Advertisement

Month: April 2024

ಪಯಣಪ್ರಿಯರ ನಾಡಿನ ಕೆಲವು ಮಾತುಗಳು

ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ…”

Read More

ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಅಸಹಾಯಕರು, ನಿರ್ಗತಿಕರು, ಬಡವರು ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಕೆಲವರಿಗಷ್ಟೇ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು. ಪ್ರಶಾಂತ್‌ ಬೀಚಿ ಅಂಕಣ

Read More

ನವೋದಯದ ಶ್ರೇಷ್ಠಕವಿ ಕಡೆಂಗೋಡ್ಲು

ಕನ್ನಡ ಸಾಹಿತ್ಯ ಲೋಕದಲ್ಲಿ  ತಮ್ಮ ಕಾವ್ಯ ಪ್ರತಿಭೆಯ ಮೂಲಕ ಕಂಡೆಂಗೋಡ್ಲು ಶಂಕರ ಭಟ್ಟರು ಪ್ರಧಾನವಾಗಿ ಗುರುತಿಸಿಕೊಂಡಿದ್ದರೂ, ಅವರ ಜೀವನ ಪಥ ಬಹುಮುಖಿಯಾಗಿತ್ತು.  ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಎಷ್ಟೊಂದು ಸಕ್ರಿಯರಾಗಿದ್ದರು ಎಂಬುದಕ್ಕೆ ಅವರು 1921ರಲ್ಲಿ ಬರೆದ ‘ವಸ್ತ್ರಾಪಹರಣ’ ಖಂಡಕಾವ್ಯವೇ ಸಾಕ್ಷಿ. ಖಾದಿ ಮಾರಾಟ, ಮದ್ಯ ಮಾರಾಟ ವಿರೋಧ, ಸ್ತ್ರೀಪರ ಧ್ವನಿ, ಶೋಷಿತರ ಪರ ನಿಲುವುಗಳೊಂದಿಗೆ ತಮ್ಮ ಸಾಹಿತ್ಯ ಪ್ರಯಾಣವನ್ನು ಶ್ರೀಮಂತವಾಗಿಸಿಕೊಂಡಿದ್ದರು. ಡಾ.ಬಿ. ಜನಾರ್ದನ ಭಟ್ ಅವರು,  ಅಡಿಗರಿಗಿಂತ ಹಿಂದಿನ ಯುಗದ ಶ್ರೇಷ್ಠ ಕವಿ ಅಂದರೆ ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಬರೆದಿದ್ದಾರೆ. 

Read More

ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಅಗೋಚರ

“ಮರಗಿಡಗಳ ಚಿಗುರು ಚಿಗುರಲಿಕೆ ಕಾತರಿಸಿ
ನಳನಳಿಸಲು ಕಾಯುತ್ತಿತ್ತು ಹಗಲ
ಕಾಯಿ ಮಾಗಲು, ಮಾಗಿದವು ತೊಟ್ಟು ಕಳಚಲು
ತವತವಕಿಸುವಂತಿತ್ತು ತೆರೆದು ಮನವ”- ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ

Read More

ಗಂಟಲೊಳಗೆ ಇಳಿಯಲೊಲ್ಲದ ಗುಲ್ಜಾರ್ ಖಾನ್ ಕಟ್ಟಿದ ಮುದ್ದೆಗಳು

ಡಬ್ಬಿಯಲ್ಲಿದ್ದ ತಿಂಡಿ ಕಳವಾಗುತ್ತಿರುವುದನ್ನು ನೋಡಿದ ‘ಹಾರ್ಟ್ ವೀಕ್’ ಮಾರನೆ ಬೆಳಗ್ಗೆ ಊಟವಾದ ಮೇಲೆ ಒಂದು ಉಪಾಯ ಮಾಡಿದ, ತನ್ನ ಟ್ರಂಕಿನ ಮುಂದೆ ನಿಂತುಕೊಂಡು ಎಲ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ತನ್ನ ತಿಂಡಿಬಾಕ್ಸ್ ಮುಚ್ಚಳವನ್ನು ತೆಗೆದು ಎಲ್ಲರಿಗೂ ಕಾಣುವಂತೆ ‘ನೋಡ್ರಪ್ಪ ನಾನು ನನ್ನ ತಿಂಡಿಗೆ ಬಾಯಿ ತುಂಬ ಉಗಿತಾ ಇದಿನಿ, ಯಾರಾದರೂ ತಿಂದರೆ ನನ್ನ ಎಂಜಲು ತಿಂದಂತೆ’ ಎಂದು ಕ್ಯಾಕರಿಸಿ ಕ್ಯಾಕರಿಸಿ ಚೆನ್ನಾಗಿ ಉಗಿದು, ನಂತರ ಬಾಯಿ ಮುಚ್ಚಿ ಟ್ರಂಕಿಗಿಟ್ಟು ಸ್ಕೂಲಿಗೆ ಹೋದ. ಮಧ್ಯಾಹ್ನ ಬಂದು ನೋಡಿದಾಗ ಆತನ ತಿಂಡಿ ಹೇಗಿತ್ತೋ ಹಾಗೆಯೇ ಇತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಮೂರನೆಯ ಕಂತು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ