Advertisement

Month: April 2024

ಪ್ರದರ್ಶನವೋ, ಪರೀಕ್ಷೆಯೋ, ಗಟ್ಟಿಮನಸ್ಸಂತೂ ಮುಖ್ಯ

ಕಳೆದ ವರ್ಷ ಲಾಕ್ ಡೌನ್ ಹೇರಿಕೆಯಾಗಿದ್ದಾಗ, ಕಲಾವಿದರು ಬಹಳವೇ ಕಷ್ಟಪಟ್ಟಿದ್ದರು. ಆರ್ಥಿಕತೆಯೇ ಮುಖ್ಯವಾಗಿರುವ ಈ ಕಾಲದಲ್ಲಿ ಕಲೆಯನ್ನು ಎರಡನೇ ಆದ್ಯತೆಯನ್ನಾಗಿ ಪರಿಗಣಿಸುವುದನ್ನುಕಂಡಾಗ ಬೇಸರವೆನಿಸುವುದು. ಆದರೆ ವಾಸ್ತವವಾಗಿ ಅದು ಸಮಾಜವನ್ನು ಸಂತೈಸುವ ಮಾರ್ಗ. ನಾಟ್ಯಶಾಸ್ತ್ರದ ಶ್ಲೋಕದ ಪ್ರಕಾರ ಅದು ಜನರನ್ನು ತಿದ್ದುವ, ರಂಜನೆಯ ಮೂಲಕ ಅವರಲ್ಲಿ ಮೌಲ್ಯಗಳನ್ನು ಬಿತ್ತುವ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಯೋಚಿಸುವ ಕಲಾವಿದರ ಮನಸ್ಸು ಗಟ್ಟಿಯಾಗಿರುತ್ತದೆ.

Read More

ಸಾಹಿತ್ಯ ಲೋಕದಲ್ಲಿ ‘ಜೋಳವಾಳಿ, ವೇಳೆವಾಳಿ’ಗಳ ಋಣಭಾವ

ದೇಶಸೇವೆಗೆ ನಿಷ್ಠರಾಗಿರುವ ಪಡೆಯನ್ನೇ ಹಿಂದಿನ ಕಾಲದಲ್ಲಿ ರಾಜರು ಕಟ್ಟುತ್ತಿದ್ದರು.‌ ಸಮಯದ ಹಂಗಿಲ್ಲದೆ ಜೀವದ ಹಂಗಿಲ್ಲದೆ ರಾಜ್ಯಕ್ಕಾಗಿ, ರಾಜನ ಕ್ಷೇ‌ಮಕ್ಕಾಗಿ ಪ್ರಾಣ ಕೊಡುವವರ ಸಮೂಹವೇ ಇರುತ್ತಿತ್ತು. ಅವರನ್ನು ಜೋಳವ್ಯಾಳಿಗಳು, ವೇಳೆವಾಳಿಗಳು ಎಂದು ಕರೆಯುತ್ತಿದ್ದರು.ಅವರ ಬಗ್ಗೆ ಅನೇಕ ಕಥೆ, ಕವನ ಲಾವಣಿಗಳು ಸೃಷ್ಟಿಯಾಗುತ್ತಿದ್ದವು, ಕನ್ನಡ ಸಾಹಿತ್ಯ ಲೋಕದಲ್ಲಿ ಈ ಎರಡು ಪದಗಳ ಬಳಕೆಯು ಯಾವೆಲ್ಲ ಸಂದರ್ಭಗಳಲ್ಲಿ…

Read More

ಮ.ಸು. ಕೃಷ್ಣಮೂರ್ತಿ ಅನುವಾದಿಸಿದ “ಅನಾಮದಾಸನ ಕಡತ” ಕಾದಂಬರಿಯ ಒಂದು ಅಧ್ಯಾಯ

ಅನಾಮದಾಸ ತುಂಬ ಹಿಂದಿನಿಂದ ಬರೆಯುತ್ತಾ ಬಂದಿದ್ದಾನೆ. ಆತನ ಕಡತದ ಒಂದು ಮನೋರಂಜಕ ಅಂಶ ರೈಕ್ವ ಆಖ್ಯಾನ. ಸುಮಾರು ನಲವತ್ತು ವರ್ಷಗಳ ಹಿಂದೆ ಆತ ಛಾಂದೋಗ್ಯ ಉಪನಿಷತ್ತಿನ ರೈಕ್ವ ಆಖ್ಯಾನದ ಮೇಲೆ ಒಂದು ಕಥೆ ಬರೆದಿದ್ದ. ಅದರ ಶೀರ್ಷಿಕೆ – ‘ಎಲ್ಲವೂ ಗಾಳಿ’ ಎಂದು. ಅದು ಎಲ್ಲೂ ಬೆಳಕು ಕಾಣಲಿಲ್ಲ. ಆತ ಕಥೆಯನ್ನು ತುಂಬ ಲಘು ಮನೋಭಾವದಿಂದ ಬರೆದಿದ್ದ. ಈಗ ಅದರ ಮತ್ತೊಂದು ರೂಪ ಅವನಿಗೆ ದೊರೆತಿದೆ. ತಾನು ಲಘುವಾದೆನಲ್ಲ ಎಂದು ಆತನಿಗೆ ಖೇದ. ಅದರ ಕೊನೆಗೆ ಆತ ಕೆಲವು ಹೊಸ ಪಂಕ್ತಿಗಳನ್ನು ಸೇರಿಸಿದನೆಂದು ಕಾಣುತ್ತದೆ.
ಡಾ. ಹಜಾರೀಪ್ರಸಾದ ದ್ವಿವೇದಿ ರಚಿಸಿರುವ “ಅನಾಮದಾಸನ ಕಡತ” ಕಾದಂಬರಿಯಯನ್ನು ಮ.ಸು. ಕೃಷ್ಣಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಕೋ. ಚನ್ನಬಸಪ್ಪನವರ ‘ಅಯ್‌ನ್ಸ್‌ಟನ್‌ ಆತ್ಮ’ ಕವನ ಇಂದಿನ ಕಾವ್ಯ ಕುಸುಮ

ವಕೀಲರಾಗಿ, ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅವರು, ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭಿಸಿದ್ದರು.  ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಸೇರಿದಂತೆ ಐದು ಕವನ ಸಂಕಲನ,  ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಎಂಬ ಕಥಾಸಂಕಲನ ಬರೆದಿದ್ದಾರೆ. ಅವರು ಬರೆದ ಅಯ್ ನ್ಸ್ ಟನ್ ಆತ್ಮ ಕವನ  ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ಹಾರಲು ತವಕಿಸುವ ಮನಸ್ಸಿಗೆ ಪ್ರವಾಸವೆಂಬ ರೆಕ್ಕೆಯಿರಲಿ

ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ..

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ