Advertisement

Month: June 2022

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

Read More

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಆಸಕ್ತ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: [email protected]

Read More

ಡಾ. ಸತ್ಯವತಿ ಮೂರ್ತಿ ಬರೆದ ಈ ದಿನದ ಕವಿತೆ

“ಇತರರಿಗೆ ಯಾರು ಕೊಟ್ಟರು ಈ ಅಧಿಕಾರ?
ನಮ್ಮ ಕಣ್ಣೀರ ಹನಿಗಳ ಒಳಹೊಕ್ಕು ನೋಡಲು,
ನಮ್ಮ ಮುಖವಾಡವಷ್ಟೆ ಅವರಿಗೆ ನಿಜದ ಸಾಕಾರ
ಅಂತರಾತ್ಮದ ಕೂಗು! ನಮಗೆ ಮಾತ್ರ ಮೀಸಲು”- ಡಾ . ಸತ್ಯವತಿ ಮೂರ್ತಿ ಬರೆದ ಈ ದಿನದ ಕವಿತೆ

Read More

ಯಕ್ಷಗಾನ ಪಠ್ಯ: ಪ್ರಮಾದಗಳ ಹೊಣೆ ಯಾರದ್ದು?

 ಉತ್ತರ ಕನ್ನಡದ ಕರ್ಕಿ ಯಕ್ಷಗಾನ ಮಂಡಳಿ  ಮರಾಠಿ ರಂಗಭೂಮಿಯ ಉದಯಕ್ಕೆ ಪ್ರೇರಣೆಯಾಗಿದೆ ಎಂದು ಮರಾಠಿ ರಂಗಭೂಮಿಯ  ಇತಿಹಾಸಕಾರರೇ  ಒಪ್ಪಿಕೊಂಡಿರುವಾಗ  ಕನ್ನಡದ ಹೆಮ್ಮೆಯ  ಕಲೆಯಾದ ಯಕ್ಷಗಾನದ ಇತಿಹಾಸದಲ್ಲಿ ಇದರ ಉಲ್ಲೇಖವಿಲ್ಲದಿರುವುದು ಬಲು ದೊಡ್ಡ ದೋಷ. ಪದ್ಮಶ್ರೀಯಂತಹ  ರಾಷ್ಟ್ರ ಮಟ್ಟದ ಉನ್ನತ  ಪ್ರಶಸ್ತಿಯ ಉಲ್ಲೇಖವೇ ಇಲ್ಲದಿರುವುದು ಮತ್ತೊಂದು ಕೊರತೆ.  ವೇಷ ಕ್ರಮದ ಕುರಿತು  ಪಠ್ಯದಲ್ಲಿ  ಮಾಹಿತಿಯನ್ನು  ನೀಡುವಾಗ ವಿವಿಧ ದೃಷ್ಟಿಕೋನದಿಂದ ಮಾಹಿತಿ ಸಂಗ್ರಹಿಸಿ ಉಲ್ಲೇಖಿಸದಿದ್ದರೆ ತಪ್ಪಾಗುತ್ತದೆ. ಯಕ್ಷಗಾನ ಪಠ್ಯಪುಸ್ತಕದಲ್ಲಿರುವ ಲೋಪಗಳ ಕುರಿತು ಬರೆದಿದ್ದಾರೆ ಕಡತೋಕಾ ಗೋಪಾಲಕೃಷ್ಣ ಭಾಗವತ. 

Read More

ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್”

ಮದಿಮಾಲ್ ನೆನಪಾದರೆ ಯಾಕೋ ನನ್ನ ಕಾಲ್ಗುಣದಿಂದಾಗಿ ಸಾಲು ಸಾಲಾಗಿ ಸತ್ತು ಮಲಗಿದವರೇ ನೆನಪಾಗುತ್ತಿದ್ದರು. ಮೊದಲ ಬಾರಿಗೆ ಆಸೆಯಿಂದ ಗಂಡನ ಮನೆಗೆ ಮದಿಮಾಲ್ ಮೀನು ತೆಗೆದುಕೊಂಡು ಹೋದಾಗ ಅತ್ತೆ ಅದನ್ನು ತೊಟ್ಟೆ ಸಹಿತ ಅಂಗಳಕ್ಕೆ ಬಿಸಾಡಿದ್ದು, ಜಿಮ್ಮಿ ನಾಯಿ, ಮಂಗು ಬೆಕ್ಕು ಆ ಮದಿಮಾಲ್ ಮೀನನ್ನು ಕಚ್ಚಿಕೊಂಡು ಓಡಿ ಹೋದದ್ದು, ಈ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತೆಯೇ ಆ ನಂತರವೂ ನನ್ನ ಜೊತೆ ಶಾಶ್ವತವಾಗಿ ಉಳಿದು ಹೋದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್” ನಿಮ್ಮ ಓದಿಗೆ

Read More

ಜನಮತ

ಕಥೆ ಬರೆಯಲು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

9 hours ago
https://t.co/sdbAQuwHDa ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
9 hours ago
https://t.co/2n8P3OnmGA ಡಾ. ಶೈಲಜ ಇಂ. ಹಿರೇಮಠ ಬರೆದ “ನಿರೂಪಣೆಯಾಚೆಗೆ (ಜನಪದ ಸಾಹಿತ್ಯ ಮತ್ತು ಮಹಿಳೆ)” ಪುಸ್ತಕದ ಒಂದು ಬರಹ ನಿಮ್ಮ ಓದಿಗೆ
1 day ago
https://t.co/oL9DoCycj8 ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 26ನೇ ಕಂತು

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಜನಪದ ಸಾಹಿತ್ಯ: ಚರಿತ್ರೀಕರಣದ ಸವಾಲು

ಜನಪದ ಸಾಹಿತ್ಯ ಅಧ್ಯಯನಗಳು ನಡೆದದ್ದು ಮೌಖಿಕ ಮೂಲದಲ್ಲಿದ್ದ ಜನಪದ ಸಾಹಿತ್ಯ ಬರವಣಿಗೆಯಲ್ಲಿ ಘನೀಕರಿಸಿದಾಗಿನಿಂದ, ಜನಪದ ಸಾಹಿತ್ಯವು ಹೀಗೆ ಬರವಣಿಗೆಯಲ್ಲಿ ಘನೀಕರಿಸುವಾಗ ಅದು ಅನೇಕ ಮಾರ್ಪಾಡುಗಳಿಗೆ ಒಳಗಾಗುತ್ತದೆ. ಜನಪದ...

Read More