Advertisement

Month: May 2022

ಕಾವ್ಯಮಾಲೆಯ ಕಾಣದ ಹೂಗಳು

ಕನ್ನಡ  ಕಾವ್ಯ ಲೋಕದಲ್ಲಿ ಪ್ರಸಿದ್ಧರ ಕವನಗಳು, ಪ್ರಸಿದ್ಧವಾದ ಕವನಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಎಷ್ಟೋ ಅತ್ಯುತ್ತಮವಾದ ಕವನಗಳು ಕಂಡೂ ಕಾಣದಂತೆ ಮರೆಯಾಗಿವೆ.  ಗದ್ಯಪ್ರಕಾರದಲ್ಲಿ ಹೆಚ್ಚು ಬರಹಗಳನ್ನು ಬರೆದವರೂ ಒಳ್ಳೆಯ ಪದ್ಯಗಳನ್ನು ಬರೆದುದುಂಟು. ಅಂತಹ ಅಪರೂಪದ ಕವನಗಳನ್ನು ಹುಡುಕಿ ನಿಮ್ಮ ಮುಂದೆ ಇರಿಸುವ ಪ್ರಯತ್ನವನ್ನು ಕೆಂಡಸಂಪಿಗೆ ಮಾಡಲಿದೆ. ಈ ಸರಣಿಯಲ್ಲಿ ಮೊದಲ ಕವನವಾಗಿ ಸೋಮಶೇಖರ ಇಮ್ರಾಪೂರ ಅವರು ಬರೆದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ’ ಎಂಬ ಕವನ ನಿಮ್ಮ ಓದಿಗಾಗಿ ಇಲ್ಲಿದೆ. ಪ್ರತೀ ಗುರುವಾರ ಹೀಗೊಂದು ಕವನದ ಪುಟವಿಲ್ಲಿ ಅರಳಿಕೊಳ್ಳಲಿದೆ.

Read More

‘ಏನು ಜನ, ಎಂಥ ಗಾನ’ ಪುಸ್ತಕದ ಕುರಿತು ಶ್ರೀಮತಿ ದೇವಿ ಬರಹ

ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ ಮತ್ತು ಸಂಗೀತಗಾರರ ಕುರಿತೇ ಆಗಿದ್ದರೂ ಈ ಅಪಾಯಕ್ಕೆ ಎಲ್ಲಿಯೂ ಈಡಾಗಿಲ್ಲ. ಇಲ್ಲಿ ಹೇಳಲ್ಪಡುವ ಘಟನೆಗಳೇ ಅಲ್ಲಿನ ‘ವಸ್ತು ಮತ್ತು ವ್ಯಕ್ತಿ’ಯ ಹಿರಿತನವನ್ನು, ಸರಳತೆಯನ್ನು, ಸಂಗೀತ ಅವರನ್ನು ಆವರಿಸಿಕೊಂಡ ಪರಿಯನ್ನು, ಅವರ ಜೀವನ ಪ್ರೀತಿಯನ್ನು ಮನಸ್ಸಿನಾಳಕ್ಕೆ ಇಳಿಸಿ ಬಿಡುತ್ತವೆ.
ಅರವಿಂದ ಗಜೇಂದ್ರಗಡಕರ್ ಅವರ ಮರಾಠಿ ಕೃತಿಯನ್ನು ದಮಯಂತಿ ನರೇಗಲ್ಲ “ಏನು ಜನ ಎಂಥಾ ಗಾನ” ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತು ಶ್ರೀಮತಿ ದೇವಿ ಬರೆದಿದ್ದಾರೆ

Read More

ಮಂಡಲಗಿರಿ ಪ್ರಸನ್ನ ಬರೆದ ಗಜಲ್

“ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆ
ಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು

ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನ
ನನ್ನೊಳಗಿನ ಕಾರಂಜಿ ನಗೆನುಂಗಿದ ನಿನಗೆ ಕೃತಜ್ಞತೆಗಳು”- ಮಂಡಲಗಿರಿ ಪ್ರಸನ್ನ ಬರೆದ ಗಜಲ್

Read More

ಕಾಳಪ್ಪಬ್ಲಾಕಿನಲ್ಲಿ ಟೆಸ್ಟ್ ಕ್ರಿಕೆಟಿಗರು!

ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಫಿ.

Read More

ಜನಮತ

ಮಳೆ ಎಂಬುದು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

17 hours ago
https://t.co/dzzNZ1XMGK ಅಕಾಲಿಕವಾಗಿ ಸುರಿಯುತ್ತಿರುವ ಮಳೆಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಇಂದಿನ ಓದಿಗಾಗಿ.
17 hours ago
ಕಾವ್ಯಮಾಲೆಯ ಕುಸುಮ ಸರಣಿಯಲ್ಲಿ ಅರ್ಚಿಕ ವೆಂಕಟೇಶರು ಬರೆದ ಕವಿತೆ "ಯಾಂವ ನನ್ನೆ ಕೇಳಾಂವ?"

https://t.co/J5kM7HLeym
21 hours ago
https://t.co/KH2TfnVun1 ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಒಲೆ ಬದಲಾದರೂ ಉರಿ ಬದಲಾಗದು!

ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ....

Read More