Advertisement

Month: March 2024

‘ಮೇಲು ಕೀಳಿನ ನಡತೆ ಹಾದಿ ತಪ್ಪಿದ ಜಡತೆ’

ಶತಮಾನಗಳು ಕಳೆದಂತೆ, ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಆದಂತೆ, ನಗರೀಕರಣ ಹೆಚ್ಚಾದಂತೆ, ಅಧೀಕೃತವಾಗಿ ಜನಾಂಗಭೇದವನ್ನು ನಿಷೇಧಿಸಲಾಗಿದೆ, ಜನಾಂಗಭೇದವನ್ನು ಮಾಡಿದವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಕಾನೂನುಗಳು ಬಂದಿವೆ. ‘ಪಾಕಿʼಎನ್ನುವ ಶಬ್ದ, ಪಾಕಿಸ್ಥಾನೀ ಎನ್ನುವ ಅರ್ಥಕೊಡುತ್ತದೆ ಎಂದು ಕಂಡರೂ, ಅದೊಂದು ರೇಸಿಸ್ಟ್ ಶಬ್ದ, ಆ ಶಬ್ದವನ್ನು ಯಾರಾದರೂ ಭಾರತ-ಉಪಖಂಡದಿಂದ ಬಂದವರಿಗೆ ಹೇಳಿದರೆ…”

Read More

ಕಾರು ಬಂಗಲೆಯ ಲೆಕ್ಕಾಚಾರ ಮೀರಿದ ಜೀವನದೃಷ್ಟಿ

ಪಾಶ್ಚಿಮಾತ್ಯದ ಜನರು ಯಾರೇ ಸಿಗಲಿ, ಅವರು ನನ್ನ ಹವ್ಯಾಸ ಗಳ ಬಗ್ಗೆ ಕೇಳುತ್ತಾರೆ, ನನ್ನ ಆಸಕ್ತಿ ಬಗ್ಗೆ ಕೇಳುತ್ತಾರೆ, ದೇಶ-ವಿದೇಶಗಳ ಪರ್ಯಟನೆ ಬಗ್ಗೆ ಕೇಳುತ್ತಾರೆ ವಿನಃ, ನನಗೆ ಮದುವೆ ಆಗಿದೆಯ? ಮಕ್ಕಳು ಎಷ್ಟು? ನನ್ನ ಸಂಬಳ ಎಷ್ಟು? ಈ ರೀತಿಯ ವೈಯಕ್ತಿಯ ವಿಷಯಗಳ ಮೇಲೆ ನನ್ನನ್ನು ಅಳೆಯುವುದೂ ಇಲ್ಲ ಮತ್ತು ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲ. ಪ್ರತಿಯೊಬ್ಬ ಮನುಷ್ಯನನ್ನು ಕೇವಲ ಮತ್ತು ಕೇವಲ ಮನುಷ್ಯನನ್ನಾಗಿ ನೋಡಬೇಕೆ ಹೊರತು ಅವನ ಆಸ್ತಿ ಅಂತಸ್ತಿನಿಂದಲ್ಲ ಎನ್ನುವುದನ್ನು ಕಲಿಸಿದರು.
ಪ್ರಶಾಂತ್‌ ಬೀಚಿ ಅಂಕಣ

Read More

‘ಹೆರ್ಚಟಿಗಿ’ ಎಂಬ ನಾನು…

ಕೀಲೆಣ್ಣೆ ಅಥವಾ ಹೆರೆಣ್ಣಿ ಹಾಕುವ ಚಟಗಿ ಅಂದರೆ ಬಾಟಲಿಯು ಸಂಧಿಯೋ ಸಮಾಸವೋ ಆಗಿ ಈ ‘ಹೆರ್ಚಟಗಿ’ ಎಂಬ ಪದವೊಂದು ನಮ್ಮೂರ ಜನರ ಬಾಯಲ್ಲಿ ರೂಪುಗೊಂಡಿತ್ತು. ಊರಲ್ಲಿ ಹೀಗೆ ಎಲ್ಲರಿಗೂ ಒಂದೊಂದು ಅನ್ವರ್ಥ ನಾಮ ಅಂಟಿಕೊಂಡಿರುತ್ತದಲ್ಲ. ನನ್ನ ಅನ್ವರ್ಥನಾಮ ‘ಹೆರ್ಚಟಗಿ’. ಹಾಗೆ ಊರಲ್ಲಿ ಹಾಗೆ ಕರೆಸಿಕೊಂಡಾಗ,  ನನ್ನ ಮನದೊಳಗೆ ಮೂಡುವ ಭಾವಕ್ಕೆ ಮಾತ್ರ ನಾಮಕರಣ ಮಾಡುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಒಳಗೊಳಗೇ ನಗು ಮೂಡುತ್ತದೆ. -ವೀರಣ್ಣ ಮಡಿವಾಳರ ಬರೆಯುವ ತಾರೆಗಳ ಹಿಡಿಯುವೆವು ಅಂಕಣ ಇಂದಿನ ಓದಿಗಾಗಿ. 

Read More

ಕ್ಲಾಸ್ಮೇಟ್..! ಗೋವಿಂದ ಗೋವಿಂದಾ..!!

ಬಾಲ್ಯದಲ್ಲಿ ನಮ್ಮ ಜೊತೆ ಆಟವಾಡುತ್ತಿದ್ದ ಅನೇಕರ ಹೆಸರು ಈಗಲೂ ನೆನಪಿಗೆ ಬಂದಾಗ, ಪ್ರತಿಯೊಬ್ಬರು ಆಗ ಮಾಡಿದ ಕೆಲವು ವಿಶೇಷ ಕಾರ್ಯಗಳನ್ನು ನೆನೆಸಿಕೊಂಡರೆ ನಗು ಕೂಡ ಬರುತ್ತಾ ಇರುತ್ತದೆ.. ಹೆಸರು ಮನಸ್ಸಿನ ಮೇಲೆ ಅಚ್ಚಾಗಿ ನಿಂತಿದ್ದರೂ, ಅವರು ಈಗ ಹೇಗಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಹಾಗಾಗಿ ಕೆಲವೊಮ್ಮೆ ಅವರು ಬಂದು ನಮ್ಮ ಮುಂದೆ ನಿಂತರೂ ಅವರು ಯಾರು ಎಂಬುದು ತಿಳಿಯುವುದು ಅನೇಕ ಸರ್ತಿ ಕಷ್ಟಸಾಧ್ಯ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ