Advertisement

Month: September 2021

ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಅಂಕಣ ಇಂದಿನಿಂದ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಬಲಿಪನಾರಾಯಣ ಭಾಗವತರದ್ದು ಅಗ್ರ ಹೆಸರು. ತೆಂಕುತಿಟ್ಟಿನ ಮಾರ್ಗಪ್ರವರ್ತಕರೆಂದು ಗುರುತಿಸಿಕೊಂಡವರು. ‘ಭಾಗವತ’ನಿಗಿರಬೇಕಾದ ಜ್ಞಾನವನ್ನು ಮೈಗೂಡಿಸಿಕೊಂಡು ಮನ್ನಣೆಗೆ ಪಾತ್ರರಾದವರು. ಲೇಖಕ ಕೃಷ್ಣಪ್ರಕಾಶ ಉಳಿತ್ತಾಯ ಅವರು ಯಕ್ಷಗಾನದ ಹಿಮ್ಮೇಳ ಕಲಾವಿದರೂ ಆಗಿರುವುದರಿಂದ, ಹಿರಿಯ ಬಲಿಪನಾರಾಯಣ ಭಾಗವತರ ಜೀವನವನ್ನು ಅವರ ಭಾಗವತಿಕೆಯ ಮಾರ್ಗವನ್ನು ಹೆಚ್ಚು ಸಮರ್ಥವಾಗಿ ನಿರೂಪಿಸಬಲ್ಲರು. ಇಂದಿನಿಂದ ಅವರು ಬರೆಯುವ ಬಲಿಪ ಮಾರ್ಗ ಅಂಕಣ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ.

Read More

ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ ಗಂಡನದು ಎಂಬ ಗಂಡಾಳ್ವಿಕೆಯ ನಡಾವಳಿಯನ್ನು ಮುರಿಯಲೆತ್ನಿಸಿದ್ದಾರೆ. ಈ ನಡಾವಳಿಗಳನ್ನು ಪ್ರಶ್ನಿಸಿದವರು ಗಂಡುಬೀರಿಯರಾಗಿ ಕಾಣುವ ಅಪಾಯಗಳು ಸದಾ ಇದ್ದೇ ಇರುತ್ತವೆ. ಡಾ. ವಿನಯಾ ನಾಯಕ ಮುನ್ನುಡಿಯ ಮಾತುಗಳಲ್ಲಿ ಮುದ್ದುಪಳನಿಯ ‘ರಾಧಿಕಾ ಸಾಂತ್ವಾನಂ’ ಕೃತಿ ಕುರಿತು ಸರಿಯಾಗಿಯೇ ಪ್ರಸ್ತಾಪಿಸಿದ್ದಾರೆ.
ಡಾ. ಶೋಭಾ ನಾಯಕ ಅವರ ‘ಶಯ್ಯಾಗೃಹದ ಸುದ್ದಿಗಳುʼ ಕವನ ಸಂಕಲನದ ಕುರಿತು ಡಾ. ಎಚ್‌.ಎಲ್. ಪುಷ್ಪ ಬರಹ

Read More

ನಾಟಕದ ಹೊಟ್ಟೆ ನೋವೂ ಮತ್ತು ತಪ್ಪಿದ ಹಾಜರಾತಿ

ನಮ್ಮ ಅಡುಗೆ ಭಟ್ಟರು, ಹಿರಿಯ ವಿದ್ಯಾರ್ಥಿಗಳು ಆಗಿಂದಾಗ್ಗೆ ಈ ಬಗ್ಗೆ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದೆವಾದರೂ ಹುಡುಗು ಬುದ್ಧಿಯ ನಮಗೆ ಇದೇನು ಮುಖ್ಯ ಎನಿಸಿರಲಿಲ್ಲ. ಅದುವರೆಗೆ ನಾವ್ಯಾರು ಅದನ್ನು ನೋಡಿರಲಿಲ್ಲ. ನೋಡಿರದ ನಮ್ಮಗಳ ಕಲ್ಪನೆಯಲ್ಲಿ ಹೊಸ ಹಾಸ್ಟೆಲ್ ‘ಹತ್ತಾರು ರೂಮುಗಳಿವೆಯಂತೆ! ತರಗತಿಗೊಂದೊಂದು ರೂಮು ಕೊಡುತ್ತಾರಂತೆ! ಸ್ನಾನಕ್ಕೆ ಕಕ್ಕಸ್ಸಿಗೆಲ್ಲ ಸಪರೇಟ್ ರೂಮುಗಳಿವೆಯಂತೆ! ಸದಾ ನೀರು ಬರುತ್ತಲೇ ಇರುತ್ತದಂತೆ! ದಿನಾ ಸ್ನಾನ ಮಾಡಬೇಕಂತೆ!”

Read More

ಕನ್ನಡದ ಹೊಸ ರೀತಿಯ ಕಾದಂಬರಿಗಳು: ಒಂದು ಪಕ್ಷಿನೋಟ

ಈ ಸಂಶೋಧನೆಗಳನ್ನು ಸರಿಯಾಗಿ ಗ್ರಹಿಸಿದರೆ ವಸಾಹತುಪ್ರಜ್ಞೆಯು ಕಾದಂಬರಿ ಪ್ರಕಾರದಲ್ಲಿ ಪ್ರಬಲವಾಗಿ ಬರುವ ಯುರೋಪಿನ ಕಥಾಹಂದರದ (Plot) ಮೂಲಕ ಹೇಗೆ ಭಾರತೀಯರಿಗೆ ತಮ್ಮ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ ಎಂಬುದು ಅರ್ಥವಾಗುತ್ತದೆ. ಅಂದರೆ ಇಲ್ಲಿಯ ಊರು, ಕೇರಿ, ಜನ, ಜೀವನದ ಬಗ್ಗೆ ಕಾದಂಬರಿಗಳು ಹೇಳಿದರೂ ಕೂಡ ಯುರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ.”

Read More

ಕಾರುಣ್ಯದ ಕುರಿತು ದೇವನೂರು ಮಾತಿನ ನೆನಪುಗಳು

ಹಿಂಸೆ, ಕ್ಷೋಭೆಗಳೆಂದರೆ ಮನುಷ್ಯನಿಗೆ ಸುಪ್ತ ಮನಸ್ಸಿನಲ್ಲಿ ಬಹಳ ಪ್ರಿಯವಾದ ವಿಷಯವೇನೋ ಎಂಬ ಸಂಶಯ ಕಾಡಲು ಶುರುವಾಗಿದೆ. ಉಣ್ಣಲು, ಆರೋಗ್ಯ ಕಾಪಾಡಿಕೊಳ್ಳಲು ಉಡಲು ಮಹಿಳೆಯರು ನಿರಂತರ ಹೋರಾಟಗಳನ್ನು ನಡೆಸುತ್ತಲೇ ಇರಬೇಕು ಎಂದಾದರೆ, ನಾಗರಿಕತೆಯ ಹೆಜ್ಜೆಗಳು ಮುಂದಡಿ ಇಡುತ್ತಿಲ್ಲವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.ಮನುಷ್ಯ ಹೃದಯದಲ್ಲಿ ಕಾರುಣ್ಯ ಎಂಬ ಆರ್ದ್ರತೆ ಇಲ್ಲದಿದ್ದರೆ ಬದುಕು ನೆಮ್ಮದಿಯನ್ನುಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ.”

Read More

ಜನಮತ

ನಾನು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

5 hours ago
ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಅಂಕಣ ಇಂದಿನಿಂದ

https://t.co/vO2WCj0WKI
8 hours ago
ನಾಟಕದ ಹೊಟ್ಟೆ ನೋವೂ ಮತ್ತು ತಪ್ಪಿದ ಹಾಜರಾತಿ

https://t.co/x9juM16BVr
8 hours ago
ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

https://t.co/A0PgD5slya

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ...

Read More