Advertisement

Month: April 2024

ಹಾರಿ ಹೋದ ಗುಂಡು, ಜಾರಿ ಹೋದ ನ್ಯಾಯ

ಅದೊಂದು ದಿನ ಅಲ್ಲಿಗೆ ಗುಂಡೇಟಿನಿಂದ ಗಾಯಗೊಂಡ ಓರ್ವ ವ್ಯಕ್ತಿಯನ್ನು ಕೆಲವರು ಕರೆದುಕೊಂಡು ಬಂದಿದ್ದರು. ಕರ್ತವ್ಯದಲ್ಲಿ ಇದ್ದ ವೈದ್ಯರು ಆಗಷ್ಟೇ ಸರಕಾರೀ  ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮ ಶಿಕ್ಷಣದ ದಿನಗಳಲ್ಲಿ ಕೆಲವು ಅಪಘಾತದ ಕೇಸುಗಳನ್ನು ನೋಡಿದ್ದರೂ, ಗುಂಡೇಟಿನ ಗಾಯಾಳುವನ್ನು ಅವರು ಎಂದೂ ನೋಡಿರಲಿಲ್ಲ.  ರೋಗಿಯನ್ನು ಪರೀಕ್ಷಿಸಿದಾಗ, ಆತನ ಎದೆಯ ಎರಡೂ ಭಾಗದ ಮೇಲೆ ಒಂದೊಂದು ಗಾಯದ ಗುರುತುಗಳು ಕಂಡು ಬಂದು ಅವುಗಳಿಂದ ರಕ್ತಸ್ರಾವವಾಗುತ್ತಿತ್ತು. ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯ ಬರಹ:

Read More

ಕಾವ್ಯಮಾಲೆಯ ಕಾಣದ ಕುಸುಮ: ರೋಹಿಣಿ

“ನೀ ಕೂತಲ್ಲಿ
ಜ್ಯೋತಿಯ ಢಾಳ
ನಾ ಕೂತಲ್ಲಿ
ಕತ್ತಲೆ ಕಾಳ
ಕಂಡೂ ಕಂಡೂ ಕೂತೇ ಕೂತಿ
ತಿಳಿದೂ ತಿಳಿದೂ ಹಾಗೆ ಇರತಿ
ಅಲ್ಲೆ ಕುಳಿತಿ
ಬಾರೇ ಗೆಳತಿ”- ಕಾವ್ಯಮಾಲೆಯ ಕಾಣದ ಕುಸುಮ ಸರಣಿಯಲ್ಲಿ ಮಧುರಚೆನ್ನರ ಒಂದು ಕವಿತೆ

Read More

ತಾಳ್ಮೆಯೆಂಬ ಕಾವ್ಯಶಕ್ತಿಯ ಧ್ಯಾನದಲ್ಲಿ

ಇತ್ತೀಚೆಗೆ ಟೊಟೊ ಪ್ರಶಸ್ತಿ ಪಡೆದ ಶ್ರೀಕೃಷ್ಣ ದೇವಾಂಗಮಠ, ಬರವಣಿಗೆಯನ್ನೂ ಪೋಟೋಗ್ರಫಿಯನ್ನೂ ಬಹುವಾಗಿ ಇಷ್ಟಪಡುವವರು. ಗದ್ಯ ಓದಲು ಭಾರೀ ತಾಳ್ಮೆ ಬೇಕಾಗುತ್ತದೆ ಎಂದು ಹೇಳುತ್ತಾ, ಬಯಲಿನಲ್ಲಿ ಕೀಟವೊಂದರ ಚಲನೆಯನ್ನು ಸೆರೆ ಹಿಡಿಯಲು ಗಂಟೆಗಟ್ಟಲೆ ‘ಕಮಕ್ ಕಿಮಕ್’ ಎನ್ನದೇ ಕಾಯುವವರು. ವೃತ್ತಿ, ತಿಂಗಳ ಸಂಬಳ, ಬದುಕು ಎಂಬ ಸಾಮಾನ್ಯ ಚೌಕಟ್ಟನ್ನು ದಾಟಿ ಕವಿತೆಗಳನ್ನೂ ಕೀಟಗಳನ್ನೂ ಹುಡುಕುತ್ತ ಅಲೆಯುವುದನ್ನು ಇಷ್ಟಪಡುವವರು.

Read More

ಇಲ್ಲಿಯದ್ದೇ ಸೊಗಡನ್ನು ಮುಡಿಗೇರಿಸಿಕೊಂಡ ಕವಿತೆಗಳು

ಈ ಪುಸ್ತಕದಲ್ಲಿರುವ ‘ಒಂದು ಪ್ರೇತ ಕಥೆ’  ಎಂಬ ಕವಿತೆಯಲ್ಲಿ ಕವಿಗಳು ಓದಬೇಕಾದುದನ್ನು ಸೂಚ್ಯವಾಗಿ, ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇಲ್ಲಿ ಎಲ್ಲ ಕವಿತೆಗಳು ತಮ್ಮ ತಮ್ಮ ವೈವಿಧ್ಯತೆಯಿಂದ ಮನಸೂರೆಗೊಳ್ಳುತ್ತವೆ ಯೋಚಿಸುವಂತೆ ಮಾಡುತ್ತವೆ ಖುಷಿಯನ್ನೂ ಕೊಡುತ್ತವೆ ಹಾಗೆ ಬರೆಯುತ್ತ ಹೋದರೆ ಎಲ್ಲ ಕವಿತೆಗಳ ಬಗೆಗೂ ಬರೆಯಬೇಕಾಗುತ್ತದೆ, ಯಾವುದನ್ನೂ ಬಿಡುವಂತೇಯೇ ಇಲ್ಲ.
ತೇರಳಿ. ಎನ್. ಶೇಖರ್ ಅವರು ಅನುವಾದಿಸಿದ ಮಲಯಾಳಂ ಕವಿ  ಸಚ್ಚಿದಾನಂದನ್ ಅವರ ‘ಮರೆತಿಟ್ಟ ವಸ್ತುಗಳು’ ಕವನ ಸಂಕಲನದ ಕುರಿತು ಎಚ್.ಎಸ್. ಮುಕ್ತಾಯಕ್ಕ ಬರಹ

Read More

ನಮ್ಮ ಭೂಮಿಯ ವಯಸ್ಸೆಷ್ಟು?

ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ತಮ್ಮದೇ ವಿಧಾನಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.  ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು…

Read More

ಬರಹ ಭಂಡಾರ