Advertisement

Month: April 2024

ಸಾಯುವ ಕಾಲಕ್ಕೆ ದೇವರ ಸಮಾನ ಆಗುವ ಮನುಷ್ಯ

“ಮನುಷ್ಯನ ಸಹಜವಾದ ಮಾನಸಿಕ ವ್ಯಾಪಾರದಲ್ಲಿ ಸ್ಮೃತಿ ವಿಸ್ಮೃತಿಗಳು, ಭೂತ ವರ್ತಮಾನ ಭವಿಷ್ಯಗಳು ಒಂದಾಗುತ್ತವೆ. ರಿಯಾಲಿಟಿ ಮತ್ತು ಕನಸುಗಳು ಮಿಶ್ರಗೊಳ್ಳುತ್ತವೆ. ಕಾಲಕ್ರಮವನ್ನು ಧಿಕ್ಕರಿಸಿ ನೆನಪುಗಳು ಧಾವಿಸಿ ಬರುತ್ತವೆ. ಯಾವ ನೆನಪೂ ಸ್ಪಷ್ಟವಾಗಿರುವುದಿಲ್ಲ. ಪಶ್ಚಾತ್ತಾಪ, ಪಾಪಪ್ರಜ್ಞೆ, ಎಲ್ಲವನ್ನೂ ತಿದ್ದಿ ಬರೆಯುವ, ಇನ್ನೊಮ್ಮೆ ಇದಕ್ಕಿಂತ ಉತ್ತಮವಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಎನ್ನುವ ಹಂಬಲ. ನನಗೋ ಕೆಲವೊಂದು ದುಸ್ವಪ್ನಗಳು ಮರುಕಳಿಸುತ್ತ ಇರುತ್ತವೆ. ಎಲ್ಲಿಗೋ ಹೊರಟಿದ್ದೇನೆ…”

Read More

ಹುಣ್ಣಮೀಗೊಂಥರಾ ಹೋಳಗಿ, ಅಮ್ವಾಸಿಗೊಂಥರಾ ಹೋಳಗಿ…

“ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್‌ ಆ ಥರದ್‌ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್‌ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್‌ ಹಳೇಮನ್ಯಾಗಿದ್ದ ನನ್‌ ಕ್ಲಾಸ್‌ ಮೇಟು ಡುಮ್ಮನ ದಿನೇಶಾ, “ಏ, ನಿಮ್‌ ಮಮ್ಮೀನ ನಮ್‌ ಮಮ್ಮೀನ ಎಕ್ಸ್ಚೇಂಜ್‌ ಮಾಡ್ಕೊಳ್ಳೂಣಣ… ಪ್ಲೀಸ್‌..”

Read More

ಆದಿಚುಂಚನಗಿರಿಯ ಕಾಲಭೈರವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಈ ಆದಿಚುಂಚನಗಿರಿ ಕ್ಷೇತ್ರ ನಾಥಪಂಥದ ಪ್ರವರ್ತಕನಾದ ಸಿದ್ಧಯೋಗಿಯಿಂದ ಸ್ಥಾಪಿತವಾದುದೆಂದು ಪ್ರತೀತಿ. ಸುದೀರ್ಘ ಗುರುಪರಂಪರೆಯ ಕೃಪೆಗೆ ಪಾತ್ರವಾದ ಈ ಕ್ಷೇತ್ರದ ಪೀಠವು ಈವರೆಗೆ ಎಪ್ಪತ್ತೊಂದು ಗುರುವರೇಣ್ಯರ ಆರೋಹಣದಿಂದ ಪಾವನವೆನಿಸಿಕೊಂಡಿದೆ. ಚೋಳರಿಂದ ಮೊದಲುಗೊಂಡು ಹೊಯ್ಸಳ, ಸಾಳ್ವ, ವಿಜಯನಗರ, ಯಲಹಂಕ ಮೊದಲಾದ ಅರಸುಮನೆತನಗಳವರೆಗೆ ಶತಶತಮಾನಗಳ ಕಾಲ…”

Read More

ಎಸ್. ದಿವಾಕರ್ ಅವರ ಹೊಸ ಪುಸ್ತಕದಿಂದ ಒಂದು ಪ್ರಬಂಧ

“ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು.”

Read More

ಲಕ್ಷ್ಮಿಕಾಂತ ಮಿರಜಕರ ಬರೆದ ಈ ದಿನದ ಕವಿತೆ

“ನೀನು ಹೋದ ಮೇಲೆ
ನನ್ನ ಕನಸರೆಕ್ಕೆಗಳ ಮೇಲೆಲ್ಲಾ
ವಿಷಾದದ ಮಂಜು
ಸುಟ್ಟುಹೋದ ಚೈತನ್ಯದಲ್ಲಿ
ಹೆಣದ ಕಮಟು
ಬದುಕಿಗೆ ಕೊಕ್ಕೆ ಬಿದ್ದು
ಚೂರುಚೂರಾಗಿ ನೆತ್ತರು ಜಿನುಗಿ
ವಾಸಿಯಾಗದಷ್ಟು ಗಾಯ”- ಲಕ್ಷ್ಮಿಕಾಂತ ಮಿರಜಕರ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ