Advertisement

Month: March 2024

ವಾಸುದೇವ ನಾಡಿಗ್ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

ನಾಡಿಗರ ಕಾವ್ಯಪ್ರೇಮಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಅವರನ್ನು ಓದಿದ ಪ್ರತಿಯೊಬ್ಬನಿಗೂ ಗೊತ್ತು, ಬದುಕನ್ನು ಬಂಧಿಸಿರುವ ಎಲ್ಲ ಭಾವಗಳನ್ನೂ ಧಾರಾಳವಾಗಿ ಸುರಿಸುವ ಈ ಭಾವುಕ ನಿಗೂಢ ಮೌನಕ್ಕೆ ಶರಣಾದರೆ ಮರೆಯಲಾಗದ ಕವನವೊಂದು ಮೈತಳೆಯುವುದು ಖಚಿತ. ಒಂದು ಅನೂಹ್ಯ ವಿಷಾದದಲ್ಲಿ ಮುಳುಗಿದರೆಂದರೆ ಬದುಕಿನ ಪರಮ ಸತ್ಯದ ಮಗ್ಗುಲೊಂದನ್ನು ನಮ್ಮತ್ತ ಹೊರಳಿಸಿಬಿಡುವ ಮಾಯಕಾರ. ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ.
ವಾಸುದೇವ ನಾಡಿಗ್‌ ಬರೆದ ‘ಬಂದರಿಗೆ ಬಂದ ಹಡಗು’ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More

ಹೊಟ್ಟೆ ಮತ್ತು ಮನಸ್ಸು ತುಂಬಿದ ಭಾರೀ ಭೋಜನ…

“ಅವರಿಗೆ ಸುಲಭವೆನಿಸಿದ ಲೆಕ್ಕವನ್ನು, ‘ಒಂದಲ್ಲ ನಾಲ್ಕು ಸಲ ಕೇಳಿ ಹೇಳಿ ಕೊಡ್ತಿನಿ’ ಎನ್ನುತ್ತಿದ್ದರು. ಅದೇ ಸಲುಗೆಯ ಮೇಲೆ ಹುಡುಗರೇನಾದರೂ ‘ಇದು ಅರ್ಥ ಆಗ್ಲಿಲ್ಲ ಯಂಗೆ ಸರ್’ ಎಂದು ಕೇಳಿದರೆ ಉಪಾಯವಾಗಿ ತಾವಿರುವಲ್ಲಿಯ ಬೋರ್ಡ್ ಹತ್ತಿರಕ್ಕೆ ಕರೆಸಿಕೊಂಡು. ‘ಇಂಥ ಸುಲಭದ್ದು ಅರ್ಥ ಆಗ್ಲಿಲ್ವ, ಹೇಳಿ ಕೊಡ್ಬೇಕಾದ್ರೆ ಯತ್ತಗೆ ನೋಡ್ತಿರ್ತಿರ, ಎಲ್ಲಾರ ದನ ಕಾಯದ ಬಿಟ್ಟು, ಸ್ಕೂಲಿಗೆ ಯಾಕೆ ಬತ್ತಿರ’ ಎಂದು ಒಂದೇ ಉಸಿರಿಗೆ ಬೈಯುತ್ತ ಕನಿಷ್ಠ ಎರೆಡು ಕೋಲು ಮುರಿಯುವವರೆಗೂ ಹೊಡೆಯುತ್ತಿದ್ದರು.”

Read More

‘ಕೈ ಮದ್ದು’ ಹಾಕುವವರ ಮಧ್ಯೆ..

ಈ ಮದ್ದು ತೆಗೆಯುವುದು ಎಂದರೆ ಸಂತೆಯಲ್ಲಿ, ಜಾತ್ರೆಯಲ್ಲಿ, ಕಿವಿ, ಕಣ್ಣಿನಿಂದ ಕಲ್ಲು ತೆಗೆದಂತೆ. ತಮ್ಮ ಕೈಚಳಕದಿಂದ ತಾವೇ ಹಾಕಿದ್ದನ್ನು ರಾಶಿಗಟ್ಟಲೆ ತೆಗೆದು ತೋರುವವರಂತೆ ಇದು ಒಂದು ವೃತ್ತಿ. ಆದರೆ ಕೆಲವೊಮ್ಮೆ ಈ ರೀತಿಯ ಪ್ರಕ್ರಿಯೆಯ ನಂತರ ರೋಗ ಗುಣ ಆಗುವುದೂ ಉಂಟು. ಶರೀರಕ್ಕೆ ಬರುವ ಅನೇಕ ರೋಗಗಳು ಮನಸ್ಸಿಗೆ ಸಂಬಂಧಿಸಿದ್ದು. ಅದರಿಂದ ಅನೇಕ ಬಗೆಯ ಚಿಹ್ನೆಗಳು ಕಂಡು ಬರಬಹುದು. ಹೀಗಿರುವಾಗ ತನ್ನಲ್ಲಿದ್ದ “ಮದ್ದು” ಹೊರಬಿತ್ತು ಎಂಬ ನಂಬಿಕೆಯೂ ಅವರನ್ನು ಗುಣಪಡಿಸಲು ಸಾಕು.”

Read More

ಸ್ಮಿತಾ ರಾವ್ ತೆಗೆದ ಈ ದಿನದ ಫೋಟೋ

ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪಿ ಎಚ್ ಡಿ ಮಾಡಿದ್ದೇನೆ. ಪಕ್ಷಿ ವೀಕ್ಷಣೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಹಾಗೇ ಪ್ರಕೃತಿಗೆ ಸಂಬಂಧಪಟ್ಟ ಸಣ್ಣ ಪುಟ್ಟ ಬರಹಗಳನ್ನು ಬರೆಯುವುದು ನನ್ನ ಹವ್ಯಾಸ. ಮೂಲತಃ ಶಿವಮೊಗ್ಗದವಳಾಗಿದ್ದು, ಪ್ರಸ್ತುತ ಕೆನಡಾದ ಟೊರೊಂಟೊದಲ್ಲಿ ನೆಲೆಸಿದ್ದೇನೆ.  ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಪ್ರೊಫೆಸರ್ ಶಂಭು ಮಹಾಜನ್ ರವರ ಮಂಗಳೂರು ಉಪನ್ಯಾಸವು

ಕಂಪ್ಯೂಟರ್ ಗೆ ಕನ್ನಡ ಕಲಿಸಿದವರೆಂದೇ ಪ್ರಖ್ಯಾತರಾದ ಹಿರಿಯ ವಿದ್ವಾಂಸ ಕೆ.ಪಿ.ರಾವ್ ಅವರು ‘ವರ್ಣಕ’ ಎಂಬ ಹೊಸ ಕಾದಂಬರಿಯೊಂದನ್ನು ಬರೆದಿದ್ದಾರೆ. ಇದರ ಕಥಾ ನಾಯಕ ಪ್ರೊ.ಶಂಭು ಮಹಾಜನ್ ಅವರು ನಡೆಸುವ ಭಾಷಾಜ್ಞಾನದ ಅನ್ವೇಷಣೆಯೇ ಕಾದಂಬರಿಯ ಹೂರಣ. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಕುರಿತು ನೀಡುವ ಉಪನ್ಯಾಸವು ಕಾದಂಬರಿಯ ಆತ್ಮವೆಂದೇ ಹೇಳಬಹುದು.ಆ ಉಪನ್ಯಾಸದ ಪೂರ್ಣಪಾಠ ನಿಮ್ಮ ಓದಿಗಾಗಿ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ