Advertisement

Month: May 2022

ಇಲ್ಲದ ಸಲ್ಲದ ಭ್ರಮೆಗಳು ಮತ್ತು ಸ್ವಯಂ ಚಿಕಿತ್ಸೆ ತಂದೊಡ್ಡುವ ಆಪತ್ತುಗಳು

ಟಿವಿಯಲ್ಲಿ ಕೆಲವು ಖಾಯಿಲೆಯ ಕುರಿತಾಗಿ ಬರುವ ಮಾತುಗಳನ್ನು, ಪೇಪರಿನಲ್ಲಿ ಬರುವ ವಿಷಯಗಳನ್ನು ಓದಿ ಮತ್ತು ಗೂಗಲ್ ಸರ್ಚ್‌ನಲ್ಲಿ ಬರುವ ವಿವರಗಳನ್ನು ನೋಡಿಕೊಂಡು ತಮಗೆ ಆ ಕಾಯಿಲೆ ಇದೆ ಮತ್ತು ಈ ರೋಗ ಇದೆ ಎಂದು ತಪ್ಪಾಗಿ ನಿಶ್ಚಯಿಸಿಬಿಡುವ ಬೃಹಸ್ಪತಿಗಳು ಕೂಡ ನಮ್ಮಲ್ಲಿ ಇದ್ದಾರೆ.  ಅಷ್ಟೇ ಅಲ್ಲ, ಕೆಲವೊಮ್ಮೆ ಕಾಯಿಲೆಗಳಿಗೆ ಸ್ವಯಂ ಔಷಧಿ ಸೇವಿಸುವ ಪರಿಪಾಠ  ಇತ್ತೀಚೆಗೆ ಹೆಚ್ಚಾಗಿದೆ. ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ  ಡಾ. ಕೆ.ಬಿ. ಸೂರ್ಯಕುಮಾರ್ ಬರಹ 

Read More

ಕಾವ್ಯಮಾಲೆಯ ಕಾಣದ ಕುಸುಮ: ಕುರುಡು ಬೆಳಕಿಗೆ -1

ಹಲವಾರು ಕಡೆಯಲ್ಲಿ  ಉದ್ಯೋಗ ನಿರ್ವಹಿಸಿದ ಶಿವೇಶ್ವರ ದೊಡ್ಡಮನಿ ಅವರು, ನಿರಂಜನರು ಪ್ರಾರಂಭಿಸಿದ್ದ ‘ಜನಶಕ್ತಿ’ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ಮಾಡಿದರು. ಅವರದ್ದು ಹೋರಾಟದ ಸ್ವಭಾವವಾಗಿತ್ತು. ಕನ್ನಡದಲ್ಲಿ ಅವರು ಸಾನೆಟ್ಟುಗಳನ್ನು ಹಾಗೂ ಸಣ್ಣಕತೆಗಳನ್ನು ಬರೆದಿದ್ದಾರೆ. 
ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ಕವಿತೆ ‘ಕುರುಡು ಬೆಳಕಿಗೆ-1’ ಇಂದಿನ ಓದಿಗಾಗಿ.

Read More

’ಇಂಗ್ಲಿಷ್ ಸರ್ ಎಷ್ಟು ಹ್ಯಾಂಡ್‌ಸಮ್ ಆಗಿದಾರೆ ನೋಡೆ!’

ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯಲ್ಲಿ ಎಸ್ತರ್ ಅವರು ತಮ್ಮ ಬದುಕಿನ  ಏಳುಬೀಳುಗಳನ್ನು ಬಹಳ ನಿರ್ಲಿಪ್ತವಾಗಿ ಬರೆದಿದ್ದಾರೆ. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಪುಸ್ತಕದಲ್ಲಿ ‘ತಾವು ಕೂಡ  ಎಲ್ಲರಂತೆ ಒಬ್ಬ ಗೃಹಿಣಿ’ ಎಂದು ಹೇಳಿಕಂಡರೂ, ಅವರು ಸಾಮಾಜಿಕವಾಗಿಯೂ ಅನೇಕ ಸವಾಲುಗಳನ್ನು ಎದುರಿಸಿದವರು. ಸಾಂಸಾರಿಕವಾಗಿಯೂ ಸಂದಿಗ್ಧ ಸನ್ನಿವೇಶಗಳನ್ನು ದಾಟಿ ಬಂದವರು. ನವಿರು ನಿರೂಪಣೆಯಲ್ಲಿ ಮೂಡಿ ಬಂದ ಈ ಕೃತಿಯ ಕೆಲವು ಪುಟಗಳು ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿವೆ. ಮೊದಲ ಅಧ್ಯಾಯ ಇಲ್ಲಿದೆ. 

Read More

ದೇವನೂರ ಮಹಾದೇವ ಅವರ “ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ” ಕವಿತೆಯ ವಾಚನ

ಮೌನೇಶ್ ಬಡಿಗೇರ್‌ ವಾಚಿಸಿದ ದೇವನೂರ ಮಹಾದೇವ ಅವರ “ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ” ಕವಿತೆ 

ಕೃಪೆ: ಋತುಮಾನ

Read More

ಹುಲಿ ಚಿರತೆಗಳ ಹುಡುಕಾಡುತ್ತ ಕಬಿನಿ ಅರಣ್ಯದಲ್ಲಿ..

ಸಫಾರಿಯ ಹುಮ್ಮಸ್ಸು ಎಲ್ಲರಲ್ಲಿಯೂ ಇತ್ತು. ಗಾಡಿಯಲ್ಲಿ ಕುಳಿತವರಲ್ಲಿ ಒಂದಷ್ಟು ಜನ ಆಗಲೇ “ಟೈಗರ್… ಟೈಗರ್…” ಎಂಬ ಜಪ ಮಾಡಲು ಆರಂಭಿಸಿದ್ದರು. ನಾವು ಕುಳಿತಿದ್ದ ಗಾಡಿ ಕಾಡ ಗೇಟಿನ ಒಳಗೆ ನುಗ್ಗಿ ಕಾಲು ಕಿಲೋಮೀಟರ್‌ ಸಾಗಿತ್ತಷ್ಟೇ.. ದೂರದಲ್ಲಿ ಚಿರತೆಯೊಂದು ಕಾಣಿಸಿತು. ಗಾಡಿ ಅದರತ್ತ ಮೆಲ್ಲಗೆ ತೆರಳಿ ನಾವೆಲ್ಲ ಅದನ್ನು ಕಣ್ಣು-ಕ್ಯಾಮರಾ ಕಣ್ಣಿನೊಳಗೆ ತುಂಬಿಕೊಳ್ಳಬಹುದೇನೋ ಅಂತ ಆಸೆಪಟ್ಟುಕೊಳ್ಳುವಷ್ಟರಲ್ಲಿ ಗಾಡಿಯ ಚಾಲಕ ಅತೀ ಉತ್ಸಾಹದಲ್ಲಿ ಗಾಡಿ ಅದರತ್ತ ಚಲಾಯಿಸಿದ. ವನ್ಯಜೀವಿ ದರ್ಶನಕ್ಕಾಗಿ ಪ್ರವಾಸ ಹೊರಟ ಅನುಭವವನ್ನು ನವಿರಾಗಿ ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್

Read More

ಜನಮತ

ಮಳೆ ಎಂಬುದು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

17 hours ago
https://t.co/dzzNZ1XMGK ಅಕಾಲಿಕವಾಗಿ ಸುರಿಯುತ್ತಿರುವ ಮಳೆಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಇಂದಿನ ಓದಿಗಾಗಿ.
17 hours ago
ಕಾವ್ಯಮಾಲೆಯ ಕುಸುಮ ಸರಣಿಯಲ್ಲಿ ಅರ್ಚಿಕ ವೆಂಕಟೇಶರು ಬರೆದ ಕವಿತೆ "ಯಾಂವ ನನ್ನೆ ಕೇಳಾಂವ?"

https://t.co/J5kM7HLeym
22 hours ago
https://t.co/KH2TfnVun1 ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಒಲೆ ಬದಲಾದರೂ ಉರಿ ಬದಲಾಗದು!

ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನ್ದಾರ ಮಹಿಳೆಯರಿಗೆ ಇನ್ನೂ ಕಷ್ಟ....

Read More