Advertisement

Month: April 2024

ಹೃದಯ ತುಂಬುವಂತೆ ಮಾಡುವ ಮಾನವೀಯ ಸಂಬಂಧಗಳು

ಧಾರ್ಮಿಕ ಸಮಾಜಗಳಲ್ಲಿ ಮೂಲಭೂತವಾದಿಗಳು, ಕೋಮುವಾದಿಗಳು ಮತ್ತು ಏನೂ ಗೊತ್ತಿಲ್ಲದ ಕರ್ಮಠರದೇ ಕಾರುಬಾರು ಜಾಸ್ತಿ ಇರುತ್ತದೆ. ಜನರನ್ನು ಹಿಂದೂ ಮುಸ್ಲಿಂ ಮಾಡುವುದರಲ್ಲೇ ಅವರು ತಲ್ಲೀನರಾಗಿರುತ್ತಾರೆ.  ರಂಜಾನ್ ಮತ್ತು ಬಕ್ರೀದಗಳಲ್ಲಿ ನನ್ನ ತಂದೆ ದೊಡ್ಡ ಹಂಡೆಯಲ್ಲಿ ಶುರಕುಂಬಾ ತಯಾರಿಸಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದರು. ನಾವಿಗಲ್ಲಿಯ ಜನರೆಲ್ಲ ಶುರಕುಂಬಾ ಕುಡಿಯಬೇಕೆಂಬುದು ಅವರ ಆಶಯವಾಗಿತ್ತು.”

Read More

ಚಲಿಸುತ್ತಲೇ ಯೋಚಿಸುವ ಮೆವ್ಲುಟ್

ಮೂರು ವರ್ಷಗಳ ಈ ಪತ್ರ ವ್ಯವಹಾರದ ನಂತರ, ಇಬ್ಬರೂ ‘ಓಡಿಹೋಗುವುದು’ ಅಂತ ಓಲೆಗಳ ಮೂಲಕವೇ ತೀರ್ಮಾನವಾಗುತ್ತದೆ. ಕೃತಿಕಾರರೇ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವಂತೆ, ಅದೆಷ್ಟೋ ದೂರ ‘ಓಡಿ’ ಬಂದ ಮೇಲೆ ಮೆವ್ಲುಟನಿಗೆ ತಾನು ಮನಸೋತ ಹುಡುಗಿ ಇವಳಲ್ಲ ಎಂಬುದು ತಿಳಿಯುತ್ತದೆ. ಮೆವ್ಲುಟನೇ ಹೇಳುವಂತೆ, ಈ ಓಡಿಹೋಗುವುದೆಂದರೆ ಮಹಾ ತಂತ್ರಗಾರಿಕೆಯ ವ್ಯವಹಾರವಾದುದರಿಂದ, ಅವನು ತನ್ನ ಅಂತರಂಗದ ಜ್ವಾಲಾಮುಖಿಯನ್ನು ಅದುಮಿಟ್ಟು, ಮುಖ್ಯವಾಗಿ ಅದನ್ನು ಹೊರಗೆ ತೋರಗೊಡದೇ..”

Read More

ಮನೆ ತಲುಪುವ ಕನಸುಗಳ ಕಿತ್ತುಕೊಂಡ ಬಿರುಗಾಳಿ

ಡರ್ಬನ್ ನಿಂದ ಹೊರಟ ಆ ಹಡಗು, ನೋಡ ನೋಡುತ್ತಿದ್ದಂತೆ ಲಟ್ಟಣಿಗೆ ಮುರಿದು ಹಾಕುವಂತೆ ಅಷ್ಟು ದೊಡ್ಡ ಹಡಗು ಇಬ್ಭಾಗವಾಯಿತು. ಬೃಹತ್ ಗಾತ್ರದ ಅಲೆಯೊಂದು ಎದ್ದು ನೀರಿಗೆ ಧುಮುಕಿದ ಹಲವರನ್ನೂ ಎತ್ತಿ ದೂರ ದೂರಕ್ಕೆ ಎಸೆಯಿತು. ಬಹುಶಃ ದೂರವೆಂದರೆ ಮುಳುಗುತ್ತಿರುವ ಹಡಗಿನ ದೀಪ ಮಂಜಾಗಿ ಕಾಣಿಸುವಷ್ಟು. ದೂರದಲ್ಲಿ ಹಡಗಿನ ದೀಪ ಗಿರ ಗಿರನೆ ಸುತ್ತುವುದು ನೋಡಿದಾಗ ಇದಿನಬ್ಬನಿಗೆ ಪರಿಸ್ಥಿತಿಯ ಅರಿವಾಯಿತು. ಹಿಂದಿರುಗಿ ನೋಡಿದರೆ ಅಷ್ಟು ದೊಡ್ಡ ಹಡಗನ್ನು ಹೊಟ್ಟೆ ಬಾಕ ಸಮುದ್ರ ತಿಂದು ಮುಗಿಸಿದೆ. ಕನಸುಗಳು ನುಚ್ಚು ನೂರಾಗಿವೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹನ್ನೊಂದನೇ ಕಂತು

Read More

ನವೀನ ಗಣಪತಿ ಬರೆದ ಈ ಭಾನುವಾರದ ಕತೆ ಪ್ರಾಣಪಕ್ಷಿ

ಗಾರೇಜಿನಲ್ಲಿ ನೆರವಾಗುತ್ತಿದ್ದ ಪಿಟ್ಟನಿಗೆ ಆ ತಿಂಗಳ ಸಂಬಳ ಕೊಡುವುದಕ್ಕೇ ಸಾಧ್ಯವಾಗಲಿಲ್ಲ ಅಡಿಗರಿಗೆ. ಸಾಧು ಸ್ವಭಾವದವನಾದ, ಯಾವತ್ತೂ ಸಂಬಳಕ್ಕಾಗಿ ಹಾತೊರೆದು ಕೇಳದ ಪಿಟ್ಟ ಆರಂಭದಲ್ಲಿ ಏನೂ ಕೇಳಲಿಲ್ಲ. ಆದರೆ ಕೆಲದಿನಗಳಲ್ಲಿ, ‘ಸ್ವಲ್ಪ ಇದ್ದರೆ ಬೇಕಿತ್ತು’ ಎಂದು ಎರಡು ಮೂರು ಬಾರಿ ಕೇಳಿದ. ನಾಳೆ ಕೊಡುವ ಎಂದು ಅಡಿಗರು ಆಶ್ವಾಸನೆ ಕೊಟ್ಟರೂ, ಹಾಗೆ ಹಣ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಈ ನಡುವೆ ಹುಶಾರು ತಪ್ಪಿದ ಪಿಟ್ಟ, ಆಗಸ್ಟ್ ತಿಂಗಳಲ್ಲಿ ಸಿದ್ಧಾಪುರದ ಆಸ್ಪತ್ರೆಗೆ ಸೇರಿದವನು, ತೀರಿಯೇ ಹೋದ ಸುದ್ದಿ ಬಂದಿತ್ತು.”

Read More

ಭ್ರಷ್ಟಾಚಾರದ ಕೂಪದಲ್ಲಿ ನರಳುವ ನಾಗರೀಕರು…

ಭಾರತಕ್ಕೆ ಬಂದ ಮೇಲೆ ನಮ್ಮ ದೇಶಕ್ಕೆ ಮರಳಿದ ಸಂತಸ, ನಮ್ಮ ಸ್ನೇಹಿತರನ್ನು, ಸಂಬಂಧಿಕರನ್ನು ನೋಡಿದಾಗ ಆಗುವ ಆನಂದವೇ ಬೇರೆ. ಹಾಗಾಗಿ ನಮ್ಮ ದೇಶವೇ ನಮಗೆ ಸರಿ ಅನ್ನಿಸಿದ್ದು ಸುಳ್ಳಲ್ಲ. ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಬೇಕಾಯಿತು. ಸರ್ಕಾರಿ ಶಾಲೆಯಲ್ಲಿ ಊಟ ಉಚಿತ, ಆದರೆ ಶುಚಿತ್ವ ಇಲ್ಲ. ಓದು ಉಚಿತ, ಉತ್ತಮ ಸೌಲಭ್ಯವಿಲ್ಲ. ಸಣ್ಣ ಸಣ್ಣ ಕೆಲಸ ಮಾಡುವವರೂ, ದಿನಗೂಲಿ ಮಾಡುವವರೂ ಕೂಡ ಅವರ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಕಡಿಮೆ ಫೀ ತೆಗೆದುಕೊಳ್ಳುವ ಖಾಸಗಿ ಶಾಲೆ ಬೆಂಗಳೂರಿನಲ್ಲಿ ಕಾಣ ಸಿಗದು.
ಪ್ರಶಾಂತ್‌ ಬೀಚಿ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ