Advertisement

Month: April 2024

ಅಜ್ಜಿಯೀಗ ಅಗಸಿ ಬಾಗಿಲ ದಾಟಿರಬಹುದೆ?

ಮೊದಲ ಸಲ ನನ್ನ ಅಜ್ಜಿಯ ಜೊತೆ ರವಿವಾರ ಸಂತೆ ದಿನ ನಡೆಯುತ್ತ ವಿಜಾಪುರಕ್ಕೆ ಹೋಗುವಾಗ ಬಹಳ ದೂರದಿಂದಲೆ ಬೃಹತ್ತಾದ ಗೋಲಗುಂಬಜವನ್ನು ನೋಡಿ ಆಶ್ಚರ್ಯಚಕಿತನಾಗಿದ್ದೆ. ಆಗೊಮ್ಮೆ ಈಗೊಮ್ಮೆ ಕಾಣಿಸುವ ಕಾರುಗಳು, ಲಾರಿಗಳು ಮುಂತಾದವುಗಳ ಜೊತೆ ನಮೂನೆ ನಮೂನೆ ವೇಷಭೂಷಣದ ಜನರು ಮಜವಾಗಿ ಕಾಣುತ್ತಿದ್ದರು. ನಮ್ಮ ಹಳ್ಳಿಯಲ್ಲಾದರೆ ಬಹುಪಾಲು ಜನರು ಧೋತರ ಮತ್ತು ಮಾಂಜರಪಾಟ್ ಬಟ್ಟೆಯಿಂದ ಹೊಲಿದ ಕುಂಬಳಛಾಟಿ…”

Read More

ಸಂದೀಪ್ ಶಾನಭೋಗ್ ತೆಗೆದ ಈ ದಿನದ ಚಿತ್ರ

 ಈ ದಿನದ ಚಿತ್ರವನ್ನು ತೆಗೆದವರು ಸಂದೀಪ್ ಶಾನಭೋಗ್. ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಫೋಟೋಗ್ರಫಿ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ದೀಪವಿರದ ದಾರಿಯಲ್ಲಿ: ಸಲಿಂಗಪ್ರೇಮಿ ಕಲಾವಿದನೊಬ್ಬನ ಅಂತರಂಗ

‘ದೀಪವಿರದ ದಾರಿಯಲ್ಲಿ’ ಕಾರ್ಕಳದ ಸುಶಾಂತ್ ಕೋಟ್ಯಾನ್ ಬರೆದ ವಿಭಿನ್ನ ಕಾದಂಬರಿ. ಯಕ್ಷಗಾನ ಕಲಾವಿದನೊಬ್ಬ ಸಲಿಂಗ ಪ್ರೇಮಿಯಾಗಿ ಬದುಕನ್ನು ಎದುರಿಸುವ ಕತೆಯೇ ಈ ಕಾದಂಬರಿಯ ಹೂರಣ. ಸಲಿಂಗ ಪ್ರೇಮದ ಬಗ್ಗೆ ಬಹಿರಂಗ ಚರ್ಚೆಗಳು ಅಪರೂಪವಾಗಿರುವ ನಮ್ಮ ಸಮಾಜದಲ್ಲಿ ಈ ಕೃತಿಯ ಕುರಿತು ಓದುಗರಲ್ಲಿ ಕುತೂಹಲವೂ ಹೆಚ್ಚು. ಹಾಗಾಗಿ ಕಾದಂಬರಿಯು ಓದುಗನಿಗೆ ಕೊಡುವ ಒಳನೋಟಗಳೇನು ಎಂಬುದನ್ನು ಹಿರಿಯ ಲೇಖಕ ಪ್ರೊ. ಪುರುಷೋತ್ತಮ ಬಿಳಿಮಲೆ, ಕಾದಂಬರಿಗೆ ಬರೆದ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಕೆಂಡಸಂಪಿಗೆ ಓದುಗರಿಗಾಗಿ ಆ ಮುನ್ನುಡಿ ಇಲ್ಲಿದೆ :

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕಥೆ

ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್‌ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ

Read More

ಮುನವ್ವರ್ ಬರೆಯುವ ʼಡರ್ಬನ್ ಇದಿನಬ್ಬʼ ಕಾದಂಬರಿ ಇಂದಿನಿಂದ…

ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ