Advertisement

Month: March 2024

ʻದ ಮಿಲ್ಕ್ ಆಫ್‌ ಸಾರೋʼ: ವಿಷಾದದ ಹನಿಗಳು

ಈ ಚಿತ್ರದಲ್ಲಿ ಮೊದಲ ಹಾಡಿನ ಭಾವದ ನೆಲೆಯಲ್ಲಿಯೇ ಚಿತ್ರದ ಕಥನವಿದೆ. ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಈ ವಿಷಾದ ಭಾವವನ್ನು ಇನ್ನೊಂದು ರೀತಿಯಲ್ಲಿ ಸ್ಥಿರಪಡಿಸುತ್ತಾಳೆ ನಿರ್ದೇಶಕಿ. ಮದುವೆಗೆ ಸಿದ್ಧವಾಗುತ್ತಿರುವ ಮ್ಯಾಕ್ಸಿಮಾ ತನ್ನ ಸ್ಕರ್ಟಿನ ಸೊಂಟಕ್ಕಿರುವ ಬಟ್ಟೆಯ ಉದ್ದ ಸಾಲದೆಂದು ಕೂಗಾಡುವಾಗ ಮೆಲ್ಲನೆ ಹೆಜ್ಜೆ ಇಟ್ಟು ಬರುತ್ತಾಳೆ ಫಾಸ್ಟಾ. ಅವಳಿಗೆ ಎದುರಾಗುತ್ತದೆ ಮದುವೆಗೆ ಸಂಬಂಧಪಟ್ಟ ವಿಷಯ. ಮದುವೆ! ಅವಳಿಗೆ ಅಷ್ಟೇ ಸಾಕಾಗುತ್ತದೆ. ಗಂಡು-ಹೆಣ್ಣಿಗೆ ಸಂಬಂಧಿಸಿದ, ಅವರಿಬ್ಬರ ಸಮಾಗಮಕ್ಕೆ ಅನುವುಮಾಡಿಕೊಡುವ ವಿಷಯ!
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಪೆರು ದೇಶದ ʻದ ಮಿಲ್ಕ್ ಆಫ್‌ ಸಾರೋʼ

Read More

ಲೌಕಿಕದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವ ಕಾವ್ಯಪ್ರೀತಿ

ಅದಮ್ಯವಾದ ಕಾಮ, ಅನಿವಾರ್ಯವಾದ ಸಾವು ಮತ್ತು ಬಾಳಿನ ನಿರರ್ಥಕತೆ ಇವು ನನ್ನ ಕಾವ್ಯಕ್ಕೆ ಪ್ರೇರಕ ಶಕ್ತಿಗಳು ಎಂದು ಹೇಳುವ ಬಿ.ಆರ್. ಲಕ್ಷ್ಮಣರಾಯರ ಕವನಗಳಲ್ಲಿ ಗೇಯಗುಣವು ಸಹಜವಾಗಿ ಒಲಿದು ಬಂದಿದೆ. ಅವರ ಸಾಲುಗಳಲ್ಲಿ ವೈನೋದಿಕ ಶಕ್ತಿಯೂ ಸೇರಿಕೊಂಡಿದೆ.  ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ…”

Read More

ಸಂಪತ್ ಕುಮಾರ್ ದುರ್ಗೋಜಿ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಸಂಪತ್ ಕುಮಾರ್ ದುರ್ಗೋಜಿ. ಸಂಪತ್ ಕುಮಾರ್ ಹರಿಹರದವರು, ಹುಬ್ಬಳ್ಳಿಯಲ್ಲಿ ಈಗ ಕನ್ಸಲ್ಟಂಟ್. ಫೋಟೋಗ್ರಫಿ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಏನೋ ಲೆಕ್ಕಹಾಕಿ ಶಾಲೆಗೆ ಹೆಸರು ಹಚ್ಚಿದ ಮಾಸ್ತರರು

ಅದಾವುದೊ ಸ್ಥಾನಕ್ಕೆ ಆಯ್ಕೆಯಾದ ಗಣ್ಯವ್ಯಕ್ತಿಯೊಬ್ಬರಿಗೆ ಸನ್ಮಾನಿಸುವ ಮತ್ತು ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುವ ಕಾರ್ಯಕ್ರಮವೊಂದು ನಡೆಯಿತು. ಸ್ವಲ್ಪ ಸಮಯದ ನಂತರ ಬಂದ ಆ ಗಣ್ಯವ್ಯಕ್ತಿ ಶರಣಯ್ಯ ವಸ್ತ್ರದ ಎಂಬುದು ತಿಳಿಯಿತು. ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು.”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ