರೂ ಈ ಪಾತ್ರವನ್ನು ಜೀವಂತಗೊಳಿಸಲು ಸಾಧ್ಯವಾಗಲಿಲ್ಲ. ಈ ಪಾತ್ರದಲ್ಲಿ ಚೈತನ್ಯವೇ ಇರಲಿಲ್ಲ..”

Read More

ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

“ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ