Advertisement

Month: March 2024

ಇಂಗ್ಲಿಷ್ ಪಾಸು ಮಾಡಿಸುವ ‘ದಾತ’

ಹಾಸ್ಟೆಲ್‌ನಲ್ಲಿ ಓದುವುದಕ್ಕೆ ಬಿಎಸ್ಸಿ ಹುಡುಗರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಿದ್ದ ನಾವು, ರಾತ್ರಿ ಹಗಲೆನ್ನದೆ ಪುಸ್ತಕ ಹಿಡಿದೇ ಇರುತ್ತಿದ್ದೆವು. ಸದಾ ಕನ್ನಡಕ ಹಾಕುತ್ತ ಎಲ್ಲರಿಂದ ‘ಇಂಟಲಿಜೆಂಟ್’ ಎಂದು ಕರೆಸಿಕೊಳ್ಳುತ್ತಿದ್ದ ರಂಗನಾಥ್ ನಮ್ಮ ಓದನ್ನ ಕಂಡು ‘ನೀವು ಸೈನ್ಸ್‌ ತಗಬೇಕಾಗಿತ್ತು ಕಂಡ್ರಲ’ ಎನ್ನುತ್ತಿದ್ದ. ಓದಿ ಬಸವಳಿಯುತ್ತಿದ್ದ ನಮಗೆ ಮಧ್ಯೆ ಕರೆಂಟ್ ಹೋದರೆ ತಂಪೆನಿಸುತ್ತಿತ್ತು. ಆದರೆ ಅದನ್ನ ತೋರಗೊಡದೆ ಕರೆಂಟಿಗೆ ಶಪಿಸುವರಂತೆ ನಾಟಕವಾಡುತ್ತಿದ್ದೆವು. ಹೀಗೆ ಒಮ್ಮೆ ನಮಗೂ ಪ್ರಭನಿಗೂ ಚಾಲೆಂಜ್ ಬಿತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ಟ್ರಂಕು ತಟ್ಟೆ ಸರಣಿಯ ಬರಹ ಇಲ್ಲಿದೆ.

Read More

ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ ಇಂದು ಆರಂಭ

ಸದಾ ಹೊಸ ನೋಟವನ್ನು ಕೊಡುವ ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಬೆಟ್ಟಗಳನ್ನು ಏರುವುದು, ಹೊಸ ಜನರ ಭೇಟಿ ಮಾಡುವುದು,  ವಿವಿಧ ಪ್ರದೇಶಗಳ ಹಿನ್ನೆಲೆ ಅರಿಯುವುದೆಂದರೆ ಅಂಜಲಿ ರಾಮಣ್ಣ ಅವರಿಗಿಷ್ಟ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ, ಮಹಿಳಾ ಹಕ್ಕುಗಳ ಬಗ್ಗೆ ನಿಖರವಾದ ನಿಲುವುಗಳನ್ನು ಹೇಳಬಲ್ಲ ಅವರು, ತಮ್ಮ ಸೂಕ್ಷ್ಮ ಒಳನೋಟಗಳನ್ನು ‘ಫ್ಯಾಮಿಲಿ ಕೋರ್ಟ್ ಕಲಿಕೆ’ ಎಂಬ ಶೀರ್ಷಿಕೆಯಡಿ ಮಂಡಿಸುವುದುಂಟು. 

Read More

ಹಿಮ್ಮೇಳದಲ್ಲಿ ಮದ್ದಳೆ, ಖಂಜೀರ, ಪುಂಗಿ ಇತ್ಯಾದಿ

ಖಂಜೀರ ಪೂರ್ಣಪ್ರಮಾಣದಲ್ಲಿ  ಯಕ್ಷಗಾನ ಹಿಮ್ಮೇಳದ ಭಾಗವಾಗಿತ್ತು. ಭಾಗವತರ ಹಿಂದೆ ಒತ್ತು ಮದ್ದಳೆಗಾರರು ಅಥವಾ ಅಲ್ಪ ಸ್ವಲ್ಪ ತಾಳ ಜ್ಞಾನ ಇದ್ದವರು, ಖಂಜೀರವನ್ನು ನಿಂತು ನುಡಿಸುತ್ತಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತರು ಮೇಳ ತಿರುಗಾಟದಲ್ಲಿ ಖಂಜೀರದ ನುಡಿಸುವಿಕೆಯೊಂದಿಗೆ ಭಾಗವತಿಕೆಯನ್ನು ಮಾಡಿದ್ದರು. ಖಂಜೀರದ ಬಳಕೆ ಕಾಲಕ್ರಮೇಣ ನಿಂತಿತು. ಹೊಸ ವಾದ್ಯಗಳು ಹಿಮ್ಮೇಳವನ್ನು ಸೇರಿಕೊಂಡ ಬಗ್ಗೆ ‘ಬಲಿಪ ಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆದಿದ್ದಾರೆ.

Read More

ಗಣ್ಯರ ಒಡನಾಟದಲ್ಲಿ ಕಂಡ ಸರಳತೆಯ ಮುಖಗಳು

ಯಾವುದಾದರೂ ಗಣ್ಯ ವ್ಯಕ್ತಿಗಳನ್ನು ಬರುವಿಕೆಯು ಮಧ್ಯಾಹ್ನ ಹನ್ನೊಂದು ಗಂಟೆಗೆ ಎಂದು ಇದ್ದರೂ ನಾವು ಭದ್ರತೆಯ ದೃಷ್ಟಿಯಿಂದ ಬೆಳಿಗ್ಗೆ ಮುಂಜಾನೆಯೇ ಅಲ್ಲಿರಬೇಕಾಗುತ್ತಿತ್ತು. ಅಲ್ಲಿ ಎಲ್ಲ ತಪಾಸಣೆಗಳನ್ನು ಮಾಡಿದ ನಂತರ ಆಸ್ಪತ್ರೆಯವರಾದ ನಾವು ಮೊದಲಿನ ಸುತ್ತಿನಲ್ಲಿ ಇರುತ್ತಿದ್ದೆವು. ಗಣ್ಯವ್ಯಕ್ತಿಗಳಿಗಾಗಿ ತಯಾರು ಮಾಡುತ್ತಿರುವ ಎಲ್ಲಾ ತಿನಿಸುಗಳ ರುಚಿಯನ್ನು ಕೂಡ ನೋಡಬೇಕೆಂಬ ಸೂಚನೆ ನೀಡಲಾಯಿತು. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ನೆನಪುಗಳ ಮೆರವಣಿಗೆ ಸರಣಿ.

Read More

“ಉಡದಾರ” ಪ್ರಬಂಧ ಸಂಕಲನದ ಒಂದು ಪ್ರಬಂಧ…

ಶನಿವಾರ ಬಂದರೆ ಸಾಕು ಚೌಕದ ಮೂಗು ಅರಳುತ್ತಿತ್ತು ಒಂದು ಕಾಲಕ್ಕೆ! ಮಸೀದಿಯ ಮೂಲೆಗೆ ಸುತ್ತಲಿನ ಹಳ್ಳಿಗಳಿಂದ ಬಂದ ಹೆಣ್ಮಕ್ಕಳು ಒಲೆ ಹೂಡಿ ತುಪ್ಪ ಕಾಯಿಸುತ್ತಿದ್ದರು. ಚೌಕದಿಂದಾಚೆ ಸುಮಾರು ದೂರದವರೆಗೆ ತುಪ್ಪದ ವಾಸನೆ ಗಮ್ಮಂತ ಬರುತ್ತಿತ್ತು. ಹದವಾಗಿ ಕಾಯುತ್ತಿದ್ದ ತುಪ್ಪಕ್ಕೆ ವೀಳ್ಯದೆಲೆ ಹಾಕಿ ತುಪ್ಪದ ವಾಸನೆಗೊಂದು ಅಪ್ಯಾಯತೆ ತರುತ್ತಿದ್ದರು. ಘಮ ಘಮಿಸುವ ತುಪ್ಪ ಕಾಯಿಸಿದ ಸ್ವಲ್ಪ ಹೊತ್ತಿಗೆ ಖಾಲಿಯಾಗುತ್ತಿತ್ತು. ತುಪ್ಪ ಮಾರುವವರಿಗೆ ಚೌಕ ಖಾಯಂ ವಿಳಾಸವಾಗಿತ್ತು.
ಶರಣಬಸವ ಕೆ. ಗುಡದಿನ್ನಿ ಬರೆದ ಹೊಸ ಪ್ರಬಂಧಗಳ ಸಂಕಲನ “ಉಡದಾರ” ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ