Advertisement

Month: March 2024

ಕನ್ನಡ ಕಾವ್ಯಮಾಲೆಯ ಕುಸುಮ: ಗೋಲ ಗುಮ್ಮಟ

“ಅನ್ಯ ಸಂಸ್ಕೃತಿಯ ಮಾನ್ಯ ಕಾಣ್ಕೆ ಕೃತಿ –
ಗಿಳಿಯೆ ಮೂಡಿತಿದು ಗುಮ್ಮಟ
ಸರ್ವ ಧರ್ಮದಲಿ ಒಂದೆ ಮರ್ಮವನು
ಸೂಚ್ಯಗೈದಿಹುದು ಗುಮ್ಮಟ.”- ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ಡಾ. ಡಿ.ಎಸ್.‌ ಕರ್ಕಿ ಬರೆದ “ಗೋಲ ಗುಮ್ಮಟ” ಕವನ ಇಂದಿನ ಓದಿಗಾಗಿ

Read More

ನೆಮ್ಮದಿ ಎಂಬ ಕಾಂಚನ ಮೃಗದ ಬೆನ್ನಟ್ಟಿ

ನೆಮ್ಮದಿಯ ಬದುಕು ಎಲ್ಲರ ಕನಸೂ ಹೌದು. ಆದರೆ ನಾವು ಕಟ್ಟಿಕೊಂಡಿರುವ ಆಸೆಯ ಸೌಧದ ನಿರ್ಮಾಣ ಮುಗಿಯುವುದೇ ಇಲ್ಲ. ದಿನ ದಿನಕ್ಕೋ, ಇಲ್ಲ ಕ್ಷಣ ಕ್ಷಣಕ್ಕೋ ಅದರ ಗೋಡೆಗೆ ಇಟ್ಟಿಗೆ ಜೋಡಿಸುತ್ತಲೇ ಹೋಗುವವರು ನಾವು. ನಮ್ಮನೆಗೆ ಎರಡು ರೂಮು ಸಾಕೆನ್ನಿಸಿದರೂ, ಯಾವತ್ತೋ ಬಂದು ಹೋಗುವ ನೆಂಟರಿಗೊಂದು ಪ್ರತ್ಯೇಕ ಕೋಣೆ ಬೇಡವಾ ಎನ್ನುತ್ತದೆ ಮನಸ್ಸು. ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಚೂಟಿ ಹುಡುಗನ ಸೃಜನಶೀಲತೆ ಹೇಳಿದ ಪಾಠ

ಯಾವಾಗ ಅಧ್ಯಾಪಕನಾಗಿ ಶಾಲೆ ಸೇರಿ, ನಾನೇ ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾಡಲು ಪ್ರಾರಂಭ ಮಾಡಿದೆನೋ, ಮಕ್ಕಳಿಗೆ ಪರೀಕ್ಷೆಯ ತಯಾರಿಯ ಬಗ್ಗೆ ಹೇಳಬೇಕಾಗಿ ಬಂತೋ ಆಗ ಪೇಚಿಗೆ ಸಿಲುಕುತ್ತಿದ್ದೆ. ಮಕ್ಕಳಿಗೆ ಪರೀಕ್ಷಾ ತಯಾರಿಯ ಉಪದೇಶ ಮಾಡುವಾಗ ನಾನು ಕೇಳಿದ ನನ್ನಪ್ಪನ ಮತ್ತು ನನ್ನ ಗುರುಗಳ ಮಾತುಗಳು ನನಗೆ ಅರಿವಿಲ್ಲದಂತೆ ಬಾಯಿಗೆ ಬಂದು ಬಿಡುತ್ತಿತ್ತು. ಉಪದೇಶವನ್ನು ಮಾಡಿದ ಬಳಿಕವೂ ಮಕ್ಕಳು ಉತ್ತರಪತ್ರಿಕೆಯಲ್ಲಿ ಬಿಟ್ಟ ಖಾಲಿ ಜಾಗಗಳನ್ನು ನೋಡಿದಾಗ ನನ್ನ ಉಪದೇಶಗಳು ಪ್ರಯೋಜನಕ್ಕೆ ಬಾರದೇ ಇರುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ

Read More

ಶಾಕ್ತಾರಾಧನೆ, ಹನುಮಾರಾಧನೆ ಮತ್ತು ಮೊಹರಂ

`ಮೊಹರಂ’ ಎಂದರೆ ನಿಷಿದ್ಧವಾದುದು ಎಂದರ್ಥ. ಶ್ರದ್ಧಾವಂತ ಮುಸ್ಲಿಮರ ಪಾಲಿಗಿದು ಸೂತಕದ ಮಾಸ. ಈ ಮಾಸದಲ್ಲಿ ಅವರು ಮದುವೆಯಂತಹ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ದುರಂತ ಸಾವು ವಸ್ತುವಾಗಿರುವ ಮೊಹರಂ ಸಾಹಿತ್ಯವೂ ಒಂದರ್ಥದಲ್ಲಿ ಸೂತಕದ ಸಾಹಿತ್ಯವೇ. ವಿಶೇಷವೆಂದರೆ, ಅರಬರ ಈ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ, ಮೊಹರಂ ಆಚರಣೆಯ ರೂಪತಾಳಿದ ಬಳಿಕ, ಇಸ್ಲಾಮಿನ ಜತೆಜತೆಗೆ ಜಗತ್ತಿನ ನಾನಾ ಭಾಗಗಳಿಗೆ ಹೋಯಿತು ಮತ್ತು ಅರಬೇತರ ದೇಶಗಳಲ್ಲಿ ವಿಭಿನ್ನ ರೂಪಾಂತರ ಪಡೆಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರಹ

Read More

ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

“ನಿನ್ನ ಕಣ್ಣಿನ್ಯಾಗ
ನನಗೊಂದ ಕನಸ ಕಟ್ಟಿತ್ತ
ಬದುಕ ಆಸೆ ಹುಟ್ಟಿತ್ತ
ಚಂದದ ಮನಿಗೊಂದ ಗ್ವಾಡಿ ಕಟ್ಟಿ
ಬಣ್ಣದಾಂಗ ಮಾಡಿ ಬೆಳಗ ಮೂಡಿಸಿತ್ತ”- ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ