Advertisement

Month: July 2022

ಮರೆಯಲಾಗದ ಆ ನಾಲ್ಕು ರಾತ್ರಿಗಳು

ಹಗಲಿನಲ್ಲಿ ಎಲ್ಲೆಲ್ಲೋ ಹಂಚಿಹೋಗಿದ್ದ ಇವರನ್ನೆಲ್ಲ ಹೀಗೆ ಒಂದೇ ಸೂರಿನಡಿ ಸೇರಿಸಿದ್ದ ಇರುಳು ಎಷ್ಟೊಂದು ಬಲಶಾಲಿ ಅಂದುಕೊಳ್ಳುತ್ತಲೇ ಸಣ್ಣಗೆ ತೂಕಡಿಕೆ. ಅಲ್ಯಾರೋ ಕೆಮ್ಮಿದ ಸದ್ದು. ಮತ್ಯಾರೋ ಮಗುವನ್ನು ತಟ್ಟಿದ ಸಪ್ಪಳ. ಇನ್ಯಾರೋ ಯಾರಿಗೋ ಗದರಿದ ದನಿ. ಮಧ್ಯೆ-ಮಧ್ಯೆ ಹೆಗ್ಗಣಗಳ ಓಡಾಟ. ಅಪರೂಪಕ್ಕೆ ರೈಲಿನ ಕೂಗು. ಮೈಕಿನ ಅನೌನ್ಸ್‌ಮೆಂಟು… ಎಲ್ಲವೂ ಬೇರಾವುದೋ ಲೋಕದ್ದು ಎನ್ನುವಂಥ ಮಂಪರು. ಮುಂಜಾನೆ ಎಚ್ಚರಾದಾಗ ಪಕ್ಕದಲ್ಲೇ ಹಮಾಲಿ ಮಂದಿಯ ಗುಂಪೊಂದು ಸೇರಿತ್ತು.

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ

ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?”
‘ನಾನು ಮೆಚ್ಚಿನ ನನ್ನ ಕತೆ’ಯ ಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ ‘ಪಿರಾಮಿಡ್ಡಿನಿಂದೆದ್ದು ಬಂದವನು’

Read More

ಮಳೆ, ಬೇಸಗೆ, ಕ್ರಿಕೆಟ್ ಇತ್ಯಾದಿ ಬಿಸಿ-ತಂಪು ಕಥೆಗಳು

ಬೇಸಗೆಯ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ದೇಶದ ಪೂರ್ವ ಮತ್ತು ಉತ್ತರ ದಿಕ್ಕುಗಳ ಪೂರ್ತಿ ‘ಲ ನಿನಾ’ ಎಂಬ ಮಳೆ-ಮಾರುತ ಹವಾಮಾನ ವಿಜೃಂಭಿಸಲಿದೆ. ಬಿಸಿಲಿನ ಜೊತೆ ಒಂದಷ್ಟು ತಂಪು, ಅಗಾಧ ಮಳೆ ಮತ್ತು ಚಂಡಮಾರುತವು ಜನಜೀವನದಲ್ಲಿ ಆಟವಾಡಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಅದರ ಮುನ್ಸೂಚನೆಯೆಂಬಂತೆ ಈಗಾಗಲೇ ನ್ಯೂ ಸೌತ್ ವೇಲ್ಸ್ ಮತ್ತು ನಮ್ಮ ರಾಣಿರಾಜ್ಯದ ಕೆಲ ಭಾಗಗಳಲ್ಲಿ ಬೇಕಾದಷ್ಟು ಮಳೆಯಾಗಿದೆ.- ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ದೇಹ ಸಂಕೀರ್ಣತೆಯ ಮುಗಿಯದ ಜಿಜ್ಞಾಸೆ

ನಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಲು, ನಮ್ಮನ್ನು ಆರೋಗ್ಯವಂತರನ್ನಾಗಿ ಇಡಲು, ರೋಗದಿಂದ ಗುಣಮುಖವಾಗುವಂತೆ ಮಾಡಲು, ವಿಜ್ಞಾನಿಗಳು ಮತ್ತು ವೈದ್ಯರು ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. ಹೊಸ ತಂತ್ರಜ್ಞಾನಗಳನ್ನು, ಔಷಧಿಗಳನ್ನು, ಶಸ್ತ್ರಚಿಕಿತ್ಸೆಗಳನ್ನು ಅವಿಷ್ಕಾರ ಮಾಡುತ್ತಲೇ ಇದ್ದಾರೆ. ಇಷ್ಟೊಂದು ಸೌಲಭ್ಯಗಳು ಔಷಧಗಳು ಇದ್ದರೂ ಮನುಷ್ಯನ ದೇಹರಚನೆ, ಜೀವಕೋಶಗಳ ಕ್ರಿಯೆ, ಅಂಗಾಂಗಳ ವ್ಯವಸ್ಥೆಯ ನಡುವಿನ ಸಂಬಂಧಗಳ ವಿಪರೀತ ಸಂಕೀರ್ಣತೆಯನ್ನು….

Read More

ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ

ರಾಮಚಂದ್ರ ದೇವರೂ ‘ಮೂಗೇಲ’ ಕತೆಯಲ್ಲಿ ಮೂಗೇಲನ ಅಪ್ಪನಂಥವರು ಮನುಷ್ಯ ಸಂಬಂಧಗಳಿಗಿಂತ ಆರ್ಥಿಕ ಲಾಭಕ್ಕೆ ಪ್ರಾಮುಖ್ಯ ನೀಡುವುದನ್ನು ತೋರಿಸಲು ಮೂಗೇಲನ ಮೂಗನ್ನು ಅಸಂಗತವಾಗಿ ಹನುಮಂತನ ಬಾಲದಂತೆ ಬೆಳೆಸಿದ್ದಾರೆ. ಈ ಕತೆ ಮೇಲ್ನೋಟಕ್ಕೆ ಭಾರತೀಯ ಅಥವಾ ಕನ್ನಡದ ವಿಶಿಷ್ಟ ಸನ್ನಿವೇಶವನ್ನು ಸೂಚಿಸುವಂಥದ್ದಲ್ಲ. – ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ
ಅವರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

Read More

ಜನಮತ

ನನ್ನ ಗಂಡ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

2 days ago
https://t.co/3ZFHqcWffn ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ ಇಂದಿನ ಓದಿಗಾಗಿ.

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸರಳ ವಡ್ಡಾರಧನೆ ಎಂಬೊಂದು ಕೈದೀವಿಗೆ

ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟುಗಳು...

Read More