Advertisement

Month: April 2024

ಕುರಿತೋದದ ಚಿತ್ತಾರಗಿತ್ತಿಯರು ಎಳೆವ ಗೆರೆಗಳು

ಮಲೆಕರ್ನಾಟಕದ ದೀವರರ ಜನಾಂಗದ ಮಹಿಳೆಯರು ಹಸೆಚಿತ್ತಾರವನ್ನು ಗೋಡೆಯ ಮೇಲೆ, ಬುಟ್ಟಿಗಳು, ಬಾಗಿಲು, ಕಿಟಕಿ, ಇಡುಕಲು, ಮಡಕೆ ಇವುಗಳ ಮೇಲೆ ಸಸ್ಯಜನ್ಯ ಮೂಲದ ಬಣ್ಣಗಳಿಂದ ಶುಭ ಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಚಿತ್ತಾರ ಬಿಡಿಸುತ್ತಾರೆ. ಚಿತ್ರಿಸಲು ಬೇಕಾದ ಬಣ್ಣಗಳನ್ನು ಅವರೇ ತಯಾರಿಸಿಕೊಳ್ಳುವರು. ಈ ಕಲೆಯನ್ನು ದೀವರ  ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ
ರವಿರಾಜ್ ಸಾಗರ್ ಬರೆದ ಸಂಶೋಧನಾ ಕೃತಿ “ಕರ್ನಾಟಕ ದೇಶಿ ಚಿತ್ರಕಲೆ ಹಸೆ ಚಿತ್ತಾರ” ಕುರಿತು ಮಧು ಗಣಪತಿರಾವ್ ಮಡೆನೂರು ಬರಹ .

Read More

ಹೊಸತನದ ಹಾಡಿಗೆ ಕಾದಿರುವ ಹೊಸ ಸಂವತ್ಸರ

ಶಿಶಿರ ಋತುವಿನ ಚಳಿಗಾಲದಲ್ಲಿ ಒಣಗಿದ ಮರ-ಗಿಡಗಳು ವಸಂತ ಋತುವಿನಲ್ಲಿ ಮತ್ತೆ ಚಿಗುರುವಂತೆ `ಯುಗಾದಿ’ ಯ ಹೊಸತನ ಮನುಷ್ಯನ ಬದುಕಲ್ಲಿಯೂ ಹೊಸ ಜೀವ ತುಂಬಬಲ್ಲ ಹಬ್ಬವಾಗಿದೆ. ಈ ಹಬ್ಬದ ಆಚರಣೆ ಇಡೀ ದೇಶದಲ್ಲಿಯೇ ವಿಭಿನ್ನವಾಗಿ ನಡೆಯುತ್ತದೆ. ಮುಖ್ಯವಾಗಿ ಕೃಷಿ ಆಧಾರಿತ ದೇಶದಲ್ಲಿ, ಬೇಸಿಗೆಯ  ಈ  ಹಬ್ಬದಲ್ಲಿ ಸಂಭ್ರಮವು ಒಂದು ತೂಕ ಹೆಚ್ಚೇ. ಬೈಸಾಕಿ, ಗುಡಿಪಾಡ್ವಾ, ಯುಗಾದಿ ಎಂಬೆಲ್ಲ ಹತ್ತಾರು ಹೆಸರುಗಳಲ್ಲಿ ಬರುವ  ಈ ಹಬ್ಬವನ್ನು ಕನ್ನಡದ ಕವಿಗಳು ತಮ್ಮದೇ ದೃಷ್ಟಿಕೋನದಲ್ಲಿ ಬಣ್ಣಿಸಿದ್ದಾರೆ. ಮಂಡಲಗಿರಿ ಪ್ರಸನ್ನ ಬರಹ 

Read More

ಈ ದಿನದ ಕವಿತೆ: ತುಂಬು ಗರ್ಭಿಣಿ ನನ್ನವ್ವ

ಅವಳ ಕಿರುಚಾಟ ಸಮುದ್ರ ಅಲೆಗಳಂತೆ
ಅಪ್ಪಳಿಸಿ ಬರುತ್ತಿತ್ತು
ಉಳಿದ ಸದ್ದೆಲ್ಲ ಮೌನವಾಗಿಯೇ ಇತ್ತು
ತುಂಬು ಗರ್ಭಿಣಿ ನನ್ನವ್ವ
ಕೂಗಿದರೂ ಆಲಿಸುವ ಕಿವಿಯಿಲ್ಲದೆ..- ಸೌಮ್ಯ ಕೆ.ಆರ್. ಬರೆದ ಕವಿತೆ

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕತೆ

ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದೆ. ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಮೊದಲು ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. -ಡಾ.ಜ್ಯೋತಿ ಬರೆದ ಕತೆ ‘ಕುಂತಿಯ ಮುಸ್ಸಂಜೆ ಮಾತು’ ಇಂದಿನ ಓದಿಗಾಗಿ. 

Read More

ಮಂಜಿನೂರಿನಲ್ಲಿ ಹಿಮಸಾರಂಗದ ಸ್ನೇಹ

ಶರತ್ಕಾಲದ ಪ್ರಾರಂಭದಲ್ಲಿ ಹಿಮಸಾರಂಗಗಳನ್ನು ಮತ್ತೆ ಫಾರ್ಮ್ ಹೌಸ್ ಗೆ ತರಲು ಹೇಗೆ ಪತ್ತೆ ಹಚ್ಚಲಾಗುತ್ತದೆ ಎನ್ನುವುದನ್ನೆಲ್ಲಾ ವಿವರಿಸುತ್ತಾರೆ. ಇದೂ ಒಂದು ಕೌತುಕದ ಸಂಗತಿ. ನಾವು ಸೊಳ್ಳೆ ಕಂಡರೆ ಹೊಡೆದು ಅಥವಾ ಸೊಳ್ಳೆ ಬತ್ತಿ ಹಾಕಿ ಸಾಯಿಸುತ್ತೇವೆ. ಆದರೆ ಬೇಸಿಗೆಯ ಅತಿಯಾದ ಸೊಳ್ಳೆ ಕಾಟ ಇವರಿಗೆ ವರದಾನವಾಗಿದೆ. ಸೊಳ್ಳೆಯ ಕಾಟ ಎಷ್ಟಿರುತ್ತದೆ ಎಂದರೆ, ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳಲು ಹಿಮಸಾರಂಗಗಳು ಹಿಂಡು ಹಿಂಡಾಗಿ ಗುಂಪಿನಲ್ಲಿ ಚಲಿಸುತ್ತವೆ.
‘ದೂರದ ಹಸಿರು’ ಸರಣಿಯಲ್ಲಿ ಗುರುದತ್‌ ಅಮೃತಾಪುರ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ