Advertisement

Month: August 2021

ಸೀತೆ ನಡೆದ ‘ಪರ್ಯಾಯ ದಾರಿ’

ಅಪ್ಪ ತನ್ನ ಮಗಳನ್ನು ಗಡಂಗಿಗೆ ಪ್ಯಾಕೆಟ್ ತರಲು ಕಳುಹಿಸಲು ಶುರು ಮಾಡಿದ್ದು ಸೀತುವಿನ ಮನಸಿಗೆ ತುಂಬಾ ಕಸಿವಿಸಿಯನ್ನು ಉಂಟು ಮಾಡಿತ್ತು. ದಿನ ಕಳೆದಂತೆ ಗಡಂಗಿನಲ್ಲಿ ಚೋಮನ ದೋಸ್ತುಗಳ ಕಾಟವೂ ಹೆಚ್ಚತೊಡಗಿತು. ದಿನಾ ಸಾರಾಯಿಗೆ ಬರುತ್ತಿದ್ದ ಬೆಳ್ಳಿಯನ್ನು ಚುಡಾಯಿಸುವವರ ಸಂಖ್ಯೆ ಹೆಚ್ಚಿದಾಗ ಸೀತುವಿನ ಮನಸ್ಸು ಅಲ್ಲೋಲ ಕಲ್ಲೋಲವಾಗವಾಗ ತೊಡಗಿತ್ತು. ಸಂಜೆ ಬರುವಾಗಲೇ ಬೊಬ್ಬೆ ಹೊಡೆಯುತ್ತಿದ್ದ ಚೋಮ ಹೇಳದ ಮಾತಿಲ್ಲ. ಎಲ್ಲರೆದುರು ತನ್ನ ಹೆಂಡತಿ, ಮಗಳನ್ನು ತುಚ್ಚವಾಗಿ ಆಡುತ್ತಿದ್ದ ಚೋಮ ಮನೆಗೆ ಬಂದನೆಂದರೆ ಮಕ್ಕಳಾದ ತುಕ್ರ, ತನಿಯ ಓಡಿ ಮೂಲೆ ಸೇರುತ್ತಿದ್ದರು.”

Read More

ಗಾಳಿಗೆ ಜೋಗುಳವಾಗುವ ಕವಿತೆಗಳು

ಇಡಿಯಾಗಿ ಕವಿತೆ ನಮ್ಮೊಳಗಿನ ಅರಿವಿನ ಅನುಪಸ್ಥಿತಿಯ ಕಾರಣವಾಗಿ ಮನುಕುಲಕ್ಕೆ ಮಾರಕವಾಗಿರುವ, ಸ್ವಯಂ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಪಂಥಗಳೆಂಬ ರುಗ್ಣಗಳಿಂದ ಬಾಧೆಗೊಳಗಾಗಿರುವ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತದೆ. ಇಡಿಯಾಗಿ ಕವಿತೆ ರೂಪಕಗಳ ಮೂಲಕವೇ ಓದುಗನೊಂದಿಗೆ ಮುಖಾಮುಖಿಯಾಗುತ್ತ, ನಾವೆಲ್ಲ ಕಂಡೂ ಕಾಣದಂತಿರುವ ಲೋಕದ ಅಸಹ್ಯಗಳನ್ನು ಕಾಣಿಸುತ್ತ ಹೋಗುತ್ತದೆ! ಹಾಗೆ ನೋಡಿದರೆ ಈ ಕವಿತೆಯಲ್ಲಿ ಬರುವ ‘ಫಕೀರ’ ಬೇರಾರೂ ಆಗಿರದೆ ಸಮಾಜವನ್ನು ನೈತಿಕತೆಯ ಪಾತಳಿಯ ಮೇಲೆ ಮುನ್ನಡೆಸಲು ಬೇಕಾಗಿರುವ ‘ಅರಿವು’ ಎಂಬ ಪ್ರಖರವಾದ ಬೆಳಕೇ ಆಗಿದೆ.
ದೇವು ಮಾಕೊಂಡ ಕವನ ಸಂಕಲನ ‘ಗಾಳಿಗೆ ತೊಟ್ಟಿಲು ಕಟ್ಟಿ’ ಪುಸ್ತಕದ ಕುರಿತು ಕಲ್ಲೇಶ್ ಕುಂಬಾರ್, ಹಾರೂಗೇರಿ ಬರಹ

Read More

ಶ್ರೀಮಂತ್ ಯನಗುಂಟಿ ಕವಿತೆ: ಉಳಿಯಬಲ್ಲೆನೆ?

“ಆದರೆ ಒಂದು ಮಾತ್ರ
ರಹಸ್ಯವಾಗಿತ್ತು.
ಗಂಟಲಿಗೆ ಒಂದು ಗಿಲಾಸು
ಬೀಯರು ಇಳಿಯುತ್ತಲೇ
ನನ್ನೊಳಗೆ ಅಲ್ಲೋಲ ಕಲ್ಲೋಲ!
ಏನಿದು ಅಸಂಬದ್ಧ ಎಂದು
ನೋಡುತ್ತಲೇ ತಿಳಿದಿದ್ದು
ಓ!! ಪ್ರವಾಹವೇ ಉಕ್ಕುತ್ತಿದೆಯೆಂದು!!”- ಶ್ರೀಮಂತ್ ಯನಗುಂಟಿ ಕವಿತೆ

Read More

ಕಣ್ಣೆದುರು ಸಾಯುತ್ತಿರುವ ದೇವರುಗಳು

ಮೊನ್ನೆ ಮೊನ್ನೆಯಷ್ಟೇ ದಷ್ಟ ಪುಷ್ಟವಾದ ರೆಂಬೆ ಕೊಂಬೆಗಳನ್ನು ಅಗಲಿಸಿ ಸಾವಿರಾರು ಹಕ್ಕಿಗಳ ಹಕ್ಕಿನ ಮನೆಯಾಗಿದ್ದ ಆಲದ ಮರ, ಹುಣಸೆ ಮರ, ಹೊಸದಾಗಿ ನಿರ್ಮಾಣವಾದ ದೇಗುಲದ ಕಾಲಬುಡದಲ್ಲಿ ದಿಕ್ಕಾಪಾಲಾಗಿ ಬಿದ್ದಿರುವುದನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ. ನಿಜವಾದ ದೇವರು ಹೀಗೆ ಅನಾಥವಾಗಿ ಬಿದ್ದಿರುವುದನ್ನು, ಆ ದೇವರು ಅಳುತ್ತಿರುವುದನ್ನು…”

Read More

ಆಯ್ಕೆಯ ಸ್ವಾತಂತ್ರ್ಯದಲ್ಲಿ ನಂಬಿಕೆಗಳು

ಆಯ್ಕೆಯ ಸ್ವಾತಂತ್ರ್ಯ ಇಲ್ಲದಾಗ ತಮ್ಮ ಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ನೂರಾರು ನೆಪಗಳು ಹುಟ್ಟಿಕೊಳ್ಳುತ್ತವೆ. ಇಷ್ಟಕ್ಕೂ ಹೆಚ್ಚಿನಂಶ ಮಂದಿಗೆ ಆಯ್ಕೆಯ ಸ್ವಾತಂತ್ರ್ಯವೂ ಭಯ ಹುಟ್ಟಿಸಬಲ್ಲದು. ಸ್ಟಾಫ್ ರೂಮಿನಲ್ಲಿ ಯಾವುದೋ ವಿದ್ಯಾರ್ಥಿನಿ ಕನ್ನಡ ಮೇಡಮ್ಮನ್ನ ಉಬ್ಬಿಸಲೊ ಏನೋ, ‘ನಾನು ನಮ್ಮಪ್ಪ ಒಪ್ಪಿದವನ್ನೇ ಮದುವೆ ಆಗೋದಪ್ಪಾ!’ ಎಂದು ಹೇಳುತ್ತಿದ್ದಾಗ ಸುಮ್ಮನಿರಲಾರದೆ, ‘ಯಾಕೆ? ಮದುವೆ ದಬ್ಹಾಕಿಕೊಂಡರೆ ಅಪ್ಪನ್ನ ದೂರಬಹುದು ಅಂತಲಾ?’ ಅಂತ ಕೇಳಿ ಆ ಹುಡುಗಿ ಪೆಚ್ಚಾದಾಗ ಪಾಪ ಅಂತ ಅನ್ನಿಸಿತ್ತು.
ಸುಕನ್ಯಾ ವಿಶಾಲ ಕನಾರಳ್ಳಿ ಬರೆಯುವ ‘ಕನಾರಳ್ಳಿ ಕಾರ್ನರ್’

Read More

ಜನಮತ

ಕೊರೊನಾ ಹೊಸ ತಳಿ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

16 hours ago
ಐಬಿಲ್ಲದ ಕೊಲೆಯ ಜಾಡು ಹಿಡಿದಾಗ ಕಂಡ ವಿಸ್ಮಯಗಳು

https://t.co/9oB2hcbHVT
16 hours ago
ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಕುರಿತ ಸಾಕ್ಷ್ಯಚಿತ್ರ

https://t.co/lTYHPyJK2C
19 hours ago
ಕಾವ್ಯಮಾಲೆಯ ಕಾಣದ ಹೂಗಳು

https://t.co/h9ejaBKRAH

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

‘ಏನು ಜನ, ಎಂಥ ಗಾನ’ ಪುಸ್ತಕದ ಕುರಿತು ಶ್ರೀಮತಿ ದೇವಿ ಬರಹ

ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ...

Read More