Advertisement

Month: April 2024

ಎ ಪ್ಯಾಸೇಜ್ ಟು ನಾವಿಗಲ್ಲಿ…

ನಮ್ಮ ಕೆಲ ಜನ ಎಷ್ಟೊಂದು ವಿಚಿತ್ರವಾಗಿರುತ್ತಾರೆ ಎನ್ನುವುದಕ್ಕೆ ಗೌಸ್ ಮತ್ತು ಖೈರುನ್ನೀಸಾಳ ನಿಶ್ಚಿತಾರ್ಥವೇ ಸಾಕ್ಷಿ. ತನ್ನ ಮಗಳನ್ನು ತಮ್ಮನಿಗೆ ಕೊಡಬೇಕೆಂದು ಗೌಸ್ ಅಕ್ಕ ನಿರ್ಧರಿಸಿದಳು. ಆತನೋ ಗಂಡನಾಗುವ ಸಾಧ್ಯತೆ ಇಲ್ಲದವನು. ಆತನ ನಡಿಗೆ, ಮಾತು ಮುಂತಾದವು ಹೆಂಗಸರ ಹಾಗೇ ಇದ್ದವು. ಅವನ ಸಹವಾಸವೂ ಹೆಣ್ಣುಮಕ್ಕಳ ಜೊತೆಗೇ ಇತ್ತು. ಕಂಡ ಕಂಡವರ ಮನೆಯಲ್ಲಿ ಕಲಬತ್ತಿನಲ್ಲಿ ಚಟ್ನಿ ಕುಟ್ಟೋದು ಮತ್ತು ಮಸಾಲೆ ಅರಿದು ಕೊಡೋದು ಎಂದರೆ ಆತನಿಗೆ…

Read More

ಜಯಶಂಕರ ಹಲಗೂರು ಬರೆದ ಈ ದಿನದ ಕವಿತೆ

“ಕೂತೆವು… ನಿಂತೆವು… ಓಡಾಡಿದೆವು.. ಈಜಾಡಿದೆವು
ಹಗಲ ಚಂದ್ರನಂಥ ಎಲ್ಸಿ
ಕುಸಿಯುತ್ತಿರುವ ಮನೆ ಮಾಡು ತೊಲೆ ಕಮಾನು
ಬಸಿರು ಬಾಣಂತನಕ್ಕೆ ಮರೆಗೈಯ್ದ ಗೋಡೆ
ರಾಗಿ ಭತ್ತದ ವಾಡೆ”- ಜಯಶಂಕರ ಹಲಗೂರು ಬರೆದ ಈ ದಿನದ ಕವಿತೆ

Read More

ಚೆಕೊವ್‌ರ ಏಳು ಅಪರೂಪದ ಕತೆಗಳು

ಮಗಳೊಂದಿಗೆ ಒಂದು ದಿನ ಕಳೆಯುವ ಸುಖ ಈ ಎಲ್ಲ ವೈಭವಕ್ಕಿಂತ ಮಿಗಿಲಾದುದು ಎಂದು ಕನಸು ಕಾಣುತ್ತ ದಿನ ಮುಗಿಸುತ್ತಿರುತ್ತಾಳೆ ನತಾಲ್ಯಾ. ಅಷ್ಟರಲ್ಲಿ ಅವಳ ಮರಿ ದೆಲ್, ಅಂದರೆ ಪತಿ ದೇವರ ಆಗಮನವಾಗುತ್ತದೆ. ಸಣ್ಣದೊಂದು ಕೆಲಸದಲ್ಲಿದ್ದ ಆಕೆಯ ಗಂಡ ನಿಕಿಟಿನ್ ಹೆಂಡತಿ ಪ್ರಸಿದ್ಧಳಾಗುತ್ತಲೇ ಕೆಲಸ ಬಿಟ್ಟು ಅವಳ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ನತಾಲ್ಯಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದರೂ…

Read More

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ

‘ನಮ್ಜಯು ಜಾಣೆ; ಮನೆ ಕೆಲಸಾನೂ ಮಾಡಿ, ಅಂಗಡೀನೂ ನಿಭಾಯಿಸ್ತಾಳೆ’ ಎಂದು ಮನೆಮಂದಿಯೆಲ್ಲಾ ಕೊಂಡಾಡಿದವರೇ, ಮೆಚ್ಚಿ ಮುದ್ದಾಡಿದವರೇ… ಎಲ್ಲವೂ ಸರಿಯಿದ್ದಾಗ. ಮೊದಲ ಬಾರಿಯ ಲಾಕ್ಡೌನ್ ಹೇಗೋ ಕಳೆಯಿತು. ಎರಡನೇ ಬಾರಿ ಲಾಕ್ಡೌನ್ ಆಗುವುದಕ್ಕೆ ಒಂದು ವಾರ ಮೊದಲೇ, ಸಹಾಯಕ್ಕಿದ್ದ ಹುಡುಗಿಗೆ ಎರಡು ತಿಂಗಳ ಮುಂಗಡ ಹಣ ನೀಡಿ, ಬುಟಿಕ್ ಬಾಗಿಲು ಹಾಕಿದ್ದೆ. ಆದರೆ ಮುಂದಿನ ನಾಲ್ಕೇ ದಿನದಲ್ಲಿ ಜ್ವರ ಆರಂಭವಾಗಿತ್ತು.

Read More

ದೇಶ ಯಾವುದಾದರೇನು, ಒಳಿತನ್ನು ಪರಾಂಬರಿಸೋಣ

ಪಾಶ್ಚಿಮಾತ್ಯ ದೇಶಗಳಲ್ಲಿ ನಾಲ್ಕು ಋತುಗಳು ಕಂಡು ಬರುತ್ತದೆ, ಅದರಲ್ಲೂ ಕೆನಡಾ ದೇಶದಲ್ಲಿ ವರ್ಷದ ಆರು ತಿಂಗಳು ಮಂಜು ಬೀಳುತ್ತಿದ್ದು, ಹಿಮದಿಂದ ಕೂಡಿದ್ದರೂ ನಾಲ್ಕು ಋತುಗಳು ಬಂದು ಹೋಗುತ್ತವೆ. ಇಂತಹ ದೇಶಗಳಲ್ಲಿ ಸ್ಪ್ರಿಂಗ್ ಎನ್ನುವ ಒಂದು ಋತು ಇದೆ, ಅದನ್ನು ವಸಂತ ಕಾಲ ಎನ್ನುವುದು ಸೂಕ್ತ. ಈ ಋತುವಿನ ಸಮಯದಲ್ಲಿ ಬೋಳಾಗಿದ್ದ ಮರಗಳು ಇದ್ದಕ್ಕಿದ್ದಂತೆ ಚಿಗುರೊಡೆಯುತ್ತವೆ, ನೋಡು ನೋಡುತ್ತಿದ್ದಂತೆ ಎಲೆಗಳಿಂದ ಪೂರ್ತಿ ಆವರಿಸಿಕೊಳ್ಳುತ್ತದೆ. ಮಣ್ಣಿನ ಶಕ್ತಿಯೋ, ಜಾಗದ ಮಹಿಮೆಯೋ ಕೇವಲ ತಿಂಗಳಲ್ಲಿ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ