Advertisement

Month: April 2024

ಶಾಂತಿ, ಕ್ರಾಂತಿ, ಸ್ವಾತಂತ್ರ್ಯದ ಹಗಲುಗನಸು

ಇಪ್ಪತ್ತೊಂದನೇ ಶತಮಾನದ ಈ ವರ್ಷದಲ್ಲೂ ಆಸ್ಟ್ರೇಲಿಯಾದ ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಹೇಳಿಕೊಳ್ಳುವಂತಹ ಸಾಮಾಜಿಕ ನ್ಯಾಯವಿನ್ನೂ ಸಿಕ್ಕಿಲ್ಲ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ಮೂರು ಶತಭಾಗ ಮಾತ್ರ ಅಬೊರಿಜಿನಲ್ ಮತ್ತು ದ್ವೀಪವಾಸಿಗಳು. ಕಾರಾಗೃಹಗಳಲ್ಲಿ ಅವರ ಸಂಖ್ಯೆ ಸುಮಾರು ಶೇ 29ರಷ್ಟು. ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಅವರು, ಭಾರತದಲ್ಲಿ ಗಾಂಧೀಜಿಯ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಸಿಕ್ಕಂತೆ, ತಮ್ಮಲ್ಲೂ ಪರಿವರ್ತನೆಯ ಬೆಳಕೊಂದು ಮೂಡಿಬರುವಂತಾಗಲಿ ಎಂದು ಹಾರೈಸುತ್ತಾರೆ. ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ಕುರಿತು ಡಾ. ವಿನತೆ ಶರ್ಮ ಆಸ್ಟ್ರೇಲಿಯಾ ಪತ್ರದಲ್ಲಿ ಬರೆದಿದ್ದಾರೆ.

Read More

ಅಜ್ಜ ಕೊಟ್ಟ ಜಾಗಟೆಯ ಮಹಿಮೆ

ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರು ಉಪಯೋಗಿಸುತ್ತಿದ್ದ ಜಾಗಟೆ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಕೊಟ್ಟದ್ದು. ಇದು ಈಗಲೂ ಬಲಿಪ ಮನೆತನದ ಅತ್ಯಮೂಲ್ಯ ಆಸ್ತಿಯಂತಿದೆ. ಇದು ಕರಾವಳಿಯ ತೆಂಕುತಿಟ್ಟು ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಮುನ್ನಡೆಸಿದ ಯಕ್ಷಗಾನಗಳಿಗೆ ಸಾಕ್ಷಿಯಂತೆ ಇರುವ, ಐತಿಹಾಸಿಕ ಮಹತ್ವವಿರುವ ಜಾಗಟೆ. ಈಗ ಅದು ನೋಡುತ್ತಿರುವುದು ಬಲಿಪ ಪರಂಪರೆಯ ನಾಲ್ಕನೆಯ ತಲೆಮಾರನ್ನು. ‘ಬಲಿಪ ಮಾರ್ಗ’ ಅಂಕಣದಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ ಬರಹ.

Read More

ತಗಡಿನ ಸಂದಿಯಿಂದಲೇ ರಂಗೇರಿಸುತ್ತಿದ್ದ ವಸ್ತು ಪ್ರದರ್ಶನ

ನಮಗೂ ಒಂದು ದಿನ ಅದೃಷ್ಟ ಖುಲಾಯಿಸಿ ಬಿಟ್ಟಿತು. ಸೆಕ್ಯುರಿಟಿಯ ಮನಕರಗಿ ಓನರ್ ಇಲ್ಲದ ಸಮಯ ನೋಡಿ ನಮ್ಮನ್ನು ಒಳ ಬಿಟ್ಟಿದ್ದ. ಆ ಸೌಂಡು, ಜಗಮಗ, ರಾಟೆ, ಆಟಗಳು, ಸರ್ಕಸ್‍ನ ಪ್ರಾಣಿಗಳ ಸದ್ದು, ನಗರಿಗರು ಅಲ್ಲಲ್ಲೆ ನಿಂತು ತಿನ್ನುತ್ತಿದ್ದ ತಿನಿಸುಗಳು, ಇವೆಲ್ಲ ಅತ್ಯಾಕರ್ಷಕವಾಗಿದ್ದವು. ಅವನ್ನೆಲ್ಲ ಅನುಭವಿಸಲು ದುಡ್ಡಿಲ್ಲದ ನಾವು ನೋಡಿಯೇ ಹೆಚ್ಚು ಥ್ರಿಲ್ ಆಗುತ್ತಿದ್ದೆವು. ಈಗ ಅವೆಲ್ಲ ಕೈಗೆಟುಕುವಂತೆಯೇ ಇದ್ದರೂ, ಅವನ್ನೆಲ್ಲ ಆಡುವ ಧೈರ್ಯವನ್ನು, ಮನಸ್ಸನ್ನು ಕಳೆದುಕೊಂಡಿದ್ದೇವೆ. ‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ