Advertisement

Month: March 2024

ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿಯ ತುಣುಕು

ಮಲೀಕ ಮಾತಾಡಲಿಲ್ಲ. ಆಕೆಯನ್ನು ಸೆಳೆದುಕೊಂಡ. ತುಟಿಗೆ ತುಟಿ ಸೇರಿಸಿದ. ಇವನ ತುಟಿಗಳ ಕೊಂಕೋ, ಆಕೆಯ ಕೃತಕ ತುಟಿ ಕಳೆದುಕೊಂಡಿದ್ದ ತೇವವೋ, ಮುತ್ತಿಗೊಂದು ಸತ್ವವಿರಲಿಲ್ಲ, ಸೆಳೆತವಿರಲಿಲ್ಲ. ಸ್ಥಿತಿಸ್ಥಾಪಕತ್ವ ಕಳೆದುಕೊಂಡ ರಬ್ಬರಿನ ಬೊಂಬೆಯ ತುಟಿಯನ್ನು ಚುಂಬಿಸಿದಂತಾಯಿತು, ಮಲೀಕನಿಗೆ.  ಆಕೆ ಮುತ್ತಿನಿಂದಲೇ ಮಲೀಕನನ್ನು ದೂರಸರಿಸುವುದಕ್ಕೆ ಪ್ರಯತ್ನಿಸಿದಳು. -ದೇಹ ಸೌಂದರ್ಯದ ಜಿಜ್ಞಾಸೆಯನ್ನು ಕುರಿತು ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿ ‘ಕಾಯಾ’ ದಿಂದ ಆಯ್ದ ಒಂದು ಅಧ್ಯಾಯ ನಿಮ್ಮ ಓದಿಗಾಗಿ. 

Read More

ʻಲವ್ಲಿ ಮ್ಯಾನ್ʼ: ವಿಷಾದವೆಂಬ ನೆರಳಿನಡಿ ಸಂಸಾರದ ಚಿತ್ರ

ʻಲವ್ಲೀ ಮ್ಯಾನ್‌ʼ ಕೇವಲ ಎಪ್ಪತ್ತಾರು ನಿಮಿಷಗಳ ಚಿತ್ರ. ಬೇರೆ ಚಿತ್ರಗಳಿಗೆ ಹೋಲಿಸಿದರೆ ಕಡಿಮೆ ಅವಧಿಯದು. ಚಿತ್ರದಲ್ಲಿ ತನ್ನ ಆಶಯವನ್ನು ಪೂರ್ಣಗೊಳಿಸಲು ಕೇವಲ ಒಂದು ದಿನದ ಅವಧಿಯಲ್ಲಿ ನಡೆಯುವ ಕಥಾ ಹಂದರವಿರುವ ಕಥನವನ್ನು ಪ್ರಸ್ತುತಪಡಿಸುತ್ತಾನೆ. ಚಿತ್ರದಲ್ಲಿ ತೀವ್ರತರ ಭಾವನೆಗಳನ್ನು ಉಂಟುಮಾಡುವ ಸನ್ನಿವೇಶಗಳನ್ನು ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಿರೂಪಿಸುತ್ತಾನೆ. 
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಂಡೊನೇಷಿಯದ ʻಲವ್ಲಿ ಮ್ಯಾನ್‌ʼಸಿನಿಮಾದ ವಿಶ್ಲೇಷಣೆ

Read More

ರಮೇಶ್‌ ಟಿ.ಆರ್. ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ರಮೇಶ್‌ ಟಿ.ಆರ್.‌ ರಮೇಶ್‌ ಮೂಲತಃ ಹಾಸನ ಜಿಲ್ಲೆ ಅರಸಿಕೆರೆಯವರು. ವೃತ್ತಿಯಲ್ಲಿ ಅಂಚೆಪಾಲಕರಾಗಿದ್ದು ಕಳೆದ ಐದು ವರ್ಷಗಳಿಂದ ಛಾಯಾಗ್ರಹಣ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಸಜ್ಜನ ಸವ್ಯಸಾಚಿ ಯಕ್ಷಗುರು ಕೃಷ್ಣ ಭಂಡಾರಿಯ ನೆನಪುಗಳು

ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಯಕ್ಷಗುರು ಕೃಷ್ಣ  ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದ ಮೂಲಕ ಕುಣಿಸಬೇಕೆನ್ನುವದು ಚೆನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು.”

Read More

ಡಾ. ಗೀತಾ ವಸಂತ ಬರೆದ ಕವಿತೆ: ತೊಟ್ಟು ಕಳಚಿದ ಹೂವು

“ಕೆರೆಯಂಚಿನ ಹಾದಿಯಲಿ ಅಪ್ಪನ ಅರಲುಮೆತ್ತಿದ ಹೆಜ್ಜೆ
ಕಾಲದಾಚೆಗೆ ನಡೆದುಹೋದಂತಿದೆ
ನೀರಿಗೆ ಗಾಳಿಸೋಕಿ ಅಲೆಯ ಉಂಗುರವೆದ್ದು
ಅಂತಪಾರವಿಲ್ಲದೆ ವಿಸ್ತರಿಸಿದೆ”- ಡಾ. ಗೀತಾ ವಸಂತ ಬರೆದ ಕವಿತೆ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ